ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಕರೆದ Rahul Gandhi; ಫೆ. 25 ಅಥವಾ 26ಕ್ಕೆ ಸಭೆ

ಉತ್ತರ ಪ್ರದೇಶ ಚುನಾವಣೆಯ ನಡುವೆಯೇ ಕರ್ನಾಟಕ ಕಾಂಗ್ರೆಸ್ ನಾಯಕರ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಸಭೆಯಲ್ಲಿ 5 ಪ್ರಮುಖ ವಿಷಯಗಳು ಚರ್ಚೆ ಆಗಲಿವೆ ಎಂದು ತಿಳಿದು ಬಂದಿದೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ನವದೆಹಲಿ, ಫೆ.‌ 20: ಮುಂದಿನ ವಿಧಾನಸಭಾ ಚುನಾವಣೆಗೆ (Assembly Elections) ಪಕ್ಷವನ್ನು ಸಜ್ಜುಗೊಳಿಸುವುದು, ಬಿಜೆಪಿಯ ಕೋಮು ರಾಜಕೀಯಕ್ಕೆ (BJP's Communal Politics) ಸೂಕ್ತವಾದ ಪ್ರತಿತಂತ್ರ ರೂಪಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಲೆಂದು ಎಐಸಿಸಿಯ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ (AICC Former President and Member of Parliament Rahul Gandhi) ಅವರು ರಾಜ್ಯದ 15 ಮಂದಿ ಹಿರಿಯ ಕಾಂಗ್ರೆಸ್ ನಾಯಕರಿಗೆ ದೆಹಲಿಗೆ ಬರುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮುಖಾಂತರ ಸಂದೇಶ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಯಾರಿಗೆಲ್ಲಾ ಬುಲಾವ್?

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್, ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಆರ್. ಧ್ರುವನಾರಾಯಣ್, ಸತೀಶ್ ಜಾರಕಿಕೊಳಿ, ರಾಮಲಿಂಗ ರೆಡ್ಡಿ, ಈಶ್ವರ ಖಂಡ್ರೆ, ಕೇಂದ್ರದ ಮಾಜಿ ಸಚಿವರಾದ ರೆಹಮಾನ್ ಖಾನ್, ಕೆ.ಎಚ್. ಮುನಿಯಪ್ಪ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ್ ಮತ್ತು ದಿನೇಶ್ ಗುಂಡೂರಾವ್ ಅವರಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಫೆ.‌ 25 ಅಥವಾ 26ಕ್ಕೆ ಸಭೆ

ಫೆಬ್ರವರಿ 25 ಅಥವಾ 26ರಂದು ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ನಡೆಸಲಾಗುವುದೆಂದು ತಿಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ನಾಯಕರಿಗೆ ಫೆಬ್ರವರಿ 25ರಂದೇ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಜೊತೆ ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ:  Big Breaking: ಭಾರತದಲ್ಲಿ ರಕ್ತದೋಕುಳಿ ಹರಿಸಲು ಭೂಗತ ಪಾತಕಿ ಸಂಚು, ದಾವೂದ್‌ಗೆ 'ಇವರೇ' ಟಾರ್ಗೆಟ್!

ಉತ್ತರ ಪ್ರದೇಶ ಚುನಾವಣೆಯ ನಡುವೆಯೇ ಕರ್ನಾಟಕ ಕಾಂಗ್ರೆಸ್ ನಾಯಕರ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.

5 ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಸಾಧ್ಯತೆ.

ಸದ್ಯ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಫೆಬ್ರವರಿ 25 ಅಥವಾ 26ರಂದು ನಡೆಯುವ ರಾಜ್ಯ ಕಾಂಗ್ರೆಸ್ ನಾಯಕರ ಸಭೆಯಲ್ಲಿ 5 ಪ್ರಮುಖ ವಿಷಯಗಳು ಚರ್ಚೆ ಆಗಲಿವೆ. ಅವುಗಳು ಈ ಕೆಳಕಂಡಂತಿವೆ.

1.2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗಿಂತ ಮೊದಲೇ ತಯಾರಿ ಆರಂಭಿಸುವುದು. ಆ ಮೂಲಕ ಮೊದಲಿಂದಲೂ ಇತರೆ ಪಕ್ಷಗಳಿಗಿಂತ ಮುನ್ನಡೆ ಕಾಯ್ದುಕೊಳ್ಳುವುದು.

2.ಸಾಮೂಹಿಕ ನಾಯಕತ್ವದ ಅಡಿ ಚುನಾವಣೆಗೆ ಹೋಗುವುದು. ಈ ಮೂಲಕ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ಶೀತತ ಸಮರಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ನಿರ್ಧರಿಸಿದೆ.

3.ಒಂದು ತಂಡವಾಗಿ ಚುನಾವಣಾ ಜವಾಬ್ದಾರಿ ನಿರ್ವಹಿಸುವುದು. ಪ್ರಚಾರ, ಪ್ರಣಾಳಿಕೆ, ಸಂಪನ್ಮೂಲ ಸಂಗ್ರಹ ಮತ್ತಿತರ ವಿಷಯಗಳಲ್ಲಿ ಒಂದಕ್ಕೊಂದು ಸಮನ್ವಯ ಸಾಧಿಸುವುದು. ಆ ಮೂಲಕ ಒಟ್ಟಾರೆ ಪಕ್ಷದ ರಣತಂತ್ರ ವಿಷಯದಲ್ಲಿ ಎಲ್ಲೂ ಎಡವಟ್ಡಾಗದಂತೆ ನೋಡಿಕೊಳ್ಳುವುದು.

4.ಅಭ್ಯರ್ಥಿಗಳ ಹೆಸರನ್ನು ಬೇಗ ಅಂತಿಮಗೊಳಿಸುವ ಬಗ್ಗೆ ಕೂಡ ಚರ್ಚೆ ನಡೆಸಲಾಗುತ್ತದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸಿಗೆ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳಿಲ್ಲ. 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇಲ್ಲ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಅಭ್ಯರ್ಥಿಗಳ ಶೋಧ ನಡೆಸುವಂತೆ ಸೂಚಿಸುವ ಸಾಧ್ಯತೆ ಇದೆ.

5.ಸಾಮಾನ್ಯವಾಗಿ ಬಿಜೆಪಿ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತದೆ. ತನ್ಮೂಲಕ ತನಗೆ ಬೇಕಾದ ರೀತಿಯ ಅಜೆಂಡಾವನ್ನು ಸೃಷ್ಟಿ ಮಾಡುತ್ತದೆ.‌ ಕಾಂಗ್ರೆಸ್ ಪ್ರತಿತಂತ್ರ ರೂಪಿಸುವುದರಲ್ಲೇ ತನ್ನೆಲ್ಲಾ ಶ್ರಮ ವಹಿಸಬೇಕಾಗುತ್ತದೆ. ಇದರ ಬಲದು ಈ ಬಾರಿ ತಾನೇ ಸ್ವತಃ ಅಜೆಂಡಾವನ್ನು ಸೃಷ್ಟಿ ಮಾಡಬೇಕು. ಬಿಜೆಪಿ ವಿರುದ್ಧ ಡಿಫೆನ್ಸೀವ್ ಬದಲು ಅಟ್ಯಾಕಿಂಗ್ ತಂತ್ರ ರೂಪಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ.

ಇದನ್ನೂ ಓದಿ:  Tamil Nadu ULB Electionನಲ್ಲೂ ಹಿಜಾಬ್​ ಗಲಾಟೆ; ಮತದಾನ ಮಾಡಲು ಬಂದ ಮಹಿಳೆಗೆ ಆಕ್ಷೇಪ

ಈ ರೀತಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಎಲೆಕ್ಷನ್ ಮೂಡ್ ಗೆ ತರಲು ಹೈಕಮಾಂಡ್ ಸಭೆ ಕರೆದಿದ್ದು ಇದೇ ವೇಳೆ ಕೆಲವು ಇತರೆ ವಿಷಯಗಳು ಚರ್ಚೆ ಆಗುವ ಸಾಧ್ಯತೆ ಕೂಡ ಇದೆ. ಅವುಗಳೆಂದರೆ ಬಿಜೆಪಿ ಸೃಷ್ಟಿಸುವ ಕೋಮು ರಾಜಕಾರಣವನ್ನು ಎಕ್ಸಫೊಸ್ ಮಾಡುವುದು, ಹಿಜಾಬ್ ನಂತಹ ಸೂಕ್ಷ್ಮ ವಿಷಯದಲ್ಲಿ ಎಚ್ಚರಿಕೆಯ ನಡೆ ಇಡುವುದು, ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿಯನ್ನು ಬಹಿರಂಗಗೊಳಿಸುವುದು, ರಾಜ್ಯ ಬಿಜೆಪಿ ಸರ್ಕಾರದ ಅನಿಶ್ಚಿತತೆ, ಭ್ರಷ್ಟಾಚಾರ ಮತ್ತು ದುರಾಡಳಿತಗಳ ಬಗ್ಗೆ ಜನರಿಗೆ ತಿಳಿಸುವುದು ಮತ್ತು ಬಿಜೆಪಿ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮೂಲೆ ಗುಂಪು ಮಾಡುತ್ತಿರುವ ಬಗ್ಗೆ ತಿಳಿಸುವುದು ಎಂದು ಹೇಳಲಾಗಿದೆ‌.
Published by:Mahmadrafik K
First published: