ಈ ದೇಶದ ದೊಡ್ಡ ಜೋಕರ್ ಎಂದರೆ ರಾಹುಲ್​ ಗಾಂಧಿ; ಕೆ.ಚಂದ್ರಶೇಖರ್​ ರಾವ್​

news18
Updated:September 6, 2018, 7:11 PM IST
ಈ ದೇಶದ ದೊಡ್ಡ ಜೋಕರ್ ಎಂದರೆ ರಾಹುಲ್​ ಗಾಂಧಿ; ಕೆ.ಚಂದ್ರಶೇಖರ್​ ರಾವ್​
ರಾಹುಲ್​​​ ಗಾಂಧಿ
  • News18
  • Last Updated: September 6, 2018, 7:11 PM IST
  • Share this:
ನ್ಯೂಸ್​ 18 ಕನ್ನಡ

ಹೈದ್ರಾಬಾದ್​ (ಸೆ. 6): ಈ ದೇಶದ ದೊಡ್ಡ ಜೋಕರ್​ ಎಂದರೆ ಅದು ರಾಹುಲ್​ ಗಾಂಧಿ ಎಂದು ಕಾಂಗ್ರೆಸ್​ ಅಧ್ಯಕ್ಷನ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ವಾಗ್ದಾಳಿ ನಡೆಸಿದರು.

ಅವಧಿಗಿಂತ ಮುನ್ನ ವಿಧಾನಸಭೆ ವಿಸರ್ಜನೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್​ ಗಾಂಧಿ ಯಾರೆಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಲೋಕಸಭಾ ಸದನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಅಪ್ಪಿಕೊಂಡು ಕಣ್ಣು ಹೊಡೆದಿದ್ದುಇಡೀ ಪ್ರಪಂಚದ ಜನರು ನೋಡಿದ್ದರು ಎಂದು ರಾಹುಲ್​ ವಿರುದ್ಧ ಹರಿಹಾಯ್ದರು.

ತೆಲಂಗಾಣದಲ್ಲಿ ರಾಹುಲ್​ಗಾಂಧಿ ಪ್ರಚಾರಕ್ಕೆ ಬಂದರೆ ನಮಗೆ ಒಳ್ಳೆಯದೆ. ಅವರು ಬಂದರೆ ಹೆಚ್ಚು ಸ್ಥಾನಗಳಲ್ಲಿ ನಾವು ಗೆಲ್ಲಬಹುದು. ರಾಹುಲ್​ ಗಾಂಧಿ ಅನುವಂಶಿಕನಾಗಿ ದೆಹಲಿ ಸುಲ್ತಾನನಾಗಿದ್ದಾರೆ. ಆದರೆ ತೆಲಂಗಾಣದ ಜನರು ದೆಹಲಿ ಸುಲ್ತಾನರ ಗುಲಾಮರಲ್ಲ. ತೆಲಂಗಾಣದ ಕುರಿತ ನಿರ್ಧಾರಗಳನ್ನು ಇಲ್ಲಿಯೇ ತೆಗೆದುಕೊಳ್ಳುತ್ತೇವೆ ಹೊರತು ದೆಹಲಿ ನಾಯಕರ ಮಾತಿನಂತೆ ನಾವು ನಡೆಯುವುದಿಲ್ಲ ಎಂದು ಗುಡುಗಿದರು.

ಕೆಸಿಆರ್​ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ಆರ್​ ಸಿ ಕುಟಿಯಾ “ರಾಹುಲ್​ ಗಾಂಧಿ ಕುರಿತು ಮಾತನಾಡಲು ತೆಲಂಗಾಣ ಮುಖ್ಯಮಂತ್ರಿಗೆ ಯಾವುದೇ ಅಧಿಕಾರವಿಲ್ಲ. ತಮ್ಮದೇ ಕುಟುಂಬವನ್ನು ರಾಜಕೀಯದಲ್ಲಿ ಬೆಳೆಸಲು ಮುಂದಾಗಿದ್ದಾರೆ. ಹಿಟ್ಲರ್​ನಂತೆ ಅವರೊಬ್ಬ ನಿರಂಕುಶ ಅಧಿಕಾರಿ ಎಂದು ಟೀಕಿಸಿದರು.

ಅವಧಿಗೆ ಮುಂಚಿತವಾಗಿ ವಿಧಾನಸಭೆ ವಿಸರ್ಜಿಸಿ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕು ಎಂದು ಕೆ ಚಂದ್ರಶೇಖರ್​ ರಾವ್​ ರಾಜ್ಯ ಪಾಲರಿಗೆ ಮನವಿ ಮಾಡಿದ್ದಾರೆ.
First published: September 6, 2018, 7:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading