• Home
 • »
 • News
 • »
 • national-international
 • »
 • Rahul Gandhi: ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ; ಚೀನಾ ಆಕ್ರಮಣದ ಉಲ್ಲೇಖ

Rahul Gandhi: ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ; ಚೀನಾ ಆಕ್ರಮಣದ ಉಲ್ಲೇಖ

ಎಐಸಿಸಿ ನಾಯಕ ರಾಹುಲ್ ಗಾಂಧಿ

ಎಐಸಿಸಿ ನಾಯಕ ರಾಹುಲ್ ಗಾಂಧಿ

ಚೀನಾ ಭಾರತ ಭೂಮಿಯನ್ನು ಆಕ್ರಮಿಸಿಲ್ಲ ಎಂದು ಪ್ರಧಾನಿ ದೇಶಕ್ಕೆ ತಿಳಿಸಿದ್ದಾರೆ. ಆದರೆ ಚೀನಾ ಭಾರತದ ಭೂಮಿಯನ್ನು ಆಕ್ರಮಿಸದೇ ಇದ್ದಲ್ಲಿ ಕರ್ನಲ್ ಬಾಬು ಮೃತರಾಗಿದ್ದು ಹೇಗೆ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

 • Share this:

  2020 ರಲ್ಲಿ ಪೂರ್ವ ಲಡಾಖ್‌ನಲ್ಲಿ ಚೀನಾದ ಪಿಎಲ್‌ಎ ಜೊತೆಗಿನ ಚಕಮಕಿಯಲ್ಲಿ ಹತ್ಯೆಯಾದ ಕರ್ನಲ್ ಸಂತೋಷ್ ಬಾಬು ಅವರನ್ನು (Col Santosh Babu) ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯಲ್ಲಿರುವ (Bharat Jodo Yatra) ಸಂಸದ ರಾಹುಲ್ ಗಾಂಧಿ ಸ್ಮರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಹುತಾತ್ಮರನ್ನು ಅವಮಾನಿಸಿದ್ದಾರೆ ಎಂದು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ (Rahul Gandhi Attacks PM Modi) ನಡೆಸಿದ್ದಾರೆ.  ದೇಶಕ್ಕಾಗಿ ಅತ್ಯಂತ ಸರ್ವಶೇಷ್ಠ ತ್ಯಾಗಮಾಡಿದ ಕರ್ನಲ್ ಸಂತೋಷ್ ಬಾಬು ಅವರ ಹೆಸರನ್ನು ಪ್ರತಿಯೊಬ್ಬ ಭಾರತೀಯನೂ ನೆನಪಿಸಿಕೊಳ್ಳುತ್ತಾರೆ. ಚೀನಾ ಭಾರತ ಭೂಮಿಯನ್ನು ಆಕ್ರಮಿಸಿಲ್ಲ ಎಂದು ಪ್ರಧಾನಿ ದೇಶಕ್ಕೆ ತಿಳಿಸಿದ್ದಾರೆ. ಆದರೆ ಚೀನಾ ಭಾರತದ ಭೂಮಿಯನ್ನು ಆಕ್ರಮಿಸದೇ ಇದ್ದಲ್ಲಿ ಕರ್ನಲ್ ಬಾಬು ಮೃತರಾಗಿದ್ದು ಹೇಗೆ? ಪ್ರಧಾನಿ ಮೋದಿಯವರು ಕರ್ನಲ್ ಬಾಬುಗೆ ಮಾಡಿದ ಅವಮಾನ ಇದಾಗಿದೆ ಎಂದು ಎಂದು ತೆಲಂಗಾಣದಲ್ಲಿ ತಮ್ಮ ಪಾದಯಾತ್ರೆಯ ವೇಳೆ ರಾಹುಲ್ ಗಾಂಧಿ ತಿಳಿಸಿದ್ದಾರೆ.


  “ಚೀನಾ ಇಂದು ಭಾರತದ 2,000 ಚದರ ಕಿಲೋಮೀಟರ್ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು ಏನು ಕ್ರಮ ಕೈಗೊಂಡಿದ್ದಾರೆ ಅಥವಾ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ನಾನು ಕೇಳಲು ಬಯಸುತ್ತೇನೆ. ಕರ್ನಲ್ ಬಾಬು ಅವರ ಗೌರವಾರ್ಥವಾಗಿ ನಾನು ಈ ವಿಷಯವನ್ನು ಪ್ರಸ್ತಾಪಿಸಬೇಕಾಗಿದೆ ಎಂದು ತಿಳಿಸಿರುವ ಗಾಂಧಿ, "ಭಾರತವು ತನ್ನ ಹುತಾತ್ಮರನ್ನು ಮರೆತಿಲ್ಲ, ಅಥವಾ ಬಿಜೆಪಿಯ ದ್ರೋಹವನ್ನು ಮರೆತಿಲ್ಲ" ಎಂದು ಹರಿಹಾಯ್ದಿದ್ದಾರೆ.


  ವೀರ ಮರಣವನ್ನಪ್ಪಿರುವ ಕಮಾಂಡರ್ ಕರ್ನಲ್ ಬಾಬು
  16 ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದ ಕರ್ನಲ್ ಬಾಬು, ಜೂನ್ 15, 2020 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಯುದ್ಧದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ 20 ಭಾರತೀಯ ಸೈನಿಕರಲ್ಲಿ ಒಬ್ಬರಾಗಿದ್ದು, ಇದು ಅತ್ಯಂತ ಗಮನಾರ್ಹವಾದ ಘಟನೆ ಎಂದೇ ಬಿಂಬಿತವಾಗಿದೆ.


  ಸದ್ಯ ತೆಲಂಗಾಣದಲ್ಲಿ ಭಾರತ್ ಜೋಡೋ
  ದಶಕಗಳಲ್ಲಿ ಸಂಭವಿಸಿದ ಎರಡು ಕಡೆಯ ಗಂಭೀರವಾದ ಮಿಲಿಟರಿ ಘರ್ಷಣೆಯಾಗಿಯೂ ಈ ದಾಳಿ ಗುರುತಿಸಿಕೊಂಡಿದೆ. ಭಾರತ್ ಜೋಡೋ ಅಭಿಯಾನದ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ, ಶುಕ್ರವಾರ ವಿರಾಮ ತೆಗೆದುಕೊಂಡು ಶನಿವಾರ ತೆಲಂಗಾಣದ ಮೇಡಕ್‌ನಿಂದ ತಮ್ಮ ಯಾತ್ರೆಯನ್ನು ಪುನರ್ ಆರಂಭಿಸಿದ್ದರು.


  ಈ ಕುರಿತು ಭಾರತ್ ಜೋಡೋದ ಅಧಿಕೃತ ಟ್ವಿಟರ್ ವೇದಿಕೆ ಪ್ರಕಟಣೆ ಮಾಡಿದ್ದು, ಯಾತ್ರೆಯು  ಒಂದು ದಿನದ ವಿರಾಮವನ್ನು ತೆಗೆದುಕೊಂಡಿತ್ತು. ತೆಲಂಗಾಣದ ಮೇಡಕ್‌ನಿಂದ ಹೊಸದಾಗಿ ಯಾತ್ರೆಯನ್ನು ಆರಂಭಿಸಲಿದೆ ಎಂದು ತಿಳಿಸಿದೆ.


  ಇದನ್ನೂ ಓದಿ: Court Order: ಬೈಯೋಕೆ 'ಆ' ಪದ ಬಳಸ್ತೀರಾ? ಕೋರ್ಟ್​ನಿಂದ ಮಹತ್ವದ ಆದೇಶ


  ಕಾಂಗ್ರೆಸ್‌ನ ಯಾತ್ರೆ ಕರ್ನಾಟಕದಲ್ಲಿ ವಿಫಲ
  ಕರ್ನಾಟಕದಲ್ಲಿ ಕಾಂಗ್ರೆಸ್ ಯಾತ್ರೆಯು ವಿಫಲವಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವ್ಯಾಖ್ಯಾನಿಸಿದ್ದಾರೆ. ಭಾರತ ಜೋಡೋ ಯಾತ್ರೆ ಕರ್ನಾಟಕದಲ್ಲಿ ವಿಫಲವಾಗಿದೆ ಹಾಗೂ ಮಹಾರಾಷ್ಟ್ರದಲ್ಲಿ ಪರಿಣಾಮ ಬೀರುವುದಿಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದು, ರಾಹುಲ್ ಗಾಂಧಿ ಒಬ್ಬ ಪ್ರಭಾವ ರಾಜಕಾರಣಿಯಾಗಿದ್ದರೆ ಇಲ್ಲವೇ ಪಕ್ಷದ ಕುರಿತು ಅವರು ಗಂಭೀರ ನಿಲುವು ತಾಳಿದವರಾಗಿದ್ದರೆ ಹಿಮಾಚಲ ಪ್ರದೇಶ ಅಥವಾ ಗುಜರಾತ್ ಚುನವಾಣೆಗೆ ತಯಾರಿ ನಡೆಸುತ್ತಿದ್ದರು. ಈ ಯಾತ್ರೆಯು ಒಬ್ಬ ವಿಫಲ ನಾಯಕನ ವೃತ್ತಿಜೀವನವನ್ನು ಪುನರ್ ಆರಂಭಿಸುವ ವಿಫಲ ಪ್ರಯತ್ನವಾಗಿದೆ ಎಂದು ತೇಜಸ್ವಿ ಸೂರ್ಯ ಬಣ್ಣಿಸಿದ್ದಾರೆ.


  ಯಾತ್ರೆಯ ವಿವರ ಇಂತಿದೆ
  ಯಾತ್ರೆಯು ತೆಲಂಗಾಣದಲ್ಲಿ 19 ವಿಧಾನಸಭೆ ಮತ್ತು ಏಳು ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿದ್ದು, ನವೆಂಬರ್ 7 ರಂದು ಮಹಾರಾಷ್ಟ್ರವನ್ನು ಪ್ರವೇಶಿಸುವ ಮೊದಲು 375 ಕಿಮೀ ದೂರವನ್ನು ಕ್ರಮಿಸಲಿದೆ ಎಂದು ವರದಿ ತಿಳಿಸಿದೆ.


  ಇದನ್ನೂ ಓದಿ: Kenya Drought: ಕೀನ್ಯಾದಲ್ಲಿ ಭೀಕರ ಬರಗಾಲ; ಮೃತಪಟ್ಟ ಆನೆಗಳೇ ಆಹಾರವಾಗಿ ಬಳಕೆ?


  ರಾಹುಲ್ ಗಾಂಧಿ ತಮ್ಮ ಯಾತ್ರೆಯ ಸಮಯದಲ್ಲಿ ದಕ್ಷಿಣ ರಾಜ್ಯದಲ್ಲಿ ಪಕ್ಷದ ಪ್ರಚಾರದ ಜೊತೆಗೆ ಕ್ರೀಡೆ, ವ್ಯಾಪಾರ ಹಾಗೂ ಮನರಂಜನಾ ಕ್ಷೇತ್ರಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಸೇರಿದಂತೆ ವಿವಿಧ ಸಮುದಾಯಗಳ ಬುದ್ಧಿಜೀವಿಗಳು ಹಾಗೂ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: