ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಆಡಿದ ಇನ್ನೊಂದು ಮಾತಿನಿಂದ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ, ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ, (Former Wayanad MP Rahul Gandhi) ಪತ್ರಕರ್ತರೊಬ್ಬರನ್ನು ನಡೆಸಿಕೊಂಡ ಬಗ್ಗೆ ಭಾರೀ ಟೀಕೆಗೆ ಗುರಿಯಾಗುತ್ತಿದ್ದಾರೆ. ರಾಹುಲ್ ಗಾಂಧಿ (Rahul Gandhi) ತಮ್ಮ ಬಳಿ ಪ್ರಶ್ನೆ ಕೇಳಿದ ಪತ್ರಕರ್ತರ ಬಳಿ, “ನೀವು ಪತ್ರಕರ್ತನಂತೆ ನಟಿಸಬೇಡಿ. ನೀವು ನನಗೆ ಉತ್ತಮ ಪ್ರಶ್ನೆಗಳನ್ನು ಏಕೆ ಕೇಳಬಾರದು? ನೀವು ಬಿಜೆಪಿಗಾಗಿ ಕೆಲಸ ಮಾಡುತ್ತೀರಿ ಎಂಬುದು ಸ್ಪಷ್ಟವಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
#WATCH | "Don’t pretend to be a pressman...Kyun hawa nikal gayi?", says Congress leader Rahul Gandhi to a journalist questioning him on his conviction in 'Modi surname' case pic.twitter.com/SdaaUeraoy
— ANI (@ANI) March 25, 2023
ನನ್ನ ಹೆಸರು ಗಾಂಧಿ, ಸಾವರ್ಕರ್ ಅಲ್ಲ
ರಾಹುಲ್ ಗಾಂಧಿ ಈಗಾದರೂ ಮೋದಿ ಸರ್ನೇಮ್ ಬಗ್ಗೆ ಹೇಳಿದ ಆಕ್ಷೇಪಾರ್ಹ ಮಾತುಗಳಿಗೆ ಕ್ಷಮೆ ಯಾಚಿಸಬೇಕು ಎಂಬ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, “ನನ್ನ ಹೆಸರು ಗಾಂಧಿ, ಸಾವರ್ಕರ್ ಅಲ್ಲ. ಗಾಂಧಿ ಯಾವತ್ತೂ ಕ್ಷಮೆ ಯಾಚಿಸುವುದಿಲ್ಲ' ಎಂದು ಅವರು ತಿರುಗೇಟು ನೀಡಿದರು.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ಸದಸ್ಯತ್ವ ಅನರ್ಹಗೊಂಡಿದ್ದೇಕೆ? ಯಾವ ಕಾನೂನಿನಡಿ ಇದಕ್ಕೆ ಅವಕಾಶವಿದೆ?
"ನಿಮ್ಮ ಎದೆಯಲ್ಲಿ ಬಿಜೆಪಿಯ ಒಂದು ಬ್ಯಾಡ್ಜ್ ಕೂಡಾ ಹಾಕಿಕೊಳ್ಳಿ. ಆಮೇಲೆ ನಾನು ಅವರಿಗೆ ಹೇಗೆ ಉತ್ತರಿಸುತ್ತೇನೋ, ಅದೇ ರೀತಿ ನಿಮಗೂ ಉತ್ತರಿಸುತ್ತೇನೆ, ಸುಮ್ಮನೆ ಪತ್ರಕರ್ತ ಎಂದು ಪೋಸ್ ಕೊಡಬೇಡಿ" ಎಂದಿದ್ದಾರೆ ರಾಹುಲ್ ಗಾಂಧಿ.
"ದೇಶದ ಬಡ ಜನರ ಧ್ವನಿಯನ್ನು ರಕ್ಷಿಸುವುದು ನನ್ನ ಕರ್ತವ್ಯ"
"ದೇಶದ ಸಂಸ್ಥೆಗಳನ್ನು ರಕ್ಷಿಸುವುದು, ದೇಶದ ಬಡ ಜನರ ಧ್ವನಿಯನ್ನು ರಕ್ಷಿಸುವುದು ಮತ್ತು ಪ್ರಧಾನಿಯೊಂದಿಗಿನ ಸಂಬಂಧವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅದಾನಿಯಂತಹ ಜನರ ಬಗ್ಗೆ ಜನರಿಗೆ ಸತ್ಯವನ್ನು ಹೇಳುವುದು ನನ್ನ ಕರ್ತವ್ಯ" ಎಂದು ಅದಾನಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: Rahul Gandhi: ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆಯಡಿ ರಾಹುಲ್ ಗಾಂಧಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹ!
ಜೈಲಿಗೆ ಹೋಗಲು ನನಗೆ ಭಯವಿಲ್ಲ
ಅಲ್ಲದೇ, ತಮಗೆ ಜೈಲಿಗೆ ಹೋಗಲು ಭಯವಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ, ಅನರ್ಹತೆ ಅಥವಾ ಬಂಧನಕ್ಕೊಳಗಾದರೂ ಸತ್ಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
ಮಾನನಷ್ಟ ಮೊಕದ್ದಮೆಯೇ ಕಾರಣ
ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಮೇಲಿನ ಆರೋಪ ಸಾಬೀತಾಗಿದೆ. ಈ ಶಿಕ್ಷೆಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು 30 ದಿನಗಳವರೆಗೆ ಜಾಮೀನು ನೀಡಿರುವುದರಿಂದ ರಾಹುಲ್ ಗಾಂಧಿ ತಕ್ಷಣ ಜೈಲಿಗೆ ಹೋಗುವುದಿಲ್ಲ. ಶಿಕ್ಷೆಯ ದಿನಾಂಕದಿಂದ ಜಾರಿಗೆ ಬರುವಂತೆ ಅವರು ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ