ನವದೆಹಲಿ: ಭಾರತ್ ಜೋಡೋ ಯಾತ್ರೆಯಲ್ಲಿ (Bharat jodo yatre) ನಿರತರಾಗಿರುವ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ತಮ್ಮ ಬಾಳಸಂಗಾತಿ (Life Partner) ಹೇಗೆರಬೇಕು ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ. ತಮ್ಮ ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ (Indira Gandhi) ಇಬ್ಬರ ಗುಣಗಳನ್ನು ಹೊಂದಿರುವ ಹುಡುಗಿಯನ್ನು ನನ್ನ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳಲು ಬಯಸುತ್ತೇ ಎಂದು ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆ ವೇಳೆ ಯೂಟ್ಯೂಬ್ ಚಾನೆಲ್ವೊಂದರ (You tube Channel) ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೇ ನನ್ನ ಮೊದಲ ಪ್ರೀತಿ ಮತ್ತು ನನ್ನ ಎರಡನೇ ತಾಯಿ ಎಂದಿದ್ದಾರೆ.
ಅಂತಹ ಹುಡುಗಿ ಸಿಕ್ಕರೆ ಮದುವೆಯಾಗುತ್ತೀರಾ ಎಂದು ಕೇಳಿದಾಗಿ, ಇದೊಂದು ಇಂಟ್ರಸ್ಟಿಂಗ್ ಪ್ರಶ್ನೆಯಾಗಿದೆ ಎನ್ನುತ್ತಾ, ನಾನು ಮಹಿಳೆಯನ್ನು ಮದುವೆಯಾಗುತ್ತೇನೆ. ಅದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಅವಳು ನನ್ನ ತಾಯಿ ಮತ್ತು ಅಜ್ಜಿ ಇಬ್ಬರ ಗುಣಗಳನ್ನು ಹೊಂದಿದ್ದರೆ ಉತ್ತಮ ಎಂದು ಹೇಳಿದ್ದಾರೆ.
ನಾನು ಎಲೆಕ್ಟ್ರಿಕ್ ಸ್ಕೂಟರ್ ಓಡಿಸಿದ್ದೇನೆ, ಎಲೆಕ್ಟ್ರಿಕ್ ಬೈಕ್ ಅಲ್ಲ
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು, ಇದೇ ವೇಳೆ ಮೋಟರ್ಸೈಕಲ್ ಮತ್ತು ಸೈಕಲ್ಗಳನ್ನು ಓಡಿಸುವ ಬಗ್ಗೆ ತಮಗಿರುವ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಎಲೆಕ್ಟ್ರಿಕ್ ಮೋಟಾರ್ಗಳೊಂದಿಗೆ ಬೈಸಿಕಲ್ ಮತ್ತು ಮೌಂಟೇನ್ ಬೈಕ್ಗಳನ್ನು ತಯಾರಿಸುವ ಚೀನಾದ ಎಲೆಕ್ಟ್ರಿಕ್ ಕಂಪನಿಯನ್ನು ಉಲ್ಲೇಖಿಸಿ ಮಾತನಾಡಿದರು.
"ನಾನು ಎಲೆಕ್ಟ್ರಿಕ್ ಸ್ಕೂಟರ್ ಓಡಿಸಿದ್ದೇನೆ, ಆದರೆ ಎಂದಿಗೂ ಎಲೆಕ್ಟ್ರಿಕ್ ಬೈಕ್ ಅಲ್ಲ. ನೀವು ಈ ಚೈನೀಸ್ ಕಂಪನಿಯನ್ನು ನೋಡಿದ್ದೀರಾ. ಎಲೆಕ್ಟ್ರಿಕ್ ಮೋಟಾರ್ಗಳೊಂದಿಗೆ ಸೈಕಲ್ಗಳು ಮತ್ತು ಮೌಂಟೆನ್ ಬೈಕ್ಗಳಿವೆ, ಇವೆಲ್ಲ ತಿಳಿದುಕೊಳ್ಳಲು ಬಹಳ ಇಂಟ್ರೆಸ್ಟಿಂಗ್ ಆಗಿದ್ದು ಚೆನ್ನಾಗಿದೆ ಎಂದು ಹೇಳಿದ್ದಾರೆ.
ತಾಯಿ ಸೋನಿಯಾ ಗಾಂಧಿ ಕೆನ್ನೆ ಹಿಡಿದು ಮುದ್ದಾಡಿದ ರಾಹುಲ್
ಈ ಮಧ್ಯೆ ಇಂದು ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಅವರ ಕೆನ್ನೆಯನ್ನು ಹಿಡಿದು ಮುದ್ದಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
#WATCH | Congress MP Rahul Gandhi had a joyful moment with his mother Sonia Gandhi during the party's 138th Foundation Day celebration event in Delhi pic.twitter.com/tgqBAxY2co
— ANI (@ANI) December 28, 2022
ಪಕ್ಷದ 138 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತದ ಮೂಲಭೂತ ಅಂಶಗಳ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ ಮತ್ತು ಸಮಾಜವನ್ನು ಒಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಇತ್ತೀಚೆಗಷ್ಟೇ ತಾಯಿಯನ್ನು ಅಪ್ಪಿಕೊಂಡಿದ್ದ ಫೋಟೋ ಶೇರ್ ಮಾಡಿದ್ದ ರಾಹುಲ್
ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರನ್ನು ಅಪ್ಪಿಕೊಂಡಿದ್ದ ಫೋಟೋವೊಂದನ್ನು ಟ್ಟಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ಕ್ಯಾಪ್ಷನ್ನಲ್ಲಿ ಅಮ್ಮನಿಂದ ಸಿಕ್ಕಿದ್ದು ಈ ಪ್ರೀತಿ, ಇದನ್ನೇ ನಾನು ದೇಶದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದರು. ಇನ್ನೂ ಈ ಫೋಟೋ ಮೂಲಕ ತಾಯಿ-ಮಗನ ವಾತ್ಸಲ್ಯವನ್ನು ಮೆರೆದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ