ಗೌರಿ ಹತ್ಯೆಯಲ್ಲಿ ಆರ್​ಎಸ್​ಎಸ್​ ಕೈವಾಡ ಹೇಳಿಕೆ, ಮಾನಹಾನಿ ಮೊಕದ್ದಮೆ; ನ್ಯಾಯಾಲಯದ ಎದುರು ರಾಹುಲ್​ ಗಾಂಧಿ!

ಗೌರಿ ಲಂಕೇಶ್​ ಹತ್ಯೆ ಬಳಿಕ  ಮಾತನಾಡಿದ ರಾಹುಲ್​ ಗಾಂಧಿ ಬಿಜೆಪಿ ತತ್ವಗಳ ವಿರುದ್ಧ ಹಾಗೂ ಆರ್​ಎಸ್​ಎಸ್​ ಆದರ್ಶಗಳ ವಿರುದ್ಧ ಯಾರೇ ಮಾತನಾಡಿದರೂ ಅವರ ಮೇಲೆ ದಾಳಿ ನಡೆದು ಹತ್ಯೆಮಾಡುವಂತಹ ವಾತಾವರಣ ನಿರ್ಮಾಣವಾಗುತ್ತಿದೆ ಎಂದಿದ್ದರು

Seema.R | news18
Updated:July 4, 2019, 11:44 AM IST
ಗೌರಿ ಹತ್ಯೆಯಲ್ಲಿ ಆರ್​ಎಸ್​ಎಸ್​ ಕೈವಾಡ ಹೇಳಿಕೆ, ಮಾನಹಾನಿ ಮೊಕದ್ದಮೆ; ನ್ಯಾಯಾಲಯದ ಎದುರು ರಾಹುಲ್​ ಗಾಂಧಿ!
ರಾಹುಲ್​ ಗಾಂಧಿ
  • News18
  • Last Updated: July 4, 2019, 11:44 AM IST
  • Share this:
ಮುಂಬೈ (ಜು.04):  ಮಾನಹಾನಿ ಪ್ರಕರಣದ ಸಂಬಂಧ ​ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ಮುಂಬೈ ಕೋರ್ಟ್ ಸಮನ್ಸ್​ ಜಾರಿ ಮಾಡಿದ್ದು, ಅದರ ವಿಚಾರಣೆಗಾಗಿ ಇಂದು ಅವರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆಯಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತರ ಕೈವಾಡವಿದೆ, ಅವರ ಹತ್ಯೆಗೆ ಬಿಜೆಪಿ-ಆರ್​ಎಸ್​ಎಸ್​ ಆದರ್ಶಗಳೆ ಕಾರಣ ಎಂದು ರಾಹುಲ್​ ಗಾಂಧಿ ಈ ಹಿಂದೆ ಆರೋಪಿಸಿದ್ದರು. ಈ ಸಂಬಂಧ  ಆರ್​ಎಸ್​ ಕಾರ್ಯಕರ್ತ ಧ್ರತಿಮನ್ ಜೋಶಿ​ ಕಾಂಗ್ರೆಸ್​ ನಾಯಕನ ವಿರುದ್ಧ ಪ್ರಕರಣ ದಾಖಲಿಸಿದ್ದರು.

2017ರ ಸೆಪ್ಟೆಂಬರ್​ನಲ್ಲಿ ಗೌರಿ ಲಂಕೇಶ್​ ಹತ್ಯೆ ನಡೆಸಲಾಗಿತ್ತು. ಈ ಹತ್ಯೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು, ಈ ಕುರಿತು ಮಾತನಾಡಿದ್ದ ರಾಹುಲ್​ ಗಾಂಧಿ, ಈ ಹತ್ಯೆಯಲ್ಲಿ ಆರ್​ಎಸ್​ಎಸ್​ ಕೈವಾಡವಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆರ್​ಎಸ್​ ಎಸ್​ ಕಾರ್ಯಕರ್ತ ಜೋಶಿ ರಾಹುಲ್​ ಗಾಂಧಿ, ಸೋನಿಯಾ ಗಾಂಧಿ ಹಾಗೂ ಸಿಪಿಐ(ಎಂ) ನಾಯಕ ಸೀತಾರಾಮ್​ ಯೆಚೂರಿ ವಿರುದ್ಧ ವೈಯಕ್ತಿಯ ದೂರು ದಾಖಲಿಸಿದ್ದರು.

ಈ ಪ್ರಕರಣ ಸಂಬಂಧ ಕಳೆದ ಫೆಬ್ರವರಿಯಲ್ಲಿ ಮಾಝ್​ಗಂವ್​ ನ್ಯಾಯಾಲಯ ರಾಹುಲ್​ ಗಾಂಧಿ ಹಾಗೂ ಸಿಪಿಐ (ಎಂ)ನಾಯಕ ಸೀತಾರಾಮ್​ ಯೆಚೂರಿ ಅವರ ವಿರುದ್ಧ ಸಮನ್ಸ್​ ಜಾರಿ ಮಾಡಿತ್ತು.

ಇದನ್ನು ಓದಿ: ಪಕ್ಷ ಮರು ಸಂಘಟನೆಗೆ ನೀವು ಸಂಪೂರ್ಣ ಸ್ವತಂತ್ರರು; ರಾಹುಲ್​ಗೆ ಕಾಂಗ್ರೆಸ್​​ ಮುಖ್ಯಮಂತ್ರಿಗಳು ಕಿವಿಮಾತು

ಗೌರಿ ಲಂಕೇಶ್​ ಹತ್ಯೆ ಬಳಿಕ  ಮಾತನಾಡಿದ ರಾಹುಲ್​ ಗಾಂಧಿ ಬಿಜೆಪಿ ತತ್ವಗಳ ವಿರುದ್ಧ ಹಾಗೂ ಆರ್​ಎಸ್​ಎಸ್​ ಆದರ್ಶಗಳ ವಿರುದ್ಧ ಯಾರೇ ಮಾತನಾಡಿದರೂ ಅವರ ಮೇಲೆ ದಾಳಿ ನಡೆದು ಹತ್ಯೆ ಮಾಡುವಂತಹ ವಾತಾವರಣ ದೇಶದಲ್ಲಿ ನಿರ್ಮಾಣವಾಗುತ್ತಿದೆ ಎಂದಿದ್ದರು. ಈ ಹೇಳಿಕೆಯನ್ನು ಜೋಶಿ ತಮ್ಮ ದೂರಿನಲ್ಲಿ ದಾಖಲಿಸಿದ್ದರು.

ಸೀತಾರಾಮ್​ ಯೆಚೂರಿ ಕೂಡ ಆರ್​ಎಸ್​ಎಸ್​ ತತ್ವ ಒಪ್ಪದ ಪತ್ರಕರ್ತರ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ಇವರ ಮೇಲೆ ಮಾನಹಾನಿ ಪ್ರಕರಣ ದಾಖಲಾಗಿತ್ತು.ಇದಲ್ಲದೇ ರಾಹುಲ್​ ಗಾಂಧಿ ಮತ್ತೊಂದು ಮಾನಹಾನಿ ಪ್ರಕರಣವನ್ನೂ ಸಹ ಎದುರಿಸುತ್ತಿದ್ದಾರೆ. ಈ ಹಿಂದೆ  ಮಹಾತ್ಮ ಗಾಂಧಿ ಹತ್ಯೆಗೆ ಸಂಘ ಪರಿವಾರ ಕಾರಣ ಎಂದು ಆರೋಪಿಸಿದ ಅವರ ಮೇಲೆ ಸ್ಥಳೀಯ ಆರ್​ಎಸ್​ಎಸ್​ ಕಾರ್ಯಕರ್ತರು ಥಾಣೆ ಜಿಲ್ಲೆಯ ಭಿವಂಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

First published: July 4, 2019, 11:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading