Narendra Modi Birthday| 71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ; ರಾಹುಲ್ ಗಾಂಧಿ, ಅಮಿತ್ ಶಾ ಸೇರಿದಂತೆ ಹಲವರಿಂದ ಶುಭ ಹಾರೈಕೆ

ಭಾರತೀಯ ಜನತಾ ಪಕ್ಷವು ಇಂದು ಹಲವು ಜನಪರ ಕಾರ್ಯಕ್ರಮಗಳನ್ನು ಯೋಜಿಸಿದೆ. ಮೋದಿ ಜೀವನ ಆಧಾರಿತ  ಚಲನಚಿತ್ರ ಪ್ರದರ್ಶನ, ರಕ್ತದಾನ ಶಿಬಿರಗಳು, ಸ್ವಚ್ಛತೆ ಮತ್ತು ವ್ಯಾಕ್ಸಿನೇಷನ್ ಡ್ರೈವ್‌ಗಳನ್ನು ನಡೆಸಲಿದೆ ಎಂದು ತಿಳಿದುಬಂದಿದೆ.

ನರೇಂದ್ರ ಮೋದಿ.

ನರೇಂದ್ರ ಮೋದಿ.

  • Share this:
    ನವ ದೆಹಲಿ (ಸೆಪ್ಟೆಂಬರ್​ 17); ಪ್ರಧಾನಿ ನರೇಂದ್ರ ಮೋದಿ ಇಂದು 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವರು ಪ್ರಧಾನಿ ನರೇಂದ್ರ ಮೋದಿಯ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಟ್ವೀಟ್​ ಮಾಡುವ ಮೂಲಕ ಹಲವು ರಾಜಕೀಯ ನಾಯಕರು ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಗಳನ್ನು ಕೋರಿದ್ದಾರೆ. ಆದಾಗ್ಯೂ, ಪಿಎಂ ಮೋದಿ ಎಂದಿನಂತೆ ಇಂದು ಸಹ ತಮ್ಮ ಕರ್ತವ್ಯ ಗಳನ್ನು ಮುಂದುವರಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲು ನಾಳೆ ಎಲ್ಲಾ ಕಾರ್ಯದರ್ಶಿಗಳ ಸಭೆಗೆ ಕರೆ ನೀಡಿದ್ದಾರೆ. ಅಲ್ಲದೆ, ಇಂದು ಬೆಳಿಗ್ಗೆ 11:30 ರ ಸುಮಾರಿಗೆ ಎಸ್‌ಸಿಒ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.

    ಪ್ರಧಾನಮಂತ್ರಿಯವರ ಹುಟ್ಟುಹಬ್ಬದ ಅಂಗವಾಗಿ ಭಾರತೀಯ ಜನತಾ ಪಕ್ಷವು ಇಂದು ಹಲವು ಜನಪರ ಕಾರ್ಯಕ್ರಮಗಳನ್ನು ಯೋಜಿಸಿದೆ. ಮೋದಿ ಜೀವನ ಆಧಾರಿತ  ಚಲನಚಿತ್ರ ಪ್ರದರ್ಶನ, ರಕ್ತದಾನ ಶಿಬಿರಗಳು, ಸ್ವಚ್ಛತೆ ಮತ್ತು ವ್ಯಾಕ್ಸಿನೇಷನ್ ಡ್ರೈವ್‌ಗಳನ್ನು ನಡೆಸಲಿದೆ. ಅಲ್ಲದೆ, ಪ್ರಧಾನಿ ಮೋದಿ ಕೆಲಕ್ಕೆ ಧನ್ಯವಾದಗಳನ್ನು ಅರ್ಪಿಸುವ ಸಲುವಾಗಿ ಸುಮಾರು 50 ಮಿಲಿಯನ್ ಪೋಸ್ಟ್‌ಕಾರ್ಡ್‌ಗಳನ್ನು ನೀಡುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ.

    ಈ ಚಟುವಟಿಕೆಗಳು ಮೂರು ವಾರಗಳವರೆಗೆ (ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7) ಮುಂದುವರಿಯುತ್ತದೆ ಏಕೆಂದರೆ ಈ ಅವಧಿಯು ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ (ಸೆಪ್ಟೆಂಬರ್ 25), ಗಾಂಧಿ ಜಯಂತಿ (ಅಕ್ಟೋಬರ್ 2) ಮತ್ತು ಅಕ್ಟೋಬರ್ 7 ಮೋದಿಯವರಿಂದ ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ 20 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ಮೂರು ವಾರಗಳು ಈ ಎಲ್ಲಾ ಚಟುವಟಿಕೆಗಳು ಮುಂದುವರೆಯಲಿವೆ.

    ಬಿಜೆಪಿ ಪಕ್ಷದ ಯುವ ಘಟಕವು ಸೆ.17 ಈ ದಿನವನ್ನು "ಸೇವೆ ಮತ್ತು ಸಮರ್ಪಣಾ ಅಭಿಯಾನ" ದಿನ ಎಂದು ಗುರುತಿಸುತ್ತದೆ. ಹೀಗಾಗಿ ಬಿಜೆಪಿ ಪಕ್ಷದ ಎಲ್ಲಾ ಸ್ಥಳೀಯ ಘಟಕಗಳಲ್ಲೂ ಪ್ರಾರ್ಥನಾ ಸಭೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಜನರು ನಮೋ ಆಪ್  ಅನ್ನು ಡೌನ್‌ಲೋಡ್ ಮಾಡುವಂತೆ ಪ್ರೋತ್ಸಾಹಿಸಲ ಸ್ಟಾಲ್‌ಗಳನ್ನು ಸ್ಥಾಪಿಸಲೂ ಸಹ ಯೋಜಿಸಲಾಗಿದೆ.

    ಇದನ್ನೂ ಓದಿ: Explainer: ಖಾದ್ಯ ಸಸ್ಯಗಳನ್ನು ಲಸಿಕೆಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿರುವ ವಿಜ್ಞಾನಿಗಳು..!

    ಈ ಆಪ್ ಜನರು ಪ್ರಧಾನಿ ಮೋದಿಯ ಜೊತೆಗೆ ಸಂವಹನ ನಡೆಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಈ ಮೂರು ವಾರಗಳ ಅವಧಿಯಲ್ಲಿ ಪ್ರಧಾನಿ ಮೋದಿ ಚಿತ್ರ ಮುದ್ರಿಸಲಾಗಿರುವ 14 ಕೋಟಿ ಪಡಿತರ ಚೀಲಗಳನ್ನು ಸಹ ವಿತರಿಸಲು ಯೋಜನೆ ರೂಪಿಸಲಾಗಿದೆ. ಜೊತೆಗೆ ವಿವಿಧ ರಾಜ್ಯಗಳಲ್ಲಿ 71 ಸ್ಥಳಗಳನ್ನು ಪರಿಸರ ಅಭಿಯಾನದ ಅಡಿಯಲ್ಲಿ ಸ್ವಚ್ಛಗೊಳಿಸಲಾಗುತ್ತದೆ  ಎಂದು ತಿಳಿದುಬಂದಿದೆ.
    Published by:MAshok Kumar
    First published: