Covid ಸಾವುಗಳ‌ ಬಗ್ಗೆ ಸುಳ್ಳು ಹೇಳುತ್ತಿರುವ ಮೋದಿ: ರಾಹುಲ್ ಗಾಂಧಿ ಟೀಕೆ

ಕೊರೋನಾದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಕಡ್ಡಾಯವಾಗಿ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ನವದೆಹಲಿ (ಮೇ 6) : ಭಾರತದಲ್ಲಿ 4.7 ಮಿಲಿಯನ್ ಕೋವಿಡ್ (Covid) ಸಾವುಗಳು ಸಂಭವಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಹೇಳಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಶುಕ್ರವಾರ ಕೇಂದ್ರ ಸರ್ಕಾರದ (Union Government) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.‌ 'ವಿಜ್ಞಾನವು ಸುಳ್ಳು ಹೇಳುವುದಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಸುಳ್ಳು ಹೇಳುತ್ತಾರೆ' ಎಂದು ಕೇಂದ್ರ ಸರ್ಕಾರದ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ‌. ಅಲ್ಲದೆ ಕೊರೋನಾ (Corona)ದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಕಡ್ಡಾಯವಾಗಿ ನಾಲ್ಕು ಲಕ್ಷ ರೂಪಾಯಿ ಪರಿಹಾರ (compensation) ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಟ್ವೀಟ್ ಮೂಲಕ ರಾಹುಲ್ ಗಾಂಧಿ ಆಕ್ರೋಶ
ಈ ಬಗ್ಗೆ ಟ್ವೀಟ್‌ ಮಾಡಿರುವ ರಾಹುಲ್ ಗಾಂಧಿ ಅವರು, “ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 47 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ. ಭಾರತ ಸರ್ಕಾರ ಹೇಳಿರುವಂತೆ ಅದು 4.8 ಲಕ್ಷ ಅಲ್ಲ. ವಿಜ್ಞಾನ ಸುಳ್ಳು ಹೇಳುವುದಿಲ್ಲ. ಮೋದಿ ಸುಳ್ಳು ಹೇಳುತ್ತಾರೆ.  ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳನ್ನು ಗೌರವಿಸಿ. ಕಡ್ಡಾಯ 4 ಲಕ್ಷ ರೂಪಾಯಿ ಪರಿಹಾರವನ್ನು ಕೊಟ್ಟು ಅವರ ನೆರವಿಗೆ ಧಾವಿಸಿ" ಎಂದು ಆಗ್ರಹಿಸಿದ್ದಾರೆ.



ಬೆಚ್ಚಿ ಬೀಳಿಸಿದ ವಿಶ್ವ ಆರೋಗ್ಯ ಸಂಸ್ಥೆಯ ವರದಿ
ಕೋವಿಡ್-19 ನಿಂದ ನೇರವಾಗಿ ಅಥವಾ ಆರೋಗ್ಯ ವ್ಯವಸ್ಥೆಗಳು ಮತ್ತು ಸಮಾಜದ ಮೇಲೆ ಸಾಂಕ್ರಾಮಿಕದ ಪ್ರಭಾವದಿಂದಾಗಿ 14.9 ಮಿಲಿಯನ್ (ಒಂದು ಮಿಲಿಯನ್ = 10 ಲಕ್ಷ) ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಗುರುವಾರ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 4.7 ಮಿಲಿಯನ್ ಕೋವಿಡ್ ಸಾವುಗಳು ಸಂಭವಿಸಿವೆ. ಇದು ಅಧಿಕೃತ ಅಂಕಿಅಂಶಗಳ 10 ಪಟ್ಟು ಮತ್ತು ಜಾಗತಿಕವಾಗಿ ಕೋವಿಡ್ ಸಾವುಗಳಲ್ಲಿ ಮೂರನೇ ಒಂದು ಭಾಗವಾಗಿದೆ ಎಂದು ಅದು ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಖಂಡಿಸಿದ ಭಾರತ
ಅಧಿಕೃತ ದತ್ತಾಂಶದ ಲಭ್ಯತೆಯ ದೃಷ್ಟಿಯಿಂದ ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಹೆಚ್ಚುವರಿ ಮರಣದ ಅಂದಾಜುಗಳನ್ನು ಯೋಜಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗಣಿತದ ಮಾದರಿಗಳನ್ನು ಬಳಸುವುದನ್ನು ಭಾರತ ಬಲವಾಗಿ ಆಕ್ಷೇಪಿಸಿದೆ. ಬಳಸಿದ ಮಾದರಿಗಳ ಸಿಂಧುತ್ವ ಮತ್ತು ದೃಢತೆ ಮತ್ತು ಡೇಟಾ ಸಂಗ್ರಹಣೆಯ ವಿಧಾನವು ಪ್ರಶ್ನಾರ್ಹ ಎಂದು ಹೇಳಿದೆ.

ಇದನ್ನು ಓದಿ: SSL, PUC ಟಾಪರ್ಸ್​ಗೆ ಬಂಪರ್ ಗಿಫ್ಟ್, ಚಾಪರ್ ರೈಡ್ ಘೋಷಣೆ

ಕೇಂದ್ರ ಆರೋಗ್ಯ ಇಲಾಖೆ ಖಂಡನೆ
ಹದಿನೇಳು ಭಾರತೀಯ ರಾಜ್ಯಗಳಿಗೆ ಸಂಬಂಧಿಸಿದಂತೆ ಡೇಟಾವನ್ನು ಕೆಲವು ವೆಬ್‌ಸೈಟ್‌ಗಳು ಮತ್ತು ಮಾಧ್ಯಮ ವರದಿಗಳಿಂದ ಪಡೆಯಲಾಗಿದೆ ಮತ್ತು ಅವುಗಳ ಗಣಿತದ ಮಾದರಿಯಲ್ಲಿ ಬಳಸಲಾಗಿದೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವಾದವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಶ್ನಿಸಿದೆ. ಇದು ಭಾರತದಲ್ಲಿ ಮರಣದ ಪ್ರಮಾಣ ಹೆಚ್ಚಿದೆ ಎಂದು ಹೇಳುವುದಕ್ಕೆ ರೂಪಿಸಿರುವ ಸಂಖ್ಯಾಶಾಸ್ತ್ರೀಯವಾಗಿದೆ.

ಇದು ಅಸ್ಪಷ್ಟ ಮತ್ತು ವೈಜ್ಞಾನಿಕವಾಗಿ ಪ್ರಶ್ನಾರ್ಹವಾದ ಡೇಟಾ ಸಂಗ್ರಹಣೆಯ ವಿಧಾನವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಭಾರತದ ಆಕ್ಷೇಪಣೆಯ ಹೊರತಾಗಿಯೂ‌ ವಿಶ್ವ ಆರೋಗ್ಯ ಸಂಸ್ಥೆ ಭಾರತದ ಕಳವಳಗಳನ್ನು ಸಮರ್ಪಕವಾಗಿ ಪರಿಹರಿಸದೆ ಹೆಚ್ಚುವರಿ ಮರಣದ ಅಂದಾಜುಗಳನ್ನು ಬಿಡುಗಡೆ ಮಾಡಿದೆ ಎಂದು ಸಚಿವಾಲಯ ಹೇಳಿದೆ.

ಇದನ್ನು ಓದಿ: 1500 KG ಹೂಗಳಿಂದ ಕೇದಾರನಾಥ ಅಲಂಕಾರ! ದೇವಾಲಯದ ವೈಭವ ಕಣ್ತುಂಬಿಕೊಳ್ಳಿ

ಆರೋಗ್ಯ ಸಚಿವಾಲಯವು ಹಂಚಿಕೊಂಡ ಮಾಹಿತಿಯ ಪ್ರಕಾರ, ಶುಕ್ರವಾರ ಭಾರತದ ಸಾವಿನ ಸಂಖ್ಯೆ 5. 24 ಲಕ್ಷ. ವಿಶ್ವ ಆರೋಗ್ಯ ಸಂಸ್ಥೆ  ಅಂದಾಜಿನ ಪ್ರಕಾರ, ಡಿಸೆಂಬರ್ 31, 2021 ರವರೆಗಿನ ಅವಧಿಗೆ ಕೋವಿಡ್ -19 ನಿಂದಾಗಿ ಭಾರತದ ಸಾವನ್ನಪ್ಪಿದವರ ಸಂರ್ಖಯೆ 481,000 ಕೋವಿಡ್ -19 ಸಾವುಗಳಿಗಿಂತ 10 ಪಟ್ಟು ಹೆಚ್ಚು. ಜಾಗತಿಕವಾಗಿ, 2020 ಮತ್ತು 2021 ರಲ್ಲಿ ಸುಮಾರು 15 ಮಿಲಿಯನ್ ಸಾವುಗಳು ಸಂಭವಿಸಿವೆ, ವಿಶ್ವಸಂಸ್ಥೆ ಪ್ರಕಾರ ಸಾವಿನ ಸಂಖ್ಯೆಗಿಂತ ಸರಿಸುಮಾರು ಮೂರು ಪಟ್ಟು ಎಂದು ಹೇಳಿದರು.
Published by:Seema R
First published: