ದೆಹಲಿ: 'ಮೋದಿ ಉಪನಾಮ' ಹೇಳಿಕೆಗೆ (Modi Surname) ಸಂಬಂಧಿಸಿದಂತೆ ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಲ್ಪಟ್ಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭೆಯ (Lok Sabha) ವಸತಿ ಸಮಿತಿಯು ಒಂದು ತಿಂಗಳೊಳಗೆ ತಮ್ಮ ಅಧಿಕೃತ ನಿವಾಸ ತೆರವು ಮಾಡುವಂತೆ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಕಳುಹಿಸಿದ್ದು, ರಾಹುಲ್ ಗಾಂಧಿ ಅವರು (Rahul Gandhi) ತಮ್ಮ ಅಧಿಕೃತ ನಿವಾಸವನ್ನು ಏಪ್ರಿಲ್ 22 ರೊಳಗೆ ಖಾಲಿ ಮಾಡಬೇಕಾಗುತ್ತದೆ.
ಅಂದಹಾಗೆ ರಾಹುಲ್ ಗಾಂಧಿಯವರು ಮೊದಲ ಬಾರಿಗೆ ಅಂದರೆ 2004 ರಲ್ಲಿ ಅಮೇಠಿಯಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಬಳಿಕ ಇದೇ 12, ತುಘಲಕ್ ಲೇನ್ ಸರ್ಕಾರಿ ನಿವಾಸವನ್ನು ಪಡೆದಿದ್ದರು. ಈ ವೇಳೆ ಈ ನಿವಾಸವನ್ನು ಸ್ವತಂತ್ರ ಶಕ್ತಿ ಕೇಂದ್ರವಾಗಿಸಲು ಅವರು ತಮ್ಮ ತಾಯಿ ಸೋನಿಯಾ ಗಾಂಧಿಯವರ ನಿವಾಸ 10 ಜನಪಥ್‌ನಿಂದ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು.
ಪಕ್ಷದ ಎರಡನೇ ಶಕ್ತಿ ಕೇಂದ್ರವಾಗಿದ್ದ 12 ತುಘಲಕ್ ಲೇನ್!
ನಂತರದ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ 12, ತುಘಲಕ್ ಲೇನ್ ಅನ್ನೋದು 10, ಜನಪಥ್‌ಗೆ ಎರಡನೇ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿತ್ತು. ಪಕ್ಷದ ನಾಯಕರು ಬಂಗಲೆಗೆ ಬಂದು ಸಭೆಗಳನ್ನು ನಡೆಸುತ್ತಿದ್ದರು. ಕೆಲವೊಮ್ಮೆ ರಾಹುಲ್ ಗಾಂಧಿಯವರಿದ್ದ ನಿವಾಸದಲ್ಲಿ, ಜನಪಥ್ ನಲ್ಲಿ ನಡೆಯುವುದಕ್ಕಿಂತ ಹೆಚ್ಚಿನ ಸಭೆಗಳು ನಡೆದಿವೆ. ಭೂಪೇಶ್ ಬಘೇಲ್-ಟಿಎಸ್ ಸಿಂಗ್ ದೇವ್ ಹಗ್ಗಜಗ್ಗಾಟ ಉತ್ತುಂಗಕ್ಕೇರಿದಾಗ ಅಥವಾ ಅಶೋಕ್ ಗೆಹ್ಲೋಟ್-ಸಚಿನ್ ಪೈಲಟ್ ವಿಷಯವಾಗಿ ಹಲವಾರು ಮಹತ್ವದ ಸಭೆಗಳು ನಡೆದಿವೆ.
ವಿಶಾಲ, ಪ್ರಶಾಂತ ಸ್ಥಳವಾಗಿದ್ದ 12, ತುಘಲಕ್ ಲೇನ್
ತುಘಲಕ್ ಲೇನ್‌ನಲ್ಲಿರುವ ಈ ಮೂಲೆಯ ಕಟ್ಟಡ ವಿಶಾಲವಾಗಿದ್ದು ಅತ್ಯಂತ ಪ್ರಶಾಂತವಾದ ಸ್ಥಳವಾಗಿದೆ. ಇಡೀ ಮನೆಯನ್ನು ಅವರ ಸಹೋದರಿ ಪ್ರಿಯಾಂಕಾ ವಾದ್ರಾ ನಿರ್ಮಿಸಿದ್ದಾರೆ ಎನ್ನಲಾಗಿದ್ದು, ಇದು ಜಿಮ್ ಮತ್ತು ಕೆಲವು ಕಚೇರಿಗಳನ್ನು ಹೊಂದಿದೆ.
ಆಪ್ತರಿಗೆ ಮಾತ್ರ ಅನುಮತಿ
ಅಂದಹಾಗೆ ಅತ್ಯಂತ ಆಪ್ತ ಜನರು ಮತ್ತು ಕುಟುಂಬಕ್ಕೆ ಮಾತ್ರ ಅವರ ಮನೆಗೆ ಪ್ರವೇಶಿಸಲು ಅನುಮತಿಸಲಾಗಿದೆ. ಆದರೆ ಹೆಚ್ಚಿನವರು ಅವರ ಕಚೇರಿಯಲ್ಲಿ ಭೇಟಿಯಾಗುತ್ತಾರೆ. ಪತ್ರಕರ್ತರಿಗೆ ಕಡಿಮೆ ಪ್ರವೇಶವಿದೆ. ಇಲ್ಲಿ ಪ್ರಮುಖರನ್ನು ಭೇಟಿಯಾಗುವಂಥ ಅನೇಕ ಚಿತ್ರಗಳನ್ನು ಗಮನಿಸಿರಬಹುದು. ಏಕೆಂದರೆ ಅವರ ಮನೆಯ ಹೊರಗಿನ ಸ್ಥಳವು ಫೋಟೋ ಸೆಶನ್‌ಗಳಿಗೆ ಸ್ಥಳವಾಗಿದೆ. ಭಾರತ್ ಜೋಡೋ ಯಾತ್ರೆಯ ನಂತರ ಇತ್ತೀಚೆಗೆ ಕಮಲ್ ಹಾಸನ್ ಅವರನ್ನು ಭೇಟಿಯಾಗಿದ್ದು ಇದೇ ಸ್ಥಳವನ್ನು ಫೋಟೋಗಳಲ್ಲಿ ನಾವು ಕಾಣಬಹುದು.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿಗೆ ಈಗ ಸಾವರ್ಕರ್ ಸಂಕಷ್ಟ! ಕೇಸ್ ದಾಖಲಿಸುತ್ತೇನೆ ಅಂತ ಸಾವರ್ಕರ್ ಮೊಮ್ಮಗನ ಎಚ್ಚರಿಕೆ
ಅನರ್ಹಗೊಂಡ ದಿನದಿಂದಲೇ ಬೇರೆ ಮನೆಗೆ ಹುಡುಕಾಟ!
ಒಂದು ತಿಂಗಳೊಳಗೆ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಲೋಕಸಭೆಯ ವಸತಿ ಸಮಿತಿಯು ಅವರಿಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಈಗ 19 ವರ್ಷಗಳ ನಂತರ ಗಾಂಧಿ ಅವರು ಈ ಅಧಿಕೃತ ನಿವಾಸವನ್ನು ತೆರವು ಮಾಡುತ್ತಿದ್ದಾರೆ. ಅಂದಹಾಗೆ ಅನರ್ಹಗೊಂಡ ದಿನದಿಂದಲೇ ರಾಹುಲ್ ಗಾಂಧಿ ಮನೆ ಹುಡುಕಲು ಆರಂಭಿಸಿದ್ದರು. ಹಾಗಾಗಿ ತೆರವು ಮಾಡಲು ಅವರು ಹೆಚ್ಚುವರಿ ಸಮಯವನ್ನು ಕೇಳುವುದಿಲ್ಲ ಎಂದು ಮೂಲಗಳು ತಿಳಿಸಿವೆ.
“ತನಗೆ ಸ್ವಂತ ಮನೆ ಇಲ್ಲ” ಎಂದಿದ್ದ ರಾಹುಲ್ ಗಾಂಧಿ
ಇತ್ತೀಚೆಗೆ ಸಂವಾದವೊಂದರಲ್ಲಿ ರಾಹುಲ್ ಗಾಂಧಿಯವರು ತನಗೆ ಮನೆ ಇಲ್ಲ. ಬಾಲ್ಯದಿಂದಲೂ ಅವರ ಕುಟುಂಬವು ದುರಂತಗಳು ಮತ್ತು ರಾಜಕೀಯ ಹಿನ್ನೆಡೆಯನ್ನು ಅನುಭವಿಸಿದ ಕಾರಣ ಮನೆಗಳನ್ನು ಬದಲಾಯಿಸಬೇಕಾಯಿತು. ಹಾಗೆಯೇ ತಾವು ಶಾಶ್ವತವಾಗಿ ಏನನ್ನೂ ಹೊಂದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: Shocking: 10 ಜನರ ಹಲ್ಲು ಮುರಿದ ಪೊಲೀಸ್, 'ಆ' ಭಾಗಗಳಿಗೂ ಡ್ಯಾಮೇಜ್! ಇಷ್ಟಕ್ಕೆಲ್ಲ ಕಾರಣ ಪ್ರೇಮ ಪ್ರಕರಣವಂತೆ!
ಅಂದಹಾಗೆ, 'ಮೋದಿ ಉಪನಾಮ' ಹೇಳಿಕೆಯ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೋಷಿ ಎಂದು ಗುಜರಾತ್‌ನ ಸೂರತ್‌ನ ನ್ಯಾಯಾಲಯ ತೀರ್ಪು ನೀಡಿದ್ದು, ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅದರೊಂದಿಗೆ ನ್ಯಾಯಾಲಯ ಅವರಿಗೆ ಜಾಮೀನು ಕೂಡ ನೀಡಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವದಿಂದಲೂ ಅನರ್ಹಗೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ