ಜಮ್ಮು-ಕಾಶ್ಮೀರ ರಾಜ್ಯಪಾಲರ ಮನವಿ ಮೇರೆಗೆ ನಾಳೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಲಿರುವ ರಾಹುಲ್​ ಗಾಂಧಿ

ಶನಿವಾರ ಮುಂಜಾನೆ ಜಮ್ಮು ಕಾಶ್ಮೀರಕ್ಕೆ ರಾಹುಲ್​ ಗಾಂಧಿ ಜೊತೆಯಲ್ಲಿ ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್​, ಆನಂದ್​ ಶರ್ಮಾ, ಸಿಪಿಐ ಪಕ್ಷದ ಡಿ ರಾಜಾಮ ಸಿಪಿಐ (ಎಂ)ನ ಸೀತಾರಾನ್​ ಯೆಚೂರಿ, ಆರ್​ಜೆಡಿ ಮನೋಜ್​ ಜಾ ಮತ್ತಿತ್ತರು ಭೇಟಿ ನೀಡಲಿದ್ದಾರೆ.

Seema.R | news18-kannada
Updated:August 23, 2019, 10:31 PM IST
ಜಮ್ಮು-ಕಾಶ್ಮೀರ ರಾಜ್ಯಪಾಲರ ಮನವಿ ಮೇರೆಗೆ ನಾಳೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಲಿರುವ ರಾಹುಲ್​ ಗಾಂಧಿ
ರಾಹುಲ್​ ಗಾಂಧಿ
  • Share this:
ನವದೆಹಲಿ (ಆ.23): ಸುಳ್ಳು ಸುದ್ದಿಹಬ್ಬಿಸುವ ಬದಲು ಕಣಿವೆ ರಾಜ್ಯಕ್ಕೆ ಆಗಮಿಸಿ ಇಲ್ಲಿನ ಪರಿಸ್ಥಿತಿ ಅರಿಯಿರಿ ಎಂಬ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ ಮಲ್ಲಿಕ್​ ಆಹ್ವಾನವನ್ನು ರಾಹುಲ್​ ಗಾಂಧಿ ಸ್ವೀಕರಿಸಿದ್ದು, ನಾಳೆ 9ಜನ ವಿರೋಧ ಪಕ್ಷದ ನಾಯಕರೊಂದಿಗೆ ಅಲ್ಲಿಗೆ ಭೇಟಿ ನೀಡಲಿದ್ದಾರೆ.

ಶನಿವಾರ ಮುಂಜಾನೆ ಜಮ್ಮು ಕಾಶ್ಮೀರಕ್ಕೆ ರಾಹುಲ್​ ಗಾಂಧಿ ಜೊತೆಯಲ್ಲಿ ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್​, ಆನಂದ್​ ಶರ್ಮಾ, ಸಿಪಿಐ ಪಕ್ಷದ ಡಿ ರಾಜಾಮ ಸಿಪಿಐ (ಎಂ)ನ ಸೀತಾರಾನ್​ ಯೆಚೂರಿ, ಆರ್​ಜೆಡಿ ಮನೋಜ್​ ಜಾ ಮತ್ತಿತ್ತರು ಭೇಟಿ ನೀಡಲಿದ್ದು, ಇಲ್ಲಿನ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಈ ವೇಳೆ ರಾಹುಲ್​ ಗಾಂಧಿ ಸ್ಥಳೀಯರನ್ನು ಹಾಗೂ ರಾಜಕೀಯ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಇನ್ನು ಜಮ್ಮುಕಾಶ್ಮೀರಕ್ಕೆ ಭೇಟಿ ನೀಡಲಿರುವ ವಿರೋಧ ಪಕ್ಷದ ನಾಯಕರು ಇಲ್ಲಿನ ಶಾಂತಿಗೆ ಭಂಗತರವ ಪ್ರಯತ್ನ ನಡೆಸದಂತೆ ಸತ್ಯಪಾಲ್​ ಮಲ್ಲಿಕ್​ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಮಾನ್ಯತೆಯ ಕಲಂ 370ನ್ನು ರದ್ದು ಮಾಡಿದ ಬಳಿಕ ಮಾತನಾಡಿದ ರಾಜ್ಯಪಾಲ ಸತ್ಯಪಾಲ್​ ಸಿಂಗ್​, ರಾಜ್ಯದಲ್ಲಿ ಯಾವುದೇ ಹಿಂಸಾತ್ಮಕ ಘಟನೆ ವರದಿಯಾಗಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು.

ಈ ಕುರಿತು ಟೀಕಿಸಿದ್ದ ರಾಹುಲ್​ ಗಾಂಧಿ, ಜಮ್ಮು ಕಾಶ್ಮೀರ ಹಿಂಸಾಚಾರದಲ್ಲಿ ಸತ್ಯಮರೆಮಾಚಲಾಗುತ್ತಿದ್ದು, ಈ ಬಗ್ಗೆ ಪಾರದರ್ಶಕವಾಗಿ ಪ್ರಧಾನಿ ಮೋದಿ ತಿಳಿಸಬೇಕು ಎಂದಿದ್ದಾರೆ.

ಇದನ್ನು ಓದಿ: ಇ.ಡಿ ಬಂಧನದಿಂದ ರಕ್ಷಣೆ ಪಡೆದ ಪಿ.ಚಿದಂಬರಂ; ಕಾಂಗ್ರೆಸ್​ ನಾಯಕನಿಗೆ ಸುಪ್ರೀಂನಲ್ಲಿ ಮೊದಲ ಜಯ

ರಾಹುಲ್​ ಹೇಳಿಕೆಗೆ ಕಿಡಿಕಾರಿದ ರಾಜ್ಯಪಾಲ ಸತ್ಯಪಾಲ್​ ಸಿಂಗ್​, ರಾಹುಲ್​ ಗಾಂಧಿ ಎಲ್ಲಿಯೋ ಕುಳಿತು ಮಾತನಾಡುವ ಬದಲು ಇಲ್ಲಿಗೆ ಬಂದು ಪರಿಸ್ಥಿತಿ ಅವಲೋಕಿಸಲಿ. ಬೇಕಾದರೆ ಅವರಿಗೆ ನಾವೇ ವಿಮಾನ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ ರಾಹುಲ್​ ಗಾಂಧಿ ವಿಮಾನದ ಬದಲು, ಕಣಿವೆ ರಾಜ್ಯದಲ್ಲಿ ಸ್ಥಳೀಯರನ್ನು ಮಾತನಾಡಿಸುವ ಹಾಗೂ ರಾಜಕಾರಣಿಗಳನ್ನು ಭೇಟಿ ಮಾಡುವ ಅವಕಾಶ ನೀಡಿ ಎಂದಿದ್ದರು.

ಕಲಂ 370ನೇ ವಿಧಿ ರದ್ದು ಬಳಿಕ ಕಣಿವೆ ರಾಜ್ಯದಲ್ಲಿ ವಿಧಿಸಿದ್ದ ನಿರ್ಬಂಧವನ್ನು ನಿಧಾನವಾಗಿ ಹಿಂಪಡೆಯಲಾಗುತ್ತಿದೆ. ಆದರೆ, ಇಲ್ಲಿನ ಮಾಜಿ ಮುಖ್ಯಮಂತ್ರಿಗಳಾದ ಒಮರ್​ ಅಬ್ದಲ್ಲಾ, ಮೆಹಬೂಬು ಮುಫ್ತಿ, ರಾಜಕಾರಣಿ ಶಾ ಫೈಸಲ್​ ಸೇರಿದಂತೆ ಅನೇಕ ಧಾರ್ಮಿಕ ನಾಯಕರು ಗೃಹ ಬಂಧನದಲ್ಲಿದ್ದಾರೆ.

First published: August 23, 2019, 10:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading