17ನೇ ಸಂಸತ್​ ಮೊದಲ ಅಧಿವೇಶನಕ್ಕೆ ಗೈರಾದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ

ನೂತನ ಸಂಸದರಿಗೆ ಸ್ಪೀಕರ್​ ಪ್ರಮಾಣ ವಚನ ಬೋಧಿಸಿದ್ದು, ಈ ವೇಳೆ ರಾಹುಲ್​ಗಾಂಧಿ ಅವರ ಹೆಸರನ್ನು ಕೂಡ ಕರೆಯಲಾಗಿದೆ. ಆದರೆ ಈ ವೇಳೆ ಅವರು ಸದನದಲ್ಲಿ ಉಪಸ್ಥಿತರಿರಲಿಲ್ಲ

Seema.R | news18
Updated:June 17, 2019, 1:52 PM IST
17ನೇ ಸಂಸತ್​ ಮೊದಲ ಅಧಿವೇಶನಕ್ಕೆ ಗೈರಾದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ
ರಾಹುಲ್ ಗಾಂಧಿ
  • News18
  • Last Updated: June 17, 2019, 1:52 PM IST
  • Share this:
ನವದೆಹಲಿ (ಜೂ.17): ಎರಡನೇ ಬಾರಿ ಆಡಳಿತ ಚುಕ್ಕಾಣಿ ಹಿಡಿದಿರುವ ಎನ್​ಡಿಎ ಸರ್ಕಾರದ ಮೊದಲ ಸಂಸತ್​ ಕಲಾಪ ಇಂದಿನಿಂದ ಆರಂಭಗೊಂಡಿದೆ. ಲೋಕಸಭೆಯ ನೂತನ ಸ್ಪೀಕರ್​ ವೀರೇಂದ್ರ ಕುಮಾರ್​​ ಹಲವು ಸಂಸದರಿಗೆ ಇಂದು ಸಂಸತ್ತಿನಲ್ಲಿ ಪ್ರಮಾಣವಚನ ಬೋಧಿಸಿದರು. ಈ ವೇಳೆ ನೂತನ ಸರ್ಕಾರದ ಮೊದಲ ಅಧಿವೇಶನಕ್ಕೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಗೈರಾಗಿದ್ದಾರೆ.

ನೂತನ ಸಂಸದರಿಗೆ ಸ್ಪೀಕರ್​ ಪ್ರಮಾಣ ವಚನ ಬೋಧಿಸಿದ್ದು, ಈ ವೇಳೆ ರಾಹುಲ್​ಗಾಂಧಿ ಅವರ ಹೆಸರನ್ನು ಕೂಡ ಕರೆಯಲಾಗಿದೆ. ಆದರೆ ಈ ವೇಳೆ ಅವರು ಸದನದಲ್ಲಿ ಹಾಜರಿರಲಿಲ್ಲ.

ಸದನದಲ್ಲಿ ಕಾಂಗ್ರೆಸ್​ ಅಧ್ಯಕ್ಷ ಕಂಡು ಬರದಿರವ ಬಗ್ಗೆ ಬಿಜೆಪಿ ಧ್ವನಿ ಎತ್ತಿದೆ. ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಈ ಬಗ್ಗೆ ಪ್ರಶ್ನೆ ಎತ್ತಿದ್ದು, ಸದನಕ್ಕೆ ಹಾಜರಾಗದಿರುವ ರಾಹುಲ್​ ಗಾಂಧಿಗೆ ಪ್ರಜಾಪ್ರಭುತ್ವದ ಬಗ್ಗೆ ಗೌರವವಿದೆಯೇ ಎಂದು ಪ್ರಶ್ನಿಸಿದ್ದಾರೆ.

 


ಲೋಕಸಭಾ ಚುನಾವಣೆ ಸೋಲಿನ ಬಳಿಕ ರಾಹುಲ್​ ಕೇರಳಕ್ಕೆ ಭೇಟಿ ನೀಡಿದ್ದರು, ಅವರು ತಮ್ಮ ಕ್ಷೇತ್ರ ವಯನಾಡುವಿನಿಂದಲೇ ನೇರವಾಗಿ ವಿದೇಶ ಪ್ರವಾಸಕ್ಕೆ ಹೊರಟ್ಟಿದ್ದಾರೆ, ರಾಹುಲ್​ ಲಂಡನ್​ ಪ್ರವಾಸದಲ್ಲಿದ್ದು, ಸದನಕ್ಕೆ ಗೈರಾಗಿರುವ ಬಗ್ಗೆ ಪಕ್ಷದ ವತಿಯಿಂದ ಯಾವುದೇ ಅಧಿಕೃತ ವಿವರಣೆ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ಅವರು ಇಂದು ವಿದೇಶಿ ಪ್ರವಾಸದಿಂದ ಮರಳಿದ್ದು, ಸದನಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿತ್ತು.

ಲೋಕಸಭೆಯಲ್ಲಿ ವಿಪಕ್ಷದಲ್ಲಿ ಕೂರುವಷ್ಟು ಸ್ಥಾನವನ್ನು ಗೆಲ್ಲುವಲ್ಲಿ ವಿಫಲರಾದ ರಾಹುಲ್​ ಗಾಂಧಿ ಚುನಾವಣೆ ಸೋಲಿನ ಹೊಣೆಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಕಾಂಗ್ರೆಸ್​ ಹಿರಿಯ ನಾಯಕರು ರಾಹುಲ್​ ಮನವೊಲಿಸಿ ಅಧಿಕಾರದಲ್ಲಿ ಮುಂದುವರೆಯುವಂತೆ ತಿಳಿಸಿದರು. ಇಂದು ನಡೆಯಲಿರುವ ಪಕ್ಷದ ಸಭೆಗೂ ರಾಹುಲ್​ ಗೈರಾಗುವ ಸಾಧ್ಯತೆ ಇದೆ.

ಇದನ್ನು ಓದಿ: ಮುಷ್ಕರನಿರತ ವೈದ್ಯರಿಗೆ ಭದ್ರತೆ ಒದಗಿಸುವಂತೆ ಮನವಿ; ನಾಳೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ

ಈ ಬಾರಿ ಸಂಸತ್ತಿನಲ್ಲಿ ಅಧಿಕೃತ ವಿಪಕ್ಷ ಇಲ್ಲದಿರುವ ಕುರಿತು ಮಾತನಾಡಿರುವ ಮೋದಿ,  ಪ್ರಜಾಪ್ರಭುತ್ವ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಕ್ರಿಯಾಶೀಲವಾಗಿರಬೇಕು. ವಿರೋಧ ಪಕ್ಷಗಳು ಸಂಖ್ಯೆಯ ಬಗ್ಗೆ ಚಿಂತೆ ಮಾಡಬಾರದು. ಸದನದಲ್ಲಿ ವಿರೋಧ ಪಕ್ಷಗಳು ಮುಕ್ತವಾಗಿ ಮಾತನಾಡಲಿವೆ ಎಂದು ನಾನು ನಂಬಿದ್ದೇನೆ. ನಾವು ಸಂಸತ್ತಿಗೆ ಬಂದಾಗ ಪಕ್ಷ, ವಿಪಕ್ಷ ಎಂಬುದನ್ನು ಮರೆತುಬಿಡಬೇಕು. ನಾವು ಕೇವಲ ನಿಷ್ಪಕ್ಷದ ಬಗ್ಗೆ ಚಿಂತಿಸಬೇಕು. ದೇಶದ ಅಭಿವೃದ್ಧಿ ವಿಚಾರವಾಗಿಯಷ್ಟೇ ಉತ್ಸಾಹ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಎಲ್ಲ ಸಂಸದರಿಗೆ ಕರೆ ನೀಡಿದರು.

First published:June 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ