HOME » NEWS » National-international » RAHUL GANDHI ABROAD CONGRESS DEFENDS ABSENCE AT FOUNDATION DAY AMID BJP TAUNT MAK

ಕಾಂಗ್ರೆಸ್​ ಸಂಸ್ಥಾಪನಾ ದಿನ ಸಮಾರಂಭಕ್ಕೆ ರಾಹುಲ್ ಗಾಂಧಿ ಗೈರು; ಕಾಲೆಳೆದ ಬಿಜೆಪಿ, ಸಮರ್ಥಿಸಿಕೊಂಡ ಕೈ ನಾಯಕರು!

ಇಂದು ಬೆಳಗ್ಗೆ ದೆಹಲಿಯಲ್ಲಿರುವ ಕಾಂಗ್ರೆಸ್​ ಕೇಂದ್ರ ಕಚೇರಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಪ್ರಿಯಾಂಕ ಗಾಂಧಿ ವಾದ್ರಾ ಭಾಗವಹಿಸಿದ್ದರು. ಈ ವೇಳೆ ರಾಹುಲ್ ಗಾಂಧು ಗೈರಿನ ಕುರಿತು ಕೆಲವು ಪತ್ರಕರ್ತರು ಅವರ ಎದುರು ಪ್ರಶ್ನೆಗಳನ್ನಿಟ್ಟಿದ್ದಾರೆ. ಆದರೆ, ಪ್ರಿಯಾಂಕ ಗಾಂಧಿ ವಾದ್ರಾ ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

news18-kannada
Updated:December 28, 2020, 1:12 PM IST
ಕಾಂಗ್ರೆಸ್​ ಸಂಸ್ಥಾಪನಾ ದಿನ ಸಮಾರಂಭಕ್ಕೆ ರಾಹುಲ್ ಗಾಂಧಿ ಗೈರು; ಕಾಲೆಳೆದ ಬಿಜೆಪಿ, ಸಮರ್ಥಿಸಿಕೊಂಡ ಕೈ ನಾಯಕರು!
ರಾಹುಲ್ ಗಾಂಧಿ.
  • Share this:
ನವದೆಹಲಿ ಡಿಸೆಂಬರ್​ 28); ಇಂದು ಕಾಂಗ್ರೆಸ್​ ಪಕ್ಷದ 136ನೇ ಪ್ರತಿಷ್ಟಾಪನಾ ದಿನಾಚರಣೆ. ಹೀಗಾಗಿ ದೇಶದೆಲ್ಲೆಡೆ ಎಲ್ಲಾ ಕಾಂಗ್ರೆಸ್​ ಕಚೇರಿಗಳಲ್ಲೂ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೆಹಲಿಯಲ್ಲೂ ಕಾಂಗ್ರೆಸ್​ ಕೇಂದ್ರ ಕಚೇರಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿದ್ದು, ದೇಶದ ಎಲ್ಲಾ ಪ್ರಮುಖ ಕಾಂಗ್ರೆಸ್​ ನಾಯಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಕಾಂಗ್ರೆಸ್​ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸದೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ರಾಹುಲ್ ಗಾಂಧಿ ಅವರ ಈ ನಡೆಯನ್ನು ಸಾಮಾನ್ಯವಾಗಿ ಬಿಜೆಪಿ ನಾಯಕರು ಟೀಕಿಸಿದ್ದಾರೆ. ಆದರೆ, ಬಿಜೆಪಿ ನಾಯಕರ ಈ ಟೀಕೆಗೆ ಉತ್ತರಿಸಿರುವ ಕಾಂಗ್ರೆಸ್​ ಪಕ್ಷದ ಹಿರಿಯ ವಕ್ತಾರ ರಣದೀಪ್ ಸುರ್ಜೇವಾಲಾ, "ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅಲ್ಪಾವಧಿಯ ವೈಯಕ್ತಿಕ ಭೇಟಿಗಾಗಿ ವಿದೇಶಕ್ಕೆ ತೆರಳಿದ್ದಾರೆ. ಹೀಗಾಗಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್​ ದೇಶದಾದ್ಯಂತ ಹಲವಾರು ಚುನಾವಣೆಗಳಲ್ಲಿ ಸೋಲನುಭವಿಸುತ್ತಲೇ ಇದೆ. ಕಳಪೆ ಸಾಧನೆ ನೀಡುತ್ತಿದೆ. ಹೀಗಾಗಿ ಬಿಹಾರ ಚುನಾವಣೆ ಫಲಿತಾಂಶದ ಬೆನ್ನಿಗೆ ಕಾಂಗ್ರೆಸ್​ ಹಿರಿಯ ನಾಯಕರು ಸೋಲಿನ ಪರಾಮರ್ಶೆಗೆ ದೆಹಲಿಯಲ್ಲಿ ಸಭೆಯೊಂದನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆ ಬೇಕು, ಮತ್ತೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕು ಎಂಬ ಕೂಗುಗಳು ಕೇಳಿ ಬಂದಿದ್ದವು.

ಈ ವೇಳೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, "ಎಲ್ಲಾ ನಾಯಕರ ಆಸೆಯಂತೆ ನಾನು ಪಕ್ಷಕ್ಕಾಗಿ ದುಡಿಯಲು ಸಿದ್ಧ" ಎಂದು ತಿಳಿಸಿದ್ದರು. ಅಲ್ಲದೆ, ಮತ್ತೊಮ್ಮೆ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಏರಲಾರೆ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಈ ಸಭೆಯ ಬೆನ್ನಿಗೆ ಅವರು ಕಾಂಗ್ರೆಸ್​ ಪಕ್ಷದ ಪ್ರತಿಷ್ಠಾಪನಾ ದಿನಾಚರಣೆಯಿಂದ ದೂರು ಉಳಿದಿರುವುದು ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ.

ಇಂದು ಬೆಳಗ್ಗೆ ದೆಹಲಿಯಲ್ಲಿರುವ ಕಾಂಗ್ರೆಸ್​ ಕೇಂದ್ರ ಕಚೇರಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಪ್ರಿಯಾಂಕ ಗಾಂಧಿ ವಾದ್ರಾ ಭಾಗವಹಿಸಿದ್ದರು. ಈ ವೇಳೆ ರಾಹುಲ್ ಗಾಂಧು ಗೈರಿನ ಕುರಿತು ಕೆಲವು ಪತ್ರಕರ್ತರು ಅವರ ಎದುರು ಪ್ರಶ್ನೆಗಳನ್ನಿಟ್ಟಿದ್ದಾರೆ. ಆದರೆ, ಪ್ರಿಯಾಂಕ ಗಾಂಧಿ ವಾದ್ರಾ ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್​, "ಕಾಂಗ್ರೆಸ್​ ಪಕ್ಷದ ಸಂಸ್ಥಾಪನಾ ದಿನವಾದ ಇಂದು ಹಿರಿಯ ನಾಯಕರಾದ ಎ.ಕೆ. ಆಂಟನಿ ಪಕ್ಷದ ಧ್ವಜಾರೋಹಣ ಮಾಡಿದ್ದಾರೆ. ಈ ವೇಳೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಹಾಜರಿರಲಿಲ್ಲ. ಅವರ ಅನುಪಸ್ಥಿತಿಗೆ ನೂರಾರು ಕಾರಣಗಳು ಇರಬಹುದು. ನಾವು ಅದನ್ನು ಕೇಳಲು ಭಯಸುವುದಿಲ್ಲ. ಅವರು ಈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದರೆ ಅದರ ಹಿಂದೆ ಸೂಕ್ತ ಕಾರಣಗಳು ಇರುತ್ತವೆ. ಸದ್ಯಕ್ಕೆ ಪ್ರಿಯಾಂಕ ಗಾಂಧಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂಬುದೇ ಸಂತೋಷದ ವಿಚಾರ" ಎಂದು ತಿಳಿಸಿದ್ದಾರೆ.

ಇನ್ನೂ ಈ ಕುರಿತು ಟ್ವೀಟ್​ ಮಾಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್, "ಇಲ್ಲಿ ಕಾಂಗ್ರೆಸ್ ತನ್ನ 136 ನೇ ಪ್ರತಿಷ್ಠಾನ ದಿನವನ್ನು ಆಚರಿಸುತ್ತಿದೆ. ಆದರೆ, ರಾಹುಲ್ ಗಾಂಧಿ ಮಾತ್ರ ಕಣ್ಮರೆಯಾಗಿದ್ದಾರೆ" ಎಂದು ಅಪಹಾಸ್ಯ ಮಾಡಿದ್ದಾರೆ.

ಇದನ್ನೂ ಓದಿ: ಪಿಎಂಸಿ ಬ್ಯಾಂಕ್​ ಹಗರಣ; ಶಿವಸೇನೆ ಮುಖಂಡ ಸಂಜಯ್ ರೌತ್​ ಹೆಂಡತಿಗೆ ಸಮನ್ಸ್​ ನೀಡಿದ ಜಾರಿ ನಿರ್ದೇಶನಾಲಯಶಿವರಾಜ್​ ಸಿಂಗ್ ಚೌಹ್ಹಾಣ್ ಅವರ ಟೀಕೆಗೆ ಕಟುವಾಗಿ ಉತ್ತರಿಸಿರುವ ಕಾಂಗ್ರೆಸ್​ ನಾಯಕ ಕೆ.ಸಿ. ವೇಣುಗೋಪಾಲ್​, "ರಾಹುಲ್ ಗಾಂಧಿ ಅವರ ಅಜ್ಜಿಯನ್ನು ನೋಡಲು ತೆರಳಿದ್ದಾರೆ. ಇದು ತಪ್ಪೇ? ವೈಯಕ್ತಿಕ ಭೇಟಿಗಳನ್ನು ತೆಗೆದುಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ಬಿಜೆಪಿ ಕೆಳಮಟ್ಟದ ರಾಜಕೀಯದಲ್ಲಿ ತೊಡಗಿದೆ. ಅವರು ಕೇವಲ ಒಬ್ಬ ನಾಯಕನನ್ನು ಮಾತ್ರ ಗುರಿಯಾಗಿಸಲು ಬಯಸುವ ಕಾರಣ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡಿದ್ದಾರೆ" ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ಅನಾರೋಗ್ಯಕ್ಕೆ ತುತ್ತಾಗಿರುವ ತನ್ನ ಅಜ್ಜಿಯನ್ನು ನೋಡುವ ಸಲುವಾಗಿ ಕತಾರ್ ಏರ್ವೇಸ್ ವಿಮಾನದಲ್ಲಿ ಇಟಲಿಯ ಮಿಲಾನ್​ ನಗರಕ್ಕೆ ತೆರಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಭಾನುವಾರ ವರದಿ ಮಾಡಿದೆ.
Published by: MAshok Kumar
First published: December 28, 2020, 1:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories