Rahul Gandhi: ಆರ್ಥಿಕ ತಜ್ಞರೊಂದಿಗೆ ವಿಡಿಯೋ ಸರಣಿ; ರಘುರಾಮ್ ರಾಜನ್​ ಜೊತೆ ಇಂದು ರಾಹುಲ್ ಗಾಂಧಿ ಸಂವಾದ

Raghuram Rajan to Rahul Gandhi: ಇಂದು ಬೆಳಗ್ಗೆ 9 ಗಂಟೆಗೆ ಈ ಸಂವಾದ ಆರಂಭವಾಗಿದ್ದು, ಕಾಂಗ್ರೆಸ್​ ಪಕ್ಷದ ಟ್ವಿಟ್ಟರ್, ಫೇಸ್​ಬುಕ್​ ಖಾತೆಯಲ್ಲಿ ಈ ವಿಡಿಯೋ ಲಭ್ಯವಿದೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ನವದೆಹಲಿ (ಏ. 30): ದೇಶದಲ್ಲಿ ಕೊರೋನಾ ವೈರಸ್​ ಅಟ್ಟಹಾಸದಿಂದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಲಾಕ್​ಡೌನ್​ ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಸ್ಥಿತಿ ಮತ್ತಿತರ ವಿಷಯಗಳ ಬಗ್ಗೆ ರಾಹುಲ್ ಗಾಂಧಿ ವಿಡಿಯೋ ಸರಣಿ ಮಾಡುತ್ತಿದ್ದು, ದೇಶದ ಆರ್ಥಿಕ ತಜ್ಞರು, ಚಿಂತಕರನ್ನು ಕರೆಸಿ ಮಾತುಕತೆ ನಡೆಸುತ್ತಿದ್ದಾರೆ. ಈ ಸರಣಿಯ ಮೊದಲ ಅತಿಥಿಯಾಗಿ ಇಂದು ಆರ್​ಬಿಐ ಮಾಜಿ ಗವರ್ನರ್ ಮತ್ತು ದೇಶದ ಖ್ಯಾತ ಆರ್ಥಿಕ ತಜ್ಞ ರಘುರಾಮ್ ರಾಜನ್ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.

ವಿಡಿಯೋ ಸರಣಿಗಾಗಿ ದೇಶದ ಆರ್ಥಿಕ ತಜ್ಞ ರಘುರಾಮ್ ರಾಜನ್​ ಅವರ ಜೊತೆಗಿನ ರಾಹುಲ್ ಗಾಂಧಿ ವಿಡಿಯೋ ಮಾತುಕತೆ ಇಂದು ನಡೆಯುತ್ತಿದೆ. ಇಂದು ಬೆಳಗ್ಗೆ 9 ಗಂಟೆಗೆ ಈ ಸಂವಾದ ಆರಂಭವಾಗಿದ್ದು, ಕಾಂಗ್ರೆಸ್​ ಪಕ್ಷದ ಟ್ವಿಟ್ಟರ್, ಫೇಸ್​ಬುಕ್​ ಖಾತೆಯಲ್ಲಿ ಈ ವಿಡಿಯೋ ಲಭ್ಯವಿದೆ.ವಿಡಿಯೋ ಸರಣಿಗಾಗಿ ತಜ್ಞರನ್ನು ಸಂದರ್ಶಿಸುತ್ತಿರುವ ರಾಹುಲ್ ಗಾಂಧಿ ಅವರ ಹೊಸ ಪ್ರಯತ್ನದ ಬಗ್ಗೆ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿದ್ದರು. ಈ ವೇಳೆ ರಾಹುಲ್ ಗಾಂಧಿ ಮತ್ತು ರಘುರಾಮ್ ರಾಜನ್ ಅವರ ಮಾತುಕತೆಯ ತುಣುಕನ್ನು ಕೂಡ ಶೇರ್ ಮಾಡಿಕೊಂಡಿದ್ದರು. ಲಾಕ್​ಡೌನ್​ ಮುಗಿದ ಬಳಿಕ ಅದರಿಂದ ಸಂಕಷ್ಟಕ್ಕೀಡಾದ ಬಡವರಿಗೆ ಸಹಾಯ ಮಾಡಲು, ಅವರ ಜೀವನ ಕಟ್ಟಿಕೊಡಲು ಎಷ್ಟು ಹಣ ಬೇಕಾಗಬಹುದು? ಎಂದು ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಪ್ರಶ್ನೆ ಕೇಳಿದ್ದಾರೆ.

ಇದನ್ನೂ ಓದಿ: ಕೊರೋನಾ ವೈರಸ್​ಗೆ ಅಮೆರಿಕದಲ್ಲಿ 61 ಸಾವಿರ ಮಂದಿ ಬಲಿ; ವಿಶ್ವಾದ್ಯಂತ 32 ಲಕ್ಷ ಮಂದಿಗೆ ಸೋಂಕು

ಆ ಪ್ರಶ್ನೆಗೆ ಉತ್ತರಿಸಿದ್ದ ರಘುರಾಮ್ ರಾಜನ್ ಸುಮಾರು 65 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಹೇಳಿದ್ದಾರೆ. ಲಾಕ್​ಡೌನ್​ ಘೋಷಿಸುವುದು ಬಹಳ ಸುಲಭ. ಆದರೆ, ಅದರಿಂದ ಆಗುವ ಪರಿಣಾಮಗಳನ್ನು ಎದುರಿಸುವುದು ಬಹಳ ಕಷ್ಟ. ಇದರಿಂದಾಗಿ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ ಎಂದು ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.

ವೈಟ್​ ಹೌಸ್​ ನಡೆಗೆ ರಾಹುಲ್ ಖಂಡನೆ:

ಭಾರತದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಟ್ವಿಟ್ಟರ್​ ಖಾತೆಯನ್ನು ಅನ್​ಫಾಲೋ ಮಾಡಿದ್ದ ಅಮೆರಿಕದ ವೈಟ್​​ಹೌಸ್​ ನಡೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವಾಲಯ ಗಮನ ಹರಿಸಬೇಕು. ಅಮೆರಿಕದ ಆಡಳಿತ ಕಚೇರಿಯಿಂದ ಫಾಲೋ ಮಾಡಲ್ಪಟ್ಟಿದ್ದ ಏಕೈಕ ಜಾಗತಿಕ ನಾಯಕ ನರೇಂದ್ರ ಮೋದಿ ಆಗಿದ್ದರು. ಆದರೆ, ಇದೀಗ ಅವರನ್ನು ಮತ್ತು ಭಾರತದ ಎಲ್ಲ ನಾಯಕರು ಹಾಗೂ ಆಡಳಿತ ವಿಭಾಗದ ಟ್ವಿಟ್ಟರ್ ಖಾತೆಗಳನ್ನು ಅಮೆರಿಕದ ವೈಟ್​ಹೌಸ್​ ಅನ್​ಫಾಲೋ ಮಾಡಿದೆ.
First published: