ಶೇ. 7ರ ವೇಗದಲ್ಲಿ ಜಿಡಿಪಿ ಅಭಿವೃದ್ಧಿ ಹೊಂದುತ್ತಿರುವುದು ನಿಜವಾ? ಅನುಮಾನ ಎಂದ ಮಾಜಿ ಆರ್​ಬಿಐ ಗವರ್ನರ್

ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರು ಬಡವರಿಗೆ ವರ್ಷಕ್ಕೆ 72 ಸಾವಿರ ರೂ ಕೊಡುವ ಯೋಜನೆಯನ್ನೂ ರಘುರಾಮ್ ರಾಜನ್ ಸಮರ್ಥನೆ ಮಾಡಿಕೊಂಡಿಲ್ಲ.

Vijayasarthy SN | news18
Updated:March 26, 2019, 5:01 PM IST
ಶೇ. 7ರ ವೇಗದಲ್ಲಿ ಜಿಡಿಪಿ ಅಭಿವೃದ್ಧಿ ಹೊಂದುತ್ತಿರುವುದು ನಿಜವಾ? ಅನುಮಾನ ಎಂದ ಮಾಜಿ ಆರ್​ಬಿಐ ಗವರ್ನರ್
ರಘುರಾಮ್ ರಾಜನ್
  • News18
  • Last Updated: March 26, 2019, 5:01 PM IST
  • Share this:
ನವದೆಹಲಿ(ಮಾ. 26): ಶೇ. 7ರ ವೇಗದಲ್ಲಿ ದೇಶದ ಜಿಡಿಪಿ ಅಭಿವೃದ್ಧಿ ಹೊಂದುತ್ತಿದೆ ಎಂದು ಸರಕಾರದ ವರದಿಗಳು ಹೇಳುತ್ತಿವೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್​ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರಿಗೆ ಈ ಬಗ್ಗೆ ಅನುಮಾನವಿದೆ. ಜಿಡಿಪಿ ವಿಚಾರದಲ್ಲಿ ಸರಕಾರ ಪರಿಗಣಿಸಿರುವ ದತ್ತಾಂಶಗಳು ಸ್ಪಷ್ಟವಾಗಿಲ್ಲ. ಈ ದತ್ತಾಂಶಗಳನ್ನ ನುರಿತ ಅರ್ಥತಜ್ಞರೇ ಅವಲೋಕಿಸಬೇಕು. ಆಗ ನಿಜ ಸ್ಥಿತಿ ಗೊತ್ತಾಗುತ್ತದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ಇದನ್ನೂ ಓದಿ: ಕಟ್ಟರ್​ ಹಿಂದುತ್ವ, ಆರ್​ಎಸ್​ಎಸ್​ ಬೆಂಬಲ: 'ಜೂನಿಯರ್​​ ಪ್ರತಾಪ್​ ಸಿಂಹ' ಎಂದೇ ಕರೆಸಿಕೊಳ್ಳುವ ತೇಜಸ್ವಿ ಸೂರ್ಯ ಯಾರು?

ಇದೇ ವೇಳೆ, ರಾಹುಲ್ ಗಾಂಧಿ ಪ್ರಸ್ತಾಪಿಸಿರುವ ಕನಿಷ್ಠ ಆದಾಯ ಯೋಜನೆ ಬಗ್ಗೆಯೂ ರಘುರಾಮ್ ರಾಜನ್ ಅಷ್ಟು ಉತ್ಸುಕರಾಗಿಲ್ಲ. ಅತಿ ಬಡವರನ್ನು ಮಾತ್ರ ಗುರಿಯಾಗಿಸಿಕೊಂಡರೆ ಮಾತ್ರ ಈ ಆದಾಯ ಯೋಜನೆಯ ಗುರಿ ಈಡೇರಿಕೆ ಸಾಧ್ಯವಾಗುತ್ತದೆ. ಆದರೆ, ಭಾರತದಲ್ಲಿ ಎಷ್ಟು ಬಡವರಿದ್ದಾರೆಂಬ ಅಂಕಿ ಅಂಶಗಳಲ್ಲಿ ಗೊಂದಲವಿದೆ. ವಿವಾದವಿದೆ ಎಂದೂ ರಘುರಾಜನ್ ರಾಜನ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ 25 ಕೋಟಿ ಬಡವರಿಗೆ ವರ್ಷಕ್ಕೆ 72 ಸಾವಿರ ರೂ ನೀಡುತ್ತೇವೆ; ರಾಹುಲ್​ ಗಾಂಧಿ

ನ್ಯೂಸ್18ನ ಭಾಗವಾಗಿ ಸಿಎನ್​ಬಿಸಿ ವಾಹಿನಿಯೊಂದಿಗೆ ಮಾತನಾಡಿದ ರಘುರಾಮ್ ರಾಜನ್, ತಾನು ಹಣಕಾಸು ಸಚಿವನಾದರೆ ಈ ಸಂದರ್ಭದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ, ಬ್ಯಾಂಕಿಂಗ್ ವ್ಯವಸ್ಥೆ ಸರಿಪಡಿಸುವುದು, ಕೃಷಿ ವಲಯಕ್ಕೆ ಪುನಶ್ಚೇತನ ಕೊಡುವುದಕ್ಕೆ ಆದ್ಯತೆ ಕೊಡುತ್ತೇನೆಂದು ಹೇಳಿದ್ದಾರೆ.

“ನಾನು ಹಣಕಾಸು ಸಚಿವನಾದರೆ, ಹಳ್ಳ ಹಿಡಿದಿರುವ ಸಾಕಷ್ಟು ಯೋಜನೆಗಳಿಗೆ ಮರುಜೀವ ಕೊಡುವುದು; ಬ್ಯಾಂಕಿಂಗ್ ವ್ಯವಸ್ಥೆಯನ್ನು ಆದಷ್ಟೂ ಬೇಗ ಸರಿಪಡಿಸುವುದು ಸೇರಿದಂತೆ ಅಲ್ಪಾವಧಿಯ ಕ್ರಮಗಳತ್ತ ಹೆಚ್ಚು ಗಮನ ಹರಿಸುತ್ತೇನೆ” ಎಂದು ರಾಜನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಅರುಣಾಚಲವನ್ನು ಚೀನಾದ ಭಾಗವಾಗಿ ತೋರಿಸಿಲ್ಲವೆಂದು 30 ಸಾವಿರ ವಿಶ್ವ ಭೂಪಟಗಳನ್ನೇ ನಾಶ ಮಾಡಿದ ಚೀನಾಆರ್ಥಿಕ ಅಭಿವೃದ್ಧಿಗೆ ಪುಷ್ಟಿ ನೀಡಲು 2-3 ಸುಧಾರಣೆ ಕ್ರಮಗಳನ್ನು ಕೈಗೊಳ್ಳಬಹುದು. ಕೃಷಿಗೆ ಪುಷ್ಟಿ ನೀಡುವ ಸುಧಾರಣೆಯೂ ಅದರಲ್ಲೊಂದು. ಹಾಗೆಯೇ, ಭೂಸ್ವಾಧೀನ ಪ್ರಕ್ರಿಯೆ ಕ್ರಮ ಇನ್ನೊಂದು. ಜನರಿಗೆ ಅನ್ಯಾಯವಾಗದ ರೀತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕಂಡುಕೊಂಡರೆ ಉತ್ತಮ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
First published:March 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ