HOME » NEWS » National-international » RAFALE JETS THREE MORE NEW RAFALE FIGHTER JETS TO ARRIVE IN INDIA TODAY DBDEL SCT

Rafale Jets: ಭಾರತೀಯ ವಾಯುಪಡೆಗೆ ಇಂದು 3 ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ

Rafale Jets: ಭಾರತೀಯ ವಾಯುಸೇನೆಗೆ (IAF) ಇನ್ನೂ ಮೂರು ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಲಿವೆ. ಫ್ರಾನ್ಸ್ ನಿಂದ ಖರೀದಿಸಲ್ಪಟ್ಟಿರುವ ರಫೇಲ್ ಯುದ್ಧ ವಿಮಾನಗಳು ಇಂದು ಭಾರತಕ್ಕೆ ಆಗಮಿಸಲಿವೆ.

news18-kannada
Updated:November 4, 2020, 1:11 PM IST
Rafale Jets: ಭಾರತೀಯ ವಾಯುಪಡೆಗೆ ಇಂದು 3 ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ
ರಫೇಲ್ ಯುದ್ಧವಿಮಾನ
  • Share this:
ನವದೆಹಲಿ: ಚೀನಾ ಮತ್ತು ಪಾಕಿಸ್ತಾನದಿಂದ ಯುದ್ಧ ಭೀತಿ ಎದುರಿಸುತ್ತಿರುವ ಭಾರತ ಈಗ ತನ್ನ ಸೇನಾಬಲ‌ ಹೆಚ್ಚಿಸಿಕೊಳ್ಳಲು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಸೇನೆಗೆ (IAF) ಈಗ ಇನ್ನೂ ಮೂರು ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಲಿವೆ. ಫ್ರಾನ್ಸ್ ನಿಂದ ಖರೀದಿಸಲ್ಪಟ್ಟಿರುವ ರಫೇಲ್ ಯುದ್ಧ ವಿಮಾನಗಳು ಇಂದು ಭಾರತಕ್ಕೆ ಆಗಮಿಸಲಿವೆ.

ಭಾರತವು ಫ್ರಾನ್ಸಿನ ಡಸಾಲ್ಟ್ ಯುದ್ಧ ವಿಮಾನಗಳ ನಿರ್ಮಾಣ ಸಂಸ್ಥೆಯಿಂದ 2016ರಲ್ಲಿ 59 ಸಾವಿರ ಕೋಟಿ ರೂ.ಗಳಿಗೆ 36 ಯುದ್ಧ ವಿಮಾನಗಳನ್ನು ಖರೀದಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಯುದ್ಧ ವಿಮಾನಗಳ ಖರೀದಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುತರವಾದ ಆರೋಪವನ್ನೂ ಮಾಡಿದ್ದರು. ಈ 36 ಯುದ್ಧ ವಿಮಾನಗಳ ಪೈಕಿ ಮೊದಲ ಹಂತದಲ್ಲಿ ಜುಲೈ 29ರಂದು 5 ಯುದ್ಧ ವಿಮಾನಗಳು ಭಾರತಕ್ಕೆ ಬಂದಿದ್ದವು. ನವೆಂಬರ್ 4ರಂದು ಎರಡನೇ ಹಂತದಲ್ಲಿ 3 ರಫೇಲ್ ಯುದ್ಧ ವಿಮಾನಗಳು ಆಗಮಿಸಲಿವೆ. ಮುಂದಿನ ವರ್ಷದ ಏಪ್ರಿಲ್ ವೇಳೆಗೆ 16 ರಫೇಲ್  ಯುದ್ದ ವಿಮಾನಗಳು ಭಾರತೀಯ ವಾಯುಸೇನೆಯ ಬತ್ತಳಿಕೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂದು ಫ್ರಾನ್ಸಿನಿಂದ ನೇರವಾಗಿ ಗುಜರಾತಿನ ಜಾಮ್‌ನಗರ ವಾಯುನೆಲೆಗೆ ಬರಲಿರುವ ರಫೇಲ್ ಯುದ್ಧ ವಿಮಾನಗಳು ಒಂದು ದಿನದ ವಿಶ್ರಾಂತಿ ಬಳಿಕ (ನವೆಂಬರ್  5ರಂದು) ಜಾಮ್‌ನಗರ ವಾಯು ನೆಲೆಯಿಂದ ಹರಿಯಾಣದಲ್ಲಿರುವ ಅಂಬಾಲಾ ವಾಯುನೆಲೆಗೆ ಪ್ರಯಾಣ ಬೆಳೆಸಲಿವೆ. ಅಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಯುದ್ಧ ವಿಮಾನಗಳನ್ನು ಅಧಿಕೃತವಾಗಿ ವಾಯುಸೇನೆಗೆ ಹಸ್ತಾಂತರಿಸಲಾಗುವುದು. ಹಿಂದೆ ಜುಲೈ 29ರಂದು ಮೊದಲ ಹಂತದಲ್ಲಿ ಬಂದಿದ್ದ 5 ರಫೇಲ್ ವಿಮಾನಗಳನ್ನು ಇದೇ ರೀತಿ ವಾಯಸೇನೆಗೆ ಹಸ್ತಾಂತರಿಸಲಾಗಿತ್ತು.

ಇದನ್ನೂ ಓದಿ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ; ಮುಂಬೈನಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನ

ಫ್ರಾನ್ಸಿನ ಡಸಾಲ್ಟ್ ಯುದ್ಧ ವಿಮಾನಗಳ ನಿರ್ಮಾಣ ಸಂಸ್ಥೆಯಿಂದ ಖರೀದಿಸಲಾಗಿರುವ 36 ರಫೇಲ್ ಯುದ್ಧ ವಿಮಾನಗಳ ಪೈಕಿ ಈಗ 8 ರಫೇಲ್ ವಿಮಾನಗಳು ಭಾರತಕ್ಕೆ ಹಸ್ತಾಂತರವಾಗಿವೆ. ಇನ್ನೂ 24 ಯುದ್ಧ ವಿಮಾನಗಳು ಹಂತಹಂತವಾಗಿ ಭಾರತದ ಸೇನೆಯನ್ನು ಸೇರಬೇಕಾಗಿದೆ. ಎರಡನೇ ಹಂತದಲ್ಲಿ 3 ಯುದ್ಧ ವಿಮಾನಗಳನ್ನು ಪರಿಶೀಲನೆ ಮಾಡಲು ಭಾರತದ ತಜ್ಞರ ತಂಡ ಫ್ರಾನ್ಸಿಗೆ ತೆರಳಿತ್ತು. ಜೊತೆಗೆ ರಫೇಲ್ ಯುದ್ಧ ವಿಮಾನಗಳ ಪೈಲಟ್ ಗಳಿಗೆ ಫ್ರಾನ್ಸಿನಲ್ಲಿ ತರಬೇತಿಯನ್ನು ನೀಡಲಾಗಿತ್ತು. ತಜ್ಞರ ತಂಡದಿಂದ ಪರಿಶೀಲನೆ ಮತ್ತು ಪೈಲಟ್ ಗಳ ತರಬೇತಿ ಬಳಿಕ ವಿಮಾನಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತಿದೆ.
Youtube Video

ರಫೇಲ್ ಮುಂದಿನ ತಲೆಮಾರಿನ ಅತ್ಯಾಧುನಿಕ ಯುದ್ಧ ವಿಮಾನವಾಗಿದೆ. ಇದು ಆಗಸದಿಂದ ನೆಲಕ್ಕೆ ದಾಳಿಯಿಡುವ ಸಾಮರ್ಥ್ಯ ಹೊಂದಿದೆ. ರಾಡಾರ್ ಮುನ್ನೆಚ್ಚರಿಕಾ ರಿಸೀವರ್ ಜಾಮರ್ ಗಳನ್ನು ಹೊಂದಿದೆ. 10 ಗಂಟೆಗಳ ಹಾರಾಟ ದತ್ತಾಂಶ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ಫ್ರಾ ರೆಡ್ ಸರ್ಚ್  ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ ರಫೇಲ್  ಯುದ್ಧ ವಿಮಾನಗಳಲ್ಲಿದೆ.
Published by: Sushma Chakre
First published: November 4, 2020, 1:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories