HOME » NEWS » National-international » RAFALE JETS SECOND PHASE RAFALE JETS WILL COME TO INDIA FROM FRANCE LG

Rafale Jets: ಮುಂದಿನ ತಿಂಗಳು 2ನೇ ಹಂತದಲ್ಲಿ ಭಾರತಕ್ಕೆ ರಫೇಲ್ ಯುದ್ದ ವಿಮಾನಗಳ ಆಗಮನ

2021ರೊಳಗೆ ಭಾರತ-ಫ್ರಾನ್ಸ್ ಒಪ್ಪಂದದ ಅನ್ವಯ 36 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದು ಸೇರಿಕೊಳ್ಳಲಿವೆ.

news18-kannada
Updated:September 12, 2020, 12:12 PM IST
Rafale Jets: ಮುಂದಿನ ತಿಂಗಳು  2ನೇ ಹಂತದಲ್ಲಿ ಭಾರತಕ್ಕೆ ರಫೇಲ್ ಯುದ್ದ ವಿಮಾನಗಳ ಆಗಮನ
ರಫೇಲ್ ಜೆಟ್
  • Share this:
ನವದೆಹಲಿ(ಸೆ. 12):ಈಗಾಗಲೇ ಭಾರತಕ್ಕೆ 5 ರಫೇಲ್ ಯುದ್ದ ವಿಮಾನಗಳು ಬಂದು ಅಧಿಕೃತವಾಗಿ ವಾಯುಸೇನೆಯನ್ನು ಸೇರ್ಪಡೆಗೊಂಡಿವೆ. ಮುಂದಿನ ತಿಂಗಳು ಎರಡನೇ ಹಂತದಲ್ಲಿ ಮತ್ತೆ 4 ರಿಂದ ರಫೇಲ್ ಯುದ್ದ ವಿಮಾನಗಳು ಭಾರತಕ್ಕೆ ಬರಲಿವೆ ಎಂದು ಸೇನಾ ಮೂಲಗಳು ತಿಳಿಸಿವೆ. ಭಾರತವು ಫ್ರಾನ್ಸ್ ದೇಶದ ಡಸಾಲ್ಟ್ ಏವಿಯೇಷನ್‌ ಕಂಪನಿಯಿಂದ 59,000 ಕೋಟಿ ರೂಪಾಯಿ ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ. ಆ ಪೈಕಿ ಮೊದಲ ಹಂತದಲ್ಲಿ ಈಗಾಗಲೇ ‌5 ರಫೇಲ್ ಯುದ್ದ ವಿಮಾನಗಳು ಭಾರತಕ್ಕೆ ಬಂದಿವೆ. ಜುಲೈ 29ರಂದು ಭಾರತಕ್ಕೆ ಬಂದಿದ್ದ 5 ರಫೇಲ್ ಯುದ್ದ ವಿಮಾನಗಳು ಅಂಬಾಲದ ವಾಯುನೆಲೆಯಲ್ಲಿದ್ದವು.‌ ಸೆಪ್ಟೆಂಬರ್ 10ರಂದು ಫ್ರಾನ್ಸ್ ರಕ್ಷಣಾ ಸಚಿವರಾದ ಪ್ಲೋರೇನ್ ಪಾರ್ಲೆ ಅವರ ಸಮ್ಮುಖದಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧಿಕೃತವಾಗಿ ಆ 5 ರಫೇಲ್ ಯುದ್ದ ವಿಮಾನಗಳನ್ನು ವಾಯುಸೇನೆಗೆ ಹಸ್ತಾಂತರಿಸಿದ್ದರು.

ಈಗ ಈ 36 ರಫೇಲ್ ಯುದ್ಧ ವಿಮಾನಗಳ ಪೈಕಿ ಎರಡನೇ ಹಂತದಲ್ಲಿ 4ರಿಂದ 5 ಯುದ್ಧ ವಿಮಾನಗಳು ಸಿದ್ದವಾಗಿವೆ.‌ ಅವುಗಳ ಪೈಲಟ್ ಗಳ ತರಬೇತಿ ಕೂಡ ಮುಕ್ತಾಯ ಹಂತದಲ್ಲಿದೆ ಎಂದು ವಿಮಾನ ನಿರ್ಮಾಣ ಸಂಸ್ಥೆ ಡಸಾಲ್ಟ್ ಏವಿಯೇಷನ್‌ ಕಂಪನಿ ಹೇಳಿರುವುದರಿಂದ ಮುಂದಿನ ತಿಂಗಳು ಮತ್ತೆ 4 ರಿಂದ 5 ಯುದ್ಧ ವಿಮಾನಗಳು ಭಾರತಕ್ಕೆ ಬರುವ ಸಾಧ್ಯತೆಗಳಿವೆ.

ಅನೈತಿಕ ಚಟುವಟಿಕೆಯಿಂದಲೇ ಜಮೀರ್ ಅಹಮದ್ ಉನ್ನತ ಮಟ್ಟಕ್ಕೇರಿದ್ದಾರೆ; ರೇಣುಕಾಚಾರ್ಯ ಟೀಕೆ

ಇದಾದ ಬಳಿಕ ಮತ್ತಷ್ಟು ವಿಮಾನಗಳ ಜೋಡಣೆ ಮತ್ತು ಪೈಲೆಟ್ ಗಳಿಗೆ ತಯಾರಿ ಶುರುವಾಗಲಿದೆ. 2021ರೊಳಗೆ ಭಾರತ-ಫ್ರಾನ್ಸ್ ಒಪ್ಪಂದದ ಅನ್ವಯ 36 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದು ಸೇರಿಕೊಳ್ಳಲಿವೆ.
Youtube Video

ಫ್ರಾನ್ಸ್‌ನಿಂದ ಹೊರಟಿದ್ದ ಮೊದಲ ಹಂತದ ಐದು ರಫೇಲ್‌ ಯುದ್ಧ ವಿಮಾನಗಳು ಜುಲೈ 29ರ ಮಧ್ಯಾಹ್ನ ಅಂಬಾಲ ವಾಯುನೆಲೆಗೆ ಬಂದಿಳಿದಿದ್ದವು. ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ನಿರ್ಮಿತ 5 ರಫೇಲ್ ಫೈಟರ್ ಜೆಟ್ ವಿಮಾನಗಳು ಇದಾಗಿವೆ. ಈ ಐದು ಯುದ್ಧ ವಿಮಾನಗಳ ಪೈಕಿ ಎರಡು ವಿಮಾನಗಳು 2 ಸೀಟರ್ ತರಬೇತಿ ವಿಮಾನಗಳಾಗಿದ್ದು, 3 ಸಿಂಗಲ್ ಸೀಟರ್ ಯುದ್ಧ ವಿಮಾನಗಳಾಗಿವೆ. ಸೆಪ್ಟೆಂಬರ್ 10ರಂದು ಈ ವಿಮಾನಗಳು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರಿವೆ.
Published by: Latha CG
First published: September 12, 2020, 12:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories