news18 Updated:January 26, 2021, 12:57 PM IST
ಸಾಂದರ್ಭಿಕ ಚಿತ್ರ
- News18
- Last Updated:
January 26, 2021, 12:57 PM IST
ನವದೆಹಲಿ(ಜ. 26): ಈ ಬಾರಿಯ 72ನೇ ಗಣರಾಜ್ಯೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಮೊದಲ ಬಾರಿಗೆ ಮುಖ್ಯ ಅತಿಥಿ ಇಲ್ಲದೆಯೇ ಗಣರಾಜ್ಯೋತ್ಸವ ನಡೆಯಿತು. ಆದರೆ, ಗಣರಾಜ್ಯೋತ್ಸವದ ಶಿಸ್ತು ಮತ್ತು ವೈಭವ ಎಂದಿನಂತೆ ಈ ವರ್ಷವೂ ಇತ್ತು. ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಪರೇಡ್ ಮತ್ತು ಸ್ತಬ್ದಚಿತ್ರ ಪ್ರದರ್ಶನ ಜನರನ್ನು ಯಥಾಪ್ರಕಾರ ಸೆಳೆಯಿತು.
1) ಫ್ರಾನ್ಸ್ ದೇಶದಿಂದ ಖರೀದಿಸಿರುವ ರಫೇಲ್ ಫೈಟರ್ ಜೆಟ್ಗಳು ಮೊದಲ ಬಾರಿಗೆ ಪರೇಡ್ನಲ್ಲಿ ಭಾಗವಹಿಸಿವೆ. ರಫೇಲ್ಗಳು ಭಾರತದ ಬಳಿ ಸದ್ಯ ಇರುವ ಅತ್ಯುತ್ತಮ ಯುದ್ಧವಿಮಾನಗಳಾಗಿವೆ.
2) ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ಅವರು ಪೆರೇಡ್ನಲ್ಲಿ ಭಾಗಿಯಾದರು. ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್ಗಳಲ್ಲಿ ಭಾವನಾ ಒಬ್ಬರು. ರಿಪಬ್ಲಿಕ್ ಪೆರೇಡ್ನಲ್ಲಿ ಮಹಿಳಾ ಫೈಟರ್ ಪೈಲಟ್ ಭಾಗಿಯಾಗಿದ್ದು ಇದೇ ಮೊದಲು. ವಿವಿಧ ಫೈಟರ್ ವಿಮಾನ, ಕಾಪ್ಟರ್ಗಳ ಪ್ರತಿಕೃತಿಗಳನ್ನ ತೋರಿಸುವ ಸ್ತಬ್ದಚಿತ್ರಗಳ ವ್ಯವಸ್ಥೆಯ ಭಾಗವಾಗಿ ಅವರು ಪಾಲ್ಗೊಂಡರು.
ಇದನ್ನೂ ಓದಿ: Farmers protest: ಟ್ರ್ಯಾಕ್ಟರ್ ಮೆರವಣಿಗೆಯ ಬಳಿಕ ಪಾರ್ಲಿಮೆಂಟ್ ಚಲೋ ಹಮ್ಮಿಕೊಂಡ ರೈತರು
3) ಲಡಾಖ್ನ ಐತಿಹಾಸಿಕ ತಿಕ್ಸೆ ಮಾನೆಸ್ಟರಿ ಹಾಗೂ ಅದರ ಸಾಂಸ್ಕೃತಿ ಪರಂಪರೆಯನ್ನು ಪ್ರತಿನಿಧಿಸುವ ಸ್ತಬ್ದಚಿತ್ರ ಪ್ರದರ್ಶನ.
4) ಆಂಧ್ರಪ್ರದೇಶದ ಪ್ರಸಿದ್ಧ ಲೇಪಾಕ್ಷಿ ದೇವಸ್ಥಾನದ ಸ್ತಬ್ದಚಿತ್ರ.
5) ಐಎನ್ಎಸ್ ವಿಕ್ರಾಂತ್ ಮತ್ತು ನೌಕಾಪಡೆ ಕಾರ್ಯಾಚರಣೆಗಳನ್ನ ಪ್ರತಿನಿಧಿಸುವ ಪ್ರತಿಕೃತಿಗನ್ನೊಳಗೊಂಡ ಸ್ತಬ್ದಚಿತ್ರಗಳ ಮೆರವಣಿಗೆ.6) ಉತ್ತರ ಪ್ರದೇಶದಿಂದ ರಾಮಮಂದಿರದ ಪ್ರತಿಕೃತಿ ಇರುವ ಸ್ತಬ್ದಚಿತ್ರ.
7) ಡಿಆರ್ಡಿಒದಿಂದ ಎರಡು ಸ್ತಬ್ದಚಿತ್ರ.
8) ಕರ್ನಾಟಕದ ವಿಜಯನಗರ ಸಾಮ್ರಾಜ್ಯ ನೆನಪಿಸುವ ಸ್ತಬ್ಧ ಚಿತ್ರ
9) ಕೋವಿಡ್-19 ಲಸಿಕೆಯ ವಿಜಯೋತ್ಸವ ನೆನಪಿಸುವ ಸ್ತಬ್ದ ಚಿತ್ರ
10) ಆಯುಷ್ ಇಲಾಖೆಯಿಂದ ಸ್ತಬ್ದ ಚಿತ್ರ.
ಇದೇ ವೇಳೆ, ಪ್ರತಿಭಟನಾನಿರತ ರೈತರಿಂದ ಪ್ರತ್ಯೇಕವಾಗಿ ರಿಪಬ್ಲಿಕ್ ಪರೇಡ್ ನಡೆಯಲಿದೆ. ಈ ವೇಳೆ ವಿವಿಧ ರಾಜ್ಯಗಳಿಂದ ರೈತರು ಪ್ರತ್ಯೇಕ ಸ್ತಬ್ದಚಿತ್ರಗಳನ್ನ ಪ್ರದರ್ಶಿಸಲಿದ್ದಾರೆ. ಇದು ದೆಹಲಿಯ ಔಟರ್ ರಿಂಗ್ ರೋಡ್ನಲ್ಲಿ ನಡೆಯಲಿದೆ.
Published by:
Vijayasarthy SN
First published:
January 26, 2021, 10:14 AM IST