HOME » NEWS » National-international » RAFALE INDUCTION A STRONG MESSAGE TO THOSE EYEING OUR SOVEREIGNTY SAYS RAJNATH SINGH SNVS

Rafale Jets - ಭಾರತದ ಸಾರ್ವಭೌಮತ್ವಕ್ಕೆ ಸವಾಲು ಹಾಕುವವರಿಗೆ ರಫೇಲ್ ಎಚ್ಚರಿಕೆಯ ಸಂದೇಶ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹರಿಯಾಣದ ಅಂಬಾಲದಲ್ಲಿರುವ ಭಾರತೀಯ ವಾಯುನೆಲೆಯಲ್ಲಿ ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧವಿಮಾನಗಳು ನಿಯೋಜನೆಗೊಂಡಿವೆ. ಈ ಜೆಟ್​ಗಳ ಮೂಲಕ ವಿಶ್ವಕ್ಕೆ ಭಾರತ ಒಂದು ದೊಡ್ಡ ಸಂದೇಶ ರವಾನಿಸಿದೆ ಎಂದು ರಕ್ಷಣಾ ಸಚಿವರು ಬಣ್ಣಿಸಿದ್ದಾರೆ.

news18
Updated:September 10, 2020, 2:08 PM IST
Rafale Jets - ಭಾರತದ ಸಾರ್ವಭೌಮತ್ವಕ್ಕೆ ಸವಾಲು ಹಾಕುವವರಿಗೆ ರಫೇಲ್ ಎಚ್ಚರಿಕೆಯ ಸಂದೇಶ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಫೇಲ್ ಜೆಟ್
  • News18
  • Last Updated: September 10, 2020, 2:08 PM IST
  • Share this:
ಹರಿಯಾಣ(ಸೆ. 10): ಭಾರತದ ಸೇನೆಗೆ ರಫೇಲ್ ಯುದ್ಧವಿಮಾನಗಳು ಸೇರ್ಪಡೆಯಾಗುತ್ತಿರುವುದು ವಿಶ್ವಕ್ಕೆ ಭಾರತ ನೀಡಿದ ಒಂದು ಪ್ರಬಲ ಸಂದೇಶವಾಗಿದೆ. ಅದರಲ್ಲೂ ಭಾರತದ ಸಾರ್ವಭೌಮತ್ವಕ್ಕೆ ಸವಾಲು ಹಾಕುವವರಿಗೆ ಇದು ಎಚ್ಚರಿಕೆಯ ಸಂದೇಶ ನೀಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಫ್ರಾನ್ಸ್ ದೇಶದ ಡಸಾಲ್ಟ್ ನಿರ್ಮಿತ 5 ರಫೇಲ್ ಯುದ್ಧವಿಮಾನಗಳನ್ನ ಸೇನೆಗೆ ಅಧಿಕೃತವಾಗಿ ಸೇರ್ಪಡೆ ಮಾಡುವ ವೇಳೆ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. “…ಈಗಿರುವ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಅದರಲ್ಲೂ ಗಡಿಯಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಯುದ್ಧವಿಮಾನಗಳ ಸೇರ್ಪಡೆ ಬಹಳ ಪ್ರಮುಖ ಹೆಜ್ಜೆ ಎನಿಸಿದೆ” ಎಂದವರು ತಿಳಿಸಿದ್ದಾರೆ.

ಹರಿಯಾಣ ರಾಜ್ಯದ ಅಂಬಾಲದಲ್ಲಿರುವ ವಾಯುನೆಲೆಯಲ್ಲಿ ಐದು ರಫೇಲ್ ವಿಮಾನಗಳನ್ನ ಅಧಿಕೃತವಾಗಿ ವಾಯುಸೇನೆಗೆ ನಿಯೋಜಿಸಲಾಗಿದೆ. ಭಾರತ ಮತ್ತು ಫ್ರಾನ್ಸ್ ದೇಶಗಳ ರಕ್ಷಣಾ ಸಚಿವರು ಹಾಗೂ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಭಡೋರಿಯಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಂಬಾಲದಲ್ಲಿರುವ 17ನೇ ಸ್ಕ್ವಾಡ್ರನ್ ‘ಗೋಲ್ಡನ್ ಆರೋಸ್’ ತಂಡ ಈ ಐದು ರಫೇಲ್ ವಿಮಾನಗಳನ್ನ ನಿರ್ವಹಿಸಲಿದೆ. ಈ ಐದು ವಿಮಾನಗಳಲ್ಲಿ ಮೂರು ವಿಮಾನಗಳು ಸಿಂಗಲ್ ಸೀಟರ್ ಆಗಿದ್ದರೆ ಇನ್ನೆರಡು ವಿಮಾನಗಳು ಎರಡು ಸೀಟಗಳನ್ನ ಹೊಂದಿವೆ. ಜಗತ್ತಿನ ಅತ್ಯುತ್ತಮ ಹಾಗೂ ಪರಿಣಾಮಕಾರಿ ಯುದ್ಧವಿಮಾನಗಳ ಪೈಕಿ ರಫೇಲ್ ಕೂಡ ಒಂದೆಂದು ಗುರುತಿಸಲಾಗಿದೆ.


“ಇತ್ತೀಚಿನ ದಿನಗಳಲ್ಲಿ ನಮ್ಮ ಗಡಿಯಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಈ ಯುದ್ಧವಿಮಾನಗಳ ಸೇರ್ಪಡೆ ಬಹಳ ಮುಖ್ಯ ಎನಿಸುತ್ತದೆ” ಎಂದು ಹೇಳಿದ ರಾಜನಾಥ್ ಸಿಂಗ್, ಭಾರತದ ಹೊಣೆಗಾರಿಕೆ ತನ್ನ ದೇಶದ ಗಡಿಯ ಕಾಯುವುದಕ್ಕೆ ಮಾತ್ರ ಸೀಮಿತ ಅಲ್ಲ, ಹಿಂದೂ ಮಹಾಸಾಗರ ಮತ್ತು ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗೂ ಅದು ಬದ್ಧವಾಗಿದೆ ಎಂದು ಚೀನಾವನ್ನು ಪರೋಕ್ಷವಾಗಿ ತಿವಿದರು.

ಇದನ್ನೂ ಓದಿ: ಚೀನಾಗೆ ಅಮೆರಿಕ ಕುಟುಕು; ಸಾವಿರಕ್ಕೂ ಹೆಚ್ಚು ಚೀನೀ ವಿದ್ಯಾರ್ಥಿಗಳ ವೀಸಾ ರದ್ದು

ಇನ್ನು, ವಾಯಪಡೆ ಮುಖ್ಯಸ್ಥ ಭಡೂರಿಯಾ ಅವರು ರಫೇಲ್ ಯುದ್ಧವಿಮಾನಗಳು ಸಕಾಲದಲ್ಲಿ ಸೇರ್ಪಡೆಯಾಗಿವೆ ಎಂದು ಸ್ವಾಗತ ಮಾಡಿದರು. ಲಡಾಖ್​ನ ಗಡಿಭಾಗದಲ್ಲಿ ಚೀನಾ ದೇಶ ಸತತವಾಗಿ ತಂಟೆತನ ಮಾಡುತ್ತಿರುವ ಹಿನ್ನೆಲೆಯಲ್ಲಿ ಏರ್ ಚೀಫ್ ಮಾರ್ಷಲ್ ಈ ಮಾತುಗಳನ್ನಾಡಿದ್ದಾರೆ.

ಫ್ರಾನ್ಸ್ ದೇಶದಿಂದ 7000 ಕಿಮೀ ದೂರ ಹಾರುತ್ತಾ ರಫೇಲ್ ಜೆಟ್ ವಿಮಾನಗಳು ಜುಲೈ 29ರಂದು ಅಂಬಾಲ ವಾಯು ನೆಲೆಗೆ ಬಂದಿಳಿದಿದ್ದವು. ಪಾಕ್ ಗಡಿಭಾಗದಿಂದ 220 ಕಿಮೀ ಈಚೆಗೆ ಈರುವ ಅಂಬಾಲ ವಾಯುನೆಲೆ ನಮ್ಮ ಸೇನೆಗೆ ಬಹಳ ಆಯಕಟ್ಟಿನ ಜಾಗ ಎನಿಸಿದೆ.

ಇನ್ನು, ಈಗ ವಾಯುಪಡೆಗೆ ಸೇರ್ಪಡೆಯಾಗಿರುವ ಐದು ಜೆಟ್​ಗಳನ್ನು ಸೇರಿದಂತೆ ಫ್ರಾನ್ಸ್ ದೇಶದಿಂದ ಭಾರತ 36 ರಫೇಲ್ ಯುದ್ಧವಿಮಾನಗಳನ್ನ ಖರೀದಿ ಮಾಡುತ್ತಿದೆ. ಇವುಗಳಲ್ಲಿ 30 ವಿಮಾನಗಳು ಸಮರಾಂಗಣಕ್ಕೆ ಇಳಿಯುವಂಥ ವಿಮಾನಗಳಾಗಿರಲಿವೆ. ಇನ್ನುಳಿದ 6 ವಿಮಾನಗಳು ತರಬೇತಿಗೆಂದು ಬಳಕೆ ಆಗಲಿವೆ. ಉಳಿದ 31 ರಫೇಲ್ ಯುದ್ಧವಿಮಾನಗಳನ್ನು ಡಸಾಲ್ಟ್ ಸಂಸ್ಥೆ ಹಂತ ಹಂತವಾಗಿ ಭಾರತಕ್ಕೆ ಹಸ್ತಾಂತರಿಸಲಿದೆ.
Published by: Vijayasarthy SN
First published: September 10, 2020, 1:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories