ಲೋಕಸಭೆಗೆ ಇಂದು ರಫೇಲ್ ಒಪ್ಪಂದ ಸಂಬಂಧ ಸಿಎಜಿ ವರದಿ ಸಲ್ಲಿಕೆ; ದರ ವಿವರದ ಉಲ್ಲೇಖ ಅನುಮಾನ

ರಫೇಲ್​ ಒಪ್ಪಂದದ ದರ ವಿವರವನ್ನು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಹಂಚಿಕೆಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ, ಸರ್ಕಾರದಿಂದಲೂ ಸಾಕಷ್ಟು ಒತ್ತಡವಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ದರ ವಿವರವನ್ನು ಮರೆಮಾಚಿ, ಅವಧಿಯ ಲೆಕ್ಕಾಚಾರ ವಿವರವುಳ್ಳ ವರದಿ ಇಂದು ಸಲ್ಲಿಕೆಯಾಗುತ್ತಿದೆ ಎನ್ನಲಾಗಿದೆ.

HR Ramesh | news18
Updated:February 13, 2019, 9:52 AM IST
ಲೋಕಸಭೆಗೆ ಇಂದು ರಫೇಲ್ ಒಪ್ಪಂದ ಸಂಬಂಧ ಸಿಎಜಿ ವರದಿ ಸಲ್ಲಿಕೆ; ದರ ವಿವರದ ಉಲ್ಲೇಖ ಅನುಮಾನ
ರಫೇಲ್ ಯುದ್ಧ ವಿಮಾನ
HR Ramesh | news18
Updated: February 13, 2019, 9:52 AM IST
ನವದೆಹಲಿ: 36 ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಇಂದು ಲೋಕಸಭೆಗೆ ಸಿಎಜಿ ವರದಿ ಸಲ್ಲಿಕೆಯಾಗಲಿದೆ. ಆದರೆ, ಮೂಲಗಳ ಪ್ರಕಾರ, ಒಪ್ಪಂದ ಖರೀದಿ ದರ ವಿವರವನ್ನು ತಿಳಿಸಲಾಗುವುದಿಲ್ಲ ಎನ್ನಲಾಗಿದೆ. ಈ ಒಪ್ಪಂದದಲ್ಲಿ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ವಿರೋಧ ಪಕ್ಷಗಳು ಬಲವಾಗಿ ಆರೋಪ ಮಾಡುತ್ತಿವೆ. ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿಯಿರುವಂತೆ ನಡೆಯುತ್ತಿರುವ ಕೊನೆಯ ಅಧಿವೇಶನ ಮುಗಿಯುವ ಒಂದು ದಿನವ ಮುನ್ನ ರಫೇಲ್​ ಒಪ್ಪಂದದ ಸಿಎಜಿ ವರದಿ ಇಂದು ಲೋಕಸಭೆಗೆ ಸಲ್ಲಿಕೆಯಾಗುತ್ತಿದೆ.

ರಫೇಲ್​ ಒಪ್ಪಂದದ ದರ ವಿವರವನ್ನು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಹಂಚಿಕೆಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ, ಸರ್ಕಾರದಿಂದಲೂ ಸಾಕಷ್ಟು ಒತ್ತಡವಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ದರ ವಿವರವನ್ನು ಮರೆಮಾಚಿ, ಅವಧಿಯ ಲೆಕ್ಕಾಚಾರ ವಿವರವುಳ್ಳ ವರದಿ ನಾಳೆ ಸಲ್ಲಿಕೆಯಾಗುತ್ತಿದೆ ಎನ್ನಲಾಗಿದೆ. ವರದಿಯಲ್ಲಿ ರಫೇಲ್ ಜೆಟ್​ ಒಪ್ಪಂದದ 2007 ಮತ್ತು 2015ರ ಅವಧಿಯ ಬಿಡ್​ಗಳ ಹೋಲಿಕೆ ಮತ್ತು ಪ್ರಕ್ರಿಯೆ, ಕ್ರಮಗಳನ್ನು ಉಲ್ಲೇಖ ಮಾಡಲಾಗಿದೆ. 36 ವಿಮಾನಗಳ ಖರೀದಿಯಲ್ಲಿ ಸರ್ಕಾರದ ನಿರ್ಧಾರ ಹಾಗೂ ಯುಪಿಎ ಸರ್ಕಾರ ಅವಧಿಯಲ್ಲಿ 2007ರಲ್ಲಿ 18 ವಿಮಾನಗಳ ಖರೀದಿ ಸಂಬಂಧ ಕರೆದಿದ್ದ ಜಾಗತಿಕ ಟೆಂಡರ್​ ಮಾಹಿತಿ ಹಂಚಿಕೊಳ್ಳಲಾಗಿದೆ ಎನ್ನಲಾಗಿದೆ. ಇಂದು ಸಿಎಜಿ ಆಗಿರುವ ರಾಜೀವ್ ಮೆಹರಿಷಿ ಅವರು ರಫೇಲ್​ ಒಪ್ಪಂದದ ವೇಳೆ ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿದ್ದರು.

ಇದನ್ನು ಓದಿ: ರಫೇಲ್​ ಹಗರಣ: ಮನೋಹರ್​ ಪರ್ರೀಕರ್ ಪತ್ರಕ್ಕೆ ಉತ್ತರ ನೀಡಿದ ರಾಹುಲ್ ಗಾಂಧಿ

ಈ ಸಂಬಂಧ ನೆನ್ನೆ ರಾಜೀವ್ ವಿರುದ್ಧ ಆರೋಪ ಮಾಡಿರುವ ಕಾಂಗ್ರೆಸ್​ ಹಿರಿಯ ಮುಖಂಡ ಕಪಿಲ್ ಸಿಬಾಲ್​, ರಾಜೀವ್ ಅವರು  ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರವನ್ನು ಉಳಿಸಲು ಯತ್ನಿಸುತ್ತಿದ್ದಾರೆ. ಈ ಮೂಲಕ ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತಿದ್ದಾರೆ. ಸಿಎಜಿ ಹೇಗೆ ಈ ಪ್ರಕರಣವನ್ನು ತನಿಖೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ