• Home
  • »
  • News
  • »
  • national-international
  • »
  • Odisha: ಗರ್ಭಿಣಿಯ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ತಪ್ಪು ಮಾಡಿದ ರೇಡಿಯೋಲಜಿಸ್ಟ್‌ಗೆ ರೂ 10 ಲಕ್ಷ ರೂ ದಂಡ ಹಾಕಿದ ಕೋರ್ಟ್​

Odisha: ಗರ್ಭಿಣಿಯ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ತಪ್ಪು ಮಾಡಿದ ರೇಡಿಯೋಲಜಿಸ್ಟ್‌ಗೆ ರೂ 10 ಲಕ್ಷ ರೂ ದಂಡ ಹಾಕಿದ ಕೋರ್ಟ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Radiologist Pay 10 Lakh: ಸ್ಕ್ಯಾನಿಂಗ್ ಮಾಡುವ ಯಂತ್ರದ ಗುಣಮಟ್ಟ, ವಿಕಿರಣಶಾಸ್ತ್ರಜ್ಞರ ಪರಿಣಿತಿ, ಅವರು ಅನುಸರಿಸುವ ತೀವ್ರತೆಯನ್ನು ಅವಲಂಬಿಸಿರುತ್ತದೆ. ಇದನ್ನು ಗಮನಿಸದಿದ್ದರೆ ಭ್ರೂಣದ ದೋಷಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

  • Trending Desk
  • Last Updated :
  • New Delhi, India
  • Share this:

ಒಡಿಶಾದ (Odisha) ನರ್ಸಿಂಗ್ ಹೋಂ (Nursing Home) ಒಂದು ಗರ್ಭಿಣಿ (pregnant)  ಮಹಿಳೆಯ ಮೇಲೆ ಮೂರು ಅಲ್ಟ್ರಾಸೋನೋಗ್ರಫಿ ಪರೀಕ್ಷೆಗಳನ್ನು ನಡೆಸಿದ ನಂತರವೂ ಭ್ರೂಣದಲ್ಲಿನ ದೈಹಿಕ ವಿರೂಪಗಳನ್ನು ಪತ್ತೆಹಚ್ಚಲು ವಿಫಲವಾದ ಕಾರಣ ಗ್ರಾಹಕ ನ್ಯಾಯಾಲಯವು 9Court) ನರ್ಸಿಂಗ್ ಹೋಂಗೆ ಗರ್ಭಿಣಿ ಮಹಿಳೆಗೆ ರೂ 10 ಲಕ್ಷ ಪರಿಹಾರ ನೀಡುವಂತೆ ತೀರ್ಪಿತ್ತಿದೆ. ಜಗತ್‌ಸಿನ್ಹಪುರ್ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಈ ತೀರ್ಪು ನೀಡಿದ್ದು, ರೇಡಿಯಾಲಜಿಸ್ಟ್ ಮತ್ತು ಅವರ ಪತ್ನಿ ನಡೆಸುತ್ತಿರುವ ನರ್ಸಿಂಗ್ ಹೋಮ್ ಭ್ರೂಣದ ವಿರೂಪತೆಯನ್ನು ವರದಿ ಮಾಡಲು ವಿಫಲವಾದ ಕಾರಣ ದಂಪತಿಗಳಿಗೆ ಒದಗಿಸಿರುವ ಸೇವೆಯಲ್ಲಿ ಸಂಪೂರ್ಣ ಕೊರತೆ ಕಂಡುಬಂದಿದ್ದು ಪರಿಹಾರ ನೀಡಬೇಕಿದೆ ಎಂದು ತೀರ್ಪು ನೀಡಿದೆ.


ಭ್ರೂಣದ ಅಂಗವೈಕಲ್ಯದ ಕುರಿತು ಗರ್ಭಿಣಿ ಮಹಿಳೆಗೆ ಮೊದಲೇ ತಿಳಿಸಿದ್ದರೆ ಆಕೆ ಭ್ರೂಣವನ್ನು ಗರ್ಭಪಾತ ಮಾಡಿಸಿಕೊಳ್ಳಬಹುದಿತ್ತು. ಆದರೆ ಮಹಿಳೆಯು ನರ್ಸಿಂಗ್ ಹೋಂ ಮೇಲೆ ಅಪಾರ ನಂಬಿಕೆಯನ್ನು ಹೊಂದಿದ್ದರು ಮತ್ತು ಪರೀಕ್ಷೆ ನಡೆಸಿದ ರೇಡಿಯೋಲಜಿ ದಂಪತಿಗಳ ಮೇಲೆ ಭರವಸೆ ಹೊಂದಿದ್ದರು ಹೀಗಾಗಿ ಅವರು ಗರ್ಭಧಾರಣೆಯನ್ನು ಮುಂದುವರಿಸಿದರು ಮತ್ತು ದೈಹಿಕ ನ್ಯೂನತೆಯಿದ್ದ ಗಂಡು ಮಗುವಿಗೆ ಜನ್ಮನೀಡಿದರು. ಗರ್ಭಿಣಿ ಮಹಿಳೆಗೆ ರೇಡಿಯಾಲಜಿಸ್ಟ್ ದಂಪತಿಗಳು ನಂಬಿಕೆ ದ್ರೋಹವೆನ್ನಸಗಿದ್ದು, ಮೂರು ಬಾರಿ ಮಾಡಿದ ಪರೀಕ್ಷೆಯಲ್ಲೂ ಭ್ರೂಣದ ವಿರೂಪವನ್ನು ತಿಳಿಸದೆ ವರದಿಗಳನ್ನು ಬಿಡುಗಡೆ ಮಾಡಿದ್ದಾರೆ.


ಅಪರಾಧಕ್ಕೆ ಸಮ ಎಂದ ನ್ಯಾಯಾಲಯ


ರೋಗಿಗಳು ವೈದ್ಯರ ಮೇಲೆ ನಂಬಿಕೆ ಇರಿಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ. ಅಂತಹ ರೋಗಿಗಳಿಗೆ ತಪ್ಪು ವರದಿಗಳನ್ನು ನೀಡಿ ಮೋಸಗೊಳಿಸುವುದು ಅಪರಾಧಕ್ಕೆ ಸಮನಾಗಿದೆ ಎಂಬುದಾಗಿ ಗ್ರಾಹಕ ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ. ನ್ಯಾಯಾಲಯದ ಸೂಚನೆಗಳಿಗೆ ನರ್ಸಿಂಗ್ ಹೋಂ ಇನ್ನೂ ಉತ್ತರ ನೀಡಿಲ್ಲ ಎಂಬುದು ತಿಳಿದು ಬಂದಿದೆ.


ನ್ಯಾಯಾಲಯ ತಿಳಿಸಿರುವ ತೀರ್ಪಿನ ಅನ್ವಯ ಶಿಶುವಿನ ಹೆಸರಿನಲ್ಲಿ ರೂ 10 ಲಕ್ಷ ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ತಿಳಿಸಲಾಗಿದ್ದು, ಮಗುವಿನ 24 ವರ್ಷದ ತಾಯಿಗೆ ರೂ 50,000ವನ್ನು ನೀಡುವಂತೆ ಹಾಗೂ ದಾವೆ ವೆಚ್ಚವಾಗಿ ರೂ 4,000 ಮೊತ್ತವನ್ನು ಪಾವತಿಸುವಂತೆ ಅಧ್ಯಕ್ಷ ಪಿ.ಕೆ.ಪಾಡಿ, ನರ್ಸಿಂಗ್ ಹೋಂಗೆ ಆದೇಶಿಸಿದ್ದಾರೆ.


ಮೂರು ಅಲ್ಟ್ರಾಸೌಂಡ್ ಪರೀಕ್ಷೆಗಳಿಗೆ ಒಳಗಾಗಿದ್ದ ಗರ್ಭಿಣಿ ಸ್ತ್ರೀ


ಮಗುವಿನ ಪೋಷಕರು ನೀಡಿದ ದೂರಿನ ಅನ್ವಯ, ಬಂದನಾ ದಾಸ್ (ಮಗುವಿನ ತಾಯಿ) ಡಿಸೆಂಬರ್ 2020 ಮತ್ತು ಸೆಪ್ಟೆಂಬರ್ 2021 ರ ನಡುವೆ ಜಗತ್‌ಸಿನ್ಹಪುರದ ರಹಾಮಾ ಪ್ರದೇಶದ ಎಲ್ & ಪಿ ನರ್ಸಿಂಗ್ ಹೋಮ್‌ನಲ್ಲಿ ವಿವಿಧ ತ್ರೈಮಾಸಿಕಗಳಲ್ಲಿ ಮೂರು ಅಲ್ಟ್ರಾಸೌಂಡ್ ಪರೀಕ್ಷೆಗಳಿಗೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೇಡಿಯೋಲಜಿಸ್ಟ್ ಪ್ರತಾಪ್ ಕೇಶರಿ ದಾಸ್ ಯಾವುದೇ ವಿರೂಪತೆಯನ್ನು ಕಂಡುಹಿಡಿಯಲಿಲ್ಲ ಹಾಗಾಗಿ ಬಂದನಾ ದಾಸ್ ಮಗುವಿಗೆ ಯಾವುದೇ ತೊಂದರೆ ಇಲ್ಲ ಎಂದು ಭಾವಿಸಿ ಸಪ್ಟೆಂಬರ್ 11 ರಂದು ಹೆರಿಗೆಗಾಗಿ ದಾಖಲಾದರು.


ಇದನ್ನೂ ಓದಿ: ಲೋಕಾರ್ಪಣೆಗೊಂಡಿತು 369 ಅಡಿ ಎತ್ತರದ ಶಿವನ ಪ್ರತಿಮೆ! ಹರನ 'ವಿಶ್ವಾಸ್ ಸ್ವರೂಪಂ’ ನೋಡಿ ಕಣ್ತುಂಬಿಕೊಳ್ಳಿ


ಆದರೆ ಬಂದನಾ ದಾಸ್ ಕೈಕಾಲುಗಳಲ್ಲಿದ ಮಗುವಿಗೆ ಜನ್ಮನೀಡಿದ್ದು ಇದರಿಂದ ನಾವು ಧರೆಗಿಳಿದು ಹೋದೆವು ಎಂದು ಮಗುವಿನ ತಂದೆ ಮನೋರಂಜನ್ ಚುಲಿ ನೆನಪಿಸಿಕೊಂಡಿದ್ದಾರೆ.


ಭ್ರೂಣದ ವಿರೂಪದ ಲಕ್ಷಣಗಳು ಆರಂಭದಲ್ಲಿಯೇ ಪತ್ತೆ


ಈ ಸಮಯದಲ್ಲಿ ಮುಖ್ಯ ವೈದ್ಯಾಧಿಕಾರಿಯನ್ನು ಸಂಪರ್ಕಿಸಿರುವ ಚುಲಿ, ಆರಂಭಿಕ ಹಂತದಲ್ಲಿಯೇ ಅಂಗವೈಕಲ್ಯವನ್ನು ಪತ್ತೆಹಚ್ಚಿದ್ದರೆ ಜರಾಯುವನ್ನು ತೆಗೆಯಬಹುದಿತ್ತು ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ. ಯುವ ದಂಪತಿಗಳು ಇದೇ ಕಾರಣಕ್ಕಾಗಿ ರೇಡಿಯೋಲಜಿ ತಜ್ಞರ ಬಳಿಗೆ ಹೋದಾಗ ಅವರು ಬೆದರಿಕೆ ಹಾಕಿದರು ಎಂದು ತಿಳಿಸಿದ್ದಾರೆ. ಅಕ್ಟೋಬರ್ 2021 ರಲ್ಲಿ ಸೇವೆಯಲ್ಲಿನ ದೋಷವನ್ನು ಆರೋಪಿಸಿ ರೂ 20 ಲಕ್ಷ ಪರಿಹಾರವನ್ನು ಆಗ್ರಹಿಸಿ ಜಗತ್‌ಸಿಂಹಪುರ ಜಿಲ್ಲಾ ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.


ಇತರ ರೇಡಿಯೋಲಜಿ ತಜ್ಞರ ಪ್ರಕಾರ, ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ನಡೆಸುವ ಹಂತ 1 ಸ್ಕ್ಯಾನಿಂಗ್‌ನಲ್ಲಿಯೇ ಭ್ರೂಣದ ವಿರೂಪತೆಯನ್ನು ಪತ್ತೆಹಚ್ಚಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ. 2 ನೇ ಹಂತದ ಸ್ಕ್ಯಾನಿಂಗ್‌ನಲ್ಲಿ ಭ್ರೂಣದ ಜನ್ಮಜಾತ ದೋಷಗಳನ್ನು ಪತ್ತೆಹಚ್ಚಲೆಂದೇ ನಡೆಸಲಾಗುತ್ತದೆ. ಮೂರನೇ ತ್ರೈಮಾಸಿಕದಲ್ಲಿ ಕಾಣೆಯಾದ ಭ್ರೂಣದ ಕೈಕಾಲುಗಳ ತೀವ್ರ ದೋಷಗಳನ್ನು ಕಂಡುಹಿಡಿಯಬೇಕು. ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಸೋಶಿಯಲ್‌ ಮೀಡಿಯಾಗಳಿಗೆ ಕೇಂದ್ರ ಲಗಾಮು, ಹೊಸ ನೀತಿಗಳ ಬಗ್ಗೆ ಇಲ್ಲಿದೆ ಮಾಹಿತಿ


ಸ್ಕ್ಯಾನಿಂಗ್ ಮಾಡುವ ಯಂತ್ರದ ಗುಣಮಟ್ಟ, ವಿಕಿರಣಶಾಸ್ತ್ರಜ್ಞರ ಪರಿಣಿತಿ, ಅವರು ಅನುಸರಿಸುವ ತೀವ್ರತೆಯನ್ನು ಅವಲಂಬಿಸಿರುತ್ತದೆ. ಇದನ್ನು ಗಮನಿಸದಿದ್ದರೆ ಭ್ರೂಣದ ದೋಷಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಲ್ಲದೆ ಸ್ತ್ರೀರೋಗ ತಜ್ಞರು ಅಸಹಜತೆ ಸ್ಕ್ಯಾನಿಂಗ್ ಪರೀಕ್ಷೆಗೆ ಸಲಹೆ ನೀಡಿದ್ದಾರೆಯೇ ಎಂದು ಪರಿಶೀಲಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ.

Published by:Sandhya M
First published: