Texas Racist Attack: ನೀವು ಭಾರತೀಯರು ಎಲ್ಲೆಡೆ ಇದ್ದೀರಿ: ಟೆಕ್ಸಾಸ್‌ನಲ್ಲಿ ಭೀಕರ ಜನಾಂಗೀಯ ದಾಳಿ!

Texas Racist Attack On Indians: ಆಘಾತಕಾರಿ ದಾಳಿಯ ವೀಡಿಯೊ ಈಗ ಅಮೆರಿಕದಾದ್ಯಂತ ಭಾರತೀಯ-ಅಮೆರಿಕನ್ ಸಮುದಾಯದಲ್ಲಿ ವೈರಲ್ ಆಗಿದೆ. ಜನಾಂಗೀಯ ದಾಳಿ ನಡೆಸಿದ ಮೆಕ್ಸಿಕನ್-ಅಮೆರಿಕನ್ ಮಹಿಳೆಯನ್ನು ಪ್ಲಾನೋದ ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದೆ.

ಟೆಕ್ಸಾಸ್‌ನಲ್ಲಿ ಭೀಕರ ಜನಾಂಗೀಯ ದಾಳಿ!

ಟೆಕ್ಸಾಸ್‌ನಲ್ಲಿ ಭೀಕರ ಜನಾಂಗೀಯ ದಾಳಿ!

  • Share this:
ವಾಷಿಂಗ್ಟನ್(ಆ.26): ನಾಲ್ವರು ಭಾರತೀಯ ಮೂಲದ ಅಮೆರಿಕನ್ ಮಹಿಳೆಯರ ಗುಂಪಿನ ಮೇಲೆ ಹಲ್ಲೆ ಮತ್ತು ಜನಾಂಗೀಯ ನಿಂದನೆ (Racist Attack) ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಟೆಕ್ಸಾಸ್‌ನಲ್ಲಿ ಪೊಲೀಸರು ಇಂದು ಮೆಕ್ಸಿಕನ್-ಅಮೆರಿಕನ್ (Indian Americans) ಮಹಿಳೆಯನ್ನು ಬಂಧಿಸಿದ್ದಾರೆ. ದಾಳಿಕೋರ ಮಹಿಳೆಯರು ಭಾರತೀಯ-ಅಮೆರಿಕನ್ ಮಹಿಳೆಯರನ್ನು ಜನಾಂಗೀಯ ನಿಂದನೆ ಮಾಡುವುದನ್ನು ಕಾಣಬಹುದು ಮತ್ತು "ಭಾರತಕ್ಕೆ ಹಿಂತಿರುಗಿ" ಎಂದೂ ಕಿರುಚಾಡಿದ್ದಾರೆ. ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಇದೀಗ ಬಂಧನಕ್ಕೊಳಗಾಗಿರುವ ಮಹಿಳೆ ತಾನೊಬ್ಬ ಮೆಕ್ಸಿಕನ್-ಅಮೆರಿಕನ್ ಎಂದು ಹೇಳಿಕೊಂಡು, ಭಾರತೀಯ-ಅಮೆರಿಕನ್ನರ ಗುಂಪಿನ ಮೇಲೆ ದಾಳಿ ಮಾಡುವುದನ್ನು ವೀಡಿಯೊದಲ್ಲಿ ಕಾಣಬಹುದು.

ವೀಡಿಯೊದಲ್ಲಿ, ಮಹಿಳೆ ಪದೇ ಪದೇ “ನಾನು ನಿಮ್ಮನ್ನು ಭಾರತೀಯರನ್ನು ದ್ವೇಷಿಸುತ್ತೇನೆ. ಈ ಎಲ್ಲಾ ಭಾರತೀಯರು ಉತ್ತಮ ಜೀವನವನ್ನು ಬಯಸಿ ಅಮೆರಿಕಕ್ಕೆ ಬರುತ್ತಾರೆ ಎಂದು ಕಿಡಿ ಕಾರಿದ್ದಾರೆ. ಆಘಾತಕಾರಿ ದಾಳಿಯ ವೀಡಿಯೊ ಈಗ ಯುಎಸ್‌ನಾದ್ಯಂತ ಭಾರತೀಯ-ಅಮೆರಿಕನ್ ಸಮುದಾಯದಲ್ಲಿ ವೈರಲ್ ಆಗಿದೆ. ಮೆಕ್ಸಿಕನ್-ಅಮೆರಿಕನ್ ಮಹಿಳೆಯನ್ನು ಪ್ಲಾನೋದ ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಸ್ಯಾಮಿಯನ್ನು ಜನಾಂಗೀಯ ನಿಂದನೆ ಮಾಡಿದ್ದು ಮತ್ಯಾರು ಅಲ್ಲ; ಟೀಂ ಇಂಡಿಯಾದ ಈ ಸ್ಟಾರ್ ಆಟಗಾರ?

ಈ ವೀಡಿಯೊವನ್ನು ಪೋಸ್ಟ್ ಮಾಡಿದ ವ್ಯಕ್ತಿ "ನನ್ನ ತಾಯಿ ಮತ್ತು ಅವರ ಮೂವರು ಸ್ನೇಹಿತರು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಊಟಕ್ಕೆ ಹೋದ ವೇಳೆ ನಡೆದ ಘಟನೆ" ಎಂದು ಬರೆದಿದ್ದಾರೆ. ವ್ಯಕ್ತಿಯ ತಾಯಿ, ಶಾಂತವಾಗಿ ಮೆಕ್ಸಿಕನ್-ಅಮೆರಿಕನ್ ಮಹಿಳೆ ಮಾಡಿದ ವಾದಗಳನ್ನು ಎದುರಿಸುತ್ತಾ, ಜನಾಂಗೀಯ ಹೇಳಿಕೆಗಳನ್ನು ನೀಡದಂತೆ ದಾಳಿ ಮಾಡಿದವರಿಗೆ ವಿನಂತಿಸುತ್ತಿರುವುದನ್ನು ಕಾಣಬಹುದು.


ಅದೊಂದು ಹಂತದಲ್ಲಿ, ಆಕ್ರೋಶ್ರಿತ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಜನಿಸಿದ ಮೆಕ್ಸಿಕನ್-ಅಮೆರಿಕನ್ ಮಹಿಳೆ, ಭಾರತೀಯ ಮಹಿಳೆ ಮತ್ತು ಅವಳ ಇತರ ಸ್ನೇಹಿತರ ಮೇಲೆ ಹಲ್ಲೆ ಮಾಡುವುದನ್ನು ಸಹ ಕಾಣಬಹುದು. ‘ನಾನು ಎಲ್ಲೇ ಹೋದರೂ ನೀವು ಭಾರತೀಯರು ಇರುತ್ತೀರಿ’ ಎಂದು ಆಕೆ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಭಾರತದಿಂದ ಇಲ್ಲೇಕೆ ಬಂದಿದ್ದೀರಿ?

"ಭಾರತದಲ್ಲಿ ಜೀವನಶೈಲಿ ಇಷ್ಟು ಶ್ರೇಷ್ಠವಾಗಿದ್ದರೆ, ನೀವು ಯಾಕೆ ಇಲ್ಲಿಗೆ ಬರುತ್ತಿದ್ದಿರಿ?" ಎಂದು ಪದೇ ಪದೇ ನಿಂದಿಸುತ್ತಿದ್ದ ಮಹಿಳೆ, ನೋಡ ನೋಡುತ್ತಿದ್ದಂತೆಯೇ ಎಲ್ಲಾ ನಾಲ್ಕು ಭಾರತೀಯ ಮಹಿಳೆಯರನ್ನು ಹೊಡೆಯಲು ಮುಂದಾಗಿದ್ದಾಳೆ.

ಇದನ್ನೂ ಓದಿ: Racism: ವರ್ಣಭೇದ ನೀತಿಯ ಆರೋಪದ ಬಗ್ಗೆ ಸಮರ್ಥಿಸಿಕೊಂಡ ಇಂಗ್ಲೆಂಡ್ ರಾಜ

ಅದ್ಯ ಪ್ಲಾನೋ ಪೋಲೀಸ್ ಪತ್ತೆದಾರರು ಪ್ಲಾನೋದ ಎಸ್ಮೆರಾಲ್ಡಾ ಅಪ್ಟನ್ನನ್ನು ಬಂಧಿಸಿದ್ದು, ಆಕೆಯ ಮೇಲೆ ಹಲ್ಲೆ, ದೈಹಿಕ ಗಾಯ ಮತ್ತು ಭಯೋತ್ಪಾದಕ ಬೆದರಿಕೆಯ ಆರೋಪ ಹೊರಿಸಲಾಗಿದೆ ಮತ್ತು US$10,000 ಮೊತ್ತದ ಬಾಂಡ್ ಮೊತ್ತದ ಮೇಲೆ ಬಂಧಿಸಲಾಗಿದೆ.


ರೀಮಾ ರಸೂಲ್ ಟ್ವಿಟರ್‌ನಲ್ಲಿ, “ಇದು ತುಂಬಾ ಭಯಾನಕವಾಗಿದೆ. ಅವರ ಬಳಿ ಗನ್ ಇತ್ತು. ಈ ಭಾರತೀಯ-ಅಮೆರಿಕನ್ ಮಹಿಳೆಯರ ಇಂಗ್ಲಿಷ್ ಮಾತನಾಡುವ ಉಚ್ಚಾರಣೆಯನ್ನು ಗಮನಿಸಿ ಶೂಟ್ ಮಾಡಲು ಬಯಸಿದ್ದರು. ಇದು ನಿಜಕ್ಕೂ ಅಸಹ್ಯಕರ. ಈ ಭಯಾನಕ ಮಹಿಳೆ ವಿರುದ್ಧ ಅಪರಾಧ ಮಾಡಿದಕ್ಕಾಗಿ ಕಾನೂನು ಕ್ರಮ ಜರುಗಿಸಬೇಕಾಗಿದೆ ಎಂದಿದ್ದಾರೆ.
Published by:Precilla Olivia Dias
First published: