• Home
  • »
  • News
  • »
  • national-international
  • »
  • Viral Question Paper: ಆರ್‌ಆರ್‌ಆರ್‌ ಸಿನಿಮಾ ನೋಡಿದ್ದೀರಾ? ಹಾಗಿದ್ರೆ ಈ ಪ್ರಶ್ನೆಗಳಿಗೆ ಸರಿ ಉತ್ತರ ಬರೆಯಿರಿ!

Viral Question Paper: ಆರ್‌ಆರ್‌ಆರ್‌ ಸಿನಿಮಾ ನೋಡಿದ್ದೀರಾ? ಹಾಗಿದ್ರೆ ಈ ಪ್ರಶ್ನೆಗಳಿಗೆ ಸರಿ ಉತ್ತರ ಬರೆಯಿರಿ!

ಪ್ರಶ್ನೆ ಪತ್ರಿಕೆಯಲ್ಲಿ ಆರ್‌ಆರ್‌ಆರ್‌ ಕುರಿತ ಪ್ರಶ್ನೆ

ಪ್ರಶ್ನೆ ಪತ್ರಿಕೆಯಲ್ಲಿ ಆರ್‌ಆರ್‌ಆರ್‌ ಕುರಿತ ಪ್ರಶ್ನೆ

ಆರ್‌ಆರ್‌ಆರ್‌ ಸಿನಿಮಾ ರಿಲೀಸ್ ಆಗಿ 2 ತಿಂಗಳೇ ಆಗುತ್ತಾ ಬಂದರೂ ಅದು ಮಾಡುತ್ತಿರುವ ಸದ್ದು ಹಾಗೂ ಸುದ್ದಿ ಇನ್ನೂ ನಿಂತಿಲ್ಲ. ಇದೀಗ ಪಿಯು ಪ್ರಶ್ನೆ ಪತ್ರಿಕೆಯಲ್ಲೂ (PUC Question Paper) ಆರ್‌ಆರ್‌ಆರ್‌ ಕುರಿತ ಪ್ರಶ್ನೆ ಕೇಳಲಾಗಿದ್ದು, ಆ ಪ್ರಶ್ನೆ ಪತ್ರಿಕೆಯೀಗ ಸೋಶಿಯಲ್ ಮೀಡಿಯಾಗಳಲ್ಲಿ (Social Media) ವೈರಲ್ (Viral) ಆಗಿದೆ.

ಮುಂದೆ ಓದಿ ...
  • Share this:

ತೆಲಂಗಾಣ: ‘ಆರ್‌ಆರ್‌ಆರ್‌’ ಸಿನಿಮಾ (RRR Cinema) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿ ಮಾಂತ್ರಿಕ ಎಸ್.ಎಸ್. ರಾಜಮೌಳಿ(SS Rajamouli) ನಿರ್ದೇಶನದ (Direction) ಈ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ (Jr. NTR) ಹಾಗೂ ರಾಮ್ ಚರಣ್ (Ram Charan) ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಬಾಕ್ಸ್‌ ಆಫೀಸ್ (Box Office) ಕೊಳ್ಳೆ ಹೊಡೆದ ಆರ್‌ಆರ್‌ಆರ್, ಹಲವು ದಾಖಲೆಗಳನ್ನು ಬ್ರೇಕ್ (Records Break) ಮಾಡಿ, ತಾನೇ ಹೊಸ ದಾಖಲೆ ನಿರ್ಮಿಸಿತ್ತು. ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೀ ಹಿಂದಿ ಭಾಷೆಯಲ್ಲಿ ರಿಲೀಸ್ ಆದ ಈ ಸಿನಿಮಾ, ಎಲ್ಲಾ ಭಾಗದ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಇದೀಗ ಮಳೆ ನಿಂತರೂ ಮಳೆಯ ಹನಿ ನಿಂತಿಲ್ಲ ಎನ್ನುವಂತೆ ಆರ್‌ಆರ್‌ಆರ್‌ ಸಿನಿಮಾ ರಿಲೀ್ಸ್ ಆಗಿ 2 ತಿಂಗಳೇ ಆಗುತ್ತಾ ಬಂದರೂ ಅದು ಮಾಡುತ್ತಿರುವ ಸದ್ದು ಹಾಗೂ ಸುದ್ದಿ ನಿಂತಿಲ್ಲ. ಇದೀಗ ಪಿಯು ಪ್ರಶ್ನೆ ಪತ್ರಿಕೆಯಲ್ಲೂ (PUC Question Paper) ಆರ್‌ಆರ್‌ಆರ್‌ ಕುರಿತ ಪ್ರಶ್ನೆ ಕೇಳಲಾಗಿದ್ದು, ಆ ಪ್ರಶ್ನೆ ಪತ್ರಿಕೆಯೀಗ ಸೋಶಿಯಲ್ ಮೀಡಿಯಾಗಳಲ್ಲಿ (Social Media) ವೈರಲ್ (Viral) ಆಗಿದೆ.


ತೆಲಂಗಾಣ ಪಿಯು ವಿದ್ಯಾರ್ಥಿಗಳಿಗೆ ಆರ್‌ಆರ್‌ಆರ್‌ ಪ್ರಶ್ನೆ!


ತೆಲಂಗಾಣ ರಾಜ್ಯದ ಇಂಟರ್‌ಮಿಡಿಯೇಟ್ ಬೋರ್ಡ್ (ಪಿಯುಸಿ) ಪರೀಕ್ಷೆಗಳಲ್ಲಿ ರಾಜಮೌಳಿ ನಿರ್ದೇಶನದ 'RRR' ಸಿನಿಮಾದ ಕುರಿತಂತೆ ಪ್ರಶ್ನೆ ಕೇಳಲಾಗಿದೆ. ಸ್ವಾತಂತ್ರ್ಯಪೂರ್ವದ ಕಥೆಯಿರುವ ಈ ಸಿನಿಮಾದಲ್ಲಿ ರಾಮ್‌ ಚರಣ್ ಅಲ್ಲೂರಿ ಸೀತಾರಾಮರಾಜು ಪಾತ್ರ ಮಾಡಿದ್ದರೆ, ಜ್ಯೂನಿಯರ್ ಎಂಟಿಆರ್‌ ಕೊಮರಂ ಭೀಮನ ಪಾತ್ರ ಮಾಡಿದ್ದರು.


ಜ್ಯೂನಿಯರ್ ಎನ್‌ಟಿಆರ್ ಪಾತ್ರದ ಕುರಿತಂತೆ ಪ್ರಶ್ನೆ


ಪಿಯು ಪ್ರಶ್ನೆ ಪತ್ರಿಕೆಯಲ್ಲಿ ಆರ್‌ಆರ್‌ಆರ್‌ ಸಿನಿಮಾದಲ್ಲಿನ ಜ್ಯೂನಿಯರ್ ಎನ್‌ಟಿಆರ್‌ ಪಾತ್ರದ ಕುರಿತಂತೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲಾಗಿದೆ. ಇಂಗ್ಲೀಷ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಈ ವಿಚಿತ್ರ ಪ್ರಶ್ನೆ ಕೇಳಲಾಗಿದೆ. ನೀವು 'ಆರ್‌ಆರ್‌ಆರ್' ಚಲನಚಿತ್ರವನ್ನು ನೋಡಿದ್ದೀರಿ ಮತ್ತು ಕೋಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಅವರ ಅಭಿನಯವನ್ನು ನೋಡಿದ್ದೀರಿ. ಚಿತ್ರದ ಅದ್ಭುತ ಯಶಸ್ಸಿನ ನಂತರ, ಪ್ರತಿಷ್ಠಿತ ಟಿವಿ ಚಾನೆಲ್‌ನಲ್ಲಿ ಜೂನಿಯರ್ ಎನ್‌ಟಿಆರ್ ಅವರನ್ನು ಸಂದರ್ಶನ ಮಾಡಲು ನಿಮಗೆ ಅವಕಾಶ ಸಿಕ್ಕಿತು ಎಂದು ಈಗ ಊಹಿಸಿಕೊಳ್ಳಿ. ಈಗ, ಚಿತ್ರದ ಯಶಸ್ಸಿನ ನಂತರ ಬರಹಗಾರ, ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಕಾಲ್ಪನಿಕ ಸಂದರ್ಶನವನ್ನು ನಡೆಸಿದರೆ ಹೇಗೆ ನಡೆಸುತ್ತೀರಿ ಎಂಬ ಪ್ರಶ್ನೆ ಕೇಳಲಾಗಿದೆ.


ಇದನ್ನೂ ಓದಿ: Explained: ಕಾಲ್ಪನಿಕವಲ್ಲ RRR ಸಿನಿಮಾ ಕಥೆ! ಇಲ್ಲಿದೆ ನೋಡಿ ರಿಯಲ್ ಸ್ಟೋರಿಯ, ರಿಯಲ್ ಪಾತ್ರಗಳು


“ಕೆಳಗೆ ನೀಡಲಾದ ವಿವರಗಳನ್ನು ಬಳಸಿಕೊಳ್ಳಿ”


ಇನ್ನು ಮುಂದುವರೆದು ಈ ಕೆಳಗೆ ನೀಡಲಾದ ವಿವರಗಳನ್ನು ಬಳಸಿಕೊಳ್ಳಿ ಅಂತ ಕೊಟ್ಟಿದ್ದು, ಚಿತ್ರದ ಸ್ವರೂಪ, ಚಲನಚಿತ್ರ ನಿರ್ದೇಶಕರೊಂದಿಗಿನ ಅವರ ಸಂಬಂಧ, ಚಿತ್ರದ ಸ್ಕ್ರಿಪ್ಟ್ ಬಗ್ಗೆ, ಇತರ ನಟರ ಒಳಗೊಳ್ಳುವಿಕೆಯ ಬಗ್ಗೆ, ಪ್ರೇಕ್ಷಕರ ಮೇಲೆ ಚಲನಚಿತ್ರದ ಪ್ರಭಾವ ಏನಾಯಿತು? ಚಿತ್ರದ ಬಗ್ಗೆ ಅವರ ಅಭಿಪ್ರಾಯಗಳೇನು? ಇತ್ಯಾದಿಗಳ ಬಗ್ಗೆ ಉತ್ತರಿಸುವಂತೆ ಪ್ರಶ್ನೆ ಕೇಳಲಾಗಿದೆ.


ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಪ್ರಶ್ನೆ ಪತ್ರಿಕೆ


ಇತ್ತ ಈ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜೂನಿಯರ್‌ ಎನ್‌ಟಿಆರ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದು, ಪ್ರಶ್ನೆ ಪತ್ರಿಕೆಯನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಇದನ್ನು ನೋಡಿದ ನೆಟ್ಟಿಗರು ಪರ, ವಿರೋಧ ಅಭಿಪ್ರಾಯ ವ್ಯಕ್ತಪಡಿಸಿ, ಕಾಮೆಂಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ: Explained: ಎಲ್ರೂ RRR, KGF 2 ಗಳಂತಹ ಸಿನಿಮಾ ಮಾಡಿದ್ರೆ ಈ ಟಾಪ್ 10 ಸಿನಿಮಾಗಳು ಬರ್ತಾನೇ ಇರ್ಲಿಲ್ಲ!


ದಾಖಲೆ ಬರೆದ ಆರ್‌ಆರ್‌ಆರ್‌


 ಕೋವಿಡ್-19 ಸಾಂಕ್ರಾಮಿಕ ರೋಗದ ಭೀತಿಯಲ್ಲೂ ಜಾಗತಿಕವಾಗಿ 1000 ಕೋಟಿ ರೂಪಾಯಿ ಕ್ಲಬ್ ಅನ್ನು ಹಿಟ್ ಮಾಡಿದ ಮೊದಲ ಚಲನಚಿತ್ರವಾಗುವ ಮೂಲಕ ಆರ್‌ಆರ್‌ಆರ್‌ ಇತಿಹಾಸವನ್ನು ಸೃಷ್ಟಿಸಿತು. ಈ ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್‌ ಕೋಮರಂ ಭೀಮನಾಗಿ, ಅಲ್ಲೂರಿ ಸೀತಾರಾಮ ರಾಜು ಆಗಿ ರಾಮ್ ಚರಣ್, ಯುವ ಅಲ್ಲೂರಿ ಸೀತಾರಾಮ ರಾಜು ಆಗಿ ವರುಣ್ ಬುದ್ಧದೇವ್, ವೆಂಕಟ ರಾಮರಾಜು ಆಗಿ ಅಜಯ್ ದೇವಗನ್, ಸರೋಜಿನಿಯಾಗಿ ಶ್ರಿಯಾ ಸರನ್, ಸೀತಾ ಆಗಿ ಆಲಿಯಾ ಭಟ್, ಕ್ಯಾಥರೀನ್ ಬಕ್ಸ್ಟನ್ ಆಗಿ ಅಲಿಸನ್ ಡೂಡಿ ಇತರರು ನಟಿಸಿದ್ದರು.

Published by:Annappa Achari
First published: