Queen Elizabeth II: ಬಕಿಂಗ್‌ಹ್ಯಾಮ್ ಅರಮನೆಯಿಂದ ರಾಣಿ ಪಾರ್ಥಿವ ಶರೀರ ರವಾನೆ; ತೀವ್ರ ಶೋಕದಲ್ಲಿ ಮುಳುಗಿದ ರಾಜಮನೆತನ

ರಾಣಿ ಎಲಿಜಬೆತ್ II ರ ಶವಪೆಟ್ಟಿಗೆಯನ್ನು ಬಕಿಂಗ್‌ಹ್ಯಾಮ್ ಅರಮನೆಯಿಂದ ವೆಸ್ಟ್ಮಿನಿಸ್ಟರ್ ಹಾಲ್‌ಗೆ ಕೊಂಡೊಯ್ಯಲಾಯಿತು. ಈ ವೇಳೆ ಕಿಂಗ್ ಚಾರ್ಲ್ಸ್ III, ಪ್ರಿನ್ಸ್ ವಿಲಿಯಂ, ಪ್ರಿನ್ಸ್ ಹ್ಯಾರಿ, ಪ್ರಿನ್ಸೆಸ್ ಅನ್ನೆ, ಪ್ರಿನ್ಸ್ ಆಂಡ್ರ್ಯೂ ಮತ್ತು ಪ್ರಿನ್ಸ್ ಎಡ್ವರ್ಡ್ ಸೇರಿದಂತೆ ರಾಣಿ ಎಲಿಜಬೆತ್‌ ಶವದ ಮೆರವಣಿಗೆಯಲ್ಲಿ ಇಡೀ ರಾಜಮನೆತನಕ್ಕೆ ರಾಜಮನೆತನವೇ ಶೋಕಾಚರಣೆಯಲ್ಲಿ ಮುಳುಗಿತ್ತು. ಇದರ ಜೊತೆಗೆ ಲಂಡನ್‌ ಜನತೆ ಮತ್ತು ಸಮಾರಂಭದಲ್ಲಿ ಭಾಗಿಯಾದ ಸದಸ್ಯರು ಸಹ ತೀವ್ರ ಶೋಕದಲ್ಲಿ ಮುಳುಗಿದ್ದರು.

ಪ್ರಿನ್ಸ್ ಹ್ಯಾರಿ

ಪ್ರಿನ್ಸ್ ಹ್ಯಾರಿ

  • Share this:
ಇಂಗ್ಲೆಂಡ್ ಅನ್ನು (England) ಬರೋಬ್ಬರಿ 70 ವರ್ಷಗಳ ಸುಧೀರ್ಘ ಕಾಲ ಆಳಿದ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರಾಣಿ ಎಲಿಜಬೆತ್ (Queen Elizabeth) ಅವರು ತೀರಿಕೊಂಡು ವಾರವೇ ಕಳೆದಿದೆ. ಸೆಪ್ಟೆಂಬರ್ 8 ರಂದು ರಾಣಿ ಇಹಲೋಕ ತ್ಯಜಿಸಿದ್ದರು. ಆದರೆ ಮೃತಪಟ್ಟು ಒಂದು ವಾರ ಕಳೆದರೂ ರಾಣಿಯ ಅಂತ್ಯಸಂಸ್ಕಾರ (Funeral) ಇನ್ನೂ ನಡೆದಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ರಾಜಮನೆತನದಲ್ಲಿರುವ ಸಾಲು ಸಾಲು ಸಂಪ್ರದಾಯಗಳು. ರಾಜಮನೆತನ (Royal Family) ಎಂದರೆ ಕೇಳಬೇಕೆ ಅನೇಕ ಶಾಸ್ತ್ರ- ಸಂಪ್ರದಾಯಗಳು ಇದ್ದೆ ಇರುತ್ತವೆ. ಇದರ ಜೊತೆಗೆ ಲಂಡನ್‌ ಜನತೆ ಮತ್ತು ರಾಣಿಯ ಕುಟುಂಬ ತೀವ್ರ ಶೋಕದಲ್ಲಿ ಮುಳುಗಿದೆ. ರಾಣಿ ಎಲಿಜಬೆತ್‌ ಅವರ ಶವಪೆಟ್ಟಿಗೆ ಬಂದಾಗ ಪ್ರಿನ್ಸ್‌ ಹ್ಯಾರಿ (Prince Harry) ಮತ್ತು ಅವರ ಕುಟುಂಬ ಕಣ್ಣಿರು ಹಾಕುತ್ತಿರುವುದು ಕಂಡುಬಂದಿದೆ.

ಬಕಿಂಗ್ಹ್ಯಾಮ್ ಅರಮನೆಯಿಂದ ವೆಸ್ಟ್ಮಿನಿಸ್ಟರ್ ಹಾಲ್‌ಗೆ ಮೃತದೇಹ ರವಾನೆ 
ರಾಣಿ ಎಲಿಜಬೆತ್ II ರ ಶವಪೆಟ್ಟಿಗೆಯನ್ನು ಬುಧವಾರ ಬಕಿಂಗ್ಹ್ಯಾಮ್ ಅರಮನೆಯಿಂದ ವೆಸ್ಟ್ಮಿನಿಸ್ಟರ್ ಹಾಲ್‌ಗೆ ಕೊಂಡೊಯ್ಯಲಾಯಿತು ಮತ್ತು ಕಿಂಗ್ ಚಾರ್ಲ್ಸ್ III, ಪ್ರಿನ್ಸ್ ವಿಲಿಯಂ, ಪ್ರಿನ್ಸ್ ಹ್ಯಾರಿ, ಪ್ರಿನ್ಸೆಸ್ ಅನ್ನೆ, ಪ್ರಿನ್ಸ್ ಆಂಡ್ರ್ಯೂ ಮತ್ತು ಪ್ರಿನ್ಸ್ ಎಡ್ವರ್ಡ್ ಸೇರಿದಂತೆ ರಾಣಿ ಎಲಿಜಬೆತ್‌ ಶವದ ಮೆರವಣಿಗೆಯಲ್ಲಿ ಇಡೀ ರಾಜಮನೆತನಕ್ಕೆ ರಾಜಮನೆತನವೇ ಶೋಕಾಚರಣೆಯಲ್ಲಿ ಮುಳುಗಿತ್ತು. ಇದರ ಜೊತೆಗೆ ಲಂಡನ್‌ ಜನತೆ ಮತ್ತು ಸಮಾರಂಭಕ್ಕೆ ಭಾಗಿಯಾದ ಸದಸ್ಯರು ಸಹ ತೀವ್ರ ಶೋಕದಲ್ಲಿ ಮುಳುಗಿದ್ದರು.

ರಾಣಿಯನ್ನು ನೆನೆಸಿ ಕಣ್ಣೀರಿಟ್ಟ ರಾಜಮನೆತನ
ಮೆರವಣಿಗೆಯ ನಂತರ, ವೆಸ್ಟ್‌ಮಿನಿಸ್ಟರ್‌ನ ಒಳಗೆ, ವಿಲಿಯಂ ಮತ್ತು ಹ್ಯಾರಿ ಅವರ ಪತ್ನಿಯರಾದ ಕೇಟ್ ಮಿಡಲ್ಟನ್ ಮತ್ತು ಮೇಘನ್ ಮಾರ್ಕೆಲ್ ಅವರು ಹರ್ ಮೆಜೆಸ್ಟಿಯ ಶವಪೆಟ್ಟಿಗೆಯ ಸ್ವಾಗತ ಸಮಾರಂಭದಲ್ಲಿ ಜೊತೆಯಾದರು. ಅದೇ ಸಮಯಕ್ಕೆ ಪ್ರಿನ್ಸ್ ಹ್ಯಾರಿ ಅವರು ತಮ್ಮ ದಿವಂಗತ ಅಜ್ಜಿಯನ್ನು ಗೌರವಿಸುವ ಸಂದರ್ಭದಲ್ಲಿ ಕಣ್ಣೀರು ಒರೆಸಿಕೊಳ್ಳುವುದು ಕಂಡು ಬಂದಿದೆ. ಅವರು ಶವಪೆಟ್ಟಿಗೆಯ ಸ್ವಾಗತ ಕಾರ್ಯಕ್ರಮದ ಸಂದರ್ಭದಲ್ಲಿ ಭಾರದ ಮನಸ್ಸಿನಿಂದ ಹೊರಗೆ ಬಂದರು.

ಇದನ್ನೂ ಓದಿ: Queen Elizabeth: ಬ್ರಿಟನ್ ರಾಣಿ ಕೊನೆಯ ಭಾವಚಿತ್ರ ಹೇಗೆ ಮೂಡಿಬಂತು? ಆ ಬಗ್ಗೆ ಛಾಯಾಗ್ರಾಹಕ ರಾನಾಲ್ಡ್‌ ಮ್ಯಾಕೆಚ್ನಿ ಹೇಳೋದೇನು?

ಅಲ್ಲದೆ, ಕೇಟ್ ಮಿಡಲ್‌ಟನ್ ಮತ್ತು ಮೇಘನ್ ಮಾರ್ಕೆಲ್ ಅವರು ವೆಸ್ಟ್‌ಮಿನಿಸ್ಟರ್ ಹಾಲ್ ಸಮಾರಂಭದಲ್ಲಿ ಭಾವುಕರಾಗಿ ಕಣ್ಣಿರು ಹಾಕುತ್ತಿದ್ದರು. ಈ ಶವಪೆಟ್ಟಿಗೆಯ ಸೇವೆಯ ಸಮಯದಲ್ಲಿ ವೇಲ್ಸ್ ರಾಜಕುಮಾರಿ ಮತ್ತು ಡಚೆಸ್ ಆಫ್ ಸಸೆಕ್ಸ್ ಸೇರಿದಂತೆ ಎಲ್ಲರೂ ಕಪ್ಪು ಉಡುಪುಗಳು ಮತ್ತು ಮುತ್ತಿನ ಆಭರಣಗಳನ್ನು ಧರಿಸಿದ್ದರು. ಇದರಿಂದ ಈ ಉಡುಪುಗಳು ರಾಜಮನೆತನದಲ್ಲಿ ಶೋಕಾಚರಣೆಯ ಸಮಯದಲ್ಲಿ ಧರಿಸುವ ಉಡುಗೆ ಆಗಿವೆ ಎಂದು ತಿಳಿದುಬಂದಿದೆ.

ಈ ಭಾವನಾತ್ಮಕ ಸಮಯದ ನಂತರ, ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ಅವರು ವೆಸ್ಟ್‌ಮಿನಿಸ್ಟರ್ ಹಾಲ್‌ನಿಂದ ನಿರ್ಗಮಿಸುವಾಗ ಕೈ ಹಿಡಿದುಕೊಂಡು, ಮೇಘನ್ ಮತ್ತು ಕೇಟ್ ಅವರು ಹೊರಡುವ ಮೊದಲು ಶವಪೆಟ್ಟಿಗೆಯ ಮುಂದೆ ತಮ್ಮ ಕೊನೆಯ ನಮನಗಳನ್ನು ಸಲ್ಲಿಸಿದರು.

ಅಜ್ಜಿಯೊಂದಿಗಿನ ಬಾಲ್ಯದ ನೆನಪುಗಳನ್ನು ನೆನಪುಸಿಕೊಂಡ ಪ್ರಿನ್ಸ್ ಹ್ಯಾರಿ
ಪ್ರಿನ್ಸ್ ಹ್ಯಾರಿ ಅವರು ತಮ್ಮ ಅಜ್ಜಿಯ ನಿಧನದ ನಂತರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅವರಿಗೆ ಗೌರವವನ್ನು ಸಲ್ಲಿಸಿದರು. ಅಲ್ಲಿ ಅವರು “ನಾವು ನಿಮ್ಮನ್ನು ಭೇಟಿಯಾದಾಗೆಲ್ಲ ನಿಮ್ಮ ನಡೆ-ನುಡಿಯಿಂದ ಬಹಳ ಆಕರ್ಷಿತನಾಗುತ್ತಿದ್ದೆ. ನಿಮ್ಮನ್ನು ಭೇಟಿಯಾದ ಎಲ್ಲ ಸಂದರ್ಭಗಳು ನನಗೆ ಅತಿ ವಿಶೇಷ. ಅದಕ್ಕಾಗಿ ನಾನು ನಿಮಗೆ ಶಾಶ್ವತವಾಗಿ ಕೃತಜ್ಞನಾಗಿದ್ದೇನೆ.

ಇದನ್ನೂ ಓದಿ:  Queen Elizabeth-II Funeral: ರಾಣಿಯ ಅಂತ್ಯಕ್ರಿಯೆಗೆ ಬರುವ ವಿದೇಶಿ ಗಣ್ಯರು ಖಾಸಗಿ ವಿಮಾನ, ಕಾರು ಬಳಸುವಂತಿಲ್ಲ!

ನಿಮ್ಮೊಂದಿಗಿನ ನನ್ನ ಬಾಲ್ಯದ ನೆನಪುಗಳು ಮತ್ತಷ್ಟು ಹೊಸ ರಂಗನ್ನು ಪಡೆದಿದ್ದವು. ನೀವು ನನ್ನ ಪ್ರೀತಿಯ ಹೆಂಡತಿಯನ್ನು ಭೇಟಿಯಾದ ಮೊದಲ ಕ್ಷಣದಲ್ಲಿ ನೀವು ಅವರನ್ನು ಮಾತನಾಡಿಸಿ ವಿಚಾರಿಸಿಕೊಂಡ ರೀತಿಗೆ ನಾನು ಮನಸೋತಿದ್ದೆ. ನಿಮ್ಮ ಪ್ರೀತಿಯ ಮೊಮ್ಮಕ್ಕಳನ್ನು ತಬ್ಬಿಕೊಂಡು ಯಾವಾಗಲೂ ಅವರನ್ನು ಮುದ್ದಾಡುತ್ತಿದ್ದೀರಿ, ಅವರ ಜೊತೆ ಆಟವಾಡುತ್ತಿದ್ದಿರಿ. ಆದರೆ ಈಗ ನೀವು ನಮ್ಮ ಜೊತೆ ಇಲ್ಲ. ಇದು ಅತ್ಯಂತ ದು:ಖಕರ ವಿಷಯವಾಗಿದೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
Published by:Ashwini Prabhu
First published: