Queen Elizabeth II: ರಾಣಿ ಎಲಿಜಬೆತ್‌ ದೀರ್ಘಾಯುಷ್ಯದ ಗುಟ್ಟು ಇಲ್ಲಿದೆ ನೋಡಿ

ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್, 2021 ರಲ್ಲಿ 99 ನೇ ವಯಸ್ಸಿನಲ್ಲಿ ನಿಧನರಾದ ನಂತರ, ರಾಣಿ ಕೋವಿಡ್ ಸೇರಿದಂತೆ ಹಲವಾರು ರೋಗಗಳಿಗೆ ತುತ್ತಾಗಿದ್ದರು. ದೀರ್ಘ ಕಾಲ ಬದುಕಿದ ಗರಿಮೆಯನ್ನು ರಾಣಿ ಹೊಂದಿರುವುದು ಮಾತ್ರವಲ್ಲದೆ ದೀರ್ಘ ಕಾಲ ಆಳ್ವಿಕೆ ನಡೆಸಿದ ರಾಣಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ರಾಣಿ ಎಲಿಜಬೆತ್‌ II

ರಾಣಿ ಎಲಿಜಬೆತ್‌ II

  • Share this:
ರಾಣಿ ಎಲಿಜಬೆತ್ II (Queen Elizabeth II) ಸೆಪ್ಟೆಂಬರ್ 8, 2022 ರಂದು ನಿಧನರಾದರು. ಆಗ ಅವರಿಗೆ  96 ವರ್ಷ ವಯಸ್ಸಾಗಿತ್ತು  ದೀರ್ಘ ಕಾಲ ಬದುಕಿದ ಗರಿಮೆಯನ್ನು ರಾಣಿ (Queen) ಹೊಂದಿರುವುದು ಮಾತ್ರವಲ್ಲದೆ ದೀರ್ಘ ಕಾಲ ಆಳ್ವಿಕೆ ನಡೆಸಿದ ರಾಣಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್ (Prince Philip), 2021 ರಲ್ಲಿ 99 ನೇ ವಯಸ್ಸಿನಲ್ಲಿ ನಿಧನರಾದ ನಂತರ, ರಾಣಿ ಕೋವಿಡ್ ಸೇರಿದಂತೆ ಹಲವಾರು ರೋಗಗಳಿಗೆ ತುತ್ತಾಗಿದ್ದರು. ಆದರೂ ತಾವು ಮರಣ ಹೊಂದುವ ಎರಡು ದಿನಕ್ಕೆ ಮೊದಲು ಹೊಸದಾಗಿ ಚುನಾಯಿತ ಪ್ರಧಾನ ಮಂತ್ರಿಯಾಗಿ ಲಿಜ್ ಟ್ರಸ್ (Liz Truss) ಅವರನ್ನು ನೇಮಿಸಿದ್ದರು. ಹಾಗಿದ್ದರೆ ರಾಣಿಯ ದೀರ್ಘಾಯುಷ್ಯದ ಗುಟ್ಟೇನು? ಅವರು ಪಾಲಿಸುತ್ತಿದ್ದ ಆರೋಗ್ಯಕರ ದಿನಚರಿಗಳೇನು? ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಬೆಳಗ್ಗಿನ ಉಪಹಾರ
ರಾಣಿ ಸರಿಯಾಗಿ ಬೆಳಗ್ಗೆ 8:30ಕ್ಕೆ ಉಪಹಾರ ಸೇವಿಸುತ್ತಿದ್ದರು. ಚಹಾ ಮತ್ತು ಬಿಸ್ಕತ್ತು ಅಂತೆಯೇ ಒಂದು ಬೌಲ್ ಕೆಲಾಗ್ಸ್ ಕೆಯನ್ನು ಸೇವಿಸುತ್ತಿದ್ದರು.

ಆಕೆಯ ಮೆಚ್ಚಿನ ಸಾಕುಪ್ರಾಣಿ
ಕೋರ್ಗಿಸ್ ಎಲಿಜಬೆತ್ ಅವರ ಮುದ್ದಿನ ನಾಯಿಯಾಗಿತ್ತು. ಸಂಶೋಧನೆಗಳು ಹೇಳಿರುವಂತೆ ಸಾಕುಪ್ರಾಣಿಗಳನ್ನು ಹೊಂದಿರುವುದು ಆರೋಗ್ಯ ವರ್ಧನೆಗೆ ಸಹಕಾರಿಯಾಗಿದೆ. ಹಾಗೆಯೇ ಅವುಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುವ ಅಭ್ಯಾಸದಿಂದ ಸ್ಥೂಲಕಾಯ, ಕ್ಯಾನ್ಸರ್, ಮಧುಮೇಹವನ್ನು ಹತ್ತಿಕ್ಕಬಹುದು ಎಂದಾಗಿದೆ.

ಕುದುರೆ ಸವಾರಿ
ರಾಣಿ ಎಲಿಜಬೆತ್ ತಮ್ಮ ಸಣ್ಣ ಹರೆಯದಿಂದಲೇ ಕುದುರೆ ಸವಾರಿಯನ್ನು ಹೆಚ್ಚು ಇಷ್ಟಪಡುತ್ತಿದ್ದರು. ತಮ್ಮ ಮಗ ಪ್ರಿನ್ಸ್ ಚಾರ್ಲ್ಸ್ ಅವರ ವಿವಾಹದಂದು ರಾಣಿ ಕುದುರೆಯನ್ನು ಉಡುಗೊರೆಯಾಗಿ ನೀಡಿದ್ದರು. ಕುದುರೆ ಸವಾರಿ ಕೂಡ ಒಂದು ರೀತಿಯ ವ್ಯಾಯಾಮ ಎಂಬುದಾಗಿ ಸಂಶೋಧನೆಗಳು ಉಲ್ಲೇಖಿಸಿವೆ.

ಇದನ್ನೂ ಓದಿ: Queen Elizabeth ಬರೆದ ಪತ್ರ ಓದಲು ಇನ್ನೂ 63 ವರ್ಷ ಕಾಯಬೇಕಂತೆ! ಅಷ್ಟಕ್ಕೂ ಅಂಥದ್ದೇನಿದೆ ಅದರಲ್ಲಿ?

ಚಹಾ ಸಮಯ
ರಾಣಿ ತಮ್ಮ ಬೆಳಗ್ಗಿನ ದಿನಚರಿಯನ್ನು ಒಂದು ಕಪ್ ಅರ್ಲ್ ಗ್ರೇ ಟಿಯೊಂದಿಗೆ ಆರಂಭಿಸುತ್ತಿದ್ದರು. ಸಕ್ಕರೆ ಹಾಗೂ ಸ್ವಲ್ಪ ಮಿಶ್ರಿತ ಹಾಲನ್ನು ಅವರು ತಮ್ಮ ಚಹಾಕ್ಕೆ ಮಿಶ್ರಮಾಡಿಕೊಳ್ಳುತ್ತಿದ್ದರು. ಒಂದು ಕಪ್ ಅರ್ಲ್ ಗ್ರೇ ಚಹಾ ಸೇವನೆ ಅಂಗಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗೆಯೇ ಬ್ಲ್ಯಾಕ್ ಟೀಯಂತೆ ಇದು ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ.

ಸ್ನ್ಯಾಕ್ಸ್ ಪ್ರಿಯೆ
ಜಾಮ್ ಸ್ಯಾಂಡ್‌ವಿಚ್‌ಗಳನ್ನು ರಾಣಿಯವರು ತುಂಬಾ ಇಷ್ಟಪಟ್ಟು ಸೇವಿಸುತ್ತಿದ್ದರು. ಅದೂ ಕೂಡ ಸಣ್ಣ ಪ್ರಮಾಣದಲ್ಲಿ, ತಮ್ಮ ಮಧ್ಯಾಹ್ನದ ಚಹಾ ಸೇವನೆಯ ಸಮಯದಲ್ಲಿ ರಾಣಿಯವರು ಇದನ್ನು ಸೇವಿಸುತ್ತಿದ್ದರು. ನಿಮ್ಮ ಇಷ್ಟದ ಆಹಾರಗಳನ್ನು ಸಣ್ಣ ಪ್ರಮಾಣದಲ್ಲಿ ಹಿತಮಿತವಾಗಿ ಸೇವಿಸುವುದು ಆರೋಗ್ಯದ ಕೀಲಿ ಕೈಯಾಗಿದೆ ಎಂಬುದು ಆಹಾರ ಪರಿಣಿತರ ಅಭಿಪ್ರಾಯವಾಗಿದೆ.

ನಗುವಿನರಸಿ
ಎಲಿಜಬೆತ್ ತಮ್ಮ ಹಾಸ್ಯ ಪ್ರವೃತ್ತಿ ಹಾಗೂ ಮಂದಸ್ಮಿತ ವದನಕ್ಕೆ ಹೆಸರುವಾಸಿಯಾಗಿದ್ದರು. ಯಾವಾಗಲೂ ಆಕೆಯ ಮುಖದ ಮೇಲೆ ಮುಗುಳ್ನಗು ರಾರಾಜಿಸುತ್ತಿತ್ತು. ಆಕೆ ಹಾಸ್ಯಪ್ರಿಯೆಯಾಗಿದ್ದರು. ಹಾಸ್ಯ ಕೂಡ ಆರೋಗ್ಯದ ಗುಟ್ಟು ಏಕೆಂದರೆ ಹಾಸ್ಯವು ಮೆದುಳು ಹಾಗೂ ದೇಹವನ್ನು ಚುರುಕಾಗಿಸುತ್ತದೆ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ.

ಅನುರಾಗ ದಾಂಪತ್ಯ
ಪ್ರಿನ್ಸ್ ಫಿಲಿಪ್ ಹಾಗೂ ಎಲಿಜಬೆತ್ ಕೂಡ ತಮ್ಮ ದಾಂಪತ್ಯ ಜೀವನದಲ್ಲಿ ಹಲವಾರು ಎಡರು ತೊಡರುಗಳನ್ನು ಎದುರಿಸಿದ್ದಾರೆ. 70 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಕೂಡ ಸಾಕ್ಷಿಯಾಗಿದ್ದಾರೆ. ದಾಂಪತ್ಯದಲ್ಲಿ ಸಮರಸದೊಂದಿಗೆ ಜೀವನ ನಡೆಸುವುದೂ ಕೂಡ ದೀರ್ಘಾಯುಷ್ಯದ ಗುಟ್ಟಾಗಿದೆ.

ನಿಕಟ ಸ್ನೇಹಿತರು ಹಾಗೂ ಕುಟುಂಬ
ಶ್ರೀಮಂತ ವೈಭವೋಪೇತ ರಾಜ ಕುಟುಂಬದಲ್ಲಿರುವುದು ಕೂಡ ಕೆಲವೊಮ್ಮೆ ಸವಾಲಿನ ಮಾತಾಗಿದೆ. ಅದಾಗ್ಯೂ ರಾಣಿಯವರು ತಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ನಿಕಟತೆಯನ್ನು ಹೊಂದಿದ್ದರು. ಆರೋಗ್ಯಕರ ಅನುಬಂಧವನ್ನು ಕಾಪಾಡಿಕೊಂಡಿದ್ದರು.

ಪ್ರಕೃತಿ ಆಸ್ವಾದನೆ
ಉದ್ಯಾನ ಹಾಗೂ ಹೊರಾಂಗಣ ನಡಿಗೆ ರಾಣಿಯವರ ಹವ್ಯಾಸಗಳಲ್ಲಿ ಒಂದಾಗಿತ್ತು. ಉದ್ಯಾನಗಳಲ್ಲಿ ಓಡಾಡುವ ಹಲವಾರು ಫೋಟೋಗಳು ಅವರಿಗೆ ಹೂಗಿಡಗಳೆಂದರೆ ಇಷ್ಟ ಎಂಬುದನ್ನು ಖಾತ್ರಿಪಡಿಸಿವೆ. ಉದ್ಯಾನಗಳಲ್ಲಿ ವಿಹರಿಸುವುದು ನಿಸರ್ಗದ ಆಸ್ವಾದನೆಯನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ಒದಗಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಇದನ್ನೂ ಓದಿ: Queen Elizabeth II: ರಾಣಿ ಎಲಿಜಬೆತ್ ಬದುಕಿನ ಅಪರೂಪದ ಚಿತ್ರಗಳಿವು

ಉದ್ದೇಶಪೂರ್ವಕ ಕರ್ತವ್ಯ
ರಾಣಿ ಎಲಿಜಬೆತ್ ತಮ್ಮ ಜೀವನವನ್ನು ಬ್ರಿಟನ್ ಹಾಗೂ ಕಾಮನ್‌ವೆಲ್ತ್‌ನ ಜನರ ಜೀವನಕ್ಕಾಗಿ ಮುಡಿಪಾಗಿಟ್ಟಿದ್ದರು. ತಮ್ಮ ಕರ್ತವ್ಯವನ್ನು ಆಕೆ ಇಷ್ಟಪಟ್ಟು ನೆರವೇರಿಸುತ್ತಿದ್ದರು. ಜನರೊಂದಿಗೆ ಬೆರೆಯುತ್ತಿದ್ದರು. ಭಾವೋದ್ರೇಕಕ್ಕೆ ರಾಣಿ ಬೇಗನೇ ಒಳಗಾಗುತ್ತಿದ್ದರು. ಭಾವೋದ್ರೇಕವನ್ನು ಹೊಂದಿರುವ ಜನರು ಸಾಮಾನ್ಯವಾಗಿ ಹೆಚ್ಚು ಆಶಾವಾದಿಗಳು ಮತ್ತು ಸಂತೋಷವಾಗಿರುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ.
Published by:Ashwini Prabhu
First published: