Queen Elizabeth II: ಬ್ರಿಟನ್ ರಾಣಿ ಎಲಿಜಬೆತ್ II ಆರೋಗ್ಯದಲ್ಲಿ ಏರುಪೇರು

ಆರೋಗ್ಯದ ಕಾರಣಗಳಿಂದ ಪ್ರಮುಖ ಸಭೆಗಳನ್ನು ಸಹ ಬ್ರಿಟನ್ ರಾಣಿ ಎಲಿಜಬೆತ್ II ಮುಂದೂಡಿದ್ದಾರೆ ಎಂದು ವರದಿಯಾಗಿದೆ.

ಎಲಿಜಬೆತ್ II

ಎಲಿಜಬೆತ್ II

  • Share this:
    96 ವರ್ಷದ ಬ್ರಿಟನ್ ರಾಣಿ ಎಲಿಜಬೆತ್ II (Queen Elizabeth II Health) ಆರೋಗ್ಯದ ಕುರಿತು ಮಹತ್ವದ ಅಪ್​ಡೇಟ್ ಒಂದು ಹೊರಬಿದ್ದಿದೆ.  ಬ್ರಿಟನ್ ರಾಣಿ ಎಲಿಜಬೆತ್ II ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ವೈದ್ಯರು ಬ್ರಿಟನ್ ರಾಣಿ ಎಲಿಜಬೆತ್ II ಅವರ ಆರೋಗ್ಯದ ಕುರಿತು ಚಿಂತಿತರಾಗಿದ್ದಾರೆ ಎಂದು ಅಧಿಕೃತ ಮಾಹಿತಿಯಲ್ಲಿ ಹೊರಬಿದ್ದಿದೆ. ಅವರ ಆರೋಗ್ಯದ (Queen Elizabeth II Health Update: ಕಾರಣಗಳಿಂದ ಪ್ರಮುಖ ಸಭೆಗಳನ್ನು ಸಹ ಬ್ರಿಟನ್ ರಾಣಿ ಎಲಿಜಬೆತ್ II ಮುಂದೂಡಿದ್ದಾರೆ ಎಂದು ವರದಿಯಾಗಿದೆ.

    96 ವರ್ಷದ ಬ್ರಿಟನ್ ರಾಣಿ ಎಲಿಜಬೆತ್ II ತಮ್ಮ ಖಾಸಗಿ ಮಂಡಳಿಯ ಸಭೆಯನ್ನು ರದ್ದುಗೊಳಿಸಿದ ಒಂದು ದಿನದ ನಂತರ ಈ ಪ್ರಕಟಣೆ ಹೊರಬಿದ್ದಿದೆ.



    ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್​ನಲ್ಲಿ ರಾಣಿ
    ಬ್ರಿಟನ್ ರಾಣಿ ಎಲಿಜಬೆತ್ II  ಅವರು ಆರಾಮದಾಯಕವಾಗಿರುವ  ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ಉಳಿದಿದ್ದಾರೆ. ಕಳೆದ ಬೇಸಿಗೆಯನ್ನು ಅಲ್ಲೇ ಅವರು ಕರೆದಿದ್ದಾರೆ ಎಂದು ಸಹ ಅರಮನೆಯ ಮೂಲಗಳು ತಿಳಿಸಿವೆ.

    ಬ್ರಿಟನ್ ಪ್ರಧಾನಿಗೆ ಮಾಹಿತಿ ರವಾನೆ
    ಬ್ರಿಟನ್ ರಾಣಿ ಎಲಿಜಬೆತ್ II ಅವರ ಆರೋಗ್ಯದ ಕುರಿತು ಬ್ರಿಟನ್ ಹೊಸ ಪ್ರಧಾನಿ ಲಿಜ್ ಟ್ರಸ್ ಮತ್ತು ಅವರ ತಂಡದ ಹಿರಿಯ ಸದಸ್ಯರಿಗೆ ಟಿಪ್ಪಣಿಗಳನ್ನು ರವಾನಿಸಲಾಗಿದೆ.

    ಇದನ್ನೂ ಓದಿ: Basant Soren: ಒಳಉಡುಪು ಖರೀದಿಸಲು ದೆಹಲಿಗೆ ಬಂದಿದ್ದೆ ಎಂದ ಶಾಸಕ; ವ್ಯಾಪಕ ಟೀಕೆ

    ಬ್ರಿಟನ್ ರಾಣಿ ಎಲಿಜಬೆತ್ II ಅವರ ಆರೋಗ್ಯದ ಕುರಿತು ಈ ಪ್ರಕಟಣೆಗೆ ಪ್ರತಿಕ್ರಿಯೆ ನೀಡಿರುವ ಬ್ರಿಟಿಷ್ ಪ್ರಧಾನ ಮಂತ್ರಿ ಲಿಜ್ ಟ್ರಸ್ ಅವರು "ಈ ಸಮಯದಲ್ಲಿ ಬಕಿಂಗ್ಹ್ಯಾಮ್ ಅರಮನೆಯಿಂದ ಬರುವ ಸುದ್ದಿಯಿಂದ ಇಡೀ ದೇಶವು ಆಳವಾಗಿ ಚಿಂತಿತವಾಗಲಿದೆ" ಎಂದು ಹೇಳಿದ್ದಾರೆ.

    ಇದನ್ನೂ ಓದಿ: Mosque In Water: ನೀರಿನಿಂದ ಮೇಲೆದ್ದ ಮಸೀದಿ! ಕುತೂಹಲದಲ್ಲಿ ಮುಸ್ಲಿಂ ಸಮುದಾಯ

    ಸಿಂಹಾಸನದ ಉತ್ತರಾಧಿಕಾರಿ, 73 ವರ್ಷದ ಪ್ರಿನ್ಸ್ ಚಾರ್ಲ್ಸ್ ಮತ್ತು ಅವರ ಹಿರಿಯ ಮಗ ಪ್ರಿನ್ಸ್ ವಿಲಿಯಂ, 40, ರಾಣಿಯ ಸ್ಕಾಟಿಷ್ ಹೈಲ್ಯಾಂಡ್ಸ್ ರಿಟ್ರೀಟ್ ಬಾಲ್ಮೊರಲ್‌ಗೆ ಹೋಗುತ್ತಿದ್ದರು ಎಂದು ಅವರ ಕ್ಲಾರೆನ್ಸ್ ಹೌಸ್ ಮತ್ತು ಕೆನ್ಸಿಂಗ್ಟನ್ ಅರಮನೆಯ ಕಚೇರಿಗಳು ತಿಳಿಸಿವೆ.

    ಕಾಂಗ್ರೆಸ್ ಮತ್ತೆ ಎದ್ದು ಬರಲಿದೆ; ವಿದೇಶದಿಂದ ಸೋನಿಯಾ ಗಾಂಧಿ ವ್ಯಾಖ್ಯಾನ
    ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ಪಕ್ಷದ ಪುನರುಜ್ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಕಾಂಗ್ರೆಸ್ ಅಧಿಕಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ. ಸಂಸದ ಮತ್ತು ಅವರ ಮಗ ರಾಹುಲ್ ಗಾಂಧಿ  ಭಾರತ್ ಜೋಡೋ ಯಾತ್ರೆಯ 2ನೇ ದಿನದ ಪ್ರಚಾರವನ್ನು ಕನ್ಯಾಕುಮಾರಿಯ ಅಗಸ್ತೇಶ್ವರಂನಲ್ಲಿ ಪ್ರಾರಂಭಿಸುವ ಮುನ್ನ ಸೋನಿಯಾ ಗಾಂಧಿ ಈ ವ್ಯಾಖ್ಯಾನ ಮಾಡಿದ್ದಾರೆ. ಸದ್ಯ ಸೋನಿಯಾ ಗಾಂಧಿ ಆರೋಗ್ಯ ತಪಾಸಣೆಗಾಗಿ ವಿದೇಶದಲ್ಲಿದ್ದು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

    ಈ ಯಾತ್ರೆಯು ಭಾರತೀಯ ರಾಜಕೀಯ ಇತಿಹಾಸದಲ್ಲಿ ಒಂದು ಪರಿವರ್ತನಾ ಕ್ಷಣವಾಗಲಿದೆ ಎಂದು ಪಕ್ಷದ ಮುಖ್ಯಸ್ಥರೂ ಆಗಿರುವ ಸೋನಿಯಾ ಗಾಂಧಿ ವ್ಯಾಖ್ಯಾನಿಸಿದ್ದಾರೆ.

    ಭೌತಿಕವಾಗಿ ಭಾಗವಹಿಸಲು ಸಾಧ್ಯವಿಲ್ಲವೇ?
    ಭಾರತ್ ಜೋಡೋ ಯಾತ್ರೆಯಲ್ಲಿ ಭೌತಿಕವಾಗಿ ಭಾಗವಹಿಸಲು ಸಾಧ್ಯವಿಲ್ಲದವರು ಉತ್ಸಾಹಭರಿತ ಚಿಂತನೆಯ ಮೂಲಕ ಭಾಗವಹಿಸುತ್ತಾರೆ. ಬನ್ನಿ, ಒಗ್ಗಟ್ಟಿನಿಂದ ಮುನ್ನಡೆಯಲು ಪ್ರತಿಜ್ಞೆ ಮಾಡೋಣ ಎಂದು ಕಾಂಗ್ರೆಸ್ ವಕ್ತಾರೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆಯು ಕಾಂಗ್ರೆಸ್‌ಗೆ ಐತಿಹಾಸಿಕ ಕ್ಷಣವಾಗಿದೆ. ಪಾದಯಾತ್ರೆಯು ಕಾಂಗ್ರೆಸ್‌ನ ಪುನಶ್ಚೇತನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
    Published by:guruganesh bhat
    First published: