Queen Elizabeth II: ಯಾವೆಲ್ಲಾ ದೇಶದ ನಾಯಕರು ಭಾಗಿಯಾಗ್ತಾರೆ ರಾಣಿ ಅಂತ್ಯಕ್ರಿಯೆಯಲ್ಲಿ? ಇಲ್ಲಿದೆ ಮಾಹಿತಿ

ರಾಣಿಯ ಅಂತ್ಯಕ್ರಿಯೆಯು ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ನಡೆಯಲಿದ್ದು, ವಿಶ್ವದ ಪ್ರಮುಖ ನಾಯಕರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. 500 ಜನ ಗಣ್ಯರು ಸೇರಿದಂತೆ ಪ್ರಪಂಚದಾದ್ಯಂತದ ಸುಮಾರು 2,000 ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.

ರಾಣಿ ಎಲಿಜಬೆತ್ - II ಅಂತ್ಯಕ್ರಿಯೆ

ರಾಣಿ ಎಲಿಜಬೆತ್ - II ಅಂತ್ಯಕ್ರಿಯೆ

  • Share this:
ಬ್ರಿಟನ್ ರಾಣಿ ಎಲಿಜಬೆತ್-II (Queen Elizabeth II of Britain) ನಮ್ಮನ್ನೆಲ್ಲ ಅಗಲಿ ವಾರಗಳೇ ಕಳೆದು ಹೋಗಿವೆ. ರಾಣಿಯ ಅಂತ್ಯಕ್ರಿಯೆಯು ಆಕೆಯ ಮರಣದ 10 ದಿನಗಳ ನಂತರ ನಡೆಯಲಿದ್ದು, ಹಲವಾರು ನೀತಿ, ನಿಯಮಾವಳಿಗಳು ಈಗಾಗಲೇ ಜಾರಿಯಾಗಿವೆ. ಒಂದು ಐತಿಹಾಸಿಕ ದಿನಕ್ಕೆ (Historic Day) ಸಾಕ್ಷಿಯಾಗಲಿರುವ ಸೆಪ್ಟೆಂಬರ್ 19ಕ್ಕೆ ಬೇಕಾಗಿರುವ ಎಲ್ಲಾ ತಯಾರಿಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ. ಅಂತ್ಯಕ್ರಿಯೆಗೆ ಆಗಮಿಸುವ ಜನಸಾಮಾನ್ಯರಿಂದ ಹಿಡಿದು ವಿಶ್ವನಾಯಕರವರೆಗೆ ಎಲ್ಲರಿಗೂ ಕೆಲವು ನೀತಿ-ನಿಯಮಗಳನ್ನು ಹೊರಡಿಸಲಾಗಿದೆ. ರಾಣಿಯ ಅಂತ್ಯಕ್ರಿಯೆಯು ( Queen's Funeral) ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ನಡೆಯಲಿದ್ದು, ವಿಶ್ವದ ಪ್ರಮುಖ ನಾಯಕರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

500 ಜನ ಗಣ್ಯರು ಸೇರಿದಂತೆ ಪ್ರಪಂಚದಾದ್ಯಂತದ ಸುಮಾರು 2,000 ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಅಂತ್ಯಕ್ರಿಯೆಯು ಸೆಪ್ಟೆಂಬರ್ 19 ರಂದು ಮಧ್ಯಾಹ್ನ 3:30 ಕ್ಕೆ (ಭಾರತೀಯ ಕಾಲಮಾನ) ಪ್ರಾರಂಭವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಯಾವೆಲ್ಲಾ ವಿಶ್ವ ನಾಯಕರು ರಾಣಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ?
ಯುಕೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವ ಎಲ್ಲಾ ರಾಷ್ಟ್ರಗಳ ನಾಯಕರಿಗೆ ಆಹ್ವಾನಗಳನ್ನು ನೀಡಲಾಗಿದೆ. ರಾಣಿಯ ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಶ್ವನಾಯಕರು ಬರಲಿದ್ದಾರೆ ಎಂದು ನೀರೀಕ್ಷಿಸಲಾಗಿದೆ. ಯುಎಸ್ ಅಧ್ಯಕ್ಷ ಜೋ ಬಿಡನ್ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ತಮ್ಮ ಯೋಜನೆಯನ್ನು ಈಗಾಗಲೇ ಸುದ್ದಿಗಾರರಿಗೆ ತಿಳಿಸಿದ್ದು, ಕೆಲವು ಇತರ ವಿಶ್ವ ನಾಯಕರು ಪಾಲ್ಗೊಳ್ಳುವ ಸಾಧ್ಯತೆಯನ್ನು ಸಹ ದೃಢಪಡಿಸಿದ್ದಾರೆ. ಜೋ ಬಿಡನ್ ತಮ್ಮ ಪತ್ನಿ ಜೊತೆಗೆ ಬರುವುದಾಗಿ ಹೇಳಿ ಕೊಂಡಿದ್ದಾರೆ.

ಇದನ್ನೂ ಓದಿ:  Queen Elizabeth-II Funeral: ರಾಣಿಯ ಅಂತ್ಯಕ್ರಿಯೆಗೆ ಬರುವ ವಿದೇಶಿ ಗಣ್ಯರು ಖಾಸಗಿ ವಿಮಾನ, ಕಾರು ಬಳಸುವಂತಿಲ್ಲ!

ಸಮಾರಂಭಕ್ಕೆ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ನ್ಯೂಜಿಲೆಂಡ್‌ನ ಪ್ರಧಾನಿ ಜಸಿಂಡಾ ಅರ್ಡೆರ್ನ್ ಸಹ ಭಾಗವಹಿಸಲಿದ್ದಾರೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ತಮ್ಮ ಉಪಸ್ಥಿತಿ ಬಗ್ಗೆ ಖಚಿತಪಡಿಸಿದ್ದಾರೆ.

ಭಾರತ ದೇಶಕ್ಕೂ ಆಹ್ವಾನ
ಭಾರತಕ್ಕೂ ರಾಣಿ ಅಂತ್ಯಕ್ರಿಯೆಗೆ ಆಹ್ವಾನ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಹೋಗುವ ಬಗ್ಗೆ ಇನ್ನೂ ಯಾವುದೇ ರೀತಿಯ ಖಚಿತತೆಯನ್ನು ನೀಡಿಲ್ಲ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಕೂಡ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ.

ಆಮಂತ್ರಣಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗಿರುವ ಇತರ ಅಂತರರಾಷ್ಟ್ರೀಯ ನಾಯಕರಲ್ಲಿ ಐರಿಶ್ ಟಾವೊಸೆಚ್ ಮೈಕೆಲ್ ಮಾರ್ಟಿನ್, ಜರ್ಮನ್ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್, ಇಟಾಲಿಯನ್ ಅಧ್ಯಕ್ಷ ಸೆರ್ಗಿಯೋ ಮ್ಯಾಟ್ರೆಲ್ಲಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಕೂಡ ಹಾಜರಿರಲಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್-ಯೋಲ್ ರಾಣಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಜಪಾನಿನ ಚಕ್ರವರ್ತಿ ನರುಹಿಟೊ ಕೂಡ ವೆಸ್ಟ್‌ ಮಿನಿಸ್ಟರ್‌ ಗೆ ಪ್ರಯಾಣಿಸುವ ನಿರೀಕ್ಷೆಯಿದೆ.

ರಾಣಿಯ ಅಂತ್ಯಕ್ರಿಯೆಯಲ್ಲಿ ಈ ದೇಶಗಳು ಭಾಗವಹಿಸುತ್ತಿಲ್ಲ
ಉಕ್ರೇನ್ ಆಕ್ರಮಣದ ನಂತರ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಕ್ರೆಮ್ಲಿನ್ ಅಧಿಕಾರಿಗಳನ್ನು ಕಪ್ಪುಪಟ್ಟಿಗೆ ಸೇರಿಸಿರುವುದರಿಂದ, ಇವರಿಗೆ ಸಮಾರಂಭದ ಆಹ್ವಾನ ಹೋಗಿಲ್ಲ ಎನ್ನಲಾಗಿದೆ. ಇನ್ನೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಪ್ರಯಾಣಿಸುವ ನಿರೀಕ್ಷೆಯಿಲ್ಲ ಎಂದು ಮೂಲಗಳು ತಿಳಿಸಿವೆ.

ಇನ್ನೂ ಸಮಾರಂಭಕ್ಕೆ ಉತ್ತರ ಕೊರಿಯಾ ತನ್ನ ಪ್ರತಿನಿಧಿಯನ್ನು ಕಳುಹಿಸುತ್ತದೆಯೇ ಎಂಬುದರ ಬಗ್ಗೆ ಅಧಿಕೃತ ಮಾಹಿತಿಗಳಿಂದ ಇನ್ನೂ ತಿಳಿದು ಬಂದಿಲ್ಲ. 2000ರಲ್ಲಿ, ಉತ್ತರ ಕೊರಿಯಾ ಮತ್ತು ಯುಕೆ ನಡುವೆ ರಾಜತಾಂತ್ರಿಕ ಸಂಬಂಧಗಳು ಏರ್ಪಟ್ಟವಾದರೂ, ರಾಣಿಯು ತನ್ನ ಸುದೀರ್ಘ ಆಳ್ವಿಕೆಯಲ್ಲಿ ಒಂದು ಬಾರಿಯೂ ಉತ್ತರ ಕೊರಿಯಾಗೆ ಪ್ರಯಾಣಿಸಿರಲಿಲ್ಲ, ಇದು ಉತ್ತರ ಕೊರಿಯಾ ಭಾಗವಹಿಸದೇ ಇರುವುದಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

ಇದನ್ನೂ ಓದಿ:  Queen Elizabeth ಬರೆದ ಪತ್ರ ಓದಲು ಇನ್ನೂ 63 ವರ್ಷ ಕಾಯಬೇಕಂತೆ! ಅಷ್ಟಕ್ಕೂ ಅಂಥದ್ದೇನಿದೆ ಅದರಲ್ಲಿ?

ರಾಣಿ ಅಂತ್ಯಕ್ರಿಯೆಗೆ ಭಾಗವಹಿಸುವ ನಾಯಕರಿಗೆ ಖಾಸಗಿ ವಿಮಾನ ಮತ್ತು ಕಾರನ್ನು ಬಳಸದಂತೆ ಸೂಚನೆ ಹೊರಡಿಸಲಾಗಿದೆ.
Published by:Ashwini Prabhu
First published: