Queen Elizabeth II: ರಾಣಿಯ ಅಂತ್ಯಕ್ರಿಯೆಗೆ ಮಿಲಿಟರಿ ಸಮವಸ್ತ್ರ ಧರಿಸದ ಪ್ರಿನ್ಸ್ ಹ್ಯಾರಿ, ಕಾರಣವೇನು?

Queen Elizabeth II Funeral: ಸೋಮವಾರ, ದಿವಂಗತ ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆಯು ವೆಸ್ಟ್‌ಮಿನಿಸ್ಟರ್ ಹಾಲ್‌ನಿಂದ ವೆಸ್ಟ್‌ಮಿನಿಸ್ಟರ್ ಅಬ್ಬೆವರೆಗೆ ಮೆರವಣಿಗೆಯೊಂದಿಗೆ ಸರ್ಕಾರಿ ಗೌರವಗಳೊಂದಿಗೆ ನಡೆದಿದೆ. ಈ ಸಮಯದಲ್ಲಿ, ಕಿಂಗ್ ಚಾರ್ಲ್ಸ್ III, ಪ್ರಿನ್ಸೆಸ್ ಅನ್ನಿ, ಪ್ರಿನ್ಸ್ ಎಡ್ವರ್ಡ್ ಮತ್ತು ಪ್ರಿನ್ಸ್ ವಿಲಿಯಂ ಅವರು ಮಿಲಿಟರಿ ಸಮವಸ್ತ್ರವನ್ನು ಧರಿಸಿದ್ದರು, ಆದರೆ ಪ್ರಿನ್ಸ್ ಆಂಡ್ರ್ಯೂ ಮತ್ತು ಪ್ರಿನ್ಸ್ ಹ್ಯಾರಿ ಅವರು ಧರಿಸಿರಲಿಲ್ಲ. ಈ ಬಗ್ಗೆ ಅನೇಕ ಸಂಶಯಗಳು ಹುಟ್ಟಿಕೊಂಡಿವೆ.

ಪ್ರಿನ್ಸ್ ಹ್ಯಾರಿ

ಪ್ರಿನ್ಸ್ ಹ್ಯಾರಿ

  • Share this:
ಬ್ರಿಟನ್(ಸೆ.20): ಬ್ರಿಟನ್‌ನ ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆ (Queen Elizabeth II Funeral)  ಸಮಾರಂಭದಲ್ಲಿ ಸೋಮವಾರ ರಾಜಮನೆತನದ ಅನೇಕ ಸದಸ್ಯರು ಮಿಲಿಟರಿ ಸಮವಸ್ತ್ರದಲ್ಲಿ (Military Uniform) ಕಂಡು ಬಂದಿದ್ದರೆ, ಇನ್ನು ಕೆಲವರು ಸೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವೆಸ್ಟ್‌ಮಿನಿಸ್ಟರ್ ಹಾಲ್‌ನಿಂದ ವೆಸ್ಟ್‌ಮಿನಿಸ್ಟರ್ ಅಬ್ಬೆಗೆ ಮೆರವಣಿಗೆಯೊಂದಿಗೆ ಸರ್ಕಾರಿ ಗೌರವಗಳೊಂದಿಗೆ ದಿವಂಗತ ರಾಣಿಯ ಅಂತ್ಯಕ್ರಿಯೆ ಪ್ರಾರಂಭವಾಯಿತು. ಈ ಸಮಯದಲ್ಲಿ, ಕಿಂಗ್ ಚಾರ್ಲ್ಸ್ III, ಪ್ರಿನ್ಸೆಸ್ ಅನ್ನಿ, ಪ್ರಿನ್ಸ್ ಎಡ್ವರ್ಡ್ ಮತ್ತು ಪ್ರಿನ್ಸ್ ವಿಲಿಯಂ ಅವರು ಮಿಲಿಟರಿ ಸಮವಸ್ತ್ರವನ್ನು ಧರಿಸಿದ್ದರು, ಆದರೆ ಪ್ರಿನ್ಸ್ ಆಂಡ್ರ್ಯೂ ಮತ್ತು ಪ್ರಿನ್ಸ್ ಹ್ಯಾರಿ (Prince Harry) ಅವರು ಧರಿಸಿರಲಿಲ್ಲ. ಅವರ ಈ ನಡೆ ಅನೇಕ ಅನುಮಾನಗಳಿಗಡೆ ಎಡೆ ಮಾಡಿಕೊಟ್ಟಿದೆ.

ಆದಾಗ್ಯೂ, ಇದನ್ನು ಬಕಿಂಗ್ಹ್ಯಾಮ್ ಅರಮನೆಯು ಈ ಬಗ್ಗೆ ಮೊದಲೇ ಸ್ಪಷ್ಟನೆ ನೀಡಿರುವುದಾಗಿ ವರದಿಗಳು ಉಲ್ಲೇಖಿಸಿವೆ. ಮಾಧ್ಯಮ ವರದಿಗಳ ಪ್ರಕಾರ, ಮಿಲಿಟರಿ ಶ್ರೇಣಿಯನ್ನು ಹೊಂದಿರುವ ರಾಜಮನೆತನದ ಕೆಲಸ ಮಾಡುವ ಸದಸ್ಯರು ಮಾತ್ರ ರಾಣಿಯ ಅಂತ್ಯಕ್ರಿಯೆಯವರೆಗೂ ಮತ್ತು ನಡೆಯುವ ಘಟನೆಗಳ ಸಮಯದಲ್ಲಿ ಮಿಲಿಟರಿ ಸಮವಸ್ತ್ರವನ್ನು ಧರಿಸುತ್ತಾರೆ. ಆಂಡ್ರ್ಯೂ ಮತ್ತು ಹ್ಯಾರಿ ಇಬ್ಬರೂ ರಾಜಮನೆತನ ಈಗಾಗಲೇ ತೊರೆದಿದ್ದಾರೆ. ಈ ಕಾರಣದಿಂದಾಗಿ, ಅವರು ಮೆರವಣಿಗೆಯಲ್ಲಿ ಸೇರಲು ಡಾರ್ಕ್ ಸೂಟ್‌ಗಳನ್ನು ಧರಿಸಿದ್ದರು. ತನ್ನ ಸೋದರ ಸಂಬಂಧಿ ಪ್ರಿನ್ಸ್ ಹ್ಯಾರಿಯೊಂದಿಗೆ ಹೆಜ್ಜೆ ಹಾಕಿದ ಪೀಟರ್ ಫಿಲಿಪ್ಸ್ ಅವರು ಮಿಲಿಟರಿ ಶ್ರೇಣಿಯನ್ನು ಹೊಂದಿಲ್ಲದ ಕಾರಣ ಸೂಟ್ ಧರಿಸಿದ್ದರು.

ಇದನ್ನೂ ಓದಿ: Elizabeth's Funeral: ಇಂದು ನಡೆಯಲಿದೆ ಬ್ರಿಟನ್‌ ರಾಣಿ ಅಂತ್ಯಕ್ರಿಯೆ, ರಾಷ್ಟ್ರಪತಿ ಮುರ್ಮು ಸೇರಿ ಹಲವು ಗಣ್ಯರಿಂದ ಅಂತಿಮ ನಮನ

ಅದೇ ಸಮಯದಲ್ಲಿ, ಪ್ರಿನ್ಸ್ ಹ್ಯಾರಿಗೆ ಮಿಲಿಟರಿ ಸಮವಸ್ತ್ರವನ್ನು ಧರಿಸಲು ಅನುಮತಿಸದಿರುವ ಬಗ್ಗೆ ನೆಟಿಜನ್‌ಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಬಳಕೆದಾರರು ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದಿದ್ದು, 'ನಾನು ಒಪ್ಪದ ಒಂದು ವಿಷಯವೆಂದರೆ ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯಲ್ಲಿ ಪ್ರಿನ್ಸ್ ಹ್ಯಾರಿಗೆ ತನ್ನ ಮಿಲಿಟರಿ ಸಮವಸ್ತ್ರವನ್ನು ಧರಿಸಲು ಅನುಮತಿಸದಿರುವುದು. ಅವರು ಅಫ್ಘಾನಿಸ್ತಾನದ ಎರಡು ಪ್ರವಾಸಗಳಲ್ಲಿ ಸೇವೆ ಸಲ್ಲಿಸಿದ ರಾಜಮನೆತನದ ಏಕೈಕ ಸದಸ್ಯರಾಗಿದ್ದರು. ಹೀಗಾಗಿ ಅವರು ಸಮವಸ್ತ್ರ ಧರಿಸುತ್ತಾರೆಂದುಕೊಮಡಿದ್ದೆ’ ಎಂದು ಹೇಳಿದ್ದಾರೆ.

After death of British Queen Elizabeth II and Camilla will wear the Kohinoor crown here know

ಈ ಕುರಿತು ಪ್ರತಿಕ್ರಿಯಿಸಿರುವ ಕ್ಲೈವ್ ಹಿಲ್ 'ಪ್ರಿನ್ಸ್ ಹ್ಯಾರಿ ಮಿಲಿಟರಿ ಸಮವಸ್ತ್ರವನ್ನು ಏಕೆ ಧರಿಸಿಲ್ಲ ಎಂದು ಕೇಳುವ ಎಲ್ಲಾ ನಾಗರಿಕರಿಗೆ ಹೇಳಲಿಚ್ಛಿಸುವುದು ಏನೆಂದರೆ, ಅವರು ಯಾವುದೇ ಘಟಕದ ಕರ್ನಲ್ ಇನ್ ಚೀಫ್ ಅಲ್ಲ. ಅವರು ಸೇವೆ ಸಲ್ಲಿಸುತ್ತಿಲ್ಲ ಮತ್ತು ಅವರು ಸೈನ್ಯವನ್ನು ತೊರೆದಾಗ ಅವರು ತಮ್ಮ ಆಯೋಗಕ್ಕೆ ರಾಜೀನಾಮೆ ನೀಡಿದ್ದರು ಎಂದಿದ್ದಾರೆ. ಇನ್ನು ಕ್ಲೈವ್​ ಹಿಲ್ ಬಯೋದಲ್ಲಿ ಅವರು ತಾನೊಬ್ಬ ಮಾಜಿ ಸೈನಿಕ ಎಂದು ಬರೆದುಕೊಂಡಿದ್ದಾರೆ.

ರಾಣಿ ಎಲಿಜಬೆತ್ ಅಂತ್ಯಕ್ರಿಯೆ ಯಾವಾಗ?
 ಭಾರತೀಯ ಕಾಲಮಾನದ ಪ್ರಕಾರ ಇಂದು ಅಂದರೆ, ಸೆಪ್ಟೆಂಬರ್ 19, 2022, ಸೋಮವಾರ ಮಧ್ಯರಾತ್ರಿ 12ಕ್ಕೆ ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಸೇಂಟ್‌ ಜಾರ್ಜ್‌ ಚಾಪೆಲ್‌ನ ರಾಯಲ್‌ ವಾಲ್ಟ್‌ನಲ್ಲಿ ಅವರ ಪತಿ ಪ್ರಿನ್ಸ್‌ ಫಿಲಿಪ್‌ ಅವರ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಲಾಗುತ್ತದೆ.


10 ದಿನಗಳ ಶೋಕಾಚರಣೆ ಬಳಿಕ ಅಂತ್ಯಕ್ರಿಯೆ


ಸ್ಕಾಟ್ಲೆಂಡ್‌ನ ಬಾಲ್ಮೊರಲ್ ಕ್ಯಾಸ್ಟಲ್ ಅರಮನೆಯಲ್ಲಿ (Balmoral Castle Palace in Scotland) ಇದೇ ಸೆಪ್ಟೆಂಬರ್‌ 8ರಂದು ರಾಣಿ ಎಲಿಜಬೆತ್ ನಿಧನರಾಗಿದ್ದರು. ಅವರ ಸಾವಿನ ಹಿನ್ನೆಲೆಯಲ್ಲಿ ಬರೋಬ್ಬರಿ 10 ದಿನಗಳ ಕಾಲ ಶೋಕಾಚರಣೆ (mourning) ನಡೆದಿತ್ತು. ಬ್ರಿಟನ್‌ನಾದ್ಯಂತ ಯಾವುದೇ ಸಾರ್ವಜನಿಕ ಸಮಾರಂಭ, ಸಂತೋಷ ಕೂಟ, ಉತ್ಸವ ಇತ್ಯಾದಿಗಳನ್ನು ರದ್ದುಗೊಳಿಸಲಾಗಿತ್ತು. ಆ ಮೂಲಕ ರಾಣಿಗೆ ಗೌರವಪೂರ್ವಕ ವಿದಾಯ ಸಲ್ಲಿಸಲಾಗಿತ್ತು.ಇದನ್ನೂ ಓದಿ: Corgi Dogs: ರಾಣಿ ಎಲಿಜಬೆತ್ ನಿಧನದ ನಂತರ ಅವರ ನಾಯಿಗಳನ್ನು ನೋಡಿಕೊಳ್ಳುವವರು ಯಾರು?

125 ಚಿತ್ರಮಂದಿರಗಳಲ್ಲಿ ನೇರ ಪ್ರಸಾರ

ರಾಣಿ ವಿಕ್ಟೋರಿಯಾ ಅಂತ್ಯಸಂಸ್ಕಾರಕ್ಕೆ ಬಳಸಲಾದ ಬಂದೂಕಿನ ಗಾಡಿಯಲ್ಲಿಯೇ ಎಲಿಜಬೆತ್ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲಾಗುತ್ತದೆ. ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ನಡೆಯುವ ಈ ಸಮಾರಂಭವನ್ನು ವಿಶ್ವದಾದ್ಯಂತ ನೂರಾರು ಕೋಟಿ ಜನರು ವೀಕ್ಷಿಸಲಿದ್ದಾರೆ. 142 ನಾವಿಕರು ಶವಪೆಟ್ಟಿಗೆಯನ್ನು ಹೊತ್ತ ಬಂದೂಕನ್ನು ಗಾಡಿಯನ್ನು ಎಳೆಯುತ್ತಾರೆ. ಬ್ರಿಟನ್​ನ ವಿವಿಧೆಡೆ ಇರುವ 125 ಚಿತ್ರಮಂದಿರಗಳಲ್ಲಿ ಅಂತ್ಯಕ್ರಿಯೆ ನೇರ ಪ್ರಸಾರವಾಗಲಿದೆ. ಪ್ರಮುಖ ಉದ್ಯಾನವನಗಳು, ಸರ್ಕಲ್​ಗಳು ಮತ್ತು ಕ್ಯಾಥೆಡ್ರೆಲ್​ಗಳಲ್ಲಿ ಅಂತ್ಯಸಂಸ್ಕಾರವನ್ನು ಸಾರ್ವಜನಿಕರು ನೋಡಬಹುದಾಗಿದೆ. ಇದಕ್ಕಾಗಿ ಬೃಹತ್ ಎಲೆಕ್ಟ್ರಿಕ್ ಪರದೆಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ವಿಶ್ವದ ಬೇರೆ ಬೇರೆ ದೇಶಗಳ ಜನರೂ ಸಹ ರಾಣಿಯ ಅಂತ್ಯ ಸಂಸ್ಕಾರ ನೋಡುತ್ತಾ, ಹಿರಿಯ ಜೀವಕ್ಕೆ ಗೌರವದ ವಿದಾಯ ಸಲ್ಲಿಸಲಿದ್ದಾರೆ.

Published by:Precilla Olivia Dias
First published: