Queen Elizabeth: ಬ್ರಿಟನ್ ರಾಣಿ ನಿಧನಕ್ಕೆ ಭಾರತದಲ್ಲೂ ಶೋಕಾಚರಣೆ; ಕೇಂದ್ರ ಘೋಷಣೆ

ರಾಣಿ ಎಲಿಜಬೆತ್ II ನಿಧನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11 ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ವೀನ್ ಎಲಿಜಬೆತ್

ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ವೀನ್ ಎಲಿಜಬೆತ್

 • Share this:
  ಬ್ರಿಟನ್ ರಾಣಿ ಎಲಿಜಬೆತ್ II ನಿಧನಕ್ಕೆ (Queen Elizabeth  II Died)  ಬ್ರಿಟನ್​ನಲ್ಲೇನೋ 10 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಇದೀಗ ಭಾರತದಲ್ಲೂ 1 ದಿನಗಳ ಶೋಕಾಚರಣೆ (Queen Elizabeth  II  Mourning In India) ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.  ಬ್ರಿಟನ್ ರಾಣಿ ಎಲಿಜಬೆತ್ II ನಿಧನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11 ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ಭಾರತ ಸರ್ಕಾರ (Indian Government) ನಿರ್ಧರಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

  ಬ್ರಿಟನ್‍ನ ರಾಣಿ ಎಲಿಜಬೆತ್ II ಅವರು ನವೆಂಬರ್ 13, 2015 ರಂದು ಲಂಡನ್‍ನಲ್ಲಿರುವ ಬಕಿಂಗ್‍ಹ್ಯಾಮ್ ಅರಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.

  ಜಾಗತಿಮ ಮನ್ನಣೆ ಪಡೆದಿದ್ದ ನಾಯಕಿ
  ಬ್ರಿಟನ್ ರಾಣಿ ಎಲಿಜಬೆತ್ II ನಿಧನರಾಗಿದ್ದಾರೆ. ಬ್ರಿಟನ್‌ನ ದೀರ್ಘಾವಧಿಯ ರಾಣಿ ಎಂದೇ ಖ್ಯಾತಿ ಪಡೆದಿದ್ದ ಅವರು ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕಿ ಎಂದೇ ಕ್ವೀನ್ ಎಲಿಜಬೆತ್ ಮನ್ನಣೆ ಗಳಿಸಿದ್ದರು. ಅಲ್ಲದೇ 2ನೇ ವಿಶ್ವಯುದ್ಧ, ಶೀತಲ ಸಮರ, ಕಮ್ಯುನಿಸಮ್ ಆಡಳಿತದ ಪತನ ಮತ್ತು ಅಂತರ್ಜಾಲ ಯುಗದ ಆರಂಭ ಉನ್ನತಿಗಳಂತಹ ಮಹತ್ವದ ಜಾಗತಿಕ ಬದಲಾವಣೆಗಳಿಗೆ ಅವರು ಸಾಕ್ಷಿಯಾಗಿದ್ದರು.  ಇದನ್ನೂ ಓದಿ: Queen Elizabeth II: ಪಿಎಂ ಮೋದಿ, ಪುಟಿನ್ ಸೇರಿ ವಿಶ್ವದ ಅಗ್ರ ನಾಯಕರೊಂದಿಗೆ ರಾಣಿ ಎಲಿಜಬೆತ್

  ರಾಣಿ ಎಲಿಜಬೆತ್ II 1947 ರಲ್ಲಿ ಪ್ರಿನ್ಸ್ ಫಿಲಿಪ್, ಡ್ಯೂಕ್ ಆಫ್ ಎಡಿನ್ಬರ್ಗ್ ಅವರನ್ನು ವಿವಾಹವಾಗಿದ್ದರು. ಅವರು ರಾಣಿಯಾಗುವ ಐದು ವರ್ಷಗಳ ಮೊದಲು ಪ್ರಿನ್ಸ್ ಫಿಲಿಪ್ ಏಪ್ರಿಲ್ 9, 2021 ರಂದು 99 ನೇ ವಯಸ್ಸಿನಲ್ಲಿ ನಿಧನರಾಗಿದ್ದರು.

  ರಾಜಕುಮಾರ ಚಾರ್ಲ್ಸ್​ಗೆ ಯೋಗ
  ಕೊನೆಗೂ 70 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ರಾಜಕುಮಾರ ಚಾರ್ಲ್ಸ್ (Prince Charles) ಅವರಿಗೆ ಯುಕೆಯ ರಾಜನಾಗುವ ಅದೃಷ್ಟ ಒಲಿದುಬಂದಿದೆ. ಗುರುವಾರದಂದು ಯುಕೆ ರಾಣಿ ಎಲಿಜಬೆತ್ (Queen Elizabeth) ಅವರ ನಿಧನದಿಂದಾಗಿ ಪ್ರಿನ್ಸ್ ಚಾರ್ಲ್ಸ್ ಅವರು ಈಗ ಯುನೈಟೆಡ್ ಕಿಂಗ್ಡಮ್ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ 14 ಕ್ಷೇತ್ರಗಳ ರಾಜನಾಗಿ ಅಧಿಕಾರಕ್ಕೆ ಬರಲಿದ್ದಾರೆ.

  ಇದನ್ನೂ ಓದಿ: Explained: ಬ್ರಿಟನ್​ಗೆ ಹೊಸ ರಾಜ ಬಂದಿದ್ದೇ ತಡ ದೇಶದ ಗೀತೆ, ಧ್ವಜ, ಕರೆನ್ಸಿಗಳೆಲ್ಲಾ ಚೇಂಜ್?!

  ಈ ರೀತಿ ರಾಜನ ಪದವಿಗಾಗಿ 70 ಕ್ಕೂ ಹೆಚ್ಚು ವರ್ಷಗಳ ಕಾಯುವಿಕೆ ಯುಕೆ ಇತಿಹಾಸದಲ್ಲೇ ಅತಿ ಸುದೀರ್ಘ ಕಾಯುವಿಕೆಯೂ ಆಗಿದೆ ಎಂಬುದು ವಿಶೇಷ. ಈಗ ಚಾರ್ಲ್ಸ್ ಅವರೇನೋ ರಾಜನಾಗಿದ್ದಾರೆ, ಆದರೆ ಅವರ ಮುಂದಿನ ಹಾದಿ ಅಷ್ಟೊಂದು ಸುಗಮ ಎನ್ನಲಾಗುವುದಿಲ್ಲ. 73 ರ ಪ್ರಾಯದ ಚಾರ್ಲ್ಸ್ ಅವರ ಮುಂದೆ ಸಾಕಷ್ಟು ಕಠಿಣಮಯವಾದ ಸವಾಲುಗಳಿವೆ.
  Published by:ಗುರುಗಣೇಶ ಡಬ್ಗುಳಿ
  First published: