HOME » NEWS » National-international » QUALCOMM VENTURES INVEST 730 CRORE IN JIO PLATFORMS SNVS

Jio-Qualcomm Deal - ಜಿಯೋಗೆ ಒಲಿದ 13ನೇ ಒಪ್ಪಂದ; ಕ್ವಾಲ್​ಕಾಮ್ ವೆಂಚರ್ಸ್​ನಿಂದ 730 ಕೋಟಿ ರೂ ಹೂಡಿಕೆ

ಜಿಯೋದ ಇತರ ಹೂಡಿಕೆದಾರರಂತೆ Qualcomm Ventures ಸಂಸ್ಥೆ ಕೂಡ 4.91 ಲಕ್ಷ ಕೋಟಿ ರೂ ಈಕ್ವಿಟಿ ವ್ಯಾಲುಯೇಷನ್ ಹಾಗೂ 5.16 ಲಕ್ಷ ಕೋಟಿ ಎಂಟರ್​​ಪ್ರೈಸ್ ವ್ಯಾಲುಯೇಷನ್ ದರದಲ್ಲಿ ಜಿಯೋದಲ್ಲಿ ಪಾಲು ಖರೀದಿ ಮಾಡಿದೆ.

news18-kannada
Updated:July 12, 2020, 9:25 PM IST
Jio-Qualcomm Deal - ಜಿಯೋಗೆ ಒಲಿದ 13ನೇ ಒಪ್ಪಂದ; ಕ್ವಾಲ್​ಕಾಮ್ ವೆಂಚರ್ಸ್​ನಿಂದ 730 ಕೋಟಿ ರೂ ಹೂಡಿಕೆ
ರಿಲಾಯನ್ಸ್ ಜಿಯೋ
  • Share this:
ಮುಂಬೈ(ಜುಲೈ 12): ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಡಿಜಿಟಲ್ ಅಂಗವಾದ ಜಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಮತ್ತೊಂದು ಕಂಪನಿ ಹೂಡಿಕೆ ಮಾಡಿದೆ. ಕ್ವಾಲ್​ಕಾಮ್ ವೆಂಚರ್ಸ್ ಸಂಸ್ಥೆ ಜಿಯೋ ಪ್ಲಾಟ್​ಫಾರ್ಮ್​​ಗಳಲ್ಲಿ 730 ಕೋಟಿ ರೂ ಮೊತ್ತದ ಶೇ. 0.15ರಷ್ಟು ಪಾಲು ಖರೀದಿಸಿದೆ.

ಕಳೆದ 3 ತಿಂಗಳ ಅವಧಿಯಲ್ಲಿ ಜಿಯೋ ಪ್ಲಾಟ್​ಫಾರ್ಮ್​​ಗಳಲ್ಲಿ ಹೂಡಿಕೆ ಮಾಡಲು ಆಗಿರುವ 13ನೇ ಒಪ್ಪಂದ ಇದಾಗಿದೆ. ವಿಶ್ವದ ಕೆಲ ಅಗ್ರಗಣ್ಯ ಸಂಸ್ಥೆಗಳು ಜಿಯೋದೊಂದಿಗೆ ವ್ಯಾವಹಾರಿಕವಾಗಿ ಭಾಗಿಯಾಗಿವೆ. ಫೇಸ್​ಬುಕ್, ಸಿಲ್ವರ್ ಲೇಕ್ ಪಾರ್ಟ್ನರ್ಸ್, ಕೆಕೆಆರ್, ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್ ಮೊದಲಾದ ಸಂಸ್ಥೆಗಳು ಜಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಹೂಡಿಕೆ ಮಾಡಿವೆ. ಈ 13 ಒಪ್ಪಂದಗಳಿಂದ ಜಿಯೋಗೆ 1.18 ಲಕ್ಷ ಕೋಟಿ ಬಂಡವಾಳ ಹರಿದುಬಂದಂತಾಗಿದೆ.

ಇತರ ಹೂಡಿಕೆದಾರರಂತೆ Qualcomm Ventures ಸಂಸ್ಥೆ ಕೂಡ 4.91 ಲಕ್ಷ ಕೋಟಿ ರೂ ಈಕ್ವಿಟಿ ವ್ಯಾಲುಯೇಷನ್ ಹಾಗೂ 5.16 ಲಕ್ಷ ಕೋಟಿ ಎಂಟರ್ಪ್ರೈಸ್ ವ್ಯಾಲುಯೇಷನ್ ದರದಲ್ಲಿ ಜಿಯೋದಲ್ಲಿ ಪಾಲು ಖರೀದಿ ಮಾಡಿದೆ.

ಇದನ್ನೂ ಓದಿ: Intel-Jio Deal: ಜಿಯೋ ಮೇಲೆ 12ನೇ ಹೂಡಿಕೆ; 0.39 ಪಾಲನ್ನು 1,894 ಕೋಟಿ ರೂಪಾಯಿಗೆ ಖರೀದಿಸಿದ ಇಂಟೆಲ್

ವಿಶ್ವದೆಲ್ಲೆಡೆ ಆರ್ಥಿಕ ಹಿಂಜರಿತ ಇದ್ದರೂ ಜಿಯೋ ಸಂಸ್ಥೆ ಪ್ರಮುಖ ಸಂಸ್ಥೆಗಳಿಂದ ಬಂಡವಾಳ ಆಕರ್ಷಿಸುತ್ತಿದೆ. ಇದು ಜಿಯೋದ ತಾಂತ್ರಿಕ ಸಾಮರ್ಥ್ಯ, ವ್ಯಾವಹಾರಿಕ ವೈಪುಣ್ಯತೆ, ದೀರ್ಘಾವಧಿ ಪ್ರಗತಿಯ ಗುರಿ, ಭಾರತದ ಡಿಜಿಟಲ್ ಕ್ಷೇತ್ರದ ಮುಂಚೂಣಿಯಲ್ಲಿರುವುದು ಪ್ರಮುಖ ಕಾರಣವಾಗಿವೆ.

ಅಮೆರಿಕದ ಸಿಲಿಕಾನ್ ವ್ಯಾಲಿ ಕ್ಯಾಲಿಫೋರ್ನಿಯಾದಲ್ಲಿ ಮುಖ್ಯಕಚೇರಿ ಹೊಂದಿರುವ ಕ್ವಾಲ್​ಕಾಮ್​ನ ಹೂಡಿಕೆ ಅಂಗವಾದ ಕ್ವಾಲ್​ಕಾಮ್ ವೆಂಚರ್ಸ್ 2000ರಿಂದಲೂ ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಾ ಬಂದಿದೆ. ಮುಂದಿನ ತಲೆಮಾರಿನ ವೈರ್​ಲೆಸ್ (ನಿಸ್ತಂತು) ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕ್ವಾಲ್​ಕಾಮ್ ಸಂಸ್ಥೆ ಸ್ಥಾಪಿತವಾಗಿದ್ದು 1985ರಲ್ಲಿ. ವೈರ್​ಲೆಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಾಫ್ಟ್​ವೇರ್, ಸೆಮಿಕಂಡಕ್ಟರ್ ಇತ್ಯಾದಿಗಳನ್ನ ಇದು ಪೂರೈಸುತ್ತದೆ.

ಈಗ ಭಾರತದ ಡಿಜಿಟಲ್ ಕ್ಷೇತ್ರದಲ್ಲಿ ಮುಂಚೂಣೀಯಲ್ಲಿರುವ ರಿಲಾಯನ್ಸ್ ಸಂಸ್ಥೆಯೊಂದಿಗೆ ಕ್ವಾಲ್​ಕಾಮ್ ಒಪ್ಪಂದ ಮಾಡಿಕೊಂಡಿರುವುದು ಗಮನಾರ್ಹ.ಇದನ್ನೂ ಓದಿ: Jio-L Catterton: ರಿಲಾಯನ್ಸ್​ನಲ್ಲಿ ಹೂಡಿಕೆ ಮಾಡಿದ 10ನೇ ಕಂಪನಿ

ಕಳೆದ 3 ತಿಂಗಳಲ್ಲಿ ಜಿಯೋದೊಂದಿಗೆ ಆಗಿರುವ ಹೂಡಿಕೆ ಒಪ್ಪಂದಗಳು ಹಾಗೂ ಅವುಗಳ ಮೊತ್ತ ಮತ್ತು ಪಾಲುಗಳ ವಿವರ:

1) ಫೇಸ್​ಬುಕ್: 43,573.62 ಕೋಟಿ ರೂ (ಶೇ. 9.99 ಪಾಲು)

2) ಸಿಲ್ವರ್ ಲೇಕ್ ಪಾರ್ಟ್ನರ್ಸ್: 6,655.75 (ಶೇ. 1.15)

3) ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್: 11,367.00 (ಶೇ. 2.32)

4) ಜನರಲ್ ಅಟ್ಲಾಂಟಿಕ್: 6,598.38 (ಶೇ. 1.34)

5) ಕೆಕೆಆರ್: 11,367.00 (ಶೇ. 2.32)

6) Mubadala: 9,093.60 (ಶೇ. 1.85)

7) ಸಿಲ್ವರ ಲೇಕ್ ಪಾರ್ಟ್ನರ್ಸ್ 2ನೇ ಹೂಡಿಕೆ: 4,546.80 (ಶೇ. 0.93)

8) ಅಬು ಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ: 5,683.50 (ಶೇ. 1.16)

9) ಟಿಪಿಜಿ: 4,546.80 (ಶೇ. 0.93)

10) ಎಲ್ ಕಾಟರ್​ಟನ್(L Catterton): 1,894.50 (ಶೇ 0.39)

11) ಪಿಐಎಫ್: 11,367.00 (ಶೇ. 2.32)

12) ಇಂಟೆಲ್ ಕ್ಯಾಪಿಟಲ್: 1,894.50 (ಶೇ. 0.39)

13) ಕ್ವಾಲ್​ಕಾಮ್ ವೆಂಚರ್ಸ್: 730 ಕೋಟಿ ರೂ (ಶೇ. 0.15 ಪಾಲು)
Published by: Vijayasarthy SN
First published: July 12, 2020, 8:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories