• Home
  • »
  • News
  • »
  • national-international
  • »
  • Fake Medicines Check: ನಕಲಿ ಔಷಧಿ ಕಂಡುಹಿಡಿಯೋಕೆ ಕ್ಯೂಆರ್ ಕೋಡ್! ಇಲ್ಲಿದೆ ಆ ಟ್ರಿಕ್

Fake Medicines Check: ನಕಲಿ ಔಷಧಿ ಕಂಡುಹಿಡಿಯೋಕೆ ಕ್ಯೂಆರ್ ಕೋಡ್! ಇಲ್ಲಿದೆ ಆ ಟ್ರಿಕ್

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಆಯ್ದ ಔಷಧಿಗಳನ್ನು ಬಾರ್ ಕೋಡ್, ಕ್ಯೂಆರ್ ಕೋಡ್ ವ್ಯಾಪ್ತಿಯಲ್ಲಿ ತರಲಿದ್ದು ತದನಂತರ ಕ್ರಮೇಣ ಇಡೀ ಫಾರ್ಮಾ ಕ್ಷೇತ್ರವನ್ನು ಇದರಡಿಯಲ್ಲಿ ತರಲು ಚಿಂತಿಸಲಾಗುತ್ತಿದೆ,

  • Share this:

ಇಂದಿನ ದಿನಮಾನಗಳಲ್ಲಿ ತಂತ್ರಜ್ಞಾನ ಸಾಕಷ್ಟು ಪ್ರಗತಿಸಿ ಸಾಧಿಸಿದೆ. ಅಂತೆಯೇ ಪ್ರಯೋಜನಗಳ ಜೊತೆ ದೋಷಗಳೂ ಸಹ ಕಂಡುಬರುತ್ತವೆ. ಅದರಲ್ಲೂ ವಿಶೇಷವಾಗಿ ಆರೋಗ್ಯ ಕ್ಷೇತ್ರ ಎಂಬುದು ಬಲು ಮಹತ್ತರವಾಗಿದ್ದು ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಹಾಗೂ ನೈಜವಾದ ಔಷಧಿಗಳ (Medicines)  ಅಗತ್ಯವಿರುತ್ತದೆ. ಆದರೆ, ದುರದೃಷ್ಟವಶಾತ್ ಈ ಕ್ಷೇತ್ರದಲ್ಲೂ ನಕಲಿ ಔಷಧಿಗಳೂ ಸಹ ಪ್ರಚಲಿತದಲ್ಲಿವೆ ಎಂಬುದು ತಲೆನೋವಿನ ಸಂಗತಿ. ಇದೀಗ ಕೇಂದ್ರವು ಸಾಕಷ್ಟು ಬೇಡಿಕೆಯಲ್ಲಿರುವ, ಹೆಚ್ಚು ಖರೀದಿಸಲ್ಪಡುವ ಸುಮಾರು 300 ಔಷಧಿಗಳ ತಯಾರಕರಿಗೆ ಅವರು ಉತ್ಪಾದಿಸುವ ಔಷಧಿಗಳ ಪೊಟ್ಟಣಗಳ ಮೇಲೆ ಬಾರ್ ಕೋಡ್ (Bar Code) ಅಥವಾ ಕ್ಯೂಆರ್ ಕೋಡ್ (QR Code) ನಮೂದಿಸುವಂತೆ ಶೀಘ್ರದಲ್ಲೇ ಸೂಚಿಸಲಿದೆ ಎಂದ ವರದಿಯಾಗಿದೆ.


ಈ ಮೂಲಕ ನೈಜವಾದ ಔಷಧಿಯ ಬಗ್ಗೆ ಮಾಹಿತಿಯನ್ನು ಹುಡುಕಿ ದೃಢಪಡಿಸಿಕೊಳ್ಳಬಹುದಾಗಿದೆ ಎಂಬುದು ಕೇಂದ್ರದ ಲೆಕ್ಕಾಚಾರವಾಗಿದೆ.


ವಿಶ್ವಸಂಸ್ಥೆಯ ವರದಿ
ಈ ನಡೆಯು ನಿಜಕ್ಕೂ ಭಾರತದಲ್ಲಿ ಸದ್ಯ ಮಾರಾಟವಾಗುತ್ತಿದೆ ಎನ್ನಲಾಗುವ ಕೆಲವು ನಕಲಿ ಔಷಧಿಗಳನ್ನು ಖರೀದಿಸಲಾಗದಂತೆ ಕಡಿವಾಣ ಹಾಕಲಿದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ವರದಿಯೊಂದರಲ್ಲಿ, ಜಾಗತಿಕವಾಗಿ ಮಾರಾಟವಾಗುವ ನಕಲಿ ಔಷಧಿಗಳಲ್ಲಿ ಸುಮಾರು 35 ಪ್ರತಿಶತದಷ್ಟು ಭಾರತದಿಂದ ಬರುತ್ತವೆ ಎಂದು ಉಲ್ಲೇಖಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.


ಭಾರತದ ನಡೆ
ಒಟ್ಟಿನಲ್ಲಿ ಈಗ ಸಾಕಷ್ಟು ಎತ್ತರಕ್ಕೆ ಬೆಳೆಯುತ್ತಿರುವ ಭಾರತ ತನ್ನಲ್ಲಿರುವ ಅಡೆ-ತಡೆಗಳನ್ನು ನಿವಾರಿಸುವ ಪ್ರಯತ್ನದಲ್ಲಿದೆ ಎಂದು ಹೇಳಬಹುದು. ಅದರ ಒಂದು ಭಾಗವಾಗಿ ಇದೀಗ ಕೇಂದ್ರವು ನಕಲಿ ಔಷಧಿಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಾರ್ ಕೋಡ್, ಕ್ಯೂಆರ್ ಕೋಡ್ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವ ಕುರಿತು ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿದ್ದು ಮುಂದಿನ ಕೆಲ ಸಮಯದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ಕೆಲ ವಿಶ್ವಾಸಾರ್ಹ ಮೂಲಗಳಿಂದ ನ್ಯೂಸ್ 18 ಮಾಧ್ಯಮಕ್ಕೆ ತಿಳಿದುಬಂದಿದೆ.


ಕಡ್ಡಾಯವಾಗಲಿದೆ ಈ ಕ್ರಮ
ಈ ಕ್ರಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು, "ಈ ಕ್ರಮವನ್ನು ಕಡ್ಡಾಯ ಮಾಡುವ ಕುರಿತು ನಿರ್ಧರಿಸಲಾಗಿದ್ದು ಮೊದಲಿಗೆ ಕೆಲವು ಆಯ್ದ ಔಷಧಿಗಳನ್ನು ಬಾರ್ ಕೋಡ್, ಕ್ಯೂಆರ್ ಕೋಡ್ ವ್ಯಾಪ್ತಿಯಲ್ಲಿ ತರಲಿದ್ದು ತದನಂತರ ಕ್ರಮೇಣ ಇಡೀ ಫಾರ್ಮಾ ಕ್ಷೇತ್ರವನ್ನು ಇದರಡಿಯಲ್ಲಿ ತರಲು ಚಿಂತಿಸಲಾಗುತ್ತಿದೆ. ಹಾಗಾಗಿ ಮೊದಲ ಹಂತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಹಾಗೂ ಖರೀದಿಸಲ್ಪಡುವ ಸುಮಾರು 300 ಔಷಧಿಗಳ ಮೇಲೆ ಬಾರ್/ಕ್ಯೂಆರ್ ಕೋಡ್ ತಂತ್ರಜ್ಞಾನ ಅನುಷ್ಠಾನ ಮಾಡುತ್ತಿರುವುದಾಗಿ" ಹೇಳಿದ್ದಾರೆ.


ಅಧಿಕಾರಿಗಳು ನೀಡಿದ ಸುಳಿವೇನು?
ಈಗ ಈ ಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿರುವ ಕೆಲವು ಭಾರತೀಯ ಬ್ರಾಂಡ್ ಗಳೆಂದರೆ ಅಲ್ಲೆಗ್ರಾ, ಡೋಲೊ, ಆಗ್ಮೆಂಟಿನ್, ಸ್ಯಾರಿಡಾನ್, ಕಾಲ್ಪೋಲ್ ಮುಂತಾದವುಗಳು ಎನ್ನಲಾಗಿದೆ. ಒಂದೊಮ್ಮೆ ಮೊದಲ ಹಂತವನ್ನು ಸುಲಲಿತವಾಗಿ ಅನುಷ್ಠಾನಗೊಳಿಸಿದ ನಂತರ ನಾವು ಇತರೆ ಔಷಧಿಗಳನ್ನೂ ಇದರ ವ್ಯಾಪ್ತಿಯಲ್ಲಿ ತರುವುದಾಗಿ ಅಧಿಕಾರಿಗಳು ಸುಳಿವು ನೀಡಿದ್ದಾರೆ.


ಇದನ್ನೂ ಓದಿ: Queen Elizabeth: ರಾಣಿ ಎಲಿಜಬೆತ್ ನಗುವಿಗೆ ನಾಚಿ ನೀರಾಗಿದ್ದ ಪ್ರಿನ್ಸ್ ಹ್ಯಾರಿ! ಇಲ್ಲಿದೆ ಆ ಭಾವುಕ ಕ್ಷಣ


ಬಾರ್ ಕೋಡಿಂಗ್ ಕೆಲಸ ಮಾಡುವ ಬಗೆ
ಜೂನ್ ತಿಂಗಳಲ್ಲಿ ಸರ್ಕಾರವು ಬಿಡುಗಡೆ ಮಾಡಿದ ಕರಡು ಪ್ರತಿಯನುಸಾರ, ಮೊದಲ ಪ್ಯಾಕೆಜಿಂಗ್ ನಲ್ಲಿ ಉತ್ಪಾದಕರು ತಮ್ಮ ಉತ್ಪನ್ನಗಳ ಪ್ಯಾಕೆಟ್ ಗಳ ಮೇಲೆ ಬಾರ್ ಕೋಡ್ ಅನ್ನು ನಮೂದಿಸಬೇಕಾಗುತ್ತದೆ ಹಾಗೂ ನಂತರದ ಹಂತದಲ್ಲಿ ಅದನ್ನು ತಂತ್ರಾಂಶಗಳ ಬಳಕೆ ಮಾಡಿ ಆ ಲೇಬಲ್ ಗಳಲ್ಲಿ ತಮ್ಮ ಸ್ಟೋರ್ ಗಳ ಮಾಹಿತಿ ಹಾಗೂ ಉತ್ಪನ್ನಗಳಿಗೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸಿ ಅದನ್ನು ಬಳಕೆದಾರರು ಸ್ಕ್ಯಾನ್ ಮಾಡಿದಾಗ ಆ ಎಲ್ಲ ಮಾಹಿತಿ ಅವರಿಗೆ ಸಿಗುವಂತೆ ಮಾಡುವ ಸೌಲಭ್ಯ ಹೊಂದಿರಬೇಕಾಗುತ್ತದೆ ಎನ್ನಲಾಗಿದೆ.


ಬಾರ್ ಕೋಡ್ ಭಾರತಕ್ಕೆ ಏಕೆ ಬೇಕು?
2019 ರಲ್ಲಿ ಅಮೆರಿಕವು ಭಾರತದೊಳಗೆ ಬಳಕೆಯಾಗುತ್ತಿರುವ ನಕಲಿ ಔಷಧಿಗಳ ಕುರಿತು ಭಾರತಕ್ಕೆ ಎಚ್ಚರಿಕೆ ನೀಡಿತ್ತು. ಅಮರಿಕವು ತನ್ನ Spaecial 301 Report ವರದಿಯಲ್ಲಿ ಜಾಗತಿಕವಾಗಿ ಭಾರತದಲ್ಲಿ ತಯಾರಾಗುತ್ತಿರುವ ನಕಲಿ ಔಷಧಿಗಳ ಬಗ್ಗೆ ಉಲ್ಲೇಖಿಸುತ್ತ ಭಾರತದ ಮೇಲೆ ಹರಿಹಾಯ್ದಿತ್ತು.


ಇದನ್ನೂ ಓದಿ: Mangalyaan: ಮಂಗಳಯಾನ ನೌಕೆಯ ಬ್ಯಾಟರಿ ಖಾಲಿ; ಇದು ಗ್ರಹಣದ ಎಫೆಕ್ಟ್​ ಅಂತೆ!


ಇನ್ನೊಂದೆಡೆ ಭಾರತದಲ್ಲಿ ಔಷಧಿಗಳ ಮೇಲೆ ಬಾರ್ ಕೋಡ್ ತಂತ್ರಜ್ಞಾನ ಅನುಷ್ಠಾನಗೊಳಿಸುವ ಪ್ರಕ್ರಿಯೆಗೆ 2016 ರಲ್ಲೇ ಚಾಲನೆ ಸಿಕ್ಕಿದ್ದರೂ ಸಹ ಇದೀಗಷ್ಟೆ ಅದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇನ್ನು, ಮಾರ್ಚ್ 2022 ರಲ್ಲಿ ಕೇಂದ್ರ ಆರೋಗ್ಯ ಸಚಿವರಾದ ಮನ್ಸುಖ್ ಮಾಂಡವ್ಯ ಅವರು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಗೆ ಭಾರತವನ್ನು ದೋಷಪೂರಿತ ಹಾಗೂ ನಕಲಿ ಔಷಧಿಗಳಿಂದ ಮುಕ್ತವಾಗಿರಿಸುವಂತೆ ಸೂಚಿಸಿದ್ದಾರೆಂದು ನ್ಯೂಸ್ 18 ವರದಿ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Published by:ಗುರುಗಣೇಶ ಡಬ್ಗುಳಿ
First published: