2022 ವಿಶ್ವಕಪ್​ ಮುನ್ನವೇ ಫುಟ್​ಬಾಲ್​ ಪ್ರೇಮಿಗಳಿಗೆ ಶಾಕ್ ನೀಡಿದ ಕತಾರ್..!

ಮುಂಬರುವ ವಿಶ್ವಕಪ್​ ಫುಟ್​ಬಾಲ್​ ಪಂದ್ಯಾವಳಿಯನ್ನು ವೀಕ್ಷಿಸಲು 2.6 ಮಿಲಿಯನ್ ವೀಕ್ಷಕರು ಸೇರಲಿದ್ದು, ಅದರಲ್ಲೂ 1.5 ಮಿಲಿಯನ್​ ವಿದೇಶಿಯರು ಕತಾರ್​ಗೆ ಭೇಟಿ ನೀಡಲಿದ್ದಾರೆ.

zahir | news18
Updated:January 2, 2019, 9:26 PM IST
2022 ವಿಶ್ವಕಪ್​ ಮುನ್ನವೇ ಫುಟ್​ಬಾಲ್​ ಪ್ರೇಮಿಗಳಿಗೆ ಶಾಕ್ ನೀಡಿದ ಕತಾರ್..!
ಸಾಂದರ್ಭಿಕ ಚಿತ್ರ
zahir | news18
Updated: January 2, 2019, 9:26 PM IST
ವಿಶ್ವದ ಫುಟ್​ಬಾಲ್​ ಪ್ರೇಮಿಗಳು ಕತಾರ್​ ವಿಶ್ವಕಪ್​ನ್ನು ಎದುರು ನೋಡುತ್ತಿದ್ದಾರೆ. 2022 ರಲ್ಲಿ ನಡೆಯಲಿರುವ ಈ ಪಂದ್ಯಾವಳಿಗಾಗಿ ಕತಾರ್ ದೇಶ ಕೂಡ ಸಕಲ ತಯಾರಿಯಲ್ಲಿ ತೊಡಗಿದೆ. ಆದರೆ ಈಗ ಏಕಾಏಕಿ ಮದ್ಯದ ಬೆಲೆಯನ್ನು ಏರಿಸುವ ಮೂಲಕ ಆಲ್ಕೋಹಾಲ್​ ಪ್ರಿಯರಿಗೆ ಕತಾರ್​ ಸರ್ಕಾರ ಬಿಗ್​ ಶಾಕ್​ ನೀಡಿದೆ.

ಮಂಗಳವಾರದಿಂದ ಜಾರಿಗೆ ಬರುವಂತೆ ಮದ್ಯದ ಮೇಲೆ ಶೇ.100 ರಷ್ಟು ತೆರಿಗೆಯನ್ನು ಹೆಚ್ಚಿಸಲಾಗಿದೆ. ಕತಾರ್​ನಲ್ಲಿ ಮದ್ಯದ ತಯಾರಿ ಮೇಲೆ ನಿಷೇಧವಿದ್ದು, ಈ ತೆರಿಗೆಯನ್ನು ಆಮದಿನ ಮೇಲೆ ಹೇರಲಾಗಿದೆ. ಇದರಿಂದ ದೇಶದಲ್ಲಿ ಮದ್ಯದ ಬೆಲೆಯು ಹೊಸ ವರ್ಷದಿಂದ ದುಪ್ಪಟಾಗಿದೆ. ಮುಸ್ಲಿಂ ರಾಷ್ಟ್ರವಾಗಿರುವ ಕತಾರ್​ನಲ್ಲಿ ಆಲ್ಕೋಹಾಲ್​ ಖರೀದಿ ಮತ್ತು ಮಾರಾಟ ಮೇಲೆ ಕಟ್ಟುನಿಟ್ಟಿನ ಕಾನೂನಿದ್ದು, ಇದರ ಅಡಿಯಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ.

ಇಸ್ಲಾಂನಲ್ಲಿ ಮದ್ಯ ಸೇವನೆಯು ಪಾಪವಾಗಿದ್ದು, ಹೀಗಾಗಿ ಮದ್ಯದ ಸೇವನೆಯನ್ನು ತಡೆಗಟ್ಟಲು ಬೆಲೆ ಹೇರಿಸಲಾಗಿದೆ. ಪಾಪ ತೆರಿಗೆ ಎನ್ನಲಾಗಿರುವ ಹೊಸ ಟ್ಯಾಕ್ಸ್​ ಅನ್ನು ಜನರ ಆರೋಗ್ಯದ ದೃಷ್ಟಿಯಿಂದ ಜಾರಿಗೆ ತರಲಾಗಿದೆ ಎಂದು ಕತಾರ್​ ಸರ್ಕಾರ ತಿಳಿಸಿದೆ.

ಇದರಿಂದ ಕತಾರ್​ಗೆ ಭೇಟಿ ನೀಡುತ್ತಿರುವ ವಿದೇಶಿ ಪ್ರವಾಸಿಗರಿಗೆ ತೊಂದರೆ ಉಂಟಾಗುತ್ತಿದ್ದು, ಕಡಿಮೆ ಬೆಲೆ ಮದ್ಯಕ್ಕೆ ದುಬಾರಿ ಬೆಲೆ ತೆರಬೇಕಾಗುತ್ತಿದೆ ಎಂಬ ಆಕ್ರೋಶ ಕೂಡ ವ್ಯಕ್ತವಾಗಿದೆ. ಹಾಗೆಯೇ 2022 ರಲ್ಲಿ ನಡೆಯಲಿರುವ ಫುಟ್​ಬಾಲ್ ವಿಶ್ವಕಪ್​ಗೂ ಮುಂಚಿತವಾಗಿ ಕತಾರ್​ ಹೊಸ ಕಾನೂನು ಜಾರಿಗೆ ತಂದಿರುವುದು ವಿಶ್ವಕಪ್​ ಆಯೋಜಕರಿಗೆ ಚಿಂತೆಗೀಡು ಮಾಡಿದೆ.

ಇದನ್ನೂ ಓದಿ: ಜಿಯೋ ನ್ಯೂ ಇಯರ್ ಪ್ಲಾನ್: ಕೇವಲ 19 ರೂ.ಗೆ ಅನ್​ಲಿಮಿಟೆಡ್ ಕಾಲ್ ಮತ್ತು ಉಚಿತ ಇಂಟರ್​ನೆಟ್​..!

ಮುಂಬರುವ ವಿಶ್ವಕಪ್​ ಫುಟ್​ಬಾಲ್​ ಪಂದ್ಯಾವಳಿಯನ್ನು ವೀಕ್ಷಿಸಲು 2.6 ಮಿಲಿಯನ್ ವೀಕ್ಷಕರು ಸೇರಲಿದ್ದು, ಅದರಲ್ಲೂ 1.5 ಮಿಲಿಯನ್​ ವಿದೇಶಿಯರು ಕತಾರ್​ಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಅನುಮತಿಯನ್ನು ಪಡೆದು ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಆಲ್ಕೋಹಾಲ್ ದೊರಕುವಂತೆ ಮಾಡಲು ಫಿಫಾ ಫುಟ್​ಬಾಲ್ ಆಯೋಜಕರು ಕೂಡ ಯೋಜನೆ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: ರೈಲ್ವೆ ಪೊಲೀಸ್ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ
Loading...

ಈ ಸಂಬಂಧ ಈಗಾಗಲೇ ಕತಾರ್​ ಸರ್ಕಾರದೊಂದಿಗೆ ಫಿಫಾ ಮಾತುಕತೆ ನಡೆಸಿದ್ದು, ಸ್ಥಳೀಯ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಕ್ರಮ ಕೊಳ್ಳುವಂತೆ ಸರ್ಕಾರ ಸೂಚಿಸಿದೆ ಎಂದು ಫಿಫಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: SBI ಗ್ರಾಹಕರಿಗೆ ಸಿಹಿ ಸುದ್ದಿ: ಇನ್ಮುಂದೆ ಎಟಿಎಂ ಮೂಲಕವೇ ವಿದ್ಯುತ್ ಬಿಲ್​ ಪಾವತಿ ಸೇರಿದಂತೆ ಹಲವು ಸೇವೆ ಪಡೆದುಕೊಳ್ಳಬಹುದು

First published:January 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ