ತಿಂಗಳ ಬಳಿಕ ಜ್ಯುವೆಲರಿ ಶಾಪ್ ತೆರೆದಾಗ ಕಾದಿತ್ತು ಶಾಕ್; ಅಂಗಡಿಯಲ್ಲಿ ತಣ್ಣಗೆ ಮಲಗಿತ್ತು ಹೆಬ್ಬಾವು!

ಪಯ್ಯನೂರ್​ನ ಆಭರಣದ ಮಳಿಗೆಯಲ್ಲಿದ್ದ ಬಾಕ್ಸ್​ನೊಳಗೆ 24 ಕೆ.ಜಿ. ತೂಕದ, 3 ಮೀಟರ್ ಉದ್ದದ ಹೆಬ್ಬಾವು ಮಲಗಿತ್ತು. ಅಂಗಡಿಯೊಳಗೆ ನುಸುಳಿದ್ದ ಹೆಬ್ಬಾವು ಅಲ್ಲಿ 20 ಮೊಟ್ಟೆಗಳನ್ನು ಇರಿಸಿತ್ತು.

news18-kannada
Updated:May 5, 2020, 3:41 PM IST
ತಿಂಗಳ ಬಳಿಕ ಜ್ಯುವೆಲರಿ ಶಾಪ್ ತೆರೆದಾಗ ಕಾದಿತ್ತು ಶಾಕ್; ಅಂಗಡಿಯಲ್ಲಿ ತಣ್ಣಗೆ ಮಲಗಿತ್ತು ಹೆಬ್ಬಾವು!
ಕಣ್ಣೂರಿನಲ್ಲಿ ಸಿಕ್ಕಿದ ಹೆಬ್ಬಾವು
  • Share this:
ಕಣ್ಣೂರು (ಮೇ 5): ಲಾಕ್​ಡೌನ್​ನಿಂದಾಗಿ ದೇಶಾದ್ಯಂತ ವ್ಯಾಪಾರ-ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿತ್ತು. 1 ತಿಂಗಳಿಗೂ ಹೆಚ್ಚು ಕಾಲ ಮುಚ್ಚಲ್ಪಟ್ಟಿದ್ದ ಅಂಗಡಿಗಳನ್ನು ತೆರೆಯು ಕೇರಳದಲ್ಲಿ ಅವಕಾಶ ನೀಡಲಾಗಿತ್ತು. ತಿಂಗಳ ಬಳಿಕ ಕಣ್ಣೂರಿನಲ್ಲಿ ಮುಚ್ಚಲ್ಪಟ್ಟಿದ್ದ ಆಭರಣ ಮಳಿಗೆಯನ್ನು ತೆರೆದ ಮಾಲೀಕನಿಗೆ ಆಘಾತವೊಂದು ಕಾದಿತ್ತು.

ಪಯ್ಯನೂರ್​ನ ಆಭರಣದ ಮಳಿಗೆಯಲ್ಲಿದ್ದ ಬಾಕ್ಸ್​ನೊಳಗೆ ಬೃಹತ್ ಗಾತ್ರದ ಹೆಬ್ಬಾವು ಮಲಗಿತ್ತು. ಆ ಹಾವನ್ನು ನೋಡಿದ ಅಂಗಡಿ ಮಾಲೀಕ ಸಜಿತ್‌ ಶಾಕ್ ಆಗಿದ್ದಾರೆ. ಹಳೆಯ ವಸ್ತುಗಳನ್ನು ಇರಿಸಿದ್ದ ಜಾಗದಲ್ಲಿದ್ದ ಬಾಕ್ಸ್​ನೊಳಗೆ 24 ಕೆ.ಜಿ. ತೂಕದ, 3 ಮೀಟರ್ ಉದ್ದದ ಹೆಬ್ಬಾವು ಮಲಗಿತ್ತು. ಅಂಗಡಿಯೊಳಗೆ ನುಸುಳಿದ್ದ ಹೆಬ್ಬಾವು ಅಲ್ಲಿ 20 ಮೊಟ್ಟೆಗಳನ್ನು ಇರಿಸಿತ್ತು.ಇದನ್ನೂ ಓದಿ: Viral Video: ನಮ್ಮ ಟೀಚರ್​ಗೆ ಬುದ್ಧಿ ಹೇಳಿ!; ಪೊಲೀಸರಿಗೆ ದೂರು ನೀಡಿದ ಪುಟ್ಟ ಹುಡುಗನ ವಿಡಿಯೋ ವೈರಲ್ಬಾಕ್ಸ್​ನೊಳಗಿದ್ದ ಹೆಬ್ಬಾವು ಮತ್ತು ಮೊಟ್ಟೆಗಳನ್ನು ನೋಡಿ ಕಂಗಾಲಾದ ಮಾಲೀಕರು ತಲಿಪರಂಬ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹಾವು ಮತ್ತು ಮೊಟ್ಟೆಗಳನ್ನು ತಮ್ಮ ಜೊತೆ ತೆಗೆದುಕೊಂಡು ಹೋಗಿದ್ದಾರೆ.
First published: May 5, 2020, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading