ಇಂದು ಭಾರತಕ್ಕೆ ಪುಟಿನ್ ಭೇಟಿ: S-400 ವಾಯು ಸೇನಾ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ

news18
Updated:October 4, 2018, 9:22 AM IST
ಇಂದು ಭಾರತಕ್ಕೆ ಪುಟಿನ್ ಭೇಟಿ: S-400 ವಾಯು ಸೇನಾ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ
  • Advertorial
  • Last Updated: October 4, 2018, 9:22 AM IST
  • Share this:
ನ್ಯೂಸ್​ 18 ಕನ್ನಡ

ನವದೆಹಲಿ(ಅ.04): ರಷ್ಯಾದ ಅಧ್ಯಕ್ಷ ವಾಲ್ದಿಮಿರ್ ಪುಟಿನ್ ಇಂದಿನಿಂದ ಎರಡು ದಿನಗಳ ಕಾಲ ಭಾರತ ಪ್ರವಾಸಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ರಷ್ಯಾದೊಂದಿಗೆ S-400 ಏರ್​ ಇಮ್ಯೂನ್ ಸಿಸ್ಟಮ್​ ಡೀಲ್​ಗೆ ಸಹಿ ಹಾಕುವ ಸಾಧ್ಯತೆಗಳಿವೆ.

ಪುಟಿನ್​ ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯೊಂದಿಗೆ 19ನೇ ಭಾರತ-ರಷ್ಯಾ ದ್ವಿಪಕ್ಷೀಯ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಚ್ಚಾತೈಲ ಬೆಲೆ ಏರಿಕೆ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳು ಈ ಸಮಯದಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ.

ಪುಟಿನ್​ರವರ ಭಾರತ ಪ್ರವಾಸದ ಸಂದರ್ಭದಲ್ಲಿ S-400 ಏರ್​ ಇಮ್ಯೂನ್ ಸಿಸ್ಟಮ್​ ಡೀಲ್​ ಕುರಿತಾದ ಮಾತುಕತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕೇವಲ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಮಾತುಕತೆ ಮಾತ್ರವಲ್ಲದೆ, ದಿಗ್ಗಜ ದೇಶಗಳ ನಡುವೆ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸಹಕಾರದ ಮಾತುಕತೆಯೂ ನಡೆಯುವ ನಿರೀಕ್ಷೆಯಿದೆ.

ಈ ಸಭೆಯ ಬಳಿಕ ಅಧ್ಯಕ್ಷ ಪುಟಿನ್​ ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್​ರನ್ನೂ ಭೇಟಿಯಾಗಲಿದ್ದಾರೆ
First published:October 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...