ಶಾಸಕ ಸ್ಥಾನ ಸೋತರೂ 2ನೇ ಬಾರಿಗೆ Uttarakhand CM ಆಗಿ ಪುಷ್ಕರ್ ಸಿಂಗ್ ಧಾಮಿ ಆಯ್ಕೆ..!

ಧಾಮಿ ಅವರು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರವನ್ನು ಸೋತಿದ್ದರು, ಮತ್ತೆ ಮುಖ್ಯಮಂತ್ರಿ ಪಟ್ಟವೇರುವ ಭಾಗ್ಯ ಒಲಿದು ಬಂದಿದೆ.  ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ 46 ವರ್ಷ ವಯಸ್ಸಿನ ಧಾಮಿ ಅವರಿಗೆ ಬಿಜೆಪಿ ಮಣೆ ಹಾಕಿದೆ.

ಪುಷ್ಕರ್ ಸಿಂಗ್ ಧಾಮಿ (ಸಂಗ್ರಹ ಚಿತ್ರ)

ಪುಷ್ಕರ್ ಸಿಂಗ್ ಧಾಮಿ (ಸಂಗ್ರಹ ಚಿತ್ರ)

  • Share this:
ಡೆಹ್ರಾಡೂನ್: ಎರಡನೇ ಅವಧಿಗೆ ಉತ್ತರಾಖಂಡದ ಮುಖ್ಯಮಂತ್ರಿಯಾಗಿ(Chief Minister of Uttarakhand)  ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ ಬಿಜೆಪಿ(BJP), ಪುಷ್ಕರ್ ಸಿಂಗ್ ಧಾಮಿ  ಅವರನ್ನು ಸಿಎಂ ಎಂದು ಘೋಷಿಸಿತು. ಧಾಮಿ ಅವರು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರವನ್ನು ಸೋತಿದ್ದರು, ಮತ್ತೆ ಮುಖ್ಯಮಂತ್ರಿ ಪಟ್ಟವೇರುವ ಭಾಗ್ಯ ಒಲಿದು ಬಂದಿದೆ.  ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ 46 ವರ್ಷ ವಯಸ್ಸಿನ ಧಾಮಿ ಅವರಿಗೆ ಬಿಜೆಪಿ ಮಣೆ ಹಾಕಿದೆ. ಉತ್ತರಾಖಂಡದಲ್ಲಿ 2ನೇ ಸಲಕ್ಕೆ ಮುಖ್ಯಮಂತ್ರಿ ಆಗುವ ಮೂಲಕ ಧಾಮಿ ಹೊಸ ದಾಖಲೆಯನ್ನೇ ಬರೆದಿದ್ದಾರೆ. ರಾಜ್ಯ ಬಿಜೆಪಿಯ ಕೇಂದ್ರ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಹಿರಿಯ ನಾಯಕಿ ಮೀನಾಕ್ಷಿ ಲೇಖಿ ಡೆಹ್ರಾಡೂನ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಸಿಎಂ ಹೆಸರನ್ನು ಘೋಷಿಸಿದರು. ಧಾಮಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಅವಕಾಶ ಕೋರಲಿದ್ದಾರೆ.

ಇದನ್ನೂ ಓದಿ: 2ನೇ ಬಾರಿಗೆ ಮಣಿಪುರ ಸಿಎಂ ಆದ Biren Singh.. ಫುಟ್ಬಾಲ್ ಆಟಗಾರ, ಯೋಧ, ಪತ್ರಕರ್ತ CM ಆಗಿದ್ದೇ ರೋಚಕ!

ಶಾಸಕ ಸ್ಥಾನ ಸೋತರೂ ಮತ್ತೆ ಸಿಎಂ

ಧಾಮಿ ಅವರು ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು, ಉತ್ತರಾಖಂಡ್​​ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಅವರ ಪಾತ್ರವನ್ನು ಹೈಕಮಾಂಡ್​​ ಒಪ್ಪಿಕೊಂಡಿದೆ. ಇವರ ಜೊತೆಗೆ ಸಿಎಂ ರೇಸ್​ ನಲ್ಲಿ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಹಿರಿಯ ನಾಯಕ ಸತ್ಪಾಲ್ ಮಹಾರಾಜ್ ಇದ್ದರು. ವೈಯಕ್ತಿಕವಾಗಿ ಶಾಸಕ ಸ್ಥಾನ ಸೋತಿರುವ ಧಾಮಿ ಅವರು ಈ ಬಾರಿಯ ಸಿಎಂ ರೇಸ್​​ನಿಂದ ಹೊರ ಬಿದ್ದಿದ್ದಾರೆ ಎಂದೇ ಬಿಜೆಪಿಯಲ್ಲಿನ ಒಂದು ವರ್ಗ ಭಾವಿಸಿತ್ತು. ಆದರೆ ಧಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ (RRS) ಬಲವಾದ ಬೆಂಬಲವಿದೆ. ಈ ಹಿನ್ನೆಲೆಯಲ್ಲೇ ಮತ್ತೆ ಸಿಎಂ ಆಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಿನ್ನಮತ ಶಮನಕ್ಕೆ ಬಿಜೆಪಿ ಫಾರ್ಮುಲಾ

ರಾಜ್ಯಗಳಲ್ಲಿ ಸರ್ಕಾರ ರಚನೆ ಕುರಿತು ಚರ್ಚಿಸಲು ನಿನ್ನೆ ನಡೆದ ಸಭೆಯಲ್ಲಿ  ಧಾಮಿ ಅವರಿಗೆ ಎರಡನೇ ಅವಧಿಗೆ ಅಧಿಕಾರ ನೀಡುವ ನಿರ್ಧಾರಕ್ಕೆ ಪಿಎಂ ಮೋದಿ ಸಮ್ಮತಿ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.  ಪಕ್ಷದ ರಾಜ್ಯ ಘಟಕದಲ್ಲಿ ಬೆಳೆಯುತ್ತಿರುವ ಗುಂಪುಗಾರಿಕೆಯನ್ನು ದೂರವಿಡಲು ಧಾಮಿಯ ಪುನರ್​ ಆಯ್ಕೆಯೂ ಒಂದು ಮಾರ್ಗವಾಗಿದೆ. ಸಮತೋಲನ ಕಾಯ್ದುಕೊಳ್ಳುವ ಸವಾಲನ್ನು ಸಮರ್ಥವಾಗಿ ಎದುರಿಸಲು ಧಾಮಿ ಅವರನ್ನು ಮರು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: Rajya Sabha ಚುನಾವಣೆಗೆ AAP ಅಭ್ಯರ್ಥಿಗಳ ಪಟ್ಟಿ ಔಟ್: ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಕಣಕ್ಕೆ

ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ ಸಿಎಂ ಆಯ್ಕೆ ಅನಿಶ್ಚಿತತೆಗೆ ಕಾರಣವಾಯಿತು.  ತ್ರಿವೇಂದ್ರ ಸಿಂಗ್ ರಾವತ್ ಮತ್ತು ತಿರತ್ ಸಿಂಗ್ ರಾವತ್ ಅವರ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗೆ ಒಳಗಾದ ನಂತರ ಕಳೆದ ವರ್ಷ ಜುಲೈನಲ್ಲಿ ಧಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು.

ಧಾಮಿ ರಾಜಕೀಯ ಹಾದಿ ಹೋಗಿದೆ..

ಠಾಕೂರ್ ನಾಯಕರಾದ ಧಾಮಿ ಕಳೆದ ಜುಲೈನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬಿಜೆಪಿ ಯುವ ಘಟಕದ ಮಾಜಿ ಅಧ್ಯಕ್ಷರಾಗಿ, ಧಾಮಿ ಯುವ ಕಾರ್ಯಕರ್ತರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸುವಲ್ಲಿ ಧಾಮಿ ಸಹಾಯ ಮಾಡಿದರು ಎಂದು ಪಕ್ಷ ನಂಬುತ್ತದೆ.

ಧಾಮಿ ಸೆಪ್ಟೆಂಬರ್, 1975 ರಲ್ಲಿ ಪಿಥೋರಗಢ ಜಿಲ್ಲೆಯಲ್ಲಿ ಜನಿಸಿದ್ದು, ಠಾಕೂರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರು ಸುಮಾರು 33 ವರ್ಷಗಳಿಂದ ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳಿಗಾಗಿ ಕೆಲಸ ಮಾಡಿದ್ದಾರೆ. ಅವರ ರಾಜಕೀಯ ಪ್ರಯಾಣವು ಉತ್ತರ ಪ್ರದೇಶದಿಂದ ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಒಂದು ದಶಕದ ಕಾಲ ಅವಧ್ ಪ್ರಾಂತ್ ಪ್ರದೇಶದಲ್ಲಿ ಎಬಿವಿಪಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
Published by:Kavya V
First published: