• Home
 • »
 • News
 • »
 • national-international
 • »
 • Twitter: ಕಚೇರಿಯಲ್ಲಿಯೇ ನಿದ್ರಿಸುತ್ತಿರುವ ಟ್ವಿಟರ್ ಉದ್ಯೋಗಿಯ ಫೋಟೋ ವೈರಲ್, ಭಾರೀ ಕೋಲಾಹಲ ಸೃಷ್ಟಿ!

Twitter: ಕಚೇರಿಯಲ್ಲಿಯೇ ನಿದ್ರಿಸುತ್ತಿರುವ ಟ್ವಿಟರ್ ಉದ್ಯೋಗಿಯ ಫೋಟೋ ವೈರಲ್, ಭಾರೀ ಕೋಲಾಹಲ ಸೃಷ್ಟಿ!

ವೈರಲ್ ಆಗುತ್ತಿರುವ ಫೋಟೋಗಳು

ವೈರಲ್ ಆಗುತ್ತಿರುವ ಫೋಟೋಗಳು

Pushing Round The Clock Viral Image Shows Twitter Employee Sleeping On Office Floor ಎಸ್ತರ್ ಕಚೇರಿಯಲ್ಲಿರುವ ಕುರ್ಚಿ ಹಾಗೂ ಮೇಜಿನ ಹಿಂದೆಯೇ ಬ್ಲಾಂಕೆಟ್ ಹೊದ್ದುಕೊಂಡು ನಿದ್ರಿಸಿರುವುದು ಚಿತ್ರದಲ್ಲಿದೆ. ಎಲೋನ್ ಮಸ್ಕ್ ಅವರು ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಉದ್ಯೋಗಿಗಳ ಮೇಲೆ ತೀವ್ರ ಒತ್ತಡವನ್ನು ಹೇರುತ್ತಿದ್ದಾರೆ ಹಾಗೂ ದಿನದ 24 ಗಂಟೆಯೂ ಕೆಲಸ ಮಾಡಬೇಕೆಂದು ಉದ್ಯೋಗಿಗಳಿಗೆ ಸೂಚಿಸಿದ್ದಾರೆ ಎಂಬ ವದಂತಿ ಹರಡಿದೆ.

ಮುಂದೆ ಓದಿ ...
 • Trending Desk
 • Last Updated :
 • New Delhi, India
 • Share this:

  ನವದೆಹಲಿ: ಟ್ವಿಟರ್‌ನ ಉತ್ಪನ್ನ ನಿರ್ವಹಣಾ ನಿರ್ದೇಶಕ ಎಸ್ತರ್ ಕ್ರಾಫೋರ್ಡ್ ಕಚೇರಿಯ ಮಹಡಿಯಲ್ಲಿ ನಿದ್ರಿಸುತ್ತಿರುವ ಚಿತ್ರವನ್ನು ಉದ್ಯೋಗಿಯೊಬ್ಬರು ಹಂಚಿಕೊಂಡಿದ್ದಾರೆ. ಎಸ್ತರ್ ಕಚೇರಿಯಲ್ಲಿರುವ ಕುರ್ಚಿ ಹಾಗೂ ಮೇಜಿನ ಹಿಂದೆಯೇ ಬ್ಲಾಂಕೆಟ್ ಹೊದ್ದುಕೊಂಡು ನಿದ್ರಿಸಿರುವುದು ಚಿತ್ರದಲ್ಲಿದೆ. ಎಲೋನ್ ಮಸ್ಕ್ ಅವರು ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಉದ್ಯೋಗಿಗಳ ಮೇಲೆ ತೀವ್ರ ಒತ್ತಡವನ್ನು ಹೇರುತ್ತಿದ್ದಾರೆ ಹಾಗೂ ದಿನದ 24 ಗಂಟೆಯೂ ಕೆಲಸ ಮಾಡಬೇಕೆಂದು ಉದ್ಯೋಗಿಗಳಿಗೆ ಸೂಚಿಸಿದ್ದಾರೆ ಎಂಬ ವದಂತಿ ಹರಡಿದೆ.


  ಇದೀಗ ಎಸ್ತರ್ ಕ್ರಾಫೋರ್ಡ್ ಕಚೇರಿಯಲ್ಲಿಯೇ ಮಲಗಿರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದ್ದು ಟ್ವಿಟರ್ ಉದ್ಯೋಗಿಗಳು ಕೆಲಸದ ಹೆಸರಿನಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬ ಕೂಗು ಕೇಳಿಬರುತ್ತಿದೆ.


  ತಂಡದೊಂದಿಗೆ ನಿರ್ವಾಹಕರು ಕೆಲಸ ಮಾಡಬೇಕು


  ಟ್ವಿಟರ್‌ನ ಉತ್ಪನ್ನ ನಿರ್ವಾಹಕರು ಇವಾನ್ ಜೋನ್ಸ್ ಈ ಚಿತ್ರವನ್ನು ಪೋಸ್ಟ್ ಮಾಡಿದ್ದು ಎಲಾನ್ ಟ್ವಿಟರ್‌ನಲ್ಲಿ ನಿಮ್ಮ ಬಾಸ್‌ನಿಂದ ನಿಮಗೆ ಏನಾದರೂ ಅಗತ್ಯವಿದ್ದಾಗ ಎಂಬ ಶೀರ್ಷಿಕೆಯನ್ನು ನೀಡಿ ಹಂಚಿಕೊಂಡಿದ್ದಾರೆ.


  ಇದನ್ನೂ ಓದಿ: ಟ್ವಿಟರ್ ಉದ್ಯೋಗಿಗಳಿಗೆ ಇನ್ನು ದಿನದ 12 ಗಂಟೆ, ವಾರದ 7 ದಿನ ಕೆಲಸ, ಮಾಡದವರು ವಜಾ!


  ಕ್ರಾಫೋರ್ಡ್ ಅವರು ಫೋಟೋವನ್ನು ಶೀರ್ಷಿಕೆಯೊಂದಿಗೆ ಮರುಟ್ವೀಟ್ ಮಾಡಿದ್ದು, ಅಂತಿಮ ಗಡುವನ್ನು ಸಂಧಿಸಲು ತಂಡವು ದಿನದ 24 ಗಂಟೆಯೂ ಕೆಲಸ ಮಾಡಿದಾಗ ನೀವು ಸ್ಥಳದಲ್ಲಿಯೇ ನಿದ್ರಿಸಬೇಕಾಗುತ್ತದೆ ಎಂಬ ಶೀರ್ಷಿಕೆ ನೀಡಿದ್ದಾರೆ.


  ಕ್ರಾಫೋರ್ಡ್ ಹಂಚಿಕೊಂಡಿರುವ ಪೋಸ್ಟ್ ಸಾಮಾಜಿಕ ತಾಣದಲ್ಲಿ ಎಚ್ಚರಿಕೆಯ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಟ್ವಿಟರ್‌ನಲ್ಲಿ ಆಕೆ ಕೆಲವೊಂದು ಸಾಲುಗಳನ್ನು ಬರೆದುಕೊಂಡಿದ್ದು ಈ ಚಿತ್ರವನ್ನು ನೋಡಿ ಕೆಲವೊಬ್ಬರು ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಿರುವುದರಿಂದ ನಾನು ಇದನ್ನು ವಿವರಿಸುತ್ತಿದ್ದೇನೆ ಎಂದು ಬರವಣಿಗೆಯನ್ನು ಆರಂಭಿಸಿದ್ದಾರೆ.


  ಕಠಿಣ ಕೆಲಸಗಳನ್ನು ಪೂರೈಸಲು ತ್ಯಾಗ (ಸಮಯ ಹಾಗೂ ಶಕ್ತಿ ಇತ್ಯಾದಿ) ಅಗತ್ಯವಿದೆ. ಜೀವನದಲ್ಲಿ ಏನನ್ನಾದರೂ ಹೊಸತನ್ನು ಸಾಧಿಸಲು ಹಾಗೂ ಕಾರ್ಯರೂಪಕ್ಕೆ ತರಲು ಉತ್ಸುಕರಾಗಿರುವ ತಂಡದ ಸದಸ್ಯರುಗಳನ್ನು ನಾನು ವಿಶ್ವದಾದ್ಯಂತ ಹೊಂದಿದ್ದೇನೆ, ಹಾಗಾಗಿ ಅವರಿಗಾಗಿ ನಾನು ಏನನ್ನಾದರೂ ಮಾಡುವುದು ಸೂಕ್ತವಾಗಿದೆ ಹಾಗೂ ಅವರೊಂದಿಗೆ ನಾನು ಇದ್ದೇನೆ ಎಂಬ ಭರವಸೆಯನ್ನು ನೀಡುವುದು ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.


  ಅಂತಿಮ ಗಡುವು ಸಾಧಿಸಲು ಒಗ್ಗಟ್ಟಾಗಿ ದುಡಿಯುವುದು


  ಟ್ವಿಟರ್‌ನಲ್ಲಿ ನಾನು ಮಹತ್ವಾಕಾಂಕ್ಷೆಯುಳ್ಳ ಪ್ರತಿಭಾವಂತ ವ್ಯಕ್ತಿಗಳೊಂದಿಗೆ ಕೆಲಸ ಮಾಡುತ್ತಿದ್ದು ಇದು ಸಾಮಾನ್ಯ ವೇಳೆಯಂತಲ್ಲ. ಬೃಹತ್ ವ್ಯಾಪಾರ ಮತ್ತು ಸಾಂಸ್ಕೃತಿಕ ಪರಿವರ್ತನೆಗೆ 1 ವಾರಕ್ಕಿಂತ ಕಡಿಮೆ ಸಮಯ ಹೊಂದಿದ್ದೇವೆ ಹಾಗೂ ಇದನ್ನು ಸಾಧಿಸಿ ತೋರಿಸಬೇಕಾಗಿದೆ. ಇದಕ್ಕಾಗಿ ಶ್ರಮಿಸುವವರು ಉತ್ಪನ್ನ, ವಿನ್ಯಾಸ, ಕಾನೂನು, ತಾಂತ್ರಿಕ, ಆರ್ಥಿಕ, ಮಾರುಕಟ್ಟೆ ಹೀಗೆ ಎಲ್ಲಾ ವಿಭಾಗದಲ್ಲೂ ಕಾರ್ಯತತ್ಪರರಾಗಿದ್ದಾರೆ


  ನಾವು ಒಂದೇ ತಂಡವಾಗಿ ಕೆಲಸ ಮಾಡುತ್ತಿದ್ದು ಅದನ್ನು ಪ್ರದರ್ಶಿಸಲು #LoveWhereYouWork ಹ್ಯಾಶ್‌ಟ್ಯಾಗ್ ಅನ್ನು ಬಳಸಿಕೊಂಡಿದ್ದೇವೆ. ಹಾಗಾಗಿಯೇ ನಾನು #SleepWhereYouWork ನೊಂದಿಗೆ ಮರುಟ್ವೀಟ್ ಮಾಡಿದ್ದೇನೆ. ನಮ್ಮ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ, ಎಂಬುದು ಕ್ರಾಫೋರ್ಡ್ ಮಾತಾಗಿದೆ.


  ಹೆಚ್ಚು ಕೆಲಸ ಮಾಡಲು ಎಲೋನ್ ಸೂಚನೆ


  ವರದಿಗಳ ಪ್ರಕಾರ, ಟ್ವಿಟರ್ ಉದ್ಯೋಗಿಗಳು ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಎಲೋನ್ ಮಸ್ಕ್ ವಹಿಸಿಕೊಂಡ ನಂತರ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಟ್ವಿಟರ್ ಮ್ಯಾನೇಜರ್‌ಗಳಿಗೆ ವಾರದ ಏಳು ದಿನಗಳು 12 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡಲು ತಿಳಿಸಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.


  ಮಸ್ಕ್ ಅವರು ತಮ್ಮ ಸಹೋದ್ಯೋಗಿಗಳಿಗೆ 24/7 ಸರದಿಯಂತೆ ಕೆಲಸಮಾಡಲು ತಿಳಿಸಿದ್ದು ತಮ್ಮ ಕೆಲಸದ ಗಡುವನ್ನು ಪೂರೈಸಲು ಕೇಳಿಕೊಂಡಿದ್ದಾರೆ ಎಂದು ಸುದ್ದಿಮಾಧ್ಯಮ ವರದಿ ಮಾಡಿದೆ. ವಾರಾಂತ್ಯದೊಳಗೆ ಪ್ರಾಜೆಕ್ಟ್‌ಗಳನ್ನು ಮುಗಿಸುವ ಜವಬ್ದಾರಿ ಇರುವುದರಿಂದ ಎಲೋನ್ ಮಸ್ಕ್ ತಮ್ಮ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ ಎಂಬುದು ವರದಿಯಾಗಿದೆ.


  ಇದನ್ನೂ ಓದಿ: ಟ್ವಿಟರ್‌ಗೆ ಮತ್ತೆ ಮರಳಲಿದ್ದಾರೆ ಶ್ರೀರಾಮ್‌ ಕೃಷ್ಣನ್‌, ಎಲಾನ್​ ಮಸ್ಕ್​ ಪ್ಲ್ಯಾನ್​ ಗೆಸ್ಸ್​​​ ಮಾಡೋದೇ ಕಷ್ಟ!


  ರಾಯಿಟರ್ಸ್ ವರದಿ ಮಾಡಿರುವಂತೆ, ಬಿಲಿಯನೇರ್ ಎಲೋನ್ ಮಸ್ಕ್, ಮೊದಲ ಸುತ್ತಿನ ವಜಾಗೊಳಿಸುವಿಕೆಯ ಭಾಗವಾಗಿ ಉದ್ಯೋಗಿಗಳ ಕಾಲಭಾಗವನ್ನು ಸಂಸ್ಥೆಯಿಂದ ಹೊರ ಕಳುಹಿಸುವ ಕುರಿತು ಯೋಜಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಟ್ವಿಟರ್ 2021 ರ ಅಂತ್ಯದ ವೇಳೆಗೆ 7,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿತ್ತು. ಆದರೀಗ ಸಂಸ್ಥೆಯ ಉದ್ಯೋಗಿಗಳ ಪ್ರಮಾಣ 2000 ಕ್ಕೆ ಸಮೀಪವಿದೆ ಎಂಬುದು ವರದಿಯಾಗಿದೆ.

  Published by:Precilla Olivia Dias
  First published: