Covid-19: ಕೋವಿಡ್ ಹೆಚ್ಚಳ, ಜನವರಿ 31ರವರೆಗೆ ಪುರಿಯ ಜಗನ್ನಾಥ ದೇವಾಲಯ ಬಂದ್..!

ಈ ಐತಿಹಾಸಿಕ ದೇವಾಲಯದ ಒಳಗೆ ಹಲವಾರು ಕೋವಿಡ್-19 ಪ್ರಕರಣಗಳನ್ನು ಪತ್ತೆ ಆದ ನಂತರ ದೇವಸ್ಥಾನ ಆಡಳಿತದವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಮತ್ತೊಮ್ಮೆ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದಾಗಿ (Covid-19 cases) ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ದೇವಸ್ಥಾನಗಳನ್ನು(Temples), ಮಸೀದಿಗಳನ್ನು ಮತ್ತು ಚರ್ಚ್‌ಗಳನ್ನು ಸಹ ಕೆಲವು ವಾರಗಳ ಕಾಲದವರೆಗೆ ಮುಚ್ಚಲಾಗಿವೆ. ಈ ಕೋವಿಡ್ ಬಿಸಿ ದೊಡ್ಡ ದೊಡ್ಡ ಐತಿಹಾಸಿಕ ದೇವಸ್ಥಾನಗಳಿಗೂ ತಟ್ಟಿದೆ ಎಂದರೆ ತಪ್ಪಾಗುವುದಿಲ್ಲ.ಹೌದು.. ಒಡಿಶಾದ ಪುರಿಯ ಪ್ರಸಿದ್ಧ ಜಗನ್ನಾಥ ದೇವಾಲಯವನ್ನು(Jagannath Temple) ಜನವರಿ 10 (ಸೋಮವಾರ) ದಿಂದ ಮುಚ್ಚಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ದೇವಾಲಯದ ದಾಸ್ಯಕಾರರ ಅತ್ಯುನ್ನತ ಸಂಸ್ಥೆಯಾದ ಛತಿಸಾ ನಿಜೋಗ್ (Chhatisa Nijog) ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ ಜನವರಿ 31ರವರೆಗೆ ಈ ದೇವಾಲಯವನ್ನು ಮುಚ್ಚಲಾಗುವುದು ಎಂದು ಅವರು ಹೇಳಿದರು.ಸುಮಾರು 12ನೇ ಶತಮಾನದ ದೇವಾಲಯದಲ್ಲಿ ದೈನಂದಿನ ಆಚರಣೆಗಳನ್ನು ಆಯ್ದ ಸೇವಕರು ಮತ್ತು ಪುರೋಹಿತರು ಸಂಪ್ರದಾಯದಂತೆ ನಡೆಸುತ್ತಾರೆ, ಆದರೆ ಯಾವುದೇ ಭಕ್ತಾದಿಗಳಿಗೆ ಪ್ರವೇಶ ಇರುವುದಿಲ್ಲ ಎಂದು ಅವರು ಹೇಳಿದರು.

ಸಭೆಯಲ್ಲಿ ತೀರ್ಮಾನ
ಒಡಿಶಾ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪುರಿಯಲ್ಲಿನ ಶ್ರೀ ಜಗನ್ನಾಥ ದೇವಾಲಯವನ್ನು ಜನವರಿ 10 ರಿಂದ ಜನವರಿ 31 ರವರೆಗೆ ಭಕ್ತರಿಗಾಗಿ ಮುಚ್ಚಲಾಗುವುದು ಎಂದು ಪುರಿ ಕಲೆಕ್ಟರ್ ಸಮರ್ಥ್ ವರ್ಮಾ ಶುಕ್ರವಾರ ಅಧಿಕೃತವಾಗಿ ತಿಳಿಸಿದ್ದಾರೆ.

ಈ ನಿರ್ಧಾರವನ್ನು ಶ್ರೀ ಜಗನ್ನಾಥ ದೇವಾಲಯದ ಆಡಳಿತ (ಎಸ್‌ಜೆಟಿಎ) ಮತ್ತು ಛತಿಸಾ ನಿಜೋಗಾ (ದೇವಾಲಯದ ದಾಸ್ಯಕಾರರ ಅತ್ಯುನ್ನತ ಸಂಸ್ಥೆ) ಅವರ ಸಂಯೋಗದಲ್ಲಿ ನಡೆದಂತಹ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: Temple Prasada: ಅತ್ಯಂತ ರುಚಿಯಾದ ಪ್ರಸಾದ ನೀಡುವ ದೇವಾಲಯಗಳಿವು, ನೀವು ಇಲ್ಲಿ ಊಟ ಮಾಡಿದ್ದೀರಾ?

ಕೋವಿಡ್ ಕೇರ್ ಸೆಂಟರ್, ಆಂಬ್ಯುಲೆನ್ಸ್, ಕ್ಷಿಪ್ರ ಪ್ರತಿಕ್ರಿಯೆ ತಂಡ ಮತ್ತು ವೈದ್ಯಕೀಯ ತಪಾಸಣೆಯಂತಹ ಕೋವಿಡ್ ಸಂಬಂಧಿತ ಸುರಕ್ಷತಾ ಕ್ರಮಗಳ ಬಗ್ಗೆಯೂ ಸಹ ಈ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಅಧಿಕಾರಿ ಹೇಳಿದರು.

ಜನವರಿ 31ರ ನಂತರ ಕೋವಿಡ್ ಪ್ರಕರಣಗಳಲ್ಲಿ ಯಾವುದೇ ಇಳಿಮುಖ ಕಾಣದೆ ಇದ್ದರೆ, ದೇವಾಲಯವನ್ನು ಇನ್ನಷ್ಟು ದಿನಗಳ ಕಾಲ ಮುಚ್ಚುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಕೋವಿಡ್-19 ಪ್ರಕರಣ ಪತ್ತೆ
ಈ ಐತಿಹಾಸಿಕ ದೇವಾಲಯದ ಒಳಗೆ ಹಲವಾರು ಕೋವಿಡ್-19 ಪ್ರಕರಣಗಳನ್ನು ಪತ್ತೆ ಆದ ನಂತರ ದೇವಸ್ಥಾನ ಆಡಳಿತದವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಶ್ರೀ ಜಗನ್ನಾಥ ದೇವಾಲಯ ಆಡಳಿತದಲ್ಲಿರುವ ಹಲವಾರು ಉದ್ಯೋಗಿಗಳು ಕೋವಿಡ್ ತಪಾಸಣೆಯಲ್ಲಿ ಪಾಸಿಟಿವ್ ಬಂದಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಕಲೆಕ್ಟರ್ ತಿಳಿಸಿದರು.

ಒಡಿಶಾದ ಪುರಿ ಜಿಲ್ಲೆಯಲ್ಲಿ 54 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ, ಒಟ್ಟಿನಲ್ಲಿ ಒಡಿಶಾ ರಾಜ್ಯದಲ್ಲಿ 2,703 ಹೊಸ ಕೋವಿಡ್-19 ಸೋಂಕುಗಳ ಪ್ರಕರಣಗಳು ವರದಿಯಾಗಿವೆ ಎಂದು ಹೇಳಲಾಗುತ್ತಿದೆ.

ರಥ ಯಾತ್ರೆ ರದ್ದು
ಈ ಹಿಂದೆ ಸಹ ಕೋವಿಡ್‌-19 ವ್ಯಾಪಿಸಿರುವ ಇಂತಹ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುವುದಕ್ಕೆ ಅವಕಾಶ ನೀಡಿದರೆ ಪ್ರಕರಣಗಳು ಹೆಚ್ಚಾಗಬಹುದು ಎಂದು 2020ರ ಪುರಿ ಜಾತ್ರೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.

ನಂತರ 2020 ವರ್ಷದ ರಥ ಯಾತ್ರೆಯನ್ನು ರದ್ದುಪಡಿಸಬೇಕು ಇಲ್ಲವೇ ಮುಂದೂಡುವಂತೆ ನಿರ್ದೇಶನ ನೀಡುವಂತೆ ಕೋರಿ ಸ್ವಯಂ ಸೇವಾ ಸಂಸ್ಥೆಯೊಂದು ಸುಪ್ರೀಂಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿತ್ತು.

ಇದನ್ನೂ ಓದಿ: Kukke Subramanya Temple: ಇಂದಿನಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾವುದೇ ಧಾರ್ಮಿಕ ಸೇವೆಗೆ ಅವಕಾಶವಿಲ್ಲ

ನಂತರದಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆಯ ನಡುವೆಯೂ ಜಗತ್‌ ಪ್ರಸಿದ್ಧವಾಗಿರುವ ಒಡಿಶಾದ ಪುರಿ ಜಗನ್ನಾಥ ರಥ ಯಾತ್ರೆ ನಡೆಸುವುದಕ್ಕೆ 2020 ಜೂನ್ 22ರಂದು ಸುಪ್ರೀಂ ಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
Published by:vanithasanjevani vanithasanjevani
First published: