• Home
  • »
  • News
  • »
  • national-international
  • »
  • Sidhu Moose Wala: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಸಾವಿನ ನೋವಿನಲ್ಲಿ ಸಾಕು ಸಾಯಿಗಳು, ಕರುಳು ಹಿಂಡುವ ವಿಡಿಯೋ

Sidhu Moose Wala: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಸಾವಿನ ನೋವಿನಲ್ಲಿ ಸಾಕು ಸಾಯಿಗಳು, ಕರುಳು ಹಿಂಡುವ ವಿಡಿಯೋ

ಸಿಧು ಮೂಸೆವಾಲಾ ಮತ್ತು ಸಾಕು ನಾಯಿ

ಸಿಧು ಮೂಸೆವಾಲಾ ಮತ್ತು ಸಾಕು ನಾಯಿ

ಸಿಧು ಮೂಸೆವಾಲಾ ಅವರ ಸಾವನ್ನು ಅಭಿಮಾನಿಗಳು ಮತ್ತು ಅವರ ಕುಟುಂಬದವರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಸಿಧು ಹತ್ಯೆಯ ನಂತರ ಆತನ ಪ್ರೀತಿಯ ನಾಯಿಯೂ ಸಹ ದುಃಖ, ಶೋಕದಲ್ಲಿ ಮುಳುಗಿದೆ. ಸಿಧು ಅವರ ಅಗಲಿಕೆ, ಅವರ ಪ್ರೀತಿಯ ನಾಯಿಯ ಹೃದಯ ಬಿರಿಯುವಂತೆ ಮಾಡಿದೆ.

  • Share this:

    ಖ್ಯಾತ (Famous) ಪಂಜಾಬಿ (Punjab) ಗಾಯಕ (Singer) ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ (Sidhu Moose Wala) ಅವರನ್ನು ಕೆಲ ದುಷ್ಕರ್ಮಿಗಳು ಭಾನುವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ (Murder). ಸಿಧು ಮೂಸೇವಾಲಾ ಅವರ ಸಾರ್ವಜನಿಕ  ಕೊಲೆಯ ನಂತರ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಇದಕ್ಕೆ ಭಯಗೊಂಡ ಮುಖ್ಯಮಂತ್ರಿ ಭಗವಂತ್ ಮಾನ್, ಶಾಂತಿ ಕಾಪಾಡುವಂತೆ ಪಂಜಾಬಿಗಳಿಗೆ ಮನವಿ ಮಾಡಿದ್ದಾರೆ. ಈ ದಾಳಿ ನಡೆಸಿದವರು ಯಾರೇ ಆಗಿದ್ದರೂ ಸುಮ್ಮನೇ ಬಿಡುವುದಿಲ್ಲ. ಯುವ ಗಾಯಕನ ಹತ್ಯೆ ಸಾಕಷ್ಟು ದುಃಖ ತಂದಿದೆ ಎಂದಿದ್ದಾರೆ. ಈ ಮಧ್ಯೆ ಸಿಧು ಅವರ ಕೊಲೆ ಸುದ್ದಿ ಹೊರಬಿದ್ದ ನಂತರ ಎಲ್ಲರೂ ಶಾಕ್ ಆಗಿದ್ದಾರೆ.


    ಸಿಧು ಮೂಸೆವಾಲಾ ಸಾವಿನಿಂದ ಅವರ ಪ್ರೀತಿಯ ನಾಯಿಯ ದುಃಖ


    ಸಿಧು ಮೂಸೆವಾಲಾ ಅವರ ಸಾವನ್ನು ಅಭಿಮಾನಿಗಳು ಮತ್ತು ಅವರ ಕುಟುಂಬದವರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಸಿಧು ಹತ್ಯೆಯ ನಂತರ ಆತನ ಪ್ರೀತಿಯ ನಾಯಿಯೂ ಸಹ ದುಃಖ, ಶೋಕದಲ್ಲಿ ಮುಳುಗಿದೆ. ಸಿಧು ಅವರ ಅಗಲಿಕೆ, ಅವರ ಪ್ರೀತಿಯ ನಾಯಿಯ ಹೃದಯ ಬಿರಿಯುವಂತೆ ಮಾಡಿದೆ.




    ಸಿಧು ಸಾಕು ನಾಯಿಗಳ ದುಃಖದ ವಿಡಿಯೋ ವೈರಲ್


    ಇತ್ತೀಚೆಗಷ್ಟೇ ಸಿದ್ದು ಅವರ ಪ್ರೀತಿಯ ಎರಡು ಸಾಕು ನಾಯಿಗಳ ವಿಡಿಯೋವೊಂದು ಹೊರ ಬಿದ್ದಿದೆ. ಇದನ್ನು ನೋಡಿ ಹಲವರು ಭಾವುಕರಾಗುತ್ತಿದ್ದಾರೆ. ಇನ್ನು ಈ ನಾಯಿಗಳು ಸಿದ್ದುಗಾಗಿ ಕಾದು ಕುಳಿತಿವೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ.


    ಇದನ್ನೂ ಓದಿ: ವರ್ಕೌಟ್ ಮಾಡುವ 40 ನಿಮಿಷಗಳ ಮೊದಲು ಈ ಪದಾರ್ಥಗಳನ್ನು ಸೇವಿಸಿ ಎನರ್ಜಿ ಪಡೆಯಿರಿ!


    ಸಿದ್ದು ನೆನಪಿನಲ್ಲಿ ಸುಮ್ಮನೇ ಕುಳಿತಿರುವ ನಾಯಿಮರಿ


    28ರ ಹರೆಯದ ಸಿಧು ಮುಸೇವಾಲಾ ಚಿಕ್ಕ ವಯಸ್ಸಿನಲ್ಲೇ ಅಪಾರ ಖ್ಯಾತಿ ಗಳಿಸಿದ್ದರು. ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ ಗ್ರಾಮದ ನಿವಾಸಿಯಾಗಿದ್ದ ಸಿಧು ಕೊಲೆಯ ನಂತರ ಇಡೀ ಗ್ರಾಮದಲ್ಲಿ ನೀರವ ಮೌನ, ಶೋಕ ಮಡುಗಟ್ಟಿದೆ. ಅದೇ ಸಮಯದಲ್ಲಿ ಸಿದ್ದು ಅವರ ಎರಡು ಸಾಕು ನಾಯಿಗಳು ಸಹ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.


    ಸಿಧು, ತನ್ನ ನಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನಾಯಿಗಳೊಂದಿಗೆ ವೀಡಿಯೊ ಮತ್ತು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಈಗ ತಮ್ಮ ಮಾಲೀಕನ ಸಾವಿನಿಂದಾಗಿ ನಾಯಿಗಳು ಶೋಕಸಾಗರದಲ್ಲಿ ಮುಳುಗಿವೆ.


    ನಾಯಿಗಳ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್


    ಈ ನಾಯಿಗಳ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ನಾಯಿಗಳು ಏನೂ ತಿನ್ನುತ್ತಿಲ್ಲ. ಸಿಧು ಬರುತ್ತಾರೆ ಎಂದು ಮೂಲೆಯಲ್ಲಿ ಕುಳಿತು ದಾರಿ ಕಾಯುತ್ತಿವೆ ಎಂದು ಹೇಳಲಾಗುತ್ತಿದೆ. ಸಿದ್ದು ಅವರ ನೆಚ್ಚಿನ ಟ್ರ್ಯಾಕ್ಟರ್ ಕೂಡ ವಿಡಿಯೋದಲ್ಲಿ ಗೋಚರಿಸುತ್ತಿದೆ.


    ಈ ವೀಡಿಯೊಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಅನೇಕ ಜನರು ಕಣ್ಣೀರು ಸುರಿಸುತ್ತಿರುವ ಎಮೋಜಿ ಹಾಕುವ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ. ಈ ವೀಡಿಯೊ ನಿಜವಾಗಿಯೂ ನನ್ನನ್ನು ಅಳುವಂತೆ ಮಾಡುತ್ತದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.


    ಇದನ್ನೂ ಓದಿ: ಮದುವೆಯಾದ ಐದೇ ತಿಂಗಳಿಗೆ ವೈದ್ಯೆಯ ದಾರುಣ ಸಾವು, ಗಂಡನ ಮನೆಯಲ್ಲಿ ಆಗಿದ್ದೇನು?


    ಇನ್ನು ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ತನಿಖೆಗೆ ಪಂಜಾಬ್ ಪೊಲೀಸರು ಎಸ್‌ಐಟಿ ರಚಿಸಿದ್ದಾರೆ. ಭಾನುವಾರ ತಡರಾತ್ರಿ ಪಂಜಾಬ್ ಪೊಲೀಸ್ ಡಿಜಿಪಿ ವಿಕೆ ಭನ್ವಾರಾ ಅವರು ಪಂಜಾಬ್‌ನಲ್ಲಿರುವ ಹಿರಿಯ ಅಧಿಕಾರಿಗಳನ್ನು ಎಸ್‌ಐಟಿಗೆ ಸೇರಿಸಲಾಗುವುದು ಎಂದು ಹೇಳಿದ್ದಾರೆ. ಸಿಧು ಮುಸೇವಾಲಾ ಹತ್ಯೆಗೆ 9 ಎಂಎಂ ಪಿಸ್ತೂಲ್ ಬಳಸಲಾಗಿದೆ. ಹಂತಕರು ಕೊಲೆಗೆ 3 ರೀತಿಯ ಆಯುಧಗಳನ್ನು ಬಳಸಿದ್ದಾರೆ. ಸ್ಥಳದಲ್ಲಿ 30 ಚಿಪ್ಪುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    Published by:renukadariyannavar
    First published: