Nirvair Singh Died: ಆಸ್ಟ್ರೇಲಿಯಾದಲ್ಲಿ ಭೀಕರ ಆ್ಯಕ್ಸಿಡೆಂಟ್; ಜನಪ್ರಿಯ ಗಾಯಕ ನಿಧನ

ಆಸ್ಟ್ರೇಲಿಯಾದ ಡಿಗ್ಗರ್ಸ್ ರೆಸ್ಟ್‌ನಲ್ಲಿರುವ ಬುಲ್ಲಾ-ಡಿಗ್ಗರ್ಸ್ ರೆಸ್ಟ್ ರಸ್ತೆಯಲ್ಲಿ ಮಧ್ಯಾಹ್ನ 3.30 ಕ್ಕೆ ಈ ಅಪಘಾತ ನಡೆದಿದ್ದು, ಸೆಡಾನ್‌ನ 23 ವರ್ಷದ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ವೈರ್ ಸಿಂಗ್

ನಿರ್ವೈರ್ ಸಿಂಗ್

  • Share this:
    ಸಿಡ್ನಿ:  ಆಸ್ಟ್ರೇಲಿಯಾದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಪಂಜಾಬಿ ಗಾಯಕ ನಿರ್ವೈರ್ ಸಿಂಗ್ (Punjabi Singer Nirvair Singh Died) ಸಾವನ್ನಪ್ಪಿದ್ದಾರೆ. ಮೆಲ್ಬೋರ್ನ್ ಬಳಿ ಕಿಯಾ ಸೆಡಾನ್‌ನಿಂದ ಉಂಟಾದ ಮೂರು ವಾಹನಗಳ ಡಿಕ್ಕಿಯಲ್ಲಿ ಇಬ್ಬರು ಮಕ್ಕಳ ತಂದೆಯೂ ಆಗಿರುವ 42 ವರ್ಷದ ಗಾಯಕ ನಿರ್ವೈರ್ ಸಿಂಗ್ ಮೃತಪಟ್ಟಿದ್ದಾರೆ. ಆಸ್ಟ್ರೇಲಿಯಾದ ಡಿಗ್ಗರ್ಸ್ ರೆಸ್ಟ್‌ನಲ್ಲಿರುವ ಬುಲ್ಲಾ-ಡಿಗ್ಗರ್ಸ್ ರೆಸ್ಟ್ ರಸ್ತೆಯಲ್ಲಿ ಮಧ್ಯಾಹ್ನ 3.30 ಕ್ಕೆ ಈ ಅಪಘಾತ (Accident In Australia) ನಡೆದಿದ್ದು, ಸೆಡಾನ್‌ನ 23 ವರ್ಷದ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೀಪಿನೊಳಗಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.





    9 ವರ್ಷಗಳ ಹಿಂದೆಯೇ ಆಸ್ಟ್ರೇಲಿಯಾಕ್ಕೆ ಬಂದಿದ್ದ ಗಾಯಕ
    ಡೈಲಿ ಮೇಲ್ ವರದಿಯ ಪ್ರಕಾರ, ನಿರ್ವೈರ್ ಸಿಂಗ್ ಅವರು ತಮ್ಮ ಗಾಯನ ವೃತ್ತಿಯನ್ನು ಮುಂದುವರಿಸಲು ಒಂಬತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಬಂದಿದ್ದರು. ಆದರೆ ಈ ರಸ್ತೆ ಅಪಘಾತದಲ್ಲಿ ಅವರು ಸಾವನ್ನಪ್ಪುವ ಮೂಲಕ ಇತ್ತೀಚಿಗೆ ಹಲವು ಗಾಯಕರನ್ನು ಕಳೆದುಕೊಂಡಿರುವ ಪಂಜಾಬಿ ಸಂಗೀತ ಲೋಕಕ್ಕೆ ಇನ್ನೊಂದು ಆಘಾತ ಎರಗಿದೆ.

    ತೆರೆ ಬಿನಾ ಹಾಡಿನ ಹಿಂದಿನ ಕಂಠ
    ಮೈ ಟರ್ನ್ ಎಂಬ ಆಲ್ಬಮ್​ನ ತೇರೆ ಬಿನಾ ಎಂಬ ಹಾಡಿನ ಮೂಲಕ ನಿರ್ವೈರ್ ಸಿಂಗ್ ಬಹು ಜನಪ್ರಿಯತೆ ಗಳಿಸಿದ್ದರು. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರ ಸಾವು ಪಂಜಾಬಿ ಗೀತೆಗಳ ಅಭಿಮಾನಿಗಳ ದುಃಖಕ್ಕೆ ಕಾರಣವಾಗಿದೆ. 

    ಗಾಯಕ ನಿರ್ವೈರ್ಸ ಸಿಂಗ್ ಅವರ ಹಲವಾರು ಅನುಯಾಯಿಗಳು ಮತ್ತು ಸ್ನೇಹಿತರು ಶ್ರದ್ಧಾಂಜಲಿ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. 'ಮೈ ಟರ್ನ್' ಆಲ್ಬಂನ ತೇರೆ ಬಿನಾ ಹಾಡಿನ ಮೂಲಕ ನಿರ್ವೈರ್ ಸಿಂಗ್ ಖ್ಯಾತಿ ಗಳಿಸಿದರು. ದರ್ದಾ-ಎ-ದಿಲ್, ಜೆ ರುಸ್ಗಿ, ಫೆರಾರಿ ಡ್ರೀಮ್ ಮತ್ತು ಹಿಕ್ ಥೋಕ್ ಕೆ ಅವರ ಇತರ ಹಿಟ್‌ ಆಲ್ಬಮ್​ಗಳಾಗಿದ್ದವು.

    ಇದನ್ನೂ ಓದಿ: Arvind Kejriwal: ಅಗ್ನಿಪರೀಕ್ಷೆ ಗೆದ್ದ ಅರವಿಂದ; 62 ರಲ್ಲಿ 58 ಶಾಸಕರ ಮತ ಕೇಜ್ರಿವಾಲ್​ಗೆ

    ನಿರ್ವೈರ್ ಸಿಂಗ್ ಹಿನ್ನೆಲೆಯೇನು?
    ಪಂಜಾಬ್‌ನ ಕುರಾಲಿ ಎಂಬ ಪ್ರದೇಶ  ಗಾಯಕ ನಿರ್ವೈರ್ ಸಿಂಗ್  ಅವರ ಮೂಲ. ಅವರು ಒಂಬತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಅವರು ಅಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಿದ್ದರಲ್ಲದೇ ಸ್ನೇಹಿತರ ಜೊತೆಗೂಡಿ ಸಂಗೀತ ಲೋಕದಲ್ಲಿಯೂ ಜನಪ್ರಿಯತೆ ಗಳಿಸಿದ್ದರು.

    ಇದನ್ನೂ ಓದಿ: Cervical Cancer Vaccine: ಹೆಣ್ಮಕ್ಕಳಿಗೆ ಗುಡ್ ನ್ಯೂಸ್, ದೇಶದ ಮೊದಲ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಿಡುಗಡೆ

    ಸಂಗೀತ ಲೋಕಕ್ಕಾದ ನಷ್ಟ ಎಂದ ಗಾಯಕ
    ಪಂಜಾಬಿ ಗಾಯಕ ಗಗನ್ ಕೊಕ್ರಿ ಅವರು Instagram ಪೋಸ್ಟ್‌ನಲ್ಲಿ ನಿರ್ವೈರ್ ಸಿಂಗ್ ಅವರನ್ನು ನೆನಪಿಸಿಕೊಂಡಿದ್ದಾರೆ. ಒಂದೇ ಆಲ್ಬಂನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇಬ್ಬರೂ ಹೇಗೆ ವೃತ್ತಿ ಜೀವನ ಪ್ರಾರಂಭಿಸಿದರು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ. ಜೀವನದಲ್ಲಿ ದೊಡ್ಡದನ್ನು ಸಾಧಿಸಲು ನಿರ್ವೈರ್‌ ಸಿಂಗ್ ಸಮರ್ಪಣೆಯ ಮೇಲೆ ಮತ್ತಷ್ಟು ಬೆಳಕು ಚೆಲ್ಲಿದ್ದಾರೆ. ನಿರ್ವೈರ್ ಸಿಂಗ್ ಓರ್ವ ಅದ್ಭುತ ವ್ಯಕ್ತಿಯಾಗಿದ್ದ ಅವರು ಮೃತಪಟ್ಟಿರುವುದು ಸಂಗೀತ ಲೋಕಕ್ಕೆ ನಷ್ಟ ಉಂಟುಮಾಡಿದೆ. ಜೊತೆಗೆ ಅತ್ಯಂತ ಆಘಾತಕಾರಿಯಾಗಿದೆ ಎಂದು ಗಗನ್ ಕೊಕ್ರಿ ಭಾವನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    Published by:guruganesh bhat
    First published: