ರಸ್ತೆ ಅಪಘಾತದಲ್ಲಿ ಪಂಜಾಬಿ ನಟ, ಕೆಂಪು ಕೋಟೆ ಹಿಂಸಾಚಾರ ಆರೋಪಿ Deep Sidhu ಸಾವು

ಸಿಧು ದೆಹಲಿಯಿಂದ ಪಂಜಾಬ್‌ನ ಭಟಿಂಡಾಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅವರು ಪ್ರಯಾಣಿಸುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಪಂಜಾಬಿ ನಟ- ಕಾರ್ಯಕರ್ತ ದೀಪ್​ ಸಿಧು

ಪಂಜಾಬಿ ನಟ- ಕಾರ್ಯಕರ್ತ ದೀಪ್​ ಸಿಧು

  • Share this:
    ಕಳೆದ ವರ್ಷ ರೈತರ ಪ್ರತಿಭಟನೆ ವೇಳೆ ಕೆಂಪು ಕೋಟೆ ಹಿಂಸಾಚಾರದ (Red Fort Violence ) ಘಟನೆ ವೇಳೆ ಸುದ್ದಿಯಾಗಿದ್ದ ಪಂಜಾಬಿ ನಟ- ಕಾರ್ಯಕರ್ತ ದೀಪ್​ ಸಿಧು (Deep Sidhu) ಇಂದು ರಸ್ತೆ ಅಪಘಾತದಲ್ಲಿ (Road Accident)  ಸಾವನ್ನಪ್ಪಿದ್ದಾರೆ ಎಂದು ಐಎಎನ್​ಎಸ್ ವರದಿ ಮಾಡಿದೆ. ದೆಹಲಿಯನ್ನು ಬೈಪಾಸ್ ಬಳಿ ಕುಂಡ್ಲಿ-ಮನೇಸರ್-ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸಿದೆ. ಸಿಧು ದೆಹಲಿಯಿಂದ ಪಂಜಾಬ್‌ನ ಭಟಿಂಡಾಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅವರು ಪ್ರಯಾಣಿಸುತ್ತಿದ್ದ ಕಾರು ಇಂದು ರಾತ್ರಿ 9:30 ಕ್ಕೆ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಸಾವನ್ನಪ್ಪಿದ್ದರು ಎಂದು ವರದಿ ಆಗಿದೆ

    ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸುವ ಸಂಚಿನಲ್ಲಿ ಭಾಗಿಯಾದ ಆರೋಪದ ಮೇಲೆ ಸಿಧು aವರನನು ಕಳೆದ ಫೆ. 9ರಂದು ಪೊಲೀಸರು ಬಂಧಿಸಿದ್ದರು. 70 ದಿನಗಳ ಬಂಧನದ ಬಳಿಕ ಏಪ್ರಿಲ್​ 17ರಂದು ಅವರನ್ನು ಜಾಮೀನಿನ ಬಿಡುಗಡೆ ಮಾಡಲಾಗಿತ್ತು. ಇದಾದ ಬಳಿಕ ಅದೇ ದಿನ ಕೆಂಪು ಕೋಟೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಲ್ಲಿಸಿದ ಎಫ್‌ಐಆರ್ ಆಧಾರದ ಮೇಲೆ ಬಂಧಿಸಲಾಗಿತ್ತು. ಒಂಬತ್ತು ದಿನಗಳ ನಂತರ, ಎರಡನೇ ಪ್ರಕರಣದಲ್ಲಿ ಸಿಧುಗೆ ಜಾಮೀನು ನೀಡಲಾಯಿತು
    Published by:Seema R
    First published: