HOME » NEWS » National-international » PUNJAB WILL BURN IF THE STATE IS ASKED TO SHARE WATER WITH HARYANA SAYS AMARINDER SINGH RMD

ಹರಿಯಾಣಕ್ಕೆ ನೀರು ಬಿಡ ಹೇಳಿದರೆ ಪಂಜಾಬ್​ ಹೊತ್ತುರಿಯುತ್ತದೆ; ಅಮರಿಂದರ್ ಸಿಂಗ್ ಎಚ್ಚರಿಕೆ

ಈ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಹರಿಯಾಣ ಹಾಗೂ ಪಂಜಾಬ್​ ಮಾತುಕತೆ ನಡೆಸಬೇಕು. ಈ ಮಾತುಕತೆಗೆ ಕೇಂದ್ರ ಸರ್ಕಾರ ಸಹಕಾರ ನೀಡುವಂತೆ ಸುಪ್ರೀಂಕೋರ್ಟ್​ ಸೂಚಿಸಿತ್ತು. ಈ ಸೂಚನೆಯಂತೆ ಸಭೆ ಸೇರಲಾಗಿತ್ತು.

news18-kannada
Updated:August 19, 2020, 8:05 AM IST
ಹರಿಯಾಣಕ್ಕೆ ನೀರು ಬಿಡ ಹೇಳಿದರೆ ಪಂಜಾಬ್​ ಹೊತ್ತುರಿಯುತ್ತದೆ; ಅಮರಿಂದರ್ ಸಿಂಗ್ ಎಚ್ಚರಿಕೆ
ಸಭೆಯ ದೃಶ್ಯ
  • Share this:
 ಚಂಡೀಗಢ (ಆ.19): ಸಟ್ಲೆಜ್​-ಯಮುನಾ ನದಿಯನ್ನು ಸೇರಿಸುವ ಕಾಲುವೆ ಯೋಜನೆಗೆ ಈ ಮೊದಲಿನಿಂದಲೂ ಪಂಜಾಬ್​ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಈಗ ಈ ಯೋಜನೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಒಂದೊಮ್ಮೆ ಸಟ್ಲೆಜ್​ ನದಿ ನೀರು ಹರಿಯಾಣಾಗೆ ಹರಿದು ಹೋದರೆ ಇಡೀ ಪಂಜಾಬ್ ಹೊತ್ತುರಿಯುತ್ತದೆ ಎಂದು ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಗಲಭೆಗಳು ಏಳುತ್ತವೆ ಎನ್ನುವ ಬಗ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಹರಿಯಾಣ ಹಾಗೂ ಪಂಜಾಬ್​ ಮಾತುಕತೆ ನಡೆಸಬೇಕು. ಈ ಮಾತುಕತೆಗೆ ಕೇಂದ್ರ ಸರ್ಕಾರ ಸಹಕಾರ ನೀಡುವಂತೆ ಸುಪ್ರೀಂಕೋರ್ಟ್​ ಸೂಚಿಸಿತ್ತು. ಸುಪ್ರೀಂ ಕೋರ್ಟ್​ನ ಆದೇಶದಂತೆ ಹರಿಯಾಣ ಸಿಎಂ ಮನೋಹರ್​ ಲಾಲ್​ ಖಟ್ಟರ್​, ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಹಾಗೂ ಅಮರಿಂದರ್​ ಸಿಂಗ್ ಮಂಗಳವಾರ ಸಭೆ ಸೇರಿದ್ದರು. ಆದರೆ, ಈ ಸಭೆ ಫಲಪ್ರದವಾಗಿಲ್ಲ.

ಸಭೆಯಲ್ಲಿ ಮಾತನಾಡಿದ್ದ ಗಜೇಂದ್ರ ಸಿಂಗ್ ಶೇಖಾವತ್​, ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಈ ಯೋಜನೆಯನ್ನು ನೋಡಬೇಕು. ಅಂದಾಗ ಮಾತ್ರ ಎಲ್ಲವೂ ಸರಿಯಾಗುತ್ತದೆ ಎಂದರು. ಇದಕ್ಕೆ ಉತ್ತರಿಸಿದ ಅಮರಿಂದರ್​ ಸಿಂಗ್​, ಈ ಯೋಜನೆ ಪೂರ್ಣಗೊಂಡರೆ ಇಡೀ ಪಂಜಾಬ್​ ಹೊತ್ತುರಿಯುತ್ತದೆ. ಆಗ ಅದು ರಾಷ್ಟ್ರೀಯ ಸಮಸ್ಯೆ ಆಗಿ ಮಾರ್ಪಡುತ್ತದೆ. ಇದರ ಪರಿಣಾಮ ಹರಿಯಾಣ ಹಾಗೂ ರಾಜಸ್ಥಾನದ ಮೇಲೂ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆದರೆ, ಈ ಕಾಲುವೆ ನಿರ್ಮಾಣವಾಗಲೇ ಬೇಕು ಎನ್ನುವ ವಾದವನ್ನು ಮನೋರಹರ್​ ಲಾಕ್​ ಖಟ್ಟರ್​ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನ ಸ್ಟೆರ್​ಲೈಟ್ ಕಾಪರ್ ಘಟಕ ಪುನಾರಂಭಕ್ಕೆ ಮದ್ರಾಸ್ ಹೈಕೋರ್ಟ್ ನಕಾರ

1982ರಲ್ಲಿ ಮೊಟ್ಟ ಮೊದಲ ಬಾರಿಗೆ ಈ ವಿವಾದ ಆರಂಭವಾಗಿತ್ತು. ಈ ಯೋಜನೆಗೆ ಅಂದಿನಿಂದಲೂ ವಿರೋಧ ವ್ಯಕ್ತವಾಗುತ್ತಲೇ ಇದೆ. ಹರಿಯಾಣ ಭಾಗದ ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಪಂಜಾಬ್​ ಭಾಗದ ಕಾಲುವೆ ನಿರ್ಮಾಣ ಅರ್ಧಕ್ಕೆ ನಿಂತಿದೆ.
Published by: Rajesh Duggumane
First published: August 19, 2020, 8:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories