ಒಲಿಂಪಿಕ್ಸ್ ಹಾಕಿ ಆಟಗಾರರಿಗೆ ಪಂಜಾಬ್​ನಲ್ಲಿ ಭಾಂಗ್ರಾ ಡ್ಯಾನ್ಸ್ ಮೂಲಕ ಅದ್ದೂರಿ ಸ್ವಾಗತ

ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ಹಾಕಿ ತಂಡದಲ್ಲಿರುವ ಪಂಜಾಬ್ ಆಟಗಾರರಿಗೆ ಆ ರಾಜ್ಯದಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಭಾಂಗ್ರಾ ಡ್ಯಾನ್ಸ್ ಮೂಲಕ ಹುರುಪಿನಿಂದ ಹಾಕಿ ಹೀರೋಗಳನ್ನ ಬರಮಾಡಿಕೊಳ್ಳಲಾಯಿತು.

ಭಾರತ ಹಾಕಿ ತಂಡದ ನಾಯಕ ಮನ್​ಪ್ರೀತ್ ಸಿಂಗ್

ಭಾರತ ಹಾಕಿ ತಂಡದ ನಾಯಕ ಮನ್​ಪ್ರೀತ್ ಸಿಂಗ್

  • Share this:
ಟೋಕಿಯೋ 2020 ಒಲಿಂಪಿಕ್ಸ್‌ನಲ್ಲಿ ಕಳೆದ ವಾರ ಭಾರತೀಯ ಪುರುಷರ ಹಾಕಿ ತಂಡ ಜರ್ಮನಿಯನ್ನು ಸೋಲಿಸಿದ ನಂತರ ಇತಿಹಾಸ ಸೃಷ್ಟಿಸಿತು. 4 ದಶಕಗಳ ನಂತರ ಮತ್ತೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದುಕೊಂಡಿದೆ. ಇನ್ನು, ಮಹಿಳಾ ಹಾಕಿ ತಂಡ ಸಹ ಪದಕವನ್ನು ಕೂದಲೆಳೆಯ ಅಂತರದಲ್ಲಿಯೇ ಮಿಸ್‌ ಮಾಡಿಕೊಂಡಿತು. ಈ ಹಿನ್ನೆಲೆ ಜಪಾನಿನ ರಾಜಧಾನಿ ಟೋಕಿಯೋದಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದ ನಂತರ ಪಂಜಾಬ್‌ ರಾಜ್ಯದ ಹಾಕಿ ಆಟಗಾರರು ಮನೆಗೆ ಮರಳಿದ್ದು, ಅವರಿಗೆ ಅಮೃತಸರದಲ್ಲಿ ಪಂಜಾಬ್‌ ರಾಜ್ಯ ಸರ್ಕಾರ ಸಂಭ್ರಮದ ಸ್ವಾಗತ ಕೋರಿದೆ. ಅವರ ಆಗಮನವನ್ನು ಗುರುತಿಸಲು, ಹಾಕಿ ಆಟಗಾರರನ್ನು ಭಾಂಗ್ರಾ ಪ್ರದರ್ಶಕರು ಸ್ವಾಗತಿಸಿದರು ಮತ್ತು ಅವರ ಕುಟುಂಬ ಸದಸ್ಯರು ಅಮೃತಸರ ವಿಮಾನ ನಿಲ್ದಾಣದ ವೇಟಿಂಗ್‌ ರೂಂನಲ್ಲಿ ಸ್ವಾಗತಿಸಿದರು. ಹಾಕಿ ತಂಡದ ಹಲವಾರು ಸದಸ್ಯರು ಪಂಜಾಬ್‌ನ ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಲು ಯೋಜಿಸಿದ್ದು, ಪುರುಷರ ಹಾಕಿ ತಂಡವನ್ನು ಅಮೃತಸರದ ಗೋಲ್ಡನ್ ಗೇಟ್‌ನಲ್ಲಿ ಗೌರವಿಸಲಾಗುವುದು. ಅಲ್ಲಿ ಅವರಿಗೆ ಮತ್ತಷ್ಟು ಆಚರಣೆಗಳನ್ನು ರಾಜ್ಯ ಸರ್ಕಾರ ಪ್ಲ್ಯಾನ್‌ ಮಾಡಿದೆ.

ಪುರುಷರು ಮತ್ತು ಮಹಿಳಾ ಆಟಗಾರರನ್ನು ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸ್ವಾಗತಿಸುವ ಹಾಗೂ ಆಟಗಾರರಿಗಾಗಿ ಹೂಮಾಲೆ ಮತ್ತು ಹೂಗುಚ್ಛಗಳೊಂದಿಗೆ ಕಾಯುತ್ತಿದ್ದ ದೃಶ್ಯಗಳ ವಿಡಿಯೋ ಕ್ಲಿಪ್‌ಗಳನ್ನು ಸುದ್ದಿ ಸಂಸ್ಥೆ ANI ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: ಒಲಿಂಪಿಕ್ಸ್‌ ಕ್ರೀಡಾಪಟುಗಳಿಗೆ ಕೇರಳ ಸರ್ಕಾರ ಗೌರವ ನೀಡುತ್ತಿಲ್ಲ: ಹರಿಹಾಯ್ದ ಅಂಜು ಬಾಬಿ ಜಾರ್ಜ್

ಇನ್ನೊಂದೆಡೆ, ಹಾಕಿ ಆಟಗಾರರು ಕೂಡ ಇದೇ ರೀತಿಯ ಟರ್ಬನ್‌ಗಳನ್ನು ಧರಿಸಿರುವುದನ್ನು ಮತ್ತು ಮಾಧ್ಯಮ ತಂಡದೊಂದಿಗೆ ಸಂವಹನ ನಡೆಸುತ್ತಿರುವುದನ್ನು ನೋಡಬಹುದಾಗಿದ್ದು, ಕೆಲವು ಆಟಗಾರರು ತಮ್ಮ ಕಂಚಿನ ಪದಕಗಳನ್ನು ಪ್ರದರ್ಶನ ಮಾಡಿದರು. ಈ ಮಧ್ಯೆ, ಭವಿಷ್ಯದ ಆಟಗಳಿಗಾಗಿ ತಮ್ಮ ಯೋಜನೆಗಳ ಬಗ್ಗೆ ಮಾತನಾಡಿದ ಭಾರತೀಯ ಪುರುಷರ ತಂಡದ ತಂಡದ ಆಟಗಾರ ಗುರ್ಜಂತ್ ಸಿಂಗ್, "ತಂಡದ ಆತ್ಮವಿಶ್ವಾಸ ತುಂಬಾ ಹೆಚ್ಚಾಗಿದೆ" ಎಂದು ತಿಳಿಸಿದರು ಮತ್ತು ಮುಂದಿನ ತಿಂಗಳಿನಿಂದ ತರಬೇತಿ ಪ್ರಾರಂಭಿಸುವುದಾಗಿಯೂ ಹೇಳಿದರು. ಮುಂಬರುವ ಕಾಮನ್‌ವೆಲ್ತ್‌ ಮತ್ತು ಏಷ್ಯನ್ ಕ್ರೀಡಾಕೂಟಗಳ ಹಿನ್ನೆಲೆ ಹಾಕಿ ತಂಡ ಬಿಡುವಿಲ್ಲದ ವರ್ಷವನ್ನು ಹೊಂದಿದೆ.

40 ವರ್ಷಗಳ ನಂತರ ಪದಕ ಪಡೆದ ಆಟಗಾರರನ್ನು ಅಮೃತಸರದ ಜಿಲ್ಲಾಧಿಕಾರಿ ಗುರುಪ್ರೀತ್ ಸಿಂಗ್ ಖೈರಾ ಶ್ಲಾಘಿಸಿದರು. ಇದು "ಹೆಮ್ಮೆಯ ವಿಷಯ" ಎಂದು ಹೇಳಿದರು ಮತ್ತು ತಂಡವನ್ನು ಗೋಲ್ಡನ್‌ ಟೆಂಪಲ್‌ಗೆ ಕರೆದೊಯ್ಯಲಾಗುವುದು, ನಂತರ ಅವರನ್ನು ರಾಜ್ಯ ಸರ್ಕಾರದ ಆಡಳಿತವು "ಗೆಸ್ಚರ್" ನ ಭಾಗವಾಗಿ ಮನೆಗೆ ಕರೆದುಕೊಂಡು ಹೋಗುತ್ತದೆ ಎಂದು ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ: ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಸಲಿಂಗಿ ಕ್ರಿಕೆಟರ್ ದಂಪತಿ!

ಭಾರತದ ಪುರುಷರ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದು, ದೇಶದ 40 ವರ್ಷಗಳ ಪದಕ ಬರವನ್ನು ಕೊನೆಗೊಳಿಸಿದರು. ತಂಡವು ಆಗಸ್ಟ್ 5ರಂದು ಜರ್ಮನಿಯನ್ನು 9 ಗೋಲುಗಳ ಥ್ರಿಲ್ಲರ್‌ನಲ್ಲಿ (5-4) ಸೋಲಿಸಿದ ನಂತರ ಕಂಚಿನ ಪದಕ ಪಡೆದುಕೊಂಡಿತು. ಇನ್ನೊಂದೆಡೆ, ಬೆಲ್ಜಿಯಂ ತಂಡದ ವಿರುದ್ಧ ಸೆಮಿಫೈನಲ್‌ ಪಂದ್ಯದಲ್ಲಿ ಪುರುಷರ ಹಾಕಿ ತಂಡ ಸೋಲನುಭವಿಸಿತ್ತು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ಭಾಷಾಂತರ: ಏಜೆನ್ಸಿ

Published by:Vijayasarthy SN
First published: