• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Dog Bite: ಈ ರಾಜ್ಯದಲ್ಲಿ ಗಂಟೆಗೆ 14 ನಾಯಿಗಳು ದಾಳಿ ಮಾಡುತ್ತವಂತೆ, ನಾಯಿಕಾಟಕ್ಕೆ ಸುಸ್ತಾಗಿದೆ ಪಂಜಾಬ್!

Dog Bite: ಈ ರಾಜ್ಯದಲ್ಲಿ ಗಂಟೆಗೆ 14 ನಾಯಿಗಳು ದಾಳಿ ಮಾಡುತ್ತವಂತೆ, ನಾಯಿಕಾಟಕ್ಕೆ ಸುಸ್ತಾಗಿದೆ ಪಂಜಾಬ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Punjab Dog Bite Case: ಕಳೆದ ವರ್ಷಗಳಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದೆ ಎಂಬುದನ್ನ ಅಂಕಿಅಂಶಗಳು ಸೂಚಿಸುತ್ತವೆ ಎಂದು ಎಸ್‌ಆರ್‌ಸಿಪಿ ಕಾರ್ಯಕ್ರಮ ಅಧಿಕಾರಿ ಡಾ. ಪ್ರೀತಿ ಥವಾರೆ ತಿಳಿಸಿದ್ದಾರೆ.  ರಾಜ್ಯದಲ್ಲಿ ಕಳೆದ ವರ್ಷ 1.1 ಲಕ್ಷ ನಾಯಿ ಕಡಿತದ ಪ್ರಕರಣಗಳು ವರದಿಯಾಗಿದೆ.

  • Share this:

ಪಂಜಾಬ್​ನಲ್ಲಿ  ಕಳೆದ ಏಳು ತಿಂಗಳಲ್ಲಿ ಪ್ರತಿ ಗಂಟೆಗೆ ಸರಾಸರಿ 14 ಜನರು  ನಾಯಿ ಕಡಿತಕ್ಕೆ (Dog Bite Case) ಒಳಗಾಗಿರುವ ಪ್ರಕರಣ ವರದಿಯಾಗಿದ್ದು, ಇದನ್ನು ಆರೋಗ್ಯ ಇಲಾಖೆ  ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.  ರಾಜ್ಯ ರೇಬೀಸ್ ನಿಯಂತ್ರಣ ಕಾರ್ಯಕ್ರಮದ (SRCP) ಮಾಹಿತಿಯ ಪ್ರಕಾರ, ರಾಜ್ಯದ 22 ಜಿಲ್ಲೆಗಳಿಂದ ಜುಲೈವರೆಗೆ ಒಟ್ಟು 72,414 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಆಗಸ್ಟ್ ಡೇಟಾವನ್ನು  ಪರಿಶೀಲನೆ ಮಾಡಲಾಗುತ್ತಿದೆ ಎಂದು SRCP ಅಧಿಕಾರಿಗಳು ತಿಳಿಸಿದ್ದಾರೆ.


ಎಸ್‌ಆರ್‌ಸಿಪಿ ಮಾಹಿತಿಯ  ಪ್ರಕಾರ, ಜಲಂಧರ್ ನಲ್ಲಿ 14,390 ನಾಯಿ ಕಡಿತದ ಪ್ರಕರಣಗಳು ವರದಿಯಾಗಿದ್ದು ದಿನಕ್ಕೆ 68 ಜನರು ನಾಯಿ ಕಡಿತಕ್ಕೆ ತುತ್ತಾಗಿದ್ದು, ಜುಲೈ ತಿಂಗಳಿನಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣವಾಗಿದೆ.  ಇನ್ನು ಈ ಪ್ರಕರಣಗಳಲ್ಲಿ ಹೆಚ್ಚು ಬೀದಿ ನಾಯಿಗಳಿಂದ ದಾಳಿಗೊಂಡಿರುವವರಿದ್ದಾರೆ ಎಂದು ಪಶುವೈದ್ಯರು ಹೇಳಿದ್ದಾರೆ. ಆದರೆ ಕೆಲ ಸಂದರ್ಭಗಳಲ್ಲಿ ಸಾಕುಪ್ರಾಣಿಗಳ ಸಹ  ಕಚ್ಚಿರುವ ಬಗ್ಗೆ ಜನರು ಹೇಳಿಕೊಂಡಿದ್ದಾರೆ.


ಕಳೆದ ವರ್ಷಗಳಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದೆ ಎಂಬುದನ್ನ ಅಂಕಿಅಂಶಗಳು ಸೂಚಿಸುತ್ತವೆ ಎಂದು ಎಸ್‌ಆರ್‌ಸಿಪಿ ಕಾರ್ಯಕ್ರಮ ಅಧಿಕಾರಿ ಡಾ. ಪ್ರೀತಿ ಥವಾರೆ ತಿಳಿಸಿದ್ದಾರೆ.  ರಾಜ್ಯದಲ್ಲಿ ಕಳೆದ ವರ್ಷ 1.1 ಲಕ್ಷ ನಾಯಿ ಕಡಿತದ ಪ್ರಕರಣಗಳು ವರದಿಯಾಗಿದ್ದು 2017 ರಲ್ಲಿ 1 ಲಕ್ಷದಷ್ಟಿತ್ತು. ಹಾಗೆಯೇ 2019 ರಲ್ಲಿ 1.34 ಲಕ್ಷ ಮತ್ತು 2018 ರಲ್ಲಿ 1.14 ಲಕ್ಷ ಪ್ರಕರಣಗಳು ವರದಿಯಾಗಿದೆ.ಕೊರೊನಾ ಕಾರಣದಿಂದ ಜನರು ಹೊರಗಡೆ ಹೋಗುವುದು ಕಡಿಮೆಯಾದ ಕಾರಣ,  ನಾಯಿ ಕಡಿತದ ಪ್ರಕರಣಗಳಲ್ಲಿ ಇಳಿಕೆ ಕಂಡಿದೆ. ಕಳೆದ ವರ್ಷದಿಂದ ಈ ಪ್ರಕರಣಗಳು ಕಡಿಮೆಯಾಗಿದೆ.  ಆದರೆ ಬೀದಿ ನಾಯಿಗಳು ಜನರ ಜೀವಕ್ಕೆ ಗಂಭೀರವಾದ ಸಮಸ್ಯೆಯನ್ನು ಮಾಡುತ್ತಿದೆ ಎಂಬುದು ವಾಸ್ತವ ಎಂದು ಡಾ ಥಾವರೆ ತಿಳಿಸಿದ್ದಾರೆ.


ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಡೆಂಗ್ಯೂ ವೈರಲ್ ಜ್ವರಕ್ಕೆ 65 ಮಂದಿ ಸಾವು


ಇನ್ನು ನಾಯಿ ಕಡಿತದಿಂದ ಉಂಟಾಗಿರುವ ಸಾವಿನ ಬಗ್ಗೆಯಾವುದೇ ಅಧಿಕೃತ ಮಾಹಿತಿಯಿಲ್ಲ. ಅಲ್ಲದೇ, ಹೆಚ್ಚಿನ ರೋಗಿಗಳು ಉಚಿತವಾಗಿ ನೀಡಲಾಗುವ ನಾಲ್ಕು ಲಸಿಕೆ ಡೋಸ್ ಗಳನ್ನು ಮಾತ್ರ ಪಡೆಯುತ್ತಾರೆ, ನಿಗದಿತ ದಿನಗಳಲ್ಲಿ ರೋಗಿಗಳು ಲಸಿಕೆಗಳನ್ನು ತೆಗೆದುಕೊಳ್ಳದಿದ್ದರೆ ಮತ್ತೆ ಮೊದಲಿನಿಂದ ಲಸಿಕೆ ತೆಗೆದುಕೊಳ್ಳಬೇಕಾಗುತ್ತದೆ, ಇದರಿಂದ ಅನಗತ್ಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಡಾಕ್ಟರ್ ಪ್ರೀತಿ ಅಭಿಪ್ರಾಯಪಟ್ಟಿದ್ದಾರೆ.


ಲುಧಿಯಾನಾದ ಪ್ರಾಣಿ ಹಕ್ಕುಗಳ ಕಾರ್ಯಕರ್ತ ಮತ್ತು ಭಾರತದ ಪ್ರಾಣಿ ಕಲ್ಯಾಣ ಮಂಡಳಿಯ ಮಾಜಿ ಸದಸ್ಯ ಡಾ.ಸಂದೀಪ್ ಜೈನ್  ಪ್ರಕಾರ, ಮಳೆಗಾಲದಲ್ಲಿ ನಾಯಿಗಳು ಆಕ್ರಮಣಕಾರಿ ಆಗುತ್ತವೆ, ಯಾಕೆಂದರೆ ಅದು ಅವುಗಳ ಲೈಗಿಂಕ ಕ್ರಿಯೆಯ ಸಮಯ. ಇನ್ನು ಅವುಗಳ  ಅಧಿಕ ದೇಹದ ಉಷ್ಣತೆಯಿಂದ ಜನರ ಮೇಲೆ ದಾಳಿ ಮಾಡುತ್ತದೆ. ಆದರೆ ಅದಕ್ಕೆ ಲಸಿಕೆ ಕೊಡುವ ಮೂಲಕ ನಾಯಿಗಳ ಆಕ್ರಮಣಶೀಲತೆಯನ್ನು ಕಡಿಮೆ ಮಾಡಬೇಕು..  ಏಕೆಂದರೆ ಇದು ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಅವುಗಳಿಗೆ ಲಸಿಕೆ ಕೊಡಿಸುವುದರಿಂದ ನಾಯಿಗಳನ್ನು ಹಲವಾರು ಸಾಂಕ್ರಾಮಿಕ ರೋಗಗಳಿಂದ ಕಾಪಾಡಬಹುದು ಮತ್ತು ಅವುಗಳ ಜೀವಿತಾವಧಿಯನ್ನು ಹೆಚ್ಚು ಮಾಡಬಹುದು ಎಂದು ಸಂದೀಪ್ ಹೇಳುತ್ತಾರೆ.  ಅಲ್ಲದೇ, ನಾಯಿಗಳ ದಾಳಿಯನ್ನು ಕಡಿಮೆ ಮಾಡಲು ನಾಯಿಗಳ ಸಾಮಾನ್ಯ ನಡವಳಿಕೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: ಕೇರಳದಲ್ಲಿ ಮತ್ತೆ ನಿಪಾ ಪ್ರತ್ಯಕ್ಷ; 12 ವರ್ಷದ ಬಾಲಕ ಬಲಿ- ಕೋವಿಡ್ ಮಧ್ಯೆ ನಿಪಾ ಆತಂಕದಲ್ಲಿ ದೇವರ ನಾಡು


ಇನ್ನು ರಾಜ್ಯ ಸಮಿತಿಯು ನಿಯಮಿತವಾಗಿ ರೇಬೀಸ್ ಸಂಬಂಧಿತದ ಕಾರ್ಯಕ್ರಮವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಕಾರ್ಯಗತಗೊಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 1 ರಂದು ಹೊರಡಿಸಿದ  ಆದೇಶದ ಪ್ರಕಾರ, ಸ್ಥಳೀಯ ಸಂಸ್ಥೆಗಳ ನಿರ್ದೇಶಕರು, ಪೌರಾಯುಕ್ತರು ಮತ್ತು ಹೆಚ್ಚುವರಿ ಉಪ ಆಯುಕ್ತರನ್ನು ಪ್ರಾಣಿಗಳ ಜನನ ನಿಯಂತ್ರಣ ಮತ್ತು ರೇಬೀಸ್ ವಿರೋಧಿ ಕಾರ್ಯಕ್ರಮಗಳಲ್ಲಿ ತೊಡಗಿರುವ ಸಂಸ್ಥೆಗಳು ಪ್ರಾಣಿಗಳ ಕಲ್ಯಾಣ ಸಂಸ್ಥೆ ನಿಗದಿಪಡಿಸಿರುವ ನಿಯಮಗಳನ್ನು ಪಾಲನೆ ಮಾಡಿ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂಬುದನ್ನ ಖಚಿತಪಡಿಸಿಕೊಳ್ಳಲು ಹೇಳಿದ್ದಾರೆ.


ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ನಾಯಿಗಳಿಗೆ ಲಸಿಕೆ ನಿಡುವ ಕಾರ್ಯಕ್ರಮವನ್ನು ನಡೆಸುತ್ತವೆ, ಆದರೆ ಕೊರೊನಾ ಕಾರಣದಿಂದ ಏಕಾಏಕಿ ಕಳೆದ ವರ್ಷದಿಂದಈ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಈಗ ಲಸಿಕೆ ಕಾರ್ಯಕ್ರಮವನ್ನು ಆರಂಭಿಸಲು ವಿವಿಧ ಜಿಲ್ಲೆಗಳಲ್ಲಿ ಕೆಲಸ ಆರಂಭವಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Published by:Sandhya M
First published: