ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಪಂಜಾಬ್​ ಪೊಲೀಸ್ ಕಾನ್ಸ್​ಟೇಬಲ್​; ಹೇಗೆ ಗೊತ್ತೆ?

ಲಾಟರಿ ವಿಭಾಗದ ವಕ್ತಾರ ಮಾತನಾಡಿ, ಪಂಜಾಬ್ ರಾಜ್ಯ ಸರ್ಕಾರ ಸವಾನ್ ಬಂಪರ್​ 2019 ಲಾಟರಿ ಮಾರುತ್ತಿದೆ. ಮತ್ತು ಇದರ ವಿಜೇತರನ್ನು ಜುಲೈ 8ರಂದು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

HR Ramesh | news18
Updated:June 24, 2019, 12:09 PM IST
ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಪಂಜಾಬ್​ ಪೊಲೀಸ್ ಕಾನ್ಸ್​ಟೇಬಲ್​; ಹೇಗೆ ಗೊತ್ತೆ?
ಸಾಂದರ್ಭಿಕ ಚಿತ್ರ
  • News18
  • Last Updated: June 24, 2019, 12:09 PM IST
  • Share this:
ಚಂಡಿಗಢ (ಜೂ.24): ಪಂಜಾಬ್​ನ ಪೊಲೀಸ್ ಕಾನ್​ಸ್ಟೇಬಲ್​ ಒಬ್ಬರು ರಾಜ್ಯ ಸರ್ಕಾರದ ಹೊಸ ವರ್ಷದ ಲೊಹ್ರಿ ಬಂಪರ್​ ಲಾಟರಿ ವಿಜೇತರಾಗಿದ್ದು, ಬರೋಬ್ಬರಿ ಎರಡು ಕೋಟಿ ಒಡೆಯರಾಗಿದ್ದಾರೆ. ಲಾಟರಿ ವಿಜೇತರ ಹೆಸರನ್ನು ಭಾನುವಾರ ಘೋಷಣೆ ಮಾಡಲಾಯಿತು.

ಅಶೋಕ್ ಕುಮಾರ್ ಎಂಬುವವರೆ ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ  ಕಾನ್ಸ್​ಟೇಬಲ್. ಹೊಶಿರಾಪುರ್ ಜಿಲ್ಲೆಯ ಮೊತಿಯಾನ್​ ಹಳ್ಳಿಯ ನಿವಾಸಿಯಾದ 30 ವರ್ಷದ ಅಶೋಕ್ ಕುಮಾರ್ ತಾವು ಒಂದೇ ದಿನದಲ್ಲಿ ಕೋಟ್ಯಧಿಪತಿಯಾಗುತ್ತೇನೆ ಎಂದು ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲವೇನೋ. ಅವರ ಅದೃಷ್ಟದ ಬಾಗಿಲು ಒಂದೇ ದಿನದಲ್ಲಿ ತೆರೆದುಕೊಂಡಿದೆ. ಬಂಪರ್ ಲಾಟರಿ ಹಣ ನನ್ನ ಜೀವನವನ್ನೇ ಬದಲಾಯಿಸಿದೆ ಎಂದು ಅಶೋಕ್​ ಕುಮಾರ್ ಸಂತಸ ಹಂಚಿಕೊಂಡಿದ್ದಾರೆ.

ಇದನ್ನು ಓದಿ: ಯಶ್​-ರಾಧಿಕಾ ಕೂಸಿಗೆ ನಾಮಕರಣ; ಬೇಬಿ ವೈಆರ್​ ಹೆಸರೇನು ಗೊತ್ತೆ?

ಲಾಟರಿ ವಿಭಾಗದ ವಕ್ತಾರ ಮಾತನಾಡಿ, ಪಂಜಾಬ್ ರಾಜ್ಯ ಸರ್ಕಾರ ಸವಾನ್ ಬಂಪರ್​ 2019 ಲಾಟರಿ ಮಾರುತ್ತಿದೆ. ಮತ್ತು ಇದರ ವಿಜೇತರನ್ನು ಜುಲೈ 8ರಂದು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.


ಈ ಲಾಟರಿಯ ಮೊತ್ತ 3 ಕೋಟಿಯಾಗಿದ್ದು, ಇದನ್ನು ಇಬ್ಬರು ವಿಜೇತರಿಗೆ ತಲಾ 1.5 ಕೋಟಿಯಂತೆ ಹಂಚಿಕೆ ಮಾಡಲಾಗುತ್ತದೆ. ಎರಡನೇ ಬಹುಮಾನ 10 ಲಕ್ಷ ಇದ್ದು ಇದನ್ನು ಐವರು ವಿಜೇತರಿಗೆ ನೀಡಲಾಗುತ್ತದೆ. ಹಾಗೂ ಮೂರನೇ ಬಹುಮಾನ 2.5 ಲಕ್ಷ ಇದ್ದು ಇದನ್ನು 20 ಮಂದಿ ವಿಜೇತರಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

First published:June 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ