ಪಂಜಾಬ್​ ಸ್ಥಳೀಯ ಚುನಾವಣೆ; NOTA ಗಿಂತಲೂ ಕಡಿಮೆ ಮತ ಪಡೆದು ಮುಜುಗರಕ್ಕೀಡಾದ ಬಿಜೆಪಿ

ಅಮೃತಸರ ಮಹಾನಗರ ಪಾಲಿಕೆಯ 37 ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಮನೋಹರ್ ಸಿಂಗ್ ಕೇವಲ 52 ಮತಗಳನ್ನು ಪಡೆದಿದ್ದರೆ, NOTA 60 ಮತಗಳನ್ನು ಪಡೆಯುವ ಮೂಲಕ ಬಿಜೆಪಿಗಿಂತ ಅಧಿಕ ಮತ ಗಳಿಸಿರುವ ದಾಖಲೆ ಬರೆದಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಪಂಜಾಬ್​: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತ ಹೋರಾಟ ನಡೆಯುತ್ತಿರುವ ಬೆನ್ನಿಗೆ ಕಳೆದ ವಾರ ಪಂಜಾಬ್​ನಲ್ಲಿ 8 ಮುನ್ಸಿಪಲ್ ಕಾರ್ಪೋರೇಷನ್‌ಗಳ 2,302 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, ಬುಧವಾರ ಅದರ ಫಲಿತಾಂಶ ಹೊರಬಿದ್ದಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟವಾಗಿದ್ದರೆ, ಕಾಂಗ್ರೆಸ್​ ಜಯಭೇರಿ ಬಾರಿಸಿತ್ತು. ಅಲ್ಲದೆ, ಬಟಿಂಡಾದಲ್ಲಿ 53 ವರ್ಷಗಳ ಬಳಿಕ ಮೇಯರ್ ಸ್ಥಾನ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿತ್ತು. ಒಂದೆಡೆ ಕಾಂಗ್ರೆಸ್​ ಅದ್ಭುತ ಜಯ ಸಾಧಿಸಿದ್ದರೆ, ಮತ್ತೊಂದೆಡೆ ಬಿಜೆಪಿ ಅಮೃತಸರ ಮಹಾನಗರ ಪಾಲಿಕೆಯ 37 ನೇ ವಾರ್ಡ್‌ನಲ್ಲಿ ಬಿಜೆಪಿ NOTA ಗಿಂತ ಕಡಿಮೆ ಮತ ಪಡೆಯುವ ಮೂಲಕ ಭಾರಿ ಮುಖಭಂಗಕ್ಕೆ ಒಳಗಾಗಿದೆ.

  ಅಮೃತಸರ ಮಹಾನಗರ ಪಾಲಿಕೆಯ ಚುನಾವಣೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, ಅಮೃತಸರ ಮಹಾನಗರ ಪಾಲಿಕೆಯ 37 ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಮನೋಹರ್ ಸಿಂಗ್ ಕೇವಲ 52 ಮತಗಳನ್ನು ಪಡೆದಿದ್ದರೆ, NOTA 60 ಮತಗಳನ್ನು ಪಡೆಯುವ ಮೂಲಕ ಬಿಜೆಪಿಗಿಂತ ಅಧಿಕ ಮತ ಗಳಿಸಿರುವ ದಾಖಲೆ ಬರೆದಿದೆ.

  ಇದನ್ನೂ ಓದಿ: ಪಂಜಾಬ್​ ಸ್ಥಳೀಯ ಚುನಾವಣೆ; ರೈತ ಹೋರಾಟಕ್ಕೆ ಬಿಜೆಪಿ ಧೂಳೀಪಟ, ಹೊಸ ಇತಿಹಾಸ ನಿರ್ಮಿಸಿದ ಕಾಂಗ್ರೆಸ್​!

  ಇಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಗಗನ್‌ದೀಪ್ ಸಿಂಗ್ 3,223 ಮತಗಳನ್ನು ಗಳಿಸಿ ವಿಜೇತರಾಗಿದ್ದು, ಎಸ್‌ಎಡಿ ಅಭ್ಯರ್ಥಿ ಇಂದರ್ಜಿತ್ ಸಿಂಗ್ 3,088 ಮತಗಳನ್ನು ಪಡಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಅಮೃತಸರ ಜಿಲ್ಲೆಯಲ್ಲಿರುವ ಮುನ್ಸಿಪಲ್ ಕೌನ್ಸಿಲ್ ಕಾರ್ಪೊರೇಷನ್, ನಗರ ಪಂಚಾಯತ್ ಮತ್ತು ಪುರಸಭೆಯ ಒಟ್ಟು 40 ವಾರ್ಡ್‌ಗಳಲ್ಲಿ ಬಿಜೆಪಿಯು ಒಂದೇ ಒಂದು ಸ್ಥಾನವನ್ನೂ ಗೆದ್ದಿಲ್ಲ ಎಂಬುದು ಉಲ್ಲೇಖಾರ್ಹ.

  ಫೆಬ್ರವರಿ 14 ರಂದು ರಾಜ್ಯದ 109 ನಗರ ಪಂಚಾಯತ್‌ ಹಾಗೂ ಮುನ್ಸಿಪಲ್ ಕೌನ್ಸಿಲ್‌ ಮತ್ತು 8 ಮುನಿಸಿಪಲ್ ಕಾರ್ಪೋರೇಷನ್‌‌‌ಗಳಲ್ಲಿ ಚುನಾವಣೆ ನಡೆದಿತ್ತು. ಇದರಲ್ಲಿ ಮೊಗ್ಗ, ಹೋಶಿಯಾರ್‌ಪುರ್, ಕಪುರ್ಥಾಲಾ, ಅಬೋಹರ್, ಪಠಾಣ್‌ಕೋಟ್, ಬತಾಲ ಮತ್ತು ಬಟಿಂಡಾ ಮುನ್ಸಿಪಲ್ ಕಾರ್ಪೋರೇಷನ್‌ಗಳನ್ನು 7 ಮುನ್ಸಿಪಲ್ ಕಾರ್ಪೋರೇಷನ್‌ಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಮತ್ತೊಂದು ಕಾರ್ಪೋರೇಷನ್‌‌‌ಗಳಾದ ಎಸ್‌ಎಎಸ್‌ ನಗರದ ಮತ ಎಣಿಕೆಯು ಫೆಬ್ರವರಿ 18 ರಲ್ಲಿ ನಡೆಯುತ್ತದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
  Published by:MAshok Kumar
  First published: