• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • ಕೇಂದ್ರದ ಕೃಷಿ ಕಾಯ್ದೆಗೆ ಪರ್ಯಾಯ ಮಸೂದೆಗಳನ್ನು ಜಾರಿಗೊಳಿಸಿದ ಪಂಜಾಬ್ ಸರ್ಕಾರ: ಇಲ್ಲಿದೆ ವಿವರ!

ಕೇಂದ್ರದ ಕೃಷಿ ಕಾಯ್ದೆಗೆ ಪರ್ಯಾಯ ಮಸೂದೆಗಳನ್ನು ಜಾರಿಗೊಳಿಸಿದ ಪಂಜಾಬ್ ಸರ್ಕಾರ: ಇಲ್ಲಿದೆ ವಿವರ!

ಕ್ಯಾಪ್ಟನ್​ ಅಮರೀಂದರ್​ ಸಿಂಗ್.

ಕ್ಯಾಪ್ಟನ್​ ಅಮರೀಂದರ್​ ಸಿಂಗ್.

ಮಂಗಳವಾರ ಪಂಜಾಬ್ ವಿಧಾನಸಭೆಯಲ್ಲಿ ಅಂಗೀಕರಿಸಿದ ಮೂರು ಪರ್ಯಾಯ-ಮಸೂದೆಗಳು ಈಗ ಕಾನೂನಾಗಿ ಚಾಲನೆಯಾಗುವ ಮೊದಲು ರಾಜ್ಯಪಾಲ ವಿ.ಪಿ.ಸಿಂಗ್ ಬದ್ನೋರ್ ಅವರ ಒಪ್ಪಿಗೆಯನ್ನು ಪಡೆಯುವ ಅಗತ್ಯವಿದೆ.

 • Share this:

  ಪಂಜಾಬ್​: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ವಿರೋಧ ಪಕ್ಷಗಳ ವಿರೋಧದ ನಡುವೆಯೂ ಮೂರು ರೈತ ಮಸೂದೆಗಳನ್ನು ಸಂಸತ್​ನಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. ಆದರೆ, ಈ ಮಸೂದೆಗಳನ್ನು ಪಂಜಾಬ್​ನಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಮೊದಲೇ ಸ್ಪಷ್ಟಪಡಿಸಿದ್ದ ಸಿಎಂ ಕ್ಯಾಪ್ಟನ್ ಅಮರೀಂದರ್​ ಸಿಂಗ್ ಕೊನೆಗೂ ಮಂಗಳವಾರ ಪಂಜಾಬ್ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿದ ಮೂರು ಹೊಸ ಕೃಷಿ ಕಾನೂನುಗಳನ್ನು ತಿರಸ್ಕರಿಸುವ ನಿರ್ಣಯವನ್ನು ಮಂಡಿಸಿದೆ. ಅಲ್ಲದೆ, ಕೇಂದ್ರ ಸರ್ಕಾರ ಕಳೆದ ತಿಂಗಳು ಅಂಗೀಕರಿಸಿದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಔಪಚಾರಿಕವಾಗಿ ತಿರಸ್ಕರಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಪಂಜಾಬ್ ಪಾತ್ರವಾಗಿದೆ. ಇದಲ್ಲದೆ, ರಾಜ್ಯದ ಅಸೆಂಬ್ಲಿಯಲ್ಲಿ, ಕೇಂದ್ರದ ಕಾನೂನುಗಳ ವಿರುದ್ಧದ 3 ಪರ್ಯಾಯ ಮಸೂದೆಯನ್ನು ಅಂಗೀಕರಿಸಲಾಗಿದೆ.


  ಕೇಂದ್ರ ಸರ್ಕಾರದ ಮಸೂದೆಗಳಿಗೆ ವಿರುದ್ಧವಾಗಿ ಪಂಜಾಬ್ ಸರ್ಕಾರ 3 ಪರ್ಯಾಯ ಮಸೂದೆಗಳನ್ನು ಪರಿಚಯಿಸಿದ್ದು, ಕನಿಷ್ಠ ಬೆಂಬಲ ಬೆಲೆಯನ್ನು (MSP) ಉಲ್ಲಂಘಿಸಿ, ಅದಕ್ಕಿಂತಲೂ ಕಡಿಮೆ ಬೆಲೆಗೆ ಗೋಧಿ ಅಥವಾ ಭತ್ತವನ್ನು ಖರೀದಿಸುವ/ಮಾರಾಟಮಾಡುವ ಯಾವುದೇ ವ್ಯಕ್ತಿಯ ಮೇಲೆ ದಂಡ ಮತ್ತು 3 ವರ್ಷ ಮೀರದಂತೆ ಶಿಕ್ಷೆ ವಿಧಿಸಲು ಇವುಗಳಲ್ಲಿ ಒಂದು ಮಸೂದೆ ಅವಕಾಶ ನಿಡುತ್ತದೆ.


  ದೇಶದಾದ್ಯಂತ ಕೇಂದ್ರದ ಕಾನೂನುಗಳ ವಿಮರ್ಶಕರು ಉಲ್ಲೇಖಿಸಿದ್ದ ಪ್ರಮುಖ ಅಂಶಗಳಲ್ಲಿ MSPಯನ್ನು ತೆಗೆದುಹಾಗಲಾಗುತ್ತದೆ ಎಂಬುದು ಒಂದಾಗಿತ್ತು. ಬರಗಾಲ ಮತ್ತು ಬೆಳೆ ವೈಫಲ್ಯದಂತಹ ಕಠಿಣ ಕಾಲದಲ್ಲಿ ಸಾಲದ ಮೂಲವಾಗಿರುವ ಖಾತರಿಪಡಿಸಿದ ಮಾರಾಟದ ಬೆಲೆಗಳು ಮತ್ತು ಅದನ್ನು ತೆಗೆದುಹಾಕುವುದರಿಂದ ಸಣ್ಣ ಮತ್ತು ಅಲ್ಪ ರೈತರ ಮೇಲೆ ತೀವ್ರ ಪರಿಣಾಮ ಬೀರುತ್ತದೆ.


  ಸರ್ಕಾರಿ ನಿಯಂತ್ರಿತ ಸಗಟು ಮಾರುಕಟ್ಟೆಯಲ್ಲಿ ಮಧ್ಯವರ್ತಿಗಿಂತ ಹೆಚ್ಚಾಗಿ ಸಾಂಸ್ಥಿಕ ಖರೀದಿದಾರರಿಗೆ ಮಾರಾಟ ಮಾಡಲು ರೈತರಿಗೆ ಅವಕಾಶ ನೀಡುವ ಕೇಂದ್ರದ ಕಾನೂನುಗಳಿಂದ ಖಾಸಗಿ ವ್ಯಕ್ತಿಗಳ ಪ್ರವೇಶವು ರೈತರ ಬೆಲೆ ನಿರ್ಣಯ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂದು ಕೇಂದ್ರದ ಕಾನೂನುಗಳ ವಿಮರ್ಶಕರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಇದು ಮಹತ್ವದ ಮಸೂದೆಯಾಗಿದೆ.


  ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳ ಕೇಂದ್ರಬಿಂದುವಾಗಿ ಪಂಜಾಬ್ ಹೊರಹೊಮ್ಮಿದ್ದು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೃಷಿ ಕಾನೂನುಗಳ ವಿರುದ್ಧ ರಾಜ್ಯದಲ್ಲಿ ಪ್ರಮುಖ ಟ್ರಾಕ್ಟರ್ ರ್ಯಾಲಿಗಳನ್ನು ನಡೆಸಿದ್ದರು.


  ಕಳೆದ ತಿಂಗಳು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಕೇಂದ್ರದ ಈ ಕಾನೂನುಗಳನ್ನು ಜಾರಿ ಮಾಡಬಾರದು ಎಂದು ಹೇಳಿದ್ದರು.


  ಇದನ್ನೂ ಓದಿ : ಕೇಂದ್ರದ ಕೃಷಿ ಕಾಯ್ದೆ ವಿವಾದ: 3 ಕಾಯ್ದೆಗಳನ್ನೂ ತಿರಸ್ಕರಿಸುವ ನಿರ್ಣಯ ತೆಗೆದುಕೊಂಡ ಪಂಜಾಬ್ ವಿಧಾನಸಭೆ


  ಇಂದು ಪಂಜಾಬ್ ವಿಧಾನಸಭೆಯಲ್ಲಿ ಅಂಗೀಕರಿಸಿದ ಮೂರು ಪರ್ಯಾಯ-ಮಸೂದೆಗಳು ಈಗ ಕಾನೂನಾಗಿ ಚಾಲನೆಯಾಗುವ ಮೊದಲು ರಾಜ್ಯಪಾಲ ವಿ.ಪಿ.ಸಿಂಗ್ ಬದ್ನೋರ್ ಅವರ ಒಪ್ಪಿಗೆಯನ್ನು ಪಡೆಯುವ ಅಗತ್ಯವಿದೆ.


  MSPಯನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಪದೇ ಪದೇ ಭರವಸೆ ನೀಡಿದ್ದಾರೆ. ಆದರೆ ಈ ಮೌಖಿಕ ಆಶ್ವಾಸನೆಗಳು ರೈತರ ಕಳವಳವನ್ನು ಕಡಿಮೆ ಮಾಡಿಲ್ಲ.


  ಪಂಜಾಬ್ ಅಸೆಂಬ್ಲಿಯಿಂದ ಅಂಗೀಕಾರವಾದ ಮೂರು ಮಸೂದೆಗಳು ಇಂತಿವೆ;


  1. ರೈತರ ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆಯ ವಿಶೇಷ ನಿಬಂಧನೆಗಳು (ಪ್ರಚಾರ ಮತ್ತು ಸೌಲಭ್ಯ) ಮತ್ತು ಪಂಜಾಬ್ ತಿದ್ದುಪಡಿ ಮಸೂದೆ 2020.


  2. ಅಗತ್ಯ ಸರಕುಗಳು (ವಿಶೇಷ ನಿಬಂಧನೆಗಳು ಮತ್ತು ಪಂಜಾಬ್ ತಿದ್ದುಪಡಿ) ಮಸೂದೆ 2020.


  3. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ರೈತ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) ವಿಶೇಷ ನಿಬಂಧನೆಗಳು ಮತ್ತು ಪಂಜಾಬ್ ತಿದ್ದುಪಡಿ ಮಸೂದೆ 2020.

  Published by:MAshok Kumar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು