Punjab: ಬಿಜೆಪಿ ಸೇರಿದ ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್​ ಸಿಂಗ್​ ಮೊಮ್ಮಗ ಇಂದರ್‌ಜೀತ್ ಸಿಂಗ್

ಇಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರಿದ ನಂತರ, ಇಂದರ್‌ಜೀತ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿ, ತಮ್ಮ ತಾತನ ಆಸೆಗಳನ್ನು ನಾನು ಇಂದು ಪೂರೈಸಿರುವೆ ಎಂದು ಹೇಳಿದರು.

ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಗ್ಯಾನಿ ಜೈಲ್ ಸಿಂಗ್ ಅವರ ಮೊಮ್ಮಗ ಇಂದರ್‌ಜೀತ್ ಸಿಂಗ್ ಅವರು ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡರು

ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಗ್ಯಾನಿ ಜೈಲ್ ಸಿಂಗ್ ಅವರ ಮೊಮ್ಮಗ ಇಂದರ್‌ಜೀತ್ ಸಿಂಗ್ ಅವರು ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡರು

 • Share this:
  ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಗ್ಯಾನಿ ಜೈಲ್ ಸಿಂಗ್ ಅವರ ಮೊಮ್ಮಗ ಇಂದರ್‌ಜೀತ್ ಸಿಂಗ್ ಅವರು ಸೋಮವಾರ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. 

  ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್​ ಸಿಂಗ್​  ಅವರ ಮೊಮ್ಮಗನನ್ನು ಸ್ವಾಗತಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಪಂಜಾಬ್ ಘಟಕದ ಉಸ್ತುವಾರಿ ದುಷ್ಯಂತ್ ಗೌತಮ್, ಇದು ಪಂಚ ನದಿಗಳ ನಾಡು ಪಂಜಾಬ್ ನ ಜನರ ಹೃದಯದಲ್ಲಿ ಪಕ್ಷಕ್ಕೆ ವಿಶೇಷ ಸ್ಥಾನವಿದೆ ಎಂಬುದನ್ನು ಇದು ತೋರಿಸುತ್ತದೆ, ಮಾಜಿ ರಾಷ್ಟ್ರಪತಿಗಳ ಮೊಮ್ಮಗನಿಗೆ ಬಿಜೆಪಿಯ ಮೇಲೆ ಹಾಗೂ ಅವರ ಸಮರ್ಥ ಆಡಳಿತದ ಮೇಲೆ ನಂಬಿಕೆ ಇರುವ ಕಾರಣಕ್ಕೆ ಪಕ್ಷಕ್ಕೆ ಸೇರಿದ್ದಾರೆ ಎಂದು ಹೇಳಿದರು.

  ಇಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರಿದ ನಂತರ, ಇಂದರ್‌ಜೀತ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿ, ತಮ್ಮ ತಾತನ ಆಸೆಗಳನ್ನು ನಾನು ಇಂದು ಪೂರೈಸಿರುವೆ ಎಂದು ಹೇಳಿದರು.

  ನನ್ನ ತಾತನೊಂದಿಗೆ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರುಗಳು ಸರಿಯಾಗಿ ವರ್ತಿಸಲಿಲ್ಲ. ದೆಹಲಿಯಲ್ಲಿ ಮದನ್ ಲಾಲ್ ಖುರಾನಾ ಅವರು ಇದ್ದಂತಹ ಕಾಲದಲ್ಲಿ ನಾನು ಬಿಜೆಪಿ ಪರ ಪ್ರಚಾರ ಮಾಡಿದ್ದೇನೆ. ನನ್ನ ಅಜ್ಜ ನಾನು ಬಿಜೆಪಿ ಸೇರಲು ಬಯಸಿದ್ದರು. ಅವರು ನನಗೆ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿಯವರನ್ನು ಪರಿಚಯಿಸಿದರು, ”ಎಂದು ಹೇಳಿದರು.

  ನನ್ನ ಅಜ್ಜನ ವಿಚಾರಧಾರೆ ಹಾಗೂ ಬಿಜೆಪಿಯ ವಿಚಾರಧಾರೆ ಒಂದೇ ಇದ್ದವು ಆದರೆ, ಬಿಜೆಪಿ ಸೇರಲು ಸರಿಯಾದ ಸಮಯ ಒದಗಿ ಬಂದಿರಲಿಲ್ಲ, ಆದ ಕಾರಣ ಪಕ್ಷಕ್ಕೆ ಸೇರುವುದು ಸ್ವಲ್ಪ ತಡವಾಯಿತು. ನಾನು ನನ್ನ ಅಜ್ಜನ ಆಸೆಯನ್ನು ಇಂದು ಪೂರೈಸಿದ್ದೇನೆ, ಇದರಿಂದ ಸಾಕಷ್ಟು ಸಂತೋಷವಾಗಿದೆ ಎಂದು ಇಂದ್ರಜಿತ್​ ಸಿಂಗ್​ ಇದೇ ವೇಳೆ ನುಡಿದರು.

  ಪಂಚ ನದಿಗಳ ನಾಡಿನಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಲು ಪ್ರಯತ್ನಿಸುತ್ತಿದೆ. ಮುಂದಿನ ವರ್ಷದ ಆರಂಭದಲ್ಲೇ ಬರುವ ವಿಧಾನಸಭಾ ಚುನಾವಣೆಗೆ ಈಗಲೇ ’’ಆಪರೇಷನ್​ ಕಮಲ’’ ಪ್ರಾರಂಭಿಸಿದೆ. ಕಾಂಗ್ರೆಸ್​ ನವಜೋತ್​ ಸಿಂಗ್​ ಸಿಧುವನ್ನು ಕಾಂಗ್ರೆಸ್​ ಅಧ್ಯಕ್ಷನನ್ನಾಗಿ ಮಾಡಿ ಈಗಾಗಲೇ ಸಾಕಷ್ಟು ಸಂಚಲನವನ್ನು ರಾಜ್ಯದಲ್ಲಿ ಮೂಡಿಸಿದೆ. ವಿರೋಧ ಪಕ್ಷ ಆಮ್​ ಆದ್ಮಿ ಕೂಡ ಮುಮದಿನ ಬಾರಿ ನಾವೇ ಸರ್ಕಾರ ರಚಿಸುವುದು ಎನ್ನುವ ಆತ್ಮವಿಶ್ವಾಸದಲ್ಲಿದೆ. ಈಗ ಬಿಜೆಪಿ ಕೂಡ ನಿಧಾನಕ್ಕೆ ಕಣಕ್ಕೆ ಇಳಿಯುತ್ತಿದೆ.

  ಇದನ್ನೂ ಓದಿ:  Oscar Fernandes: ಕಾಂಗ್ರೆಸ್​ ಹಿರಿಯ ನಾಯಕ ಆಸ್ಕರ್​ ಫರ್ನಾಂಡಿಸ್​ ಇನ್ನಿಲ್ಲ

  ಇಂದ್ರಜಿತ್​ ಸಿಂಗ್ ರಾಮಗರ್ಹಿಯಾ ಸಿಖ್ ಸಮುದಾಯಕ್ಕೆ ಸೇರಿದವರು, ಇದು ಒಬಿಸಿ (ಇತರೆ ಹಿಂದುಳಿದ ವರ್ಗಗಳು) ವರ್ಗದಲ್ಲಿ ಬರುತ್ತದೆ. ಈ ಸಮುದಾಯವು ಪಂಜಾಬ್‌ನ ದೋಬಾ ಮತ್ತು ಮಜಾ ಬೆಲ್ಟ್‌ಗಳಲ್ಲಿ ಪ್ರಭಾವಶಾಲಿಯಾಗಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: