ಚಂಡೀಗಢ (ಅ. 1): ಪಂಜಾಬ್ ಮಾಜಿ ಮುಖ್ಯ,ಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder Singh) ಹೊಸ ರಾಜಕೀಯ ಪಕ್ಷ ಸ್ಥಾಪಿಸುವ (New Political Party) ಸುಳಿವು ಸಿಕ್ಕಿದೆ. ಕ್ಯಾಪ್ಟನ್ ನೇತೃತ್ವದಲ್ಲಿ ಪಂಜಾಬ್ ವಿಕಾಸ್ ಪಾರ್ಟಿ (Punjab Vikas Party) ರಚನೆಯಾಗಲಿದೆ. ಹೊಸ ಪಕ್ಷ ಘೋಷಣೆಗೂ ಮುನ್ನ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮ ಆಪ್ತ ವಲಯದಲ್ಲಿದ್ದ ಕಾಂಗ್ರೆಸ್ (Congress) ನಾಯಕರ ಬೆಂಬಲ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಒಂದು ರೀತಿ ಕ್ಯಾಪ್ಟನ್ ಹೊಸ ಪಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ವಿರೋಧಿ ಬಣ ಆಗಲಿರೋದು ಮೇಲ್ನೋಟಕ್ಕೆ ಖಚಿತವಾಗಿದೆ. ಸಿಧು ವಿರೋಧಿ ಬಣದ ನಾಯಕರನ್ನ ಸೆಳೆಯಲು ಕ್ಯಾಪ್ಟನ್ ಪ್ರಯತ್ನಿಸುವ ಸಾಧ್ಯತೆಗಳಿವೆ.
ಕೆಲ ದಿನಗಳ ಹಿಂದೆ ಸಿಧು ಜೊತೆಗಿನ ಸಂಘರ್ಷದಿಂದಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಮರೀಂದರ್ ಸಿಂಗ್, ಗುರುವಾರ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕ ದೆಹಲಿಗೆ ತೆರಳಿದ್ದ ಅಮರೀಂದರ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿಯಾಗಿ ಚರ್ಚ ನಡೆಸಿದ್ದರು. ದೆಹಲಿಯಲ್ಲಿದ್ದರೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿರಲಿಲ್ಲ. ಅಲ್ಲಿಯೇ ಬಿಜೆಪಿ ಸೇರಲ್ಲ, ಕಾಂಗ್ರೆಸ್ ನಲ್ಲಿ ಇರಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು.
ಆಪ್ತರನ್ನ ಸೆಳೆಯಲು ಪ್ಲಾನ್
ಸಿಎಂ ಚನ್ನಿ ಸಂಪುಟದಿಂದ ಹೊರಗುಳಿದಿರುವ ಅಸಮಾಧನಿತ ನಾಯಕರನ್ನು ಸೆಳೆಯಲು ಕ್ಯಾಪ್ಟನ್ ಅಮರೀಂದ್ ಸಿಂಗ್ ಮುಂದಾಗುವ ಸಾಧ್ಯತೆಗಳಿವೆ. ತದನಂತರ ಸಿಧು ವಿರೋಧಿ ಬಣಕ್ಕೆ ಕೈಹಾಕಲಿದ್ದಾರೆ. ವಿಧಾನಸಭಾ ಚುನಾವಣೆ ವೇಳೆಗೆ ತಮ್ಮದೇ ಬಲಿಷ್ಠವಾದ ತಂಡದೊಂದಿಗೆ ಜನರ ಮುಂದೆ ಹೋಗಲು ಬೇಕಾಗುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಒಂದು ವೇಳೆ ಕ್ಯಾಪ್ಟನ್ ತಮ್ಮದೇ ಪಕ್ಷದ ಮೂಲಕ ಚುನಾವಣೆ ಅಖಾಡಕ್ಕೆ ಧುಮುಕಿದ್ರೆ ಕಾಂಗ್ರೆಸ್ಗೆ ದೊಡ್ಡ ಹೊಡೆತ ಬೀಳಲಿದೆ. ಇತ್ತ ಕಾಂಗ್ರೆಸ್ ಆಂತರಿಕ ಕಲಹದ ಲಾಭ ಪಡೆದುಕೊಳ್ಳಲು ಆಮ್ ಆದ್ಮಿ ಪಾರ್ಟಿ ಸಂಪೂರ್ಣವಾಗಿ ಪ್ರಯತ್ನಿಸುತ್ತಿದೆ. ಈಗಾಗಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ನಲ್ಲಿ ಅಧಿಕಾರಕ್ಕೆ ಬಂದ್ರೆ ಏನು ಮಾಡಲಿದೆ ಎಂಬುದರ ನೀಲ ನಕ್ಷೆಯನ್ನು ಜನರ ಮುಂದಿಡುತ್ತಿದ್ದಾರೆ.
ಕೃಷಿ ಕಾನೂನು ಮುಂದಿಟ್ಟು ಮತ ಕೇಳೋದು:
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕೃಷಿ ಕಾನೂನು ಮಹತ್ವದ ಪಾತ್ರ ವಹಿಸಲಿದೆ. ಮುಖ್ಯಮಂತ್ರಿ ಆಗಿದ್ದಾಗಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ರೈತರ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದರು. ಈಗ ರೈತರ ಜೊತೆ ಉತ್ತಮ ಒಡನಾಟ ಹೊಂದುವ ಮೂಲಕ ಪಂಜಾಬ್ ನಲ್ಲಿ ಪ್ರಾತಿನಿಧ್ಯ ಸ್ಥಾಪಿಸಲು ಕ್ಯಾಪ್ಟನ್ ಮುಂದಾಗಬಹುದು. ಈ ಹಿಂದೆ ಕೃಷಿ ಕಾನೂನು ಹಿಂಪಡೆಯಬೇಕೆಂದು ಮನವಿ ಸಹ ಮಾಡಿಕೊಂಡಿದ್ದರು.
ಇದನ್ನು ಓದಿ: ಅಮೆಜಾನ್ 'ರಹಸ್ಯ ವೆಬ್ಸೈಟ್'ನಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಗೆ ಸಿಗಲಿವೆ ವಸ್ತುಗಳು; ಇಲ್ಲಿದೆ ಸಂಪೂರ್ಣ ಮಾಹಿತಿ
ಈ ಹಿಂದೆಯೂ ಕಾಂಗ್ರೆಸ್ ತೊರೆದಿದ್ರು:
ಕ್ಯಾಪ್ಟನ್ ಅಮರೀಂದರ್ ಸಿಂಗ್ 1980ರಲ್ಲಿ ಕಾಂಗ್ರೆಸ್ ಚಿಹ್ನೆಯಡಿಯಲ್ಲಿ ಕ್ಯಾಪ್ಟನ್ ಲೋಕಸಭಾ ಚುನಾವಣೆ ಗೆದ್ದದಿದ್ರು. ನಂತರ 19684ರಲ್ಲಿ ಆಪರೇಷನ್ ಬ್ಲ್ಯೂ ಸ್ಟಾರ್ ಗೆ ಒಳಗಾಗಿ ಕಾಂಗ್ರೆಸ್ ತೊರೆದು ಅಕಾಲಿದಳ ಸೇರ್ಪಡೆಯಾಗಿದ್ದರು. ಮತ್ತೆ 1998ರಲ್ಲಿ ಕಾಂಗ್ರೆಸ್ಗೆ ಮರಳಿದ್ದರು. 2017ರಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿದ್ದಕ್ಕೆ ಬಂಡಾಯದ ಬಾವುಟ ಹಾರಿಸಿದ್ದರು.
ಇದನ್ನು ಓದಿ: ರೈಸ್ ಕುಕರ್ನ್ನು ಬಾಳ ಸಂಗಾತಿಯನ್ನಾಗಿ ಮಾಡ್ಕೊಂಡು ನಾಲ್ಕೇ ದಿನಕ್ಕೆ ಡಿವೋರ್ಸ್ ಕೊಟ್ಟ!
ಇತ್ತ ಸಂಪುಟ ವಿಸ್ತರಣೆಯಿಂದ ಮುನಿಸಿಕೊಂಡಿದ್ದ ನವಜೋತ್ ಸಿಂಗ್ ಸಿಧು ಅವರನ್ನ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಸಿಎಂ ಭೇಟಿ ಬಳಿಕ ಸಿಧು ತಮ್ಮ ರಾಜೀನಾಮೆ ಹಿಂಪಡೆದುಕೊಂಡಿದ್ದರು. ಅಕ್ಟೋಬರ್ 4ರಂದು ಸಿಎಂ ಚರಣ್ಜಿತ್ ಸಿಂಗ್ ಚನ್ನಿ (CM Charanjit Singh Channi) ಸಂಪುಟ ಸಭೆ ಕರೆದಿದ್ದು, ನವಜೋತ್ ಸಿಂಗ್ ಸಿಧು ಬೇಡಿಕೆಗಳನ್ನ ಪೂರೈಸುವ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳಿವೆ.
-ಮಹ್ಮದ್ ರಫೀಕ್ ಕೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ