Punjab Elections: ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು Congressನ ಎಲ್ಲಾ 117 ಅಭ್ಯರ್ಥಿಗಳಿಂದ ಪೂಜೆ

ಭಗವಾನ್ ವಾಲ್ಮೀಕಿ ತೀರ್ಥಸ್ಥಳಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ತಂಡ ಅಲ್ಲೂ ಪೂಜೆ ಸಲ್ಲಿಸಿತು.‌

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ನವದೆಹಲಿ(ಜ. 27): ಕೊರೋನಾ (Corona) ಮತ್ತು ಓಮೈಕ್ರಾನ್ (Omicron) ಹಿನ್ನಲೆಯಲ್ಲಿ ಜನವರಿ 31ರವರೆಗೆ ಬಹಿರಂಗ ಸಭೆ, ಸಮಾರಂಭ, ಸಮಾವೇಶಗಳನ್ನು‌ ಆಯೋಜನೆ ಮಾಡುವಂತಿಲ್ಲ ಕೇಂದ್ರ ಚುನಾವಣಾ ಆಯೋಗ (Central Election Commission) ನಿರ್ಬಂಧ ವಿಧಿಸಿರುವುದರಿಂದ ರಾಜಕೀಯ ಪಕ್ಷಗಳು ಈಗ ಜನರನ್ನು ತಲುಪಲು ವಿಭಿನ್ನ ಮಾರ್ಗಗಳನ್ನು ಹುಡುಕಬೇಕಾಗಿದೆ. ಇದೇ ರೀತಿ ಪಂಜಾಬ್ ವಿಧಾನಸಭಾ ಚುನಾವಣೆ (Punjab Assembly Elections) ಹಿನ್ನೆಲೆಯಲ್ಲಿ ಎಐಸಿಸಿಯ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ (AICC Former President and Member of Parliament Rahul Gandhi) ಅವರ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಪಕ್ಷದ (Congress Party) ಎಲ್ಲಾ 117 ಅಭ್ಯರ್ಥಿಗಳು ಒಟ್ಟಾಗಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ‌ ಪೂಜೆ ಸಲ್ಲಿಸುತ್ತಿದ್ದಾರೆ.

ಓಟಿಗಾಗಿ ಒಟ್ಟಿಗೆ ಪೂಜೆ, ಒಟ್ಟಿಗೆ ಊಟ

ದೆಹಲಿಯಿಂದ ಅಮೃತಸರಕ್ಕೆ ತೆರಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಈಗಾಗಲೇ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್‌ನಲ್ಲಿ ಪಂಜಾಬ್ ಕಾಂಗ್ರೆಸಿನ ಎಲ್ಲಾ 117 ಅಭ್ಯರ್ಥಿಗಳು ಒಟ್ಟಾಗಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ರಾಹುಲ್ ಗಾಂಧಿ ಅವರ ಜೊತೆ ಎಲ್ಲಾ 117 ಅಭ್ಯರ್ಥಿಗಳು 'ಲಾಂಗರ್' (ಉಪಹಾರ) ನಲ್ಲಿ ಪಾಲ್ಗೊಂಡಿದ್ದರು. ಇದಾದ ಮೇಲೆ ದುರ್ಗಿಯಾನ ದೇವಸ್ಥಾನಕ್ಕೆ ತೆರಳಿ ಅಲ್ಲಿ ಕೂಡ ಎಲ್ಲಾ ಅಭ್ಯರ್ಥಿಗಳು ಒಟ್ಟಾಗಿ ಪೂಜೆ ಸಲ್ಲಿಸಿದರು.‌ ನಂತರ ಭಗವಾನ್ ವಾಲ್ಮೀಕಿ ತೀರ್ಥಸ್ಥಳಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ತಂಡ ಅಲ್ಲೂ ಪೂಜೆ ಸಲ್ಲಿಸಿತು.‌ ಇದೊಂಥರಾ 'ಓಟಿಗಾಗಿ ಒಟ್ಟಿಗೆ ಪೂಜೆ, ಒಟ್ಟಿಗೆ ಊಟ' ಎನ್ನುವಂತಿತ್ತು.

ಇದನ್ನೂ ಓದಿ: CM Ibrahim: ಕಾಂಗ್ರೆಸ್​ ಜೊತೆಗಿನ ಸಂಬಂಧ ಮುಗಿದ ಅಧ್ಯಾಯ; ‘ಕೈ‘ ತೊರೆಯಲು ನಿರ್ಧರಿಸಿದ ಸಿಎಂ ಇಬ್ರಾಹಿಂ

ವರ್ಚ್ಯುಯಲ್ ರ‍್ಯಾಲಿ ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ

ಸದ್ಯ ಅಮೃತಸರದಿಂದ 100 ಕಿಮೀ  ಜಲಂಧರ್ ಗೆ ತೆರಳಲಿರುವ ರಾಹುಲ್ ಗಾಂಧಿ ಅವರು ಜಲಂಧರ್‌ನ ಮಿಥಾಪುರದಲ್ಲಿ "ನವಿ ಸೋಚ್ ನಯಾ ಪಂಜಾಬ್' ಎಂಬ ಹೆಸರಿನಲ್ಲಿ ನಡೆಯುವ ವರ್ಚುವಲ್ ರ್ಯಾಲಿ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಂಜೆ ದೆಹಲಿಗೆ ಹಿಂದಿರುಗುವ ಮೊದಲು "ಪಂಜಾಬ್ ಫತೇ" ಎಂಬ ವರ್ಚುವಲ್ ರ್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಚುನಾವಣಾ ಆಯೋಗವು ಭೌತಿಕ ರ್ಯಾಲಿಗಳು ಮತ್ತು ರೋಡ್‌ಶೋಗಳ ಮೇಲಿನ ನಿಷೇಧವನ್ನು ಜನವರಿ 31 ರವರೆಗೆ ವಿಸ್ತರಿಸಿರುವುದರಿಂದ ಕಾಂಗ್ರೆಸ್ ಟೆಂಪಲ್ ರನ್ ಮತ್ತು ವರ್ಚ್ಯುಯಲ್ ಸಮಾವೇಶಗಳನ್ನು ಹಮ್ಮಿಕೊಂಡಿದೆ. ರಾಹುಲ್ ಗಾಂಧಿ ಅವರ ಪಂಜಾಬ್ ಭೇಟಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಪಂಜಾಬ್ ಚುನಾವಣೆ ಮುಂದೂಡಿಕೆ

ಕೇಂದ್ರ ಚುನಾವಣಾ ಆಯೋಗ ಫೆಬ್ರವರಿ 14ರ ಬದಲು ಫೆಬ್ರವರಿ 20ರಂದು ಪಂಜಾಬ್​​​ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಲು ನಿರ್ಧರಿಸಿದೆ. ಪಂಜಾಬಿನಲ್ಲಿ ಗುರು ರವಿದಾಸ್​ ಜಯಂತಿ ಅತ್ಯಂತ ದೊಡ್ಡ ಆಚರಣೆ. ಗುರು ರವಿದಾಸ್​ ಜಯಂತಿ ಆಚರಣೆಗಾಗಿ ರಾಜ್ಯದ ಪರಿಶಿಷ್ಠ ಜಾತಿ ಸಮುದಾಯದ ಭಕ್ತರು ಫೆಬ್ರವರಿ 10 ರಿಂದ 16ರವರೆಗೆ ವಾರಣಾಸಿಗೆ ತೆರಳಲಿದ್ದಾರೆ. ಹೀಗೆ ಪ್ರವಾಸ ಕೈಗೊಳ್ಳುವ ಪರಿಶಿಷ್ಟ ಜಾತಿ ಸಮುದಾಯ ಮತದಾರರ ಸಂಖ್ಯೆ ಸುಮಾರು 20 ಪಕ್ಷ.

ಇದನ್ನೂ ಓದಿ: Morning Digest: ಈ ರಾಜ್ಯಗಳಲ್ಲಿ ಹಿಮಪಾತ-ಮಳೆ, ಬೆಂಗಳೂರಿನಲ್ಲಿ ಪವರ್ ಕಟ್, ಚಿನ್ನದ ಬೆಲೆ ಏರಿಕೆ; ಬೆಳಗಿನ ಟಾಪ್ ನ್ಯೂಸ್​​​ಗಳು

ಪಂಜಾಬಿನಲ್ಲಿ ಶೇಕಡಾ 32ರಷ್ಟು ಪರಿಶಿಷ್ಟ ಜಾತಿಗಳ ಸಮುದಾಯದ ಮತದಾರರಿದ್ದು, ಆ ಪೈಕಿ 20 ಲಕ್ಷದಷ್ಟು ಜನ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಮತದಾನ ಮಾಡುವುದು ಅವರ ಸಾಂವಿಧಾನಿಕ ಹಕ್ಕು ಆದುದರಿಂದ ಮತದಾನದ ದಿನಾಂಕವನ್ನು ಮುಂದೂಡಬೇಕು ಎಂದು ಮುಖ್ಯಮಂತ್ರಿ ಚರಣಜಿತ್ ಚನ್ನಿ ಅವರು ಪತ್ರದ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಆ ಮನವಿಗೆ ಸ್ಪಂದಿಸಿರುವ ಚುನಾವಣಾ ಆಯೋಗ ಮತದಾನದ ದಿನಾಂಕವನ್ನು ಫೆಬ್ರವರಿ 14ರಿಂದ 20ಕ್ಕೆ ಅಂದರೆ 6 ದಿನ ಮುಂದೂಡಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
Published by:Latha CG
First published: