ನಾಳೆ Punjab Election; ಮತದಾನಕ್ಕೂ ಮುನ್ನ ಸಿಎಂ ಚನ್ನಿ ವಿರುದ್ಧ ಪ್ರಕರಣ

ಚುನಾವಣೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಲಾಹೋರ್​ (ಫೆ. 19):  ಪಂಚನದಿಗಳ ನಾಡು ಪಂಜಾಬ್​ನಲ್ಲಿ (Punjab) ನಾಳೆ ವಿಧಾನಸಭಾ ಚುನಾವಣಾ ಮತದಾನ ನಡೆಯಲಿದೆ. ಈಗಾಗಲೇ ಅಧಿಕಾರ ಗದ್ದುಗೆ ಏರಲು ಬಿಜೆಪಿ (BJP), ಎಎಪಿ (AAP) ಮತ್ತು ಕಾಂಗ್ರೆಸ್ (Congress)​ ಭರ್ಜರಿ ಪ್ರಚಾರ ನಡೆಸಲಿದ್ದು, ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದು ನಾಳೆ ನಿರ್ಣಯವಾಗಲಿದೆ. ಏಕಹಂತದಲ್ಲಿ 23 ಜಿಲ್ಲೆಗಳ 117 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬೆಳಗ್ಗೆ 8ಗಂಟೆಯಿಂದ ಮತದಾನ ಆರಂಭವಾಗಲಿದ್ದು, ಸಂಜೆ 6ಗಂಟೆಯವರೆಗೆ ಮತಚಲಾಯಿಸಬಹುದಾಗಿದೆ. ಇನ್ನು ರಾಜ್ಯದಲ್ಲಿ 93 ಮಹಿಳೆಯರು ಸೇರಿದಂತೆ ಒಟ್ಟು 1,304 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

  ಮೂರು ಪಕ್ಷಗಳ ವಿರುದ್ಧ ನೇರ ಹಣಾಹಣಿ
  ಕಳೆದ ಚುನಾವಣೆಯಲ್ಲಿ 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಎಸ್​ಎಡಿ- ಬಿಜೆಪಿ ಮೈತ್ರಿ ಸರ್ಕಾರವನ್ನು ಕಿತ್ತೊಗೆಯುವ ಮೂಲಕ ಕಾಂಗ್ರೆಸ್​​ ಅಧಿಕಾರಕ್ಕೆ ಬಂದಿತು. ಈಗ ಮತ್ತೊಂದು ಬಾರಿಗೆ ಕಾಂಗ್ರೆಸ್​ ಅಧಿಕಾರ ಚುಕ್ಕಾಣಿಯ ಹಿಡಿಯುವ ತವಕದಲ್ಲಿದೆ. ಈ ನಡುವೆ ಕಳೆದ ಬಾರಿ ಕೊಂಚ ಸ್ಥಾನಗಳಿಂದ ಹಿನ್ನಡೆ ಅನುಭವಿಸಿದ್ದ ಎಎಪಿ ಕೂಡ ಈ ಬಾರಿ ಜನರು ನಮಗೆ ಸರ್ಕಾರ ರಚನೆಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ಭರವಸೆ ಹೊಂದಿದೆ.

  ಇನ್ನು ಈ ಹಿಂದೆ 10 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಬಿಜೆಪಿ ಈ ಬಾರಿ ಸರ್ಕಾರ ರಚಿಸುವ ವಿಶ್ವಾಸ ಹೊಂದಿದ್ದು, ಮೂರು ಪಕ್ಷಗಳಿಗೆ ರಾಜ್ಯದಲ್ಲಿ ನೇರಾ ನೇರ ಹಣಾಹಣಿಯ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

  ಪಂಜಾಬ್​ ಸಿಎಂ ಮೇಲೆ ಪ್ರಕರಣ
  ಚುನಾವಣೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

  ಮಾನಸದಲ್ಲಿ ದೇಗುಲಕ್ಕೆ ಸಿಎಂ ಚನ್ನಿ ಮೂಸೆವಾಲಾ ಅವರೊಂದಿಗೆ ಭೇಟಿ ನೀಡಿದ್ದರು. ನಿನ್ನೆ ಸಂಜೆ ಬಹಿರಂಗ ಪ್ರಚಾರ ಮುಕ್ತಾಯಗೊಂಡ ಬಳಿಕ ಇಬ್ಬರು ಕಾಂಗ್ರೆಸ್ ನಾಯಕರು ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಈ ಹಿನ್ನಲೆ ಆಮ್​ ಆದ್ಮಿ ಪಕ್ಷ ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಎಎಪಿ ದೂರಿನ ಅನ್ವಯ ಚನ್ನಿ ಮತ್ತು ಸಿದ್ದು ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 188 (ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶಕ್ಕೆ ಅವಿಧೇಯತೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  ಇದನ್ನು ಓದಿ: ಪ್ರಧಾನಿ ಮೋದಿ ಸೇರಿದಂತೆ ಹಲವರಿಂದ ಗೌರವ ನಮನ

  ಈ ಹಿಂದೆ ಚುನಾವಣಾ ಆಯೋಗ ಪಂಜಾಬ್​ ಚುನಾವಣೆಯಲ್ಲಿ ಫೆ. 14ಕ್ಕೆ ನಿಗದಿಸಿತು. ಆದರೆ, ಆ ದಿನ ಸಂತ ಗುರು ರವಿದಾಸ್​ ಜಯಂತಿ ಇರುವ ಹಿನ್ನಲೆ ಮತದಾನ ಮುಂದೂಡುವಂತೆ ಪಕ್ಷಾತೀತವಾಗಿ ನಾಯಕರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಈ ಹಿನ್ನಲೆ ಆಯೋಗ ಮತದಾನದ ದಿನಾಂಕವನ್ನು ಫೆ. 20ಕ್ಕೆ ನಿಗದಿ ಮಾಡಿದೆ. ನಾಳೆ ನಡೆಯಲಿರುವ ಮತದಾನಕ್ಕೆ ಈಗಾಗಲೇ ಸಕಲ ಸಿದ್ಧತೆಯನ್ನು ನಡೆಸಿದ ಆಯೋಗ

  ಇದನ್ನು ಓದಿ: ರಹಸ್ಯ ಮಾಹಿತಿ ಕೊಡುತ್ತಿದ್ದ ಮಾಜಿ ಅಧಿಕಾರಿ ಅರೆಸ್ಟ್, ಆತ ಮಾಡಿದ ದ್ರೋಹ ಏನ್ ಗೊತ್ತಾ?

  ಈ ಕ್ಷೇತ್ರಗಳಲ್ಲಿ ಪ್ರಮುಖ ನಾಯಕರ ಸ್ಪರ್ಧೆ

  ಕಾಂಗ್ರೆಸ್ ನವಜೋತ್ ಸಿಂಗ್ ಸಿಧು ಅಮೃತಸರದಿಂದ, ಎಎಪಿ ಭಗವಂತ್ ಮಾನ್ ಧುರಿಯಿಂದ, ಕಾಂಗ್ರೆಸ್ ಚರಂಜಿತ್ ಸಿಂಗ್ ಚನ್ನಿ ಭದೌರ್, ಚಮ್ಕೌರ್ ಸಾಹಿಬ್ ಸ್ಥಾನಗಳಿಂದ ಸ್ಪರ್ಧಿಸುತ್ತಿದ್ದಾರೆ.  SAD ಸುಖಬೀರ್ ಸಿಂಗ್ ಬಾದಲ್ ಜಲಾಲಾಬಾದದಿಂದ  ಪಂಜಾಬ್ ಲೋಕ ಕಾಂಗ್ರೆಸ್ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಟಿಯಾಲದಿಂದ, ಪರಕಾಶ್ ಸಿಂಗ್ ಬಾದಲ್ ಲಂಬಿಯಿಂದ, ಕಾಂಗ್ರೆಸ್ ಸುಖಪಾಲ್ ಖೈರ್ ಭೋಲುತ್ ಎಎಪಿ ಕುಲವಂತ್ ಸಿಂಗ್ ಮೊಹಾಲಿಯಿಂದ ಸ್ಪರ್ಧಿಸಲಿದ್ದಾರೆ.
  Published by:Seema R
  First published: