ಪಂಜಾಬ್​ ಚುನಾವಣೆ: ಕಡೆಗೂ ಬಿಜೆಪಿ ಜೊತೆ ಕೈಜೋಡಿಸಿದ ಕ್ಯಾಪ್ಟನ್ ಅಮರೀಂದರ್ ಸಿಂಗ್

'ತಾವು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ನಿರೀಕ್ಷೆ ಇದೆಯೇ?' ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಮರೀಂದರ್ ಸಿಂಗ್, "ಎಲ್ಲಾ ಮೈತ್ರಿ ಪಾಲುದಾರರು ಸೇರಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತಾರೆ' ಎಂದು ಹೇಳಿದ್ದಾರೆ.

ಕ್ಯಾಪ್ಟನ್ ಅಮರೀಂದರ್ ಸಿಂಗ್

ಕ್ಯಾಪ್ಟನ್ ಅಮರೀಂದರ್ ಸಿಂಗ್

  • Share this:
ನವದೆಹಲಿ (ಡಿ. 6): ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Panjab Pradesh Congress President Navajoth Sing Sidhu) ನಡುವಿನ ಕಿತ್ತಾಟದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ (Amarindar Sing) ಬಿಜೆಪಿ ಸೇರುತ್ತಾರೆ ಎಂಬ ಪ್ರಬಲ ವದಂತಿ ಕೇಳಿಬಂದಿತ್ತು. ಅವರು ತಮ್ಮದೇ ಸ್ವಂತ ಪಕ್ಷ ಕಟ್ಟಿದ ಮೇಲೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಅಮರೀಂದರ್ ಸಿಂಗ್ ಅವರು ಈಗ ತಮ್ಮ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಿದೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಬಿಜೆಪಿ (BJP) ಜೊತೆಗೆ ಮೈತ್ರಿ ಮಾಡಿಕೊಳ್ಳುವ ವಿಚಾರ ಮಾತ್ರವಲ್ಲ, ಶೀಘ್ರದಲ್ಲೇ ಸೀಟು ಹೊಂದಾಣಿಕೆ (Seat Sharing) ಬಗ್ಗೆಯೂ ಪ್ರಕಟಿಸಲಾಗುವುದು ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ. ಇದಲ್ಲದೆ ಪಂಜಾಬಿನ ಮಾಜಿ ಮುಖ್ಯಮಂತ್ರಿ ಸುಖದೇವ್ ಸಿಂಗ್ ದಿಂಡ್ಸಾ (Sukhdev Singh Dhindsa) ಅವರ ಶಿರೋಮಣಿ ಅಖಾಲಿ ದಳ (Shiromani Akhali Dal) ಜೊತೆಗೆ ಕೂಡ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಘೋಷಿಸಿದ್ದಾರೆ.

ಬಿಜೆಪಿ ಮತ್ತು ಶಿರೋಮಣಿ ಅಖಾಲಿ ದಳದ ಜೊತೆಗೆ ಮೈತ್ರಿ
ಬಿಜೆಪಿ ಮತ್ತು ಶಿರೋಮಣಿ ಅಖಾಲಿ ದಳದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ತಾತ್ವಿಕವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗ ಸೀಟುಗಳ ಹೊಂದಾಣಿಕೆ ವ್ಯವಸ್ಥೆ ಮಾಡಬೇಕಾಗಿದೆ. ದಿಂಡ್ಸಾ ಅವರ ಪಕ್ಷದೊಂದಿಗೆ ಸಹ ಸೀಟು ಹೊಂದಾಣಿಕೆಯನ್ನೂ ಮಾಡಬೇಕಾಗಿದೆ. ನಾವು ಗೆಲ್ಲುವವರನ್ನು ಹುಡುಕಿ ಆ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ನಾನು ಎರಡೂ ಪಕ್ಷಗಳಿಗೆ ಹೇಳುತ್ತೇನೆ ಎಂದು ಅಮರೀಂದರ್ ಸಿಂಗ್ ಸೋಮವಾರ ತಿಳಿಸಿದ್ದಾರೆ. ಆದರೆ 'ತಾವು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ನಿರೀಕ್ಷೆ ಇದೆಯೇ?' ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಎಲ್ಲಾ ಮೈತ್ರಿ ಪಾಲುದಾರರು ಸೇರಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.

ಚುನಾವಣೆ ಗೆಲುವು ನಮ್ಮ ಗುರಿ

ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸದಸ್ಯತ್ವ ಅಭಿಯಾನವು ಹತ್ತು ದಿನಗಳ ಹಿಂದೆಯೇ ಪ್ರಾರಂಭವಾಗಿದೆ. ಪಕ್ಷಕ್ಕೆ ಸೇರ್ಪಡೆಗೊಳ್ಳಲು ಜಿಲ್ಲೆಯಲ್ಲಿ ಸಮಿತಿಯನ್ನು ಸಹ ರಚಿಸಲಾಗುತ್ತಿದೆ.‌ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ ಮತ್ತು ನಾವು ಗೆಲ್ಲುತ್ತೇವೆ. ಪಂಜಾಬ್‌ನಲ್ಲಿ ತಮ್ಮ ಪಕ್ಷ ಸರ್ಕಾರ ರಚಿಸಲಿದೆ ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: ನಾಗಾಲ್ಯಾಂಡ್ ನಾಗರಿಕರ ಮೇಲಿನ ದಾಳಿಗೆ ಕೇಂದ್ರ ವಿಷಾದ; ಎಸ್​ಐಟಿ ಆದೇಶಕ್ಕೆ ಸೂಚನೆ

ಎರಡೂ ಪಕ್ಷಗಳೊಂದಿಗೆ ಮೈತ್ರಿ ಸಾಧ್ಯತೆ

ಇದಕ್ಕೂ ಮುನ್ನ, ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amith Sha) ಅವರು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಶಿರೋಮಣಿ ಅಕಾಲಿದಳದ ಮಾಜಿ ನಾಯಕ ಸುಖದೇವ್ ಸಿಂಗ್ ದಿಂಡ್ಸಾ ಅವರೊಂದಿಗೆ ತಮ್ಮ ಪಕ್ಷ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದೆ. "ನಾವು ಕ್ಯಾಪ್ಟನ್ ಸಾಬ್ (ಅಮರಿಂದರ್ ಸಿಂಗ್) ಮತ್ತು (ಮಾಜಿ ಅಕಾಲಿದಳದ ನಾಯಕ ಸುಖದೇವ್ ಸಿಂಗ್) ದಿಂಡಾಸಾಬ್ ಅವರೊಂದಿಗೆ ಮಾತನಾಡುತ್ತಿದ್ದೇವೆ. ನಾವು ಎರಡೂ (ಅವರ) ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ. ನಾವು ಎರಡೂ ಪಕ್ಷಗಳೊಂದಿಗೆ ಸಕಾರಾತ್ಮಕ ಮನಸ್ಸಿನಿಂದ ಮಾತನಾಡುತ್ತಿದ್ದೇವೆ ಎಂದು ಹೇಳಿದ್ದರು.

ಇದನ್ನು ಓದಿ: ಓಮೈಕ್ರಾನ್ ಅಪಾಯ ಅಲ್ಲ ಅಂತ ಭಾವಿಸೀರಿ ಜೋಕೆ; ಮಕ್ಕಳು ಹುಷಾರ್ ಎಂದ WHO

ಮೂರು ಬಾರಿ ಅಮಿತ್​ ಶಾ ಭೇಟಿ ಮಾಡಿದ್ದ ಸಿಂಗ್​

ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ವಾರದ ಬಳಿಕ ಕಾಂಗ್ರೆಸ್ (Congress) ಪಕ್ಷವು ಚರಂಜಿತ್ ಸಿಂಗ್ ಚನ್ನಿ (Charanjith Sing Channi) ಅವರನ್ನು ಹೊಸ ಸಿಎಂ ಆಗಿ ಆಯ್ಕೆ ಮಾಡಿ ಅಚ್ಚರಿ ಮೂಡಿಸಿತ್ತು.‌ ಇದರಿಂದ ಕೆರಳಿದ ಅಮರೀಂದರ್ ಸಿಂಗ್ ಪ್ರಧಾನಿ ನರೇಂದ್ರ ಮೋದಿ (Narendara Modi) ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಿಜೆಪಿಯೊಂದಿಗೆ ಕೈಜೋಡಿಸುವ ಪ್ರಯತ್ನ ನಡೆಸಿದ್ದರು. ಮೂರು ಬಾರಿ ಮುಖ್ಯಮಂತ್ರಿಯಾಗಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರೀಗ ಶೀಘ್ರದಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (BJP National President JP Nadda) ಅವರನ್ನು ಭೇಟಿಯಾಗಿ ಸೀಟು ಹಂಚಿಕೆ ಸೂತ್ರದ ಬಗ್ಗೆ ಕೂಡ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
Published by:Seema R
First published: